ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಸಹಕಾರಿ ಆಗುತ್ತದೆ ಎಂಬ ಮಾತಿದೆ. ದಿನ ನಿತ್ಯ ಪ್ರಮಾಣದಲ್ಲಿ ಹಣ್ಣುಗಳನ್ನು ಸೇವಿಸಿದರೆ, ಜನರು ಹಲವು ಪ್ರಯೋಜನವನ್ನು ಸಹ ಪಡೆಯಬಹುದು. ಒಂದು ಸೇಬು ಹಣನ್ನು ದಿನ ನಿತ್ಯ ತಿನ್ನುವುದರಿಂದ ವೈದ್ಯರಿಂದ ದೂರ ಇರಬಹುದು ಎಂಬ ಮಾತು ಇದೆ. ಹೀಗಾಗಿ ಊಟದ ಜೊತೆಗೆ ಅಥವಾ ಊಟದ ಬಳಿಕ ಹಣ್ಣಗಳ ಸೇವನೆಗೆ ಒತ್ತು ನೀಡಲಾಗುತ್ತದೆ.
ಕಿವಿ ಹಣ್ಣು (Kiwi) ವರ್ಷದ ಎಲ್ಲಾ ಸಮಯದಲ್ಲಿಯೂ ದೊರಕುವ ಹಣ್ಣಾಗಿದೆ. ವಾಸ್ತವದಲ್ಲಿ ಇದು ವಾರ್ಷಿಕ ಬೆಳೆಯಾಗಿದ್ದರೂ, ವಿಶ್ವದ ಒಂದು ಬದಿಯಲ್ಲಿ, ಅಂದರೆ ಅಮೇರಿಕಾದ ಕ್ಯಾಲಿಫೋರ್ನಿಯಾ ಕಡೆಯಲ್ಲಿ ನವೆಂಬರ್ ನಿಂದ ಮೇ ತಿಂಗಳಲ್ಲಿ ಕಟಾವಿಗೆ ಬಂದರೆ ಇನ್ನೊಂದು ಬದಿಯಲ್ಲಿ ಅಂದರೆ ನ್ಯೂಜಿಲ್ಯಾಂಡ್ ನಲ್ಲಿ ಜೂನ್ ನಿಂದ ಅಕ್ಟೋಬರ್ ಸಮಯದಲ್ಲಿ ಕಟಾವಿಗೆ ಬರುತ್ತವೆ. ಪರಿಣಾಮವಾಗಿ ವರ್ಷದ ಎಲ್ಲಾ ದಿನಗಳಲ್ಲಿಯೂ ಇವು ಲಭವಾಗಲು ಸಾಧ್ಯವಾಗಿದೆ.
ಆರೋಗ್ಯಕರ ಚರ್ಮ

ಕಿವಿ (Kiwi) ಹಣ್ಣಿನಲ್ಲಿರುವ ವಿಟಮಿನ್‌ಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.
ಇದು ಮುಖದ ಮೇಲೆ ವಯಸ್ಸಾಗುವಿಕೆ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಸುಂದರವಾಗಿ ಕಾಣಬೇಕೆಂದರೆ ಪ್ರತಿದಿನ ಒಂದು ಕಿವಿ ಹಣ್ಣನ್ನು ತಿನ್ನುವುದನ್ನು ರೂಢಿಸಿಕೊಳ್ಳಿ.
ಕಣ್ಣಿನ ದೃಷ್ಟಿ

ಕಿವಿ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಇ ನಂತಹ ಪೋಷಕಾಂಶಗಳಿವೆ. ಇವು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ದೃಷ್ಟಿ ದೋಷವನ್ನು ಸುಧಾರಿಸುತ್ತದೆ.
ಗಾಢ ನಿದ್ರೆ

ಕಿವಿ (Kiwi) ಹಣ್ಣಿನಲ್ಲಿರುವ ಸಿರೊಟೋನಿನ್ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಹಾಗಾಗಿ ರಾತ್ರಿ ಗಾಢ ನಿದ್ರೆಯಿಂದ ಬಳಲುತ್ತಿರುವವರು ಮಲಗುವ ಮುನ್ನ ಕಿವಿ ಹಣ್ಣನ್ನು ತಿನ್ನಬಹುದು.
ಉಸಿರಾಟದ ಆರೋಗ್ಯ

ಕಿವಿ ಹಣ್ಣು ಉಸಿರಾಟದ ಆರೋಗ್ಯಕ್ಕೆ ಒಳ್ಳೆಯದು. ಇದು ಆಸ್ತಮಾದಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಮತ್ತು ಶ್ವಾಸಕೋಶದ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಹೃದಯದ ಆರೋಗ್ಯ

ಕಿವಿ ಹಣ್ಣು (Kiwi) ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಈ ಹಣ್ಣು ರಕ್ತ ಹೆಪ್ಪುಗಟ್ಟುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳವನ್ನು ತಡೆಯುತ್ತದೆ. ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಣೆ ದೊರೆಯುತ್ತದೆ.
ಇದನ್ನೂ ಓದಿ: Strawberry: ಸ್ಟ್ರಾಬೆರಿ ಹಣ್ಣಿನ 10 ಆರೋಗ್ಯ ಪ್ರಯೋಜನಗಳು
ಉತ್ಕರ್ಷಣ ನಿರೋಧಕಗಳು

ಕಿವಿ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ದೇಹದ ಜೀವಕೋಶಗಳನ್ನು ರಕ್ಷಿಸುತ್ತದೆ ಮತ್ತು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಅಲ್ಲದೇ, ಇದು ದೇಹದಲ್ಲಿ ಫ್ರೀ ರಾಡಿಕಲ್ಗಳೊಂದಿಗೆ ಹೋರಾಡುತ್ತಾರೆ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ.
ರಕ್ತದ ಒತ್ತಡವನ್ನು ನಿರ್ವಹಿಸುವಲ್ಲಿ ನೆರವಾಗುತ್ತದೆ

ಅಧಿಕ ರಕ್ತದ ಒತ್ತಡವನ್ನು ಕಡಿಮೆಗೊಳಿಸಿ ಹೃದಯ ಮತ್ತು ರಕ್ತನಾಳಗಳ ಮೇಲಿನ ಒತ್ತಡವನ್ನು ತೆರವುಗೊಳಿಸುವ ಮೂಲಕ ಕಿವಿ ಹಣ್ಣು ಆರೋಗ್ಯವನ್ನು ವೃದ್ದಿಸುತ್ತದೆ.
2014 ರಲ್ಲಿ ಈ ಹಣ್ಣಿನ ಬಗ್ಗೆ ನಡೆಸಿದ ಸಂಶೋಧನೆಯಲ್ಲಿ ನಿತ್ಯವೂ ಮೂರು ಕಿವಿ ಹಣ್ಣುಗಳನ್ನು, ಸತತವಾಗಿ ಎಂಟು ವಾರಗಳ ಕಾಲ ಸೇವಿಸುತ್ತಾ ಬಂದ ವ್ಯಕ್ತಿಗಳಲ್ಲಿ ಸಿಸ್ಟೋಲಿಕ್ ಮತ್ತು ಡಯಾಸ್ಟೋಲಿಕ್ ರಕ್ತದ ಒತ್ತಡಗಳನ್ನು ಸಾಕಷ್ಟು ಮಟ್ಟಿಗೆ ತಗ್ಗಿಸಿರುವುದನ್ನು ಗಮನಿಸಲಾಗಿದೆ.
ಕಿವಿ (Kiwi) ಹಣ್ಣಿನಲ್ಲಿ ಲ್ಯೂಟಿನ್ ಎಂಬ ಆಂಟಿ ಆಕ್ಸಿಡೆಂಟ್ ಇದ್ದು ಇದೇ ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ ಎಂದು ಭಾವಿಸಲಾಗಿದೆ. ಕಿವಿಯಲ್ಲಿರುವ ವಿಟಮಿನ್ ಸಿ ಸಹಾ ರಕ್ತದ ಒತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ.
ದೃಷ್ಟಿ ಮಂದವಾಗುವುದರಿಂದ ರಕ್ಷಿಸುತ್ತದೆ

ವಯಸ್ಸಾದಂತೆ ದೃಷ್ಟಿ ಕುಂದುವ, ಕ್ರಮೇಣ ಕುರುಡುತನಕ್ಕೆ ಕಾರಣವಾಗುವ ಸ್ಥಿತಿಯಾದ ಮ್ಯಾಕ್ಯುಲಾರ್ ಡೀಜನರೇಶನ್ ಎಂಬ ಸ್ಥಿತಿಯನ್ನು ಕಿವಿ ಹಣ್ಣು ಆದಷ್ಟೂ ನಿಧಾನವಾಗಿಸುತ್ತದೆ.
ಸಂಶೋಧನೆಯ ಪ್ರಕಾರ, ನಿತ್ಯವೂ ಮೂರು ಪ್ರಮಾಣದಷ್ಟು ಕಿವಿ ಹಣ್ಣುಗಳನ್ನು ಸೇವಿಸುತ್ತಾ ಬಂದರೆ, ಈ ಸ್ಥಿತಿ ಆವರಿಸುವ ಸಾಧ್ಯತೆ 36% ರಷ್ಟು ತಗ್ಗುತ್ತದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.
ಇದಕ್ಕೆ ಇದರಲ್ಲಿರುವ ಅಧಿಕ ಪ್ರಮಾಣದ ಜಿಯಾಕ್ಸಾಂಥಿನ್ ಮತ್ತು ಲ್ಯೂಟೀನ್ ಎಂಬ ಪೋಷಕಾಂಶಗಳೇ ಕಾರಣ.
ಕಿವಿಹಣ್ಣಿನ ಸೇವನೆಯಿಂದ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ

ಈ ಹಣ್ಣಿನಲ್ಲಿ ಕರಗದ ಹಾಗೂ ಕರಗುವ ನಾರಿನ ಅಂಶ ಸಮೃದ್ಧವಾಗಿದ್ದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ನಾರಿನಂಶದ ಹೊರತಾಗಿ, ಇದರ ತಿರುಳಿನಲ್ಲಿರುವ ಆಕ್ಟಿನೈಡಿನ್ ಎಂಬ ಕಿಣ್ವ ಜಠರದಲ್ಲಿ ಪ್ರೋಟೀನುಗಳನ್ನು ಸಮರ್ಥವಾಗಿ ಒಡೆದು ಜೀರ್ಣಿಸಿಕೊಳ್ಳಲು ನೆರವಾಗುವ ಗುಣ ಹೊಂದಿದೆ. ಇದೇ ಕಾರಣಕ್ಕೆ, ಒಂದು ವೇಳೆ ಊಟ ಇಷ್ಟವಾಯಿತೆಂದು ಕೊಂಚ ಹೆಚ್ಚೇ ಊಟ ಮಾಡಿದರೆ ಒಂದು ಕಿವಿ ಹಣ್ಣನ್ನು ಸೇವಿಸುವಂತೆ ಸಲಹೆ ಮಾಡಲಾಗುತ್ತದೆ.
ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ

ಕಿವಿಹಣ್ಣಿನ (Kiwi) ಸೇವನೆಯಿಂದ ಕೊಬ್ಬಿನ ಉತ್ಪಾದನೆ ತಗ್ಗುವ ಮೂಲಕ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯೂ ಕಡಿಮೆಯಾಗುವುದನ್ನು ಹಾಗೂ ರಕ್ತದ ಒತ್ತಡವನ್ನು ನಿಯಂತ್ರಿಸಲೂ ಸಾಧ್ಯವಾಗುವುದನ್ನು ಸಂಶೋಧನೆಗಳು ದೃಢಪಡಿಸಿವೆ. ಈ ಕ್ರಿಯೆಯಲ್ಲಿ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮಟ್ಟದ ಮೇಲೆ ಯಾವುದೇ ಪರಿಣಾಮ ಉಂಟಾಗದೇ ಇರುವುದನ್ನು ಸಹಾ ಗಮನಿಸಲಾಗಿದೆ.