ಕೆಲವೊಂದು ಹಣ್ಣುಗಳು ವರ್ಷಪೂರ್ತಿ ಸಿಗುವುದಿಲ್ಲ, ಸೀಸನ್ ಸಮಯದಲ್ಲಿ ಮಾತ್ರ ದೊರೆಯುತ್ತದೆ, ಅಂತಹ ಸೀಸನ್ ಹಣ್ಣಾದ ಹಲಸಿನ ಹಣ್ಣು (Jackfruit) ಏಪ್ರಿಲ್ ತಿಂಗಳಿನಿಂದ ಜುಲೈ ಅಥವಾ ಆಗಸ್ಟ್ ತಿಂಗಳವರೆಗೆ ಸಿಗುತ್ತದೆ. ಲೇಟಾಗಿ ಕಾಯಿ ಬಿಟ್ಟಿದ್ದ ಮರದಲ್ಲಿ ಮಾತ್ರ ಹಲಸಿನ ಹಣ್ಣುಗಳು ಸೆಪ್ಟಂಬರ್ ತಿಂಗಳಿನವರೆಗೆ ಇರುತ್ತದೆ, ನಂತರ ತಿನ್ನಬೇಕೆಂದರೆ ಮುಂದಿನ ವರ್ಷ ಏಪ್ರಿಲ್ ವರೆಗೂ ಕಾಯಬೇಕು. ಹಲಸಿನ (Jackfruit) ಹಣ್ಣಿನ 10 ಆರೋಗ್ಯಕರ ಗುಣಗಳ ಮಾಹಿತಿ ಇಲ್ಲಿದೆ ನೋಡಿ.
ಹಲಸಿನ ಹಣ್ಣು (Jackfruit) ರೋಗನಿರೋದಕ ಶಕ್ತಿ ಹೆಚ್ಚು ಮಾಡುತ್ತದೆ

ಹಲಸಿನ ಹಣ್ಣು ತಿಂದರೆ ಕಾಯಿಲೆ ಬರುತ್ತದೆ ಎಂದು ತಿನ್ನಲು ಭಯಪಡುವಾಗ ಇದನ್ನು ತಿಂದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಅಂದರೆ ಆಶ್ಚರ್ಯವಾಗುವುದು ಸಹಜ. ಹಲಸಿನ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಉತ್ತಮ ಪೋಷಕಾಂಶಗಳಿದ್ದು ಶೀತ, ಸೋಂಕು ಇವುಗಳನ್ನು ತಪ್ಪಿಸಲು ಸಹಕಾರಿಯಾಗಿದೆ. ಇದರಲ್ಲಿ antioxidant ಪ್ರಮಾಣ ಅಧಿಕವಾಗಿದೆ.
ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ

ದೇಹದಲ್ಲಿ ಖನಿಜಾಂಶಗಳ ಕೊರತೆ ಉಂಟಾದರೆ ದೇಹದಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗುತ್ತದೆ. ಹಲಸಿನ ಹಣ್ಣಿನಲ್ಲಿ ಖನಿಜಾಂಶಗಳು ಅಧಿಕವಾಗಿ ಇರುವುದರಿಂದ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.
ಹಲಸಿನ ಹಣ್ಣು (Jackfruit) ಮೂಳೆ ಸವೆತವನ್ನು ತಡೆಗಟ್ಟುತ್ತದೆ

ಈ ಹಣ್ಣಿನಲ್ಲಿ ಅಧಿಕ ಮ್ಯಾಗ್ನಿಷಿಯಂ ಮತ್ತು ಕ್ಯಾಲ್ಸಿಯಂ ಅಂಶವಿರುವುದರಿಂದ ಮೂಳೆಗಳನ್ನು ಬಲಪಡಿಸಲು ಸಹಕಾರಿಯಾಗಿದೆ. ಮ್ಯಾಗ್ನಿಷಿಯಂ, ಕ್ಯಾಲ್ಸಿಯಂ, ಪೊಟಾಷ್ಯಿಯಂ ಅಧಿಕವಿರುವ ಆಹಾರ ತಿಂದರೆ ಮೂಳೆಗಳು ಗಟ್ಟಿಯಾಗುವುದು.
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಒಂದು ಹಲಸಿನ ಹಣ್ಣಿನಲ್ಲಿ ಬಾಳೆಹಣ್ಣಿನಲ್ಲಿರುವಷ್ಟು ಪೊಟಾಷ್ಯಿಯಂ ಅಂಶವಿರುತ್ತದೆ. ಪೊಟಾಷ್ಯಿಯಂ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿಯಾಗಿದೆ.
ಹಲಸಿನ ಹಣ್ಣು (Jackfruit) ಇರುಳು ಕುರುಡುತನ ನಿವಾರಣೆಗೆ ಸಹಕಾರಿಯಾಗಿದೆ

ಇದರಲ್ಲಿ ಕ್ಯಾರೆಟ್ ನಲ್ಲಿರುವ ಕಾಲು ಭಾಗದಷ್ಟು ವಿಟಮಿನ್ ಎ ಅಂಶವಿರುವುದರಿಂದ ಹಣ್ಣಿನ ದೃಷ್ಟಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ವಿಟಮಿನ್ ಎ ಕೊರತೆ ಉಂಟಾದರೆ ಇರುಳು ಕುರುಡುತನ ಉಂಟಾಗುವುದು.
ಇದನ್ನೂ ಓದಿ: Watermelon: ಕಲ್ಲಂಗಡಿ ಹಣ್ಣಿನ 10 ಆರೋಗ್ಯ ಪ್ರಯೋಜನಗಳು
ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ

ಇದರಲ್ಲಿರುವ ವಿಟಮಿನ್ ಮತ್ತು ಖನಿಜಾಂಶಗಳು ದೇಹದಲ್ಲಿ ರಕ್ತ ಸರಾಗವಾಗಿ ಹರಿಯಲು ಸಹಕಾರಿಯಾಗಿದೆ. ಮೂಳೆಗಳನ್ನು ಬಲಪಡಿಸಿ ಶರೀರದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯನ್ನು ತಡೆಗಟ್ಟುತ್ತದೆ.
ಹಲಸಿನ ಹಣ್ಣು (Jackfruit) ಕ್ಯಾನ್ಸರ್ ಕಾಯಿಲೆಯಿಂದ ರಕ್ಷಿಸುತ್ತದೆ

ಹಲಸಿನ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ ಹಾಗು ಫ್ಲೇವ ನಾಯ್ಡ್ ಅಂಶಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಅದರಲ್ಲೂ ಆಂಟಿಆಕ್ಸಿಡೆಂಟ್ ಅಂಶಗಳು ದೇಹದ ಲ್ಲಿರುವ ಕಂಡು ಬರುವ ಫ್ರೀ ರಾಡಿಕಲ್ ಗಳ ವಿರುದ್ಧ ರಕ್ಷಣಾತ್ಮ ಕವಾಗಿ ಕೆಲಸ ಮಾಡುತ್ತವೆ. ಇದರಿಂದ ಕ್ಯಾನ್ಸರ್ ಕಣಗಳು ನಮ್ಮ ದೇಹದಲ್ಲಿ ಉತ್ಪತ್ತಿ ಆಗುವುದನ್ನು ತಡೆಯಲು ನೆರವಾಗುತ್ತದೆ.
ಹೃದಯದ ಆರೋಗ್ಯಕ್ಕೆ

ಹೃದಯದ ಆರೋಗ್ಯವನ್ನು ಚೆನ್ನಾಗಿಟ್ಟು ಕೊಂಡಿರಬೇಕು, ಎಂದರೆ ಸರಿಯಾದ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯನ್ನು ಬೆಳೆಸಿಕೊಳ್ಳಬೇಕು. ಇಲ್ಲಾಂದ್ರೆ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.
ಹೀಗಾಗಿ ತಮ್ಮ ಹೃದಯಕ್ಕೆ ಅನುಕೂಲಕರ ವಾದ ಆಹಾರ ಪದಾರ್ಥ ಗಳನ್ನು ಮಾತ್ರ ಸೇವನೆ ಮಾಡಬೇಕು.
ಈ ನಿಟ್ಟಿನಲ್ಲಿ ನೋಡುವುದಾದರೆ, ಹಲಸಿನ ಹಣ್ಣಿನಲ್ಲಿ ವಿಟಮಿನ್ ಬಿ6 ಅಂಶ ಹೆಚ್ಚಾಗಿ, ಕಂಡು ಬರುತ್ತದೆ. ಇವು ರಕ್ತ ಸಂಚಾರದಲ್ಲಿ ಕಂಡುಬರುವ ಹೋಮೊಸಿಸ್ಟೀನೆ ಅಂಶಗಳನ್ನು ಕಡಿಮೆ ಮಾಡಿ, ಹೃದಯದ ರಕ್ತನಾಳಗಳಿಗೆ ಸರಿಯಾಗಿ ರಕ್ತ ಪೂರೈಕೆ ಆಗುವಂತೆ ಮಾಡುತ್ತದೆ. ಇದರಿಂದ ಹೃದಯ ಆರೋಗ್ಯ ಕೂಡ ಚೆನ್ನಾಗಿರುತ್ತದೆ.
ಜೀರ್ಣಕ್ರಿಯೆಗೆ ಸಂಬಂಧ ಪಟ್ಟ ಸಮಸ್ಯೆಗಳು ದೂರವಾಗುತ್ತದೆ

ಮೊದಲೇ ಹೇಳಿದ ಹಾಗೆ ಈ ಹಣ್ಣಿನಲ್ಲಿ ನಾರಿನಾಂಶ, ಯಥೇಚ್ಛವಾಗಿ ಕಂಡು ಬರುವುದರಿಂದ, ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಿಸು ವಲ್ಲಿ, ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ನಿಯಮಿತವಾಗಿ ಈ ಹಣ್ಣನ್ನು ಸೇವನೆ ಮಾಡುವು ದರಿಂದ, ಜೀರ್ಣ ಪ್ರಕ್ರಿಯೆಗಳು ಸರಿಯಾಗಿ ನಡೆದು, ಅಜೀರ್ಣತೆ, ಮಲಬದ್ಧತೆ ಸಮಸ್ಯೆ ಕ್ರಮೇಣವಾಗಿ ದೂರ ವಾಗುತ್ತಾ ಹೋಗುತ್ತದೆ.
ಹಲಸಿನ ಹಣ್ಣು (Jackfruit) ರಕ್ತ ಹೀನತೆಯನ್ನು ತಡೆಗಟ್ಟುತ್ತದೆ

ಇದರಲ್ಲಿ ಕಬ್ಬಿಣದಂಶ ಕೂಡ ಇರುವುದರಿಂದ ರಕ್ತ ಹೀನತೆ ಸಮಸ್ಯೆ ನಿವಾರಣೆಗೆ ಇದನ್ನು ತಿನ್ನುವುದು ಒಳ್ಳೆಯದು.