ಹಣ್ಣುಗಳು ನಿಮ್ಮ ದೇಹಕ್ಕೆ ಎಂದಿಗೂ ಒಳ್ಳೆಯದು. ಅದರಲ್ಲೂ ವಿಟಮಿನ್ ಸಿ ಅಂಶ ಹೆಚ್ಚಿರುವ ಹಣ್ಣುಗಳನ್ನು ಪ್ರತಿನಿತ್ಯ ಸೇವಿಸಿದರೆ ಅನೇಕ ಆರೋಗ್ಯ ಪ್ರಯೋಜನಗಳು ದೊರೆಯುತ್ತದೆ. ಹುಳಿ ಮತ್ತು ವಗರು ರುಚಿಯನ್ನು ಹೊಂದಿರುವ ಈ ಕ್ರ್ಯಾನ್ಬೆರಿ (Cranberry) ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಆಗುತ್ತವೆ. ಇದು ಡೈಬಿಟಿಸ್ ನಿಂದ ಹಿಡಿದು ಯಕೃತ್ತಿನವರೆಗೆ ಎಲ್ಲದರ ಕಾಳಜಿವಹಿಸುತ್ತೆ. ಇದೇ ರೀತಿ ಕ್ರ್ಯಾನ್‌ಬೆರ್ರಿ ಹಣ್ಣುಗಳಿಂದಲೂ ಅನೇಕ ಆರೋಗ್ಯ ಪ್ರಯೋಜನಗಳಿವೆ.
ತೂಕ ಕಡಿಮೆ ಮಾಡಲು ಸಹಾಯ

ರೋಗ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಕ್ರ್ಯಾನ್‌ಬೆರಿಗಳು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇವು ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತವೆ ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಕ್ರ್ಯಾನ್‌ಬೆರಿ (Cranberry) ಫೈಬರ್‌ನಲ್ಲಿ ಸಮೃದ್ಧವಾಗಿವೆ. ನೀವು ಆಗಾಗ ಆಹಾರವನ್ನು ಸೇವಿಸುವ ಕಡುಬಯಕೆಗಳನ್ನು ಕಡಿಮೆ ಮಾಡುತ್ತದೆ. ಅನಾರೋಗ್ಯಕರ ಆಹಾರದಿಂದ ನಿಮ್ಮನ್ನು ತಡೆಯುತ್ತದೆ ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹೊಳೆಯುವ ತ್ವಚೆ

ವಯಸ್ಸಾದ ಚಿಹ್ನೆಗಳು ಮತ್ತು ಇತರ ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಕ್ರ್ಯಾನ್‌ಬೆರಿಗಳಲ್ಲಿ ಅನೇಕ ಪೋಷಕಾಂಶಗಳಿವೆ.
ಇದರಲ್ಲಿರುವ ವಿಟಮಿನ್ ಸಿ ಮತ್ತು ರೋಗ ನಿರೋಧಕಗಳು ಚರ್ಮವನ್ನು ತೇವಗೊಳಿಸುವುದರ ಜೊತೆಗೆ ಕಾಂತಿಯುತವಾಗಿಸುತ್ತದೆ.
ವಿಟಮಿನ್ ಸಿ ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದರ ನಂಜುನಿರೋಧಕ ಗುಣಲಕ್ಷಣಗಳಿಂದಾಗಿ ಕ್ರ್ಯಾನ್‌ಬೆರಿಗಳು ಚರ್ಮದ ಮೇಲಿನ ಮೊಡವೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
ಹಲ್ಲಿನ ಸಮಸ್ಯೆಗಳ ಸುಧಾರಣೆ

ನೀವು ಹಲ್ಲಿನ ಸಮಸ್ಯೆಗಳನ್ನು ದೂರವಿಡಲು ಬಯಸಿದರೆ ಕ್ರ್ಯಾನ್‌ಬೆರಿಗಳನ್ನು ಸೇವಿಸಲು ಪ್ರಾರಂಭಿಸಿ. ಕ್ರ್ಯಾನ್‌ಬೆರಿಗಳಲ್ಲಿ (Cranberry) ಕಂಡುಬರುವ ಪ್ರೋಆಂಥೋಸಯಾನಿನ್‌ಗಳು ಬಾಯಿಯಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ. ಇದು ಗುಳ್ಳೆಗಳು ಮತ್ತು ಒಸಡು ಸಮಸ್ಯೆಗಳನ್ನು ತಡೆಯುತ್ತದೆ.
ಮೂತ್ರನಾಳದ ಸೋಂಕು ಕಡಿಮೆ ಮಾಡುತ್ತದೆ ಕ್ರ್ಯಾನ್‌ಬೆರ್ರಿ (Cranberry)

ಕ್ರ್ಯಾನ್‌ಬೆರ್ರಿ ಹಣ್ಣಿನ (Cranberry) ಜ್ಯೂಸ್ ಮೂತ್ರನಾಳದ ಸೋಂಕು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕ್ರ್ಯಾನ್‌ಬೆರ್ರಿಯಲ್ಲಿ ಪ್ರೋಆ್ಯಂಥೋಸೈಯಾನಿಡಿನ್ಸ್ ಆ್ಯಂಟಿಆಕ್ಸಿಡೆಂಟ್ ಹೆಚ್ಚಾಗಿರುವುದು ಇದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಉರಿಯೂತ ಕಡಿಮೆ ಮಾಡುವ ಕ್ರ್ಯಾನ್ಬೆರಿ (Cranberry)

ಉರಿಯೂತ ಅನೇಕ ಸಾಮಾನ್ಯ ರೋಗಗಳ ಮೂಲವಾಗಿದೆ. ಇವುಗಳಲ್ಲಿ ಹೃದ್ರೋಗ, ಕ್ಯಾನ್ಸರ್, ಸಂಧಿವಾತ ಮತ್ತು ಮಧುಮೇಹ ಸೇರಿವೆ. ಕ್ರ್ಯಾನ್‌ಬೆರಿರಿಗಳು ಉರಿಯೂತದ ಗುಣಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
ಆದ್ದರಿಂದ ಅವುಗಳ ಸೇವನೆಯು ಹೃದ್ರೋಗ, ಕ್ಯಾನ್ಸರ್ ಮತ್ತು ಅರಿವಿನ ಕುಸಿತದ ಅಪಾಯವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ: Dragon Fruit: ಡ್ರ್ಯಾಗನ್ ಹಣ್ಣಿನ 10 ಆರೋಗ್ಯ ಪ್ರಯೋಜನಗಳು
ಜೀರ್ಣಶಕ್ತಿಯನ್ನು ಸುಧಾರಿಸುತ್ತೆ ಕ್ರ್ಯಾನ್‌ಬೆರ್ರಿ (Cranberry) ಹಣ್ಣುಗಳು

ಫೈಬರ್ ಕರುಳಿನ ಆರೋಗ್ಯಕ್ಕೆ ಉತ್ತಮ. ಇದೇ ರೀತಿ ಒಂದು ಕಪ್ ಕ್ರ್ಯಾನ್‌ಬೆರ್ರಿ (Cranberry) ಹಣ್ಣಿನಲ್ಲಿ 4.6 ಗ್ರಾಂ ಫೈಬರ್ ಅಥವಾ ನಾರಿನಂಶ ಇರುತ್ತದೆ. ಇದರಿಂದ ನಿಮ್ಮ ಜೀರ್ಣಶಕ್ತಿಯನ್ನು ಆರೋಗ್ಯಕರವಾಗಿಡುತ್ತೆ ಎಂದು ತಜ್ಞರು ಹೇಳುತ್ತಾರೆ.
ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು

ನಿಯಮಿತವಾಗಿ ಕ್ರ್ಯಾನ್‌ಬೆರ್ರಿ ಜ್ಯೂಸ್ ಅನ್ನು ಕುಡಿದರೆ ಎಲ್‌ಡಿಎಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಹಾಗೂ ಟ್ರೈಗ್ಲಿಸರೈಡ್ಸ್ ಅನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಗಳು ತಿಳಿಸುತ್ತವೆ.
ಆದರೆ, ನೈಸರ್ಗಿಕ ಜ್ಯೂಸ್ ಕುಡಿದರೆ ಒಳ್ಳೆಯದು. ಅದರ ಬದಲು ಹೆಚ್ಚು ಸಕ್ಕರೆ ಅಂಶ ಇರುವ ಜ್ಯೂಸ್ ಕುಡಿದರೆ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ.
ಕ್ರ್ಯಾನ್‌ಬೆರ್ರಿ (Cranberry) ಹಣ್ಣುಗಳಿಂದ ಒಸಡು ರೋಗದ ಸಮಸ್ಯೆ ನಿವಾರಣೆ

ಬಾಯಿಯ ಕುಹರದಲ್ಲಿ ಬ್ಯಾಕ್ಟೀರಿಯಾ ಅಂಟಿಕೊಳ್ಳುವ ಮತ್ತು ಬೆಳೆಯುವ ಸಾಮರ್ಥ್ಯವನ್ನು ಕ್ಯಾನ್‌ಬೆರ್ರಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹೀಗೆ ಒಸಡು ರೋಗವನ್ನು ಕಡಿಮೆ ಮಾಡುತ್ತದೆ ಎಂಬ ಅಂಶ ಸಂಶೋಧನೆಯಲ್ಲಿ ತಿಳಿದುಬಂದಿದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಈ ಹಣ್ಣು

ಕ್ರ್ಯಾನ್‌ಬೆರ್ರಿಯಲ್ಲಿ (Cranberry) ವಿಟಮಿನ್ ಸಿ ಅಂಶ ಹೆಚ್ಚಿರುತ್ತದೆ ಹಾಗೂ ರೋಗ ನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಒಂದು ಕಪ್ ಕ್ರ್ಯಾನ್‌ಬೆರ್ರಿ ಜ್ಯೂಸ್ ಕುಡಿದರೆ ಸಾಕು ಒಂದು ದಿನಕ್ಕೆ ನಿಮ್ಮ ದೇಹಕ್ಕೆ ಅಗತ್ಯವಿರುವ ಶೇ. 22 ರಷ್ಟು ವಿಟಮಿನ್ ಸಿ ಅದರಲ್ಲಿರುತ್ತದೆ.
ಜತೆಗೆ, ಹೆಚ್ಚು ಪೌಷ್ಠಿಕಾಂಶವನ್ನು ಒಳಗೊಂಡಿದೆ. ಹೀಗಾಗಿ ಕ್ರ್ಯಾನ್‌ಬೆರ್ರಿ ಹಣ್ಣುಗಳನ್ನು ಹೆಚ್ಚು ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ಕಡಿವಾಣ

ಕ್ರ್ಯಾನ್‌ಬೆರಿಗಳು ಫೈಟೊಕೆಮಿಕಲ್‌ಗಳನ್ನು ಹೊಂದಿದ್ದು, ಇದು ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುತ್ತದೆ. ಸ್ತನ, ಕೊಲೊನ್, ಶ್ವಾಸಕೋಶ ಮತ್ತು ಅನ್ನನಾಳದ ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ ಎಂದು ಸಂಶೋಧನೆ ಸೂಚಿಸುತ್ತದೆ.
ನಿಮ್ಮ ದೈನಂದಿನ ಆಹಾರದಲ್ಲಿ ಕ್ರ್ಯಾನ್‌ಬೆರಿಗಳನ್ನು ಸೇರಿಸುವುದು ಕೆಲವು ರೀತಿಯ ಕ್ಯಾನ್ಸರ್ ಅನ್ನು ತಡೆಯಲು ಸಹಾಯ ಮಾಡುತ್ತದೆ.
ಕ್ರ್ಯಾನ್‌ಬೆರಿಗಳಲ್ಲಿ (Cranberry) ಕಂಡುಬರುವ ಆಂಟಿ-ಕಾರ್ಸಿನೋಜೆನಿಕ್ ಸಂಯುಕ್ತಗಳು ದೇಹದಲ್ಲಿನ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಸಹ ತಡೆಯುತ್ತದೆ.