Home » Custard Apple Fruit Health Benefits: ಸೀತಾಫಲ ಹಣ್ಣಿನ 10 ಆರೋಗ್ಯ ಪ್ರಯೋಜನಗಳು

Custard Apple Fruit Health Benefits: ಸೀತಾಫಲ ಹಣ್ಣಿನ 10 ಆರೋಗ್ಯ ಪ್ರಯೋಜನಗಳು

by Praveen Mattimani
Custard Apple Fruit Health Benefits: ಸೀತಾಫಲ ಹಣ್ಣಿನ 10 ಆರೋಗ್ಯ ಪ್ರಯೋಜನಗಳು

ಸೀತಾಫಲ ಹಣ್ಣೆಂದರೆ (Custard apple) ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತೆ. ರುಚಿಯಲ್ಲಿ ತುಂಬಾ ಸಿಹಿಯಾದ ಈ ಹಣ್ಣು ಅನೇಕ ಆಗೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಜತೆಗೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಕೆಲವು ಔಷಧಿ ತಯಾರಿಕೆಯಲ್ಲಿಯೂ ಸಹ ಈ ಹಣ್ಣನ್ನು ಬಳಸುತ್ತಾರೆ. ಸೀತಾಫಲ ಹಣ್ಣು (Custard apple) ಪೋಷಕಾಂಶಗಳಿಂದ ಕೂಡಿದೆ. ಹಣ್ಣಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಮತ್ತು ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳು ಅಧಿಕವಾಗಿದ್ದು, ಆರೋಗ್ಯದ ಪ್ರಯೋಜನಗಳನ್ನು ಹೇರಳವಾಗಿ ನೀಡುತ್ತದೆ. ಸೀತಾಫಲದ ಪೌಷ್ಠಿಕಾಂಶದ ಮೌಲ್ಯದೊಂದಿಗೆ ಕೆಲವು ಅದ್ಭುತವಾದ ಆರೋಗ್ಯ ಪ್ರಯೋಜನಗಳು ಏನು ಎಂಬುದು ಇಲ್ಲಿದೆ.

ಸೀತಾಫಲ ಹಣ್ಣು (Custard apple) ಕಣ್ಣುಗಳಿಗೆ ತುಂಬಾ ಒಳ್ಳೆಯದು

Custard Apple Fruit Health Benefits: ಸೀತಾಫಲ ಹಣ್ಣಿನ 10 ಆರೋಗ್ಯ ಪ್ರಯೋಜನಗಳು

ಸಾಮಾನ್ಯವಾಗಿ ವಯಸ್ಸಾದ ಮೇಲೆ ನಮಗೆಲ್ಲರಿಗೂ ದೃಷ್ಟಿದೋಷ ಎದುರಾಗುತ್ತದೆ. ನಾವು ಬೇಡವೆಂದರೂ ಕೂಡ ಇಂತಹ ಸಮಸ್ಯೆ ತಪ್ಪಿದ್ದಲ್ಲ. ಕಣ್ಣುಗಳ ಆರೋಗ್ಯಕ್ಕೆ ಸಹಕಾರಿಯಾದ ಪೌಷ್ಟಿಕ ಸತ್ವಗಳು ಅಡಗಿರುವ ಆಹಾರಗಳನ್ನು ನಾವು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು. ನಿಮ್ಮ ಕಣ್ಣಿನ ದೃಷ್ಟಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಸೀತಾಫಲ ಹಣ್ಣು ಪ್ರಮುಖ ಪಾತ್ರವಹಿಸುತ್ತದೆ.

ಏಕೆಂದರೆ ಈ ಮೇಲಿನ ವಿಟಮಿನ್ ಅಂಶಗಳು ಇದರಲ್ಲಿ ಇರುವುದರ ಜೊತೆಗೆ ರಿಬೋಫ್ಲಾವಿನ್, ವಿಟಮಿನ್ ಬಿ2 ಅಂಶಗಳು ಕೂಡ ಆಗಿರುವುದರಿಂದ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುವ ಆಂಟಿ ಆಕ್ಸಿಡೆಂಟ್ ರೂಪಗಳು ನಿಸರ್ಗದತ್ತವಾಗಿ ಈ ಹಣ್ಣುಗಳಲ್ಲಿ ಸಿಗುತ್ತವೆ. ನಿಮ್ಮ ಕಣ್ಣಿನ ಹಲವಾರು ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುವಲ್ಲಿ ಇವುಗಳ ಪಾತ್ರ ತುಂಬಾ ದೊಡ್ಡದು.

ಕ್ಯಾನ್ಸರ್‌ ನಿಯಂತ್ರಣ

Custard Apple Fruit Health Benefits: ಸೀತಾಫಲ ಹಣ್ಣಿನ 10 ಆರೋಗ್ಯ ಪ್ರಯೋಜನಗಳು

ಸೀತಾಫಲದಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟುಗಳಿದ್ದು ದೇಹಕ್ಕೆ ಎರಗುವ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳಿಂದ ರಕ್ಷಿಸುವ ಜೊತೆಗೆ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಅಲ್ಲದೇ ಇದರಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಸಹಾ ಉತ್ತಮ ಪ್ರಮಾಣದಲ್ಲಿದ್ದು ಹೃದಯದ ಕ್ಷಮತೆ ಹೆಚ್ಚಿಸಿ ಹೃದಯಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ.

ಸೌಂದರ್ಯ ಹೆಚ್ಚಳ

Custard Apple Fruit Health Benefits: ಸೀತಾಫಲ ಹಣ್ಣಿನ 10 ಆರೋಗ್ಯ ಪ್ರಯೋಜನಗಳು

ಸೀತಾಫಲದ ನಿಯಮಿತ ಸೇವನೆಯಿಂದ ತ್ವಚೆಯ ಸೆಳೆತ ಹೆಚ್ಚುತ್ತದೆ ಹಾಗೂ ಕಾಂತಿಯುಕ್ತವಾಗುತ್ತದೆ. ಪರಿಣಾಮವಾಗಿ ನೆರಿಗೆ ಮೂಡುವ ಮತ್ತು ಕಲೆಗಳು ಬೀಳುವ ಸಾಧ್ಯತೆ ಉಡುಗುತ್ತದೆ.

ಇದಕ್ಕೆಲ್ಲಾ ಇದರಲ್ಲಿರುವ ವಿಟಮಿನ್ ಸಿ ಕಾರಣ. ಇದು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುವ ಮೂಲಕ ಆರೋಗ್ಯಕರ ಮತ್ತು ಕಾಂತಿಯುಕ್ತ ಹಾಗೂ ಕಲೆಯಿಲ್ಲದ ತ್ವಚೆಯನ್ನು ಪಡೆಯಲು ನೆರವಾಗುತ್ತದೆ.

ಮಲಬದ್ದತೆ ಸಮಸ್ಯೆ ನಿವಾರಣೆ

Custard Apple Fruit: ಸೀತಾಫಲ ಹಣ್ಣಿನ 10 ಆರೋಗ್ಯ ಪ್ರಯೋಜನಗಳು

ಸೀತಾಫಲ ಹಣ್ಣುಗಳಲ್ಲಿ ತಾಮ್ರದ ಅಂಶ ಮತ್ತು ನಾರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ ಎಂದು ಹೇಳುತ್ತಾರೆ. ಆರೋಗ್ಯಕರವಾದ ಜೀರ್ಣಾಂಗ ವ್ಯವಸ್ಥೆಯಲ್ಲಿ ಇದರ ಪಾತ್ರ ತುಂಬಾ ದೊಡ್ಡದು.

ಮುಖ್ಯವಾಗಿ ನಾರಿನ ಅಂಶ ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಮಲಬದ್ಧತೆ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುತ್ತದೆ.

ದೈಹಿಕ ಆಯಾಸ ದೂರ ಮಾಡಲು ಸೀತಾಫಲ ಹಣ್ಣು (Custard apple)

Custard Apple Fruit: ಸೀತಾಫಲ ಹಣ್ಣಿನ 10 ಆರೋಗ್ಯ ಪ್ರಯೋಜನಗಳು

ಸೀತಾಫಲ ಹಣ್ಣು ದೇಹದಲ್ಲಿ ಹೆಚ್ಚಿನ ಶಕ್ತಿಯನ್ನು ಒಮ್ಮೆಲೆ ಉಂಟು ಮಾಡುವ ಗುಣ ಲಕ್ಷಣವನ್ನು ಪಡೆದುಕೊಂಡಿದೆ.

ಹಾಗಾಗಿ ಯಾವುದೇ ಸಮಯದಲ್ಲಿ ಒಂದು ವೇಳೆ ನೀವು ಹೆಚ್ಚು ಸುಸ್ತು ಮತ್ತು ಆಯಾಸ ಕಂಡುಕೊಂಡ ಸಮಯದಲ್ಲಿ ಸೀತಾಫಲ ಹಣ್ಣನ್ನು ಸೇವನೆ ಮಾಡುವುದರಿಂದ ಅದರಲ್ಲಿರುವ ಪೊಟ್ಯಾಶಿಯಂ ಅಂಶ ಮಾಂಸಖಂಡಗಳ ದುರ್ಬಲತೆಯನ್ನು ಹೋಗಲಾಡಿಸಿ ತನ್ನಲ್ಲಿರುವ ಉತ್ತಮ ಪ್ರಮಾಣದ ಗ್ಲೈಸೆಮಿಕ್ ಸೂಚ್ಯಂಕದಿಂದ ದೇಹಕ್ಕೆ ಶಕ್ತಿಯನ್ನು ಒದಗಿಸಿ ಇಡೀ ದೇಹದ ತುಂಬಾ ಸರಾಗವಾದ ರಕ್ತಸಂಚಾರವನ್ನು ಉಂಟುಮಾಡುತ್ತದೆ.

ಇದರಿಂದ ಇಡೀ ದೇಹ ಹೊಸ ಹುರುಪು ಮತ್ತು ಚೈತನ್ಯದಿಂದ ಕೂಡಿರುತ್ತದೆ.

ಇದನ್ನೂ ಓದಿ: Cherry Fruit: ಚೆರ್ರಿ ಹಣ್ಣಿನ 10 ಆರೋಗ್ಯ ಪ್ರಯೋಜನಗಳು

ಮಧುಮೇಹ ಸಮಸ್ಯೆಗೆ ಪರಿಹಾರ

Custard Apple Fruit: ಸೀತಾಫಲ ಹಣ್ಣಿನ 10 ಆರೋಗ್ಯ ಪ್ರಯೋಜನಗಳು

ಸೀತಾಫಲಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹ ಆವರಿಸುವ ಸಾಧ್ಯತೆಯನ್ನು ದೂರ ಮಾಡಬಹುದು.

ಈ ಹಣ್ಣಿನಲ್ಲಿ ಪೊಟ್ಯಾಶಿಯಂ ಹಾಗೂ ಮೆಗ್ನೀಶಿಯಂ ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತವೆ.

ಹಾಗೆಯೇ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸುತ್ತವೆ. ಇದು ಮಧುಮೇಹದ ಸಮಸ್ಯೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಶ್ವಾಸನಾಳದ ಉರಿಯೂತ ಕಡಿಮೆಯಾಗುತ್ತದೆ

10-health-custard-apple-in-kannada

ವಿಟಮಿನ್ ಬಿ 6 ಅಧಿಕವಾಗಿರುವ ಸೀತಾಫಲವನ್ನು ತಿನ್ನುವುದರಿಂದ ಶ್ವಾಸನಾಳದ ಉರಿಯೂತವನ್ನು ಕಡಿಮೆ ಮಾಡಬಹುದು.

ಅಲ್ಲದೆ ಸೀತಾಫಲವು ಆಸ್ತಮಾ ಕಾಯಿಲೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಮೆಗ್ನೀಸಿಯಮ್ ಸಮೃದ್ಧವಾಗಿರುವ ಸೀತಾಫಲವು ಹೃದಯಾಘಾತದಿಂದ ರಕ್ಷಿಸುತ್ತದೆ.

ಕ್ಯಾಲೋರಿ ಹೆಚ್ಚಿಸಿಕೊಳ್ಳಲು ಸಹಾಯ

10-health-custard-apple-in-kannada

ತೂಕ ಹೆಚ್ಚಿಸಿಕೊಳ್ಳಬಯಸುವವರು ಸೀತಾಫಲ ರಸದಲ್ಲಿ ಜೇನುತುಪ್ಪ ಮತ್ತು ಹಾಲನ್ನು ನಿಯಮಿತವಾಗಿ ಸೇವಿಸುವುದರಿಂದ ತಮ್ಮ ಕ್ಯಾಲೊರಿಗಳನ್ನು ಹೆಚ್ಚಿಸಿಕೊಳ್ಳಬಹುದು.

ಅತಿಯಾದ ತೂಕ ಮತ್ತು ಅತಿಯಾದ ತೂಕ ಇಳಿಕೆ ಎರಡು ದೇಹಕ್ಕೆ ಒಳ್ಳೆಯದಲ್ಲ. ಹೀಗಾಗಿ ತುಂಬಾ ತೆಳ್ಳಗಿರುವವರು ಸೀತಾಫಲ ಸೇವಿಸಿ.

ನಮ್ಮ ಜೀರ್ಣಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ

10-health-custard-apple-in-kannada

ಸೀತಾಫಲ ಹಣ್ಣುಗಳಲ್ಲಿ ತಾಮ್ರದ ಅಂಶ ಮತ್ತು ನಾರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ ಎಂದು ಹೇಳುತ್ತಾರೆ. ಆರೋಗ್ಯಕರವಾದ ಜೀರ್ಣಾಂಗ ವ್ಯವಸ್ಥೆಯಲ್ಲಿ ಇದರ ಪಾತ್ರ ತುಂಬಾ ದೊಡ್ಡದು.

ಮುಖ್ಯವಾಗಿ ನಾರಿನ ಅಂಶ ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಮಲಬದ್ಧತೆ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುತ್ತದೆ.

ಇದಕ್ಕೆ ಸಹಕಾರಿಯಾಗುವಂತೆ ಸೀತಾಫಲ ಹಣ್ಣುಗಳಲ್ಲಿ ಮ್ಯಾಗ್ನಿಷಿಯಂ ಅಂಶ ಕೂಡ ಇರುವ ಕಾರಣ ಅಜೀರ್ಣತೆ ಮತ್ತು ಮಲಬದ್ಧತೆ ಸಮಸ್ಯೆ ಮತ್ತು ಭಾರವಾದ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದಾಗ ಉಂಟಾಗುವ ಹೊಟ್ಟೆ ಉಬ್ಬರ ಸಮಸ್ಯೆಗೆ ಕಡಿವಾಣ ಹಾಕಲು ಅನುಕೂಲವಾಗುತ್ತದೆ.

ಆರೋಗ್ಯಕರವಾದ ಹೃದಯವನ್ನು ಹೊಂದಲು ಅನುಕೂಲವಾಗುತ್ತದೆ

10-health-custard-apple-in-kannada

ಸೀತಾಫಲ ಹಣ್ಣುಗಳಲ್ಲಿ ಮೆಗ್ನೀಷಿಯಂ ಮತ್ತು ಪೊಟ್ಯಾಷಿಯಂ ಅಂಶದ ಪ್ರಮಾಣ ತುಂಬಾ ಹೆಚ್ಚಾಗಿ ಕಂಡುಬರುತ್ತದೆ. ಹೃದಯದ ಕಾಯಿಲೆಗಳನ್ನು ದೂರ ಇರಿಸುವ ಮತ್ತು ಮಾಂಸಖಂಡಗಳ ಅಭಿವೃದ್ಧಿಯಲ್ಲಿ ನೆರವಾಗುವ ಜೊತೆಗೆ ರಕ್ತದ ಒತ್ತಡವನ್ನು ಕೂಡ ನಿಯಂತ್ರಣ ಮಾಡಿಕೊಳ್ಳುವ ನಿಟ್ಟಿನಲ್ಲಿ ಸೀತಾಫಲ ಹಣ್ಣುಗಳನ್ನು ಸೇವನೆ ಮಾಡಬಹುದು.

ಏಕೆಂದರೆ ಇದರಲ್ಲಿ ಅಪಾರ ಪ್ರಮಾಣದ ನಯಾಸಿನ್ ಮತ್ತು ನಾರಿನಂಶ ಇರುವುದರಿಂದ ದೇಹದಲ್ಲಿನ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅಂಶದ ಮಟ್ಟವನ್ನು ನಿಯಂತ್ರಣ ಮಾಡುತ್ತದೆ.

ಜೊತೆಗೆ ವಿಟಮಿನ್ ಬಿ6 ಅಂಶ ಇರುವ ಕಾರಣ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುತ್ತದೆ ಮತ್ತು ಆರೋಗ್ಯಕರವಾದ ಹೃದಯವನ್ನು ಮತ್ತು ಹೃದಯದ ಕಾರ್ಯ ಚಟುವಟಿಕೆಯನ್ನು ಹೊಂದಲು ಅನುಕೂಲವಾಗುತ್ತದೆ.

Related Articles