ಹಣ್ಣುಗಳ ರಾಜ ಎಂದೊಡನೆ ನೆನಪಾಗೋದು ಮಾವಿನ ಹಣ್ಣು(Mango). ಅದರಲ್ಲೂ ಬೇಸಿಗೆ ಬಂತೆಂದರೆ ಊಟದೊಂದಿಗೆ ಮಾವಿನ ಹಣ್ಣು ಸಾಮಾನ್ಯವಾಗಿ ಇದ್ದೇ ಇರುತ್ತದೆ. ಹೆಚ್ಚಿನವರು ಮಾವಿನ ಹಣ್ಣನ್ನು (Mango) ಅದರ ರುಚಿಗೆ ತಿಂದರೂ ಅದರಿಂದ ಸಿಗುವ ಪ್ರಯೋಜನಗಳು ಅಪಾರ. ಮಾವಿನಿಂದ ಸಿಗುವ ಪ್ರಯೋಜನಗಳು ಇಂತಿವೆ.
1. ಕಣ್ಣುಗಳಿಗೆ ಕಣ್ಣಾಗಿರುವ ಮಾವಿನ ಹಣ್ಣು(Mango)

ಮಾವು ವಿಟಮಿನ್ ಎ ಯಲ್ಲಿ ಸಮೃದ್ಧವಾಗಿದೆ. ಒಂದು ಮಾವಿನ ಹಣ್ಣು ಪೂರ್ಣ ತಿನ್ನುವುದರಿಂದ 25 ಪ್ರತಿಶತ ವಿಟಮಿನ್ ಎ ಪೋಷಣೆಯನ್ನು ಒದಗಿಸುತ್ತದೆ. ಇದು ಕುರುಡುತನ ಮತ್ತು ಒಣ ಕಣ್ಣುಗಳ ಸಮಸ್ಯೆಯಿಂದ ರಕ್ಷಿಸುತ್ತದೆ.
2. ಕ್ಯಾನ್ಸರ್ ವಿರುದ್ಧ ಹೋರಾಡುವ ಮಾವಿನ ಹಣ್ಣು(Mango)

ಮಾವಿನ ಹಣ್ಣು ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಕಾರಣ, ಇದನ್ನು ತಿನ್ನುವುದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ವಿಶೇಷವಾಗಿ ಕರುಳಿನ ಮತ್ತು ಸ್ತನ ಕ್ಯಾನ್ಸರ್ ವಿರುದ್ಧ ಇದು ಹೋರಾಡುವ ಶಕ್ತಿಯನ್ನು ಹೊಂದಿದೆ. ಇದು ಅನೇಕ ಸಂಶೋಧನೆಗಳಲ್ಲಿ ಸಾಬೀತಾಗಿದೆ.
3. ಕೂದಲು ಮತ್ತು ತ್ವಚೆ

ಮಾವು ಮಾವಿನ ಹಣ್ಣಿನಲ್ಲಿ ವಿಟಮಿನ್ ಎ ಯಥೇಚ್ಚವಾಗಿದೆ. ಇದು ಚರ್ಮವನ್ನು ತೇವಗೊಳಿಸಲು ಕೆಲಸ ಮಾಡುತ್ತದೆ. ತ್ವಚೆಯನ್ನು ಒಣಗದಂತೆ ನೋಡಿಕೊಳ್ಳುತ್ತದೆ.
ಇದು ಚರ್ಮ ಮತ್ತು ಕೂದಲಿಗೆ ಪೋಷಣೆಯನ್ನು ನೀಡುತ್ತದೆ. ಇದರಿಂದಾಗಿ ಮಾವಿನ ಹಣ್ಣನ್ನು ತಿನ್ನುವುದು ತುಂಬಾ ಪ್ರಯೋಜನಕಾರಿಯಾಗಿದೆ.
4. ಮಧುಮೇಹಕ್ಕೆ ಶತ್ರು ಮಾವಿನ ಹಣ್ಣು(Mango)

ಈ ರಾಜ ಮಾವಿನ ಹಣ್ಣನ್ನು ತಿನ್ನುವುದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಲಿಪಿಡ್ ಮತ್ತು ಇನ್ಸುಲಿನ್ ಮಟ್ಟವನ್ನು ಸುಧಾರಿಸುತ್ತದೆ. ಮಾವು ಮಧುಮೇಹ ರೋಗಿಗಳಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಅಲ್ಲದೆ ಐದರಿಂದ ಆರು ಮಾವಿನ ಎಲೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ ರಾತ್ರಿಯಿಡೀ ನೀರಿನಲ್ಲಿ ಬಿಟ್ಟು ಬೆಳಿಗ್ಗೆ ಈ ನೀರನ್ನು ಕುಡಿದರೆ ಮಧುಮೇಹ ರೋಗಿಗಳಿಗೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ.
ಇದನ್ನೂ ಓದಿ: Moosambi: ಮೂಸಂಬಿ ಹಣ್ಣಿನ 10 ಆರೋಗ್ಯ ಪ್ರಯೋಜನಗಳು
5. ಮೂತ್ರಪಿಂಡದ ಕಲ್ಲುಗಳನ್ನು ಕಡಿಮೆ ಮಾಡುವ ಮಾವಿನ ಹಣ್ಣು(Mango)

ಮಾವಿನಹಣ್ಣು ತಿನ್ನುವುದರಿಂದ ಮೂತ್ರಪಿಂಡದ ಕಲ್ಲುಗಳ ರಚನೆಯ ಸಾಧ್ಯತೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಮಾವು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ, ಇದು ಮೂತ್ರಪಿಂಡದಲ್ಲಿ ಕಲ್ಲುಗಳ ಹೆಚ್ಚಳದ ಅಪಾಯವನ್ನು ಕಡಿಮೆ ಮಾಡುತ್ತದೆ.
6. ಹೃದಯದ ಆರೋಗ್ಯ

ಮಾವಿನ ಹಣ್ಣಿನಲ್ಲಿ (Mango) ಫೈಬರ್, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳು ಕಂಡು ಬರುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ.
7. ರೋಗನಿರೋಧಕ ಶಕ್ತಿ ಹೆಚ್ಚಳ

ಮಾವಿನಹಣ್ಣು ತಿನ್ನುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ವಿಟಮಿನ್ ಎ ಮತ್ತು ಸಿ ಅನ್ನು ಹೊಂದಿರುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಹೀಗಾಗಿ ಮಾವಿನ ಹಣ್ಣು ದೇಹಕ್ಕೆ ಶಕ್ತಿ ನೀಡಿ ರಕ್ಷಿಸುತ್ತದೆ.
8. ತೂಕ ನಷ್ಟ

ಮಾವಿನಹಣ್ಣಿನಲ್ಲಿರುವ ಫೈಬರ್ ಅಂಶವು ಪೂರ್ಣತೆಯ ಭಾವನೆಗಳನ್ನು ಉತ್ತೇಜಿಸಲು ಹಾಗೂ ಅತಿಯಾಗಿ ತಿನ್ನುವುದನ್ನು ತಡೆಯಲು ಸಹಕಾರಿ ಆಗಿದೆ. ಹಾಗಾಗಿ, ಹಿತಮಿತವಾದ ಮಾವಿನ ಹಣ್ಣಿನ ಸೇವನೆಯು ತೂಕ ನಷ್ಟವನ್ನು ಸಹ ಪ್ರಚೋದಿಸುತ್ತದೆ.
9. ಮೆದುಳಿನ ಆರೋಗ್ಯ

ಮಾವಿನ ಹಣ್ಣಿನಲ್ಲಿ ಕಂಡು ಬರುವ ವಿಟಮಿನ್ ಬಿ6 ಸಿರೊಟೋನಿನ್ ಮತ್ತು ಡೋಪಮೈನ್‌ನಂತಹ ನ್ಯೂರೋಟ್ರಾನ್ಸ್‌ಮಿಟರ್‌ಗಳ ಉತ್ಪಾದನೆಗೆ ಸಹಾಯ ಮಾಡುವ ಮೂಲಕ, ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
10. ಚರ್ಮದ ಆರೋಗ್ಯ

ಮಾವಿನ ಹಣ್ಣಿನಲ್ಲಿ ಕಂಡು ಬರುವ ವಿಟಮಿನ್ ಇ ಮತ್ತು ಬೀಟಾ-ಕ್ಯಾರೋಟಿನ್ ಅಂಶವೂ ಚರ್ಮವನ್ನು ಒಳಗಿನಿಂದ ಪೋಷಿಸುತ್ತದೆ. ಜೊತೆಗೆ ನೈಸರ್ಗಿಕವಾಗಿ ಮುಖದ ಕಾಂತಿಯನ್ನು ಹೆಚ್ಚಿಸಲು ಸಹಕಾರಿ ಆಗಿದೆ.