ಮುಸಂಬಿ (Moosambi) ಜನಪ್ರಿಯ ಹಣ್ಣಾಗಿದ್ದು,ದೇಶದ ಬಹುತೇಕ ಭಾಗಗಳಲ್ಲಿ ಮುಸಂಬಿಯನ್ನು ಜ್ಯೂಸ್ ಅಂಗಡಿಗಳನ್ನು ಕಾಣಬಹುದು. ಈ ಹಣ್ಣಿನಲ್ಲಿ ಅನೇಕ ಆರೋಗ್ಯ ಪ್ರಯೋಜನಗಳಿದೆ.
ನೈಸರ್ಗಿಕ ನೀರಿನಾಂಶ, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಈ ಹಣ್ಣನ್ನು ಯಾವಾಗಬೇಕಾದರೂ ಸೇವಿಸಬಹುದು.
ಸಾಮಾನ್ಯವಾಗಿ ಮೂಸಂಬಿ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಾಗಿರುತ್ತದೆ. ಹಾಗಾಗಿ ಇದನ್ಜು ತಿನ್ನುವುದರಿಂದ ಮಳೆಗಾಲ ಹಾಗೂ ಚಳಿಗಾಲದಲ್ಲಿ ನಮ್ಮನ್ನು ಕಾಡುವ ಅನೇಕ ಆರೋಗ್ಯ ಸಮಸ್ಯೆಗಳ ವಿರುದ್ಧ ರಕ್ಷಿಸುತ್ತದೆ.
ಸಾಮಾನ್ಯವಾಗಿ ಮೂಸಂಬಿ ಯಥೇಚ್ಛವಾಗಿ ನೀರಿನಾಂಶ ಹೊಂದಿದ್ದು, ಹಲವಾರು ಬಗೆಯ ಪೌಷ್ಟಿಕ ಸತ್ವಗಳನ್ನು ಒಳಗೊಂಡಿದೆ.
ಈ ಹಣ್ಣು ದೇಹಕ್ಕೆ ತುಂಬಾನೇ ತಂಪು. ವಿಶೇಷ ಬಗೆಯ ವಿಟಮಿನ್ಗಳು ಹಾಗೂ ಖನಿಜಾಂಶಗಳು ಅಗಾಧ ಪ್ರಮಾಣದಲ್ಲಿ ಮೂಸಂಬಿಯಲ್ಲಿರುವುದರಿಂದ ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು, ಪಾರ್ಶ್ವವಾಯು, ಗಂಟುಗಳು ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
1. ಪೌಷ್ಠಿಕಾಂಶದ ಶಕ್ತಿಕೇಂದ್ರ ಮೋಸಂಬಿ (Moosambi)

ಮುಸಂಬಿಯಲ್ಲಿ (Moosambi) ವಿಟಮಿನ್ ಸಿ, ವಿಟಮಿನ್ ಎ ಮತ್ತು ಫೈಬರ್ ಸಮೃದ್ಧವಾಗಿದೆ, ಇದು ನಿಮ್ಮ ದೇಹಕ್ಕೆ ಪ್ರಯೋಜನಕಾರಿಯಾಗಿದೆ ಮತ್ತು ದೇಹದಲ್ಲಿನ ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತದೆ.
2. ರೋಗನಿರೋಧಕ ಶಕ್ತಿ ಹೆಚ್ಚಳ

ಮುಸಂಬಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಶೀತ, ಕೆಮ್ಮು, ಜ್ವರ ಮತ್ತು ಇತರ ವೈರಲ್ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
3. ಉತ್ತಮ ಜೀರ್ಣಕ್ರಿಯೆ

ಮುಸಂಬಿಯಲ್ಲಿ ಉತ್ತಮ ಪ್ರಮಾಣದ ಫೈಬರ್ ಇದ್ದು ಹೊಟ್ಟೆಯ ಆರೋಗ್ಯವನ್ನು ಸುಧಾರಿಸುತ್ತದೆ. ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಮಲಬದ್ಧತೆಯನ್ನು ನಿವಾರಿಸುತ್ತದೆ. ಅಲ್ಲದೇ ನಿಮ್ಮನ್ನು ಸದಾ ಸಕ್ರಿಯವಾಗಿರಿಸುತ್ತದೆ.
4. ತೂಕ ಇಳಿಕೆ

ಮೂಸಂಬಿ (Moosambi) ತಿನ್ನುವುದರಿಂದ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ಏಕೆಂದರೆ ಇದು ಕಡಿಮೆ ಕ್ಯಾಲೋರಿ ಹೊಂದಿರುವ ಹಣ್ಣಾಗಿದ್ದು, ಹೊಟ್ಟೆ ಮತ್ತು ಸೊಂಟದ ಸುತ್ತಲೂ ಸಂಗ್ರಹವಾಗುವ ಬೊಜ್ಜನ್ನು ಕರಗಿಸುತ್ತದೆ. ಹಾಗಾಗಿ ಫಿಟ್ನೆಸ್ ಬಗ್ಗೆ ಕಾಳಜಿ ಇರುವವರು ಮುಸಂಬಿ ಜ್ಯೂಸ್ ಕುಡಿಯಬಹುದು.
ಇದನ್ನೂ ಓದಿ: Orange: ಕಿತ್ತಳೆ ಹಣ್ಣಿನ 10 ಆರೋಗ್ಯ ಪ್ರಯೋಜನಗಳು
5. ಮಾನಸಿಕ ಆರೋಗ್ಯ

ಮುಸಂಬಿ ತಿನ್ನುವುದರಿಂದ ಮಾನಸಿಕ ಆರೋಗ್ಯವನ್ನು ಸುಧಾರಣೆ ಆಗುತ್ತದೆ. ಇದು ಖಿನ್ನತೆ ಮತ್ತು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಮಾನಸಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಇದಕ್ಕಿಂತ ಮತ್ತೊಂದು ಔಷಧವಿಲ್ಲ ಎಂದೇ ಹೇಳಬಹುದು.
6. ನಿರ್ಜಲೀಕರಣ ಸಮಸ್ಯೆಯನ್ನು ದೂರ ಮಾಡುತ್ತದೆ

ಈ ಹಣ್ಣಿನಲ್ಲಿ ವಿಟಮಿನ್ಸ್ ಹಾಗೂ ಖನಿಜಾಂಶಗಳಿಂದ ತುಂಬಿಕೊಂಡಿರುವಂತಹ ಮೂಸಂಬಿ ಹಣ್ಣಿನ ಜ್ಯೂಸ್‌ನ್ನು ಕುಡಿಯುವುದರಿಂದ, ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ದೂರವಾಗಿ, ದೇಹವನ್ನು ಹೈಡ್ರೇಟ್ ಆಗಿಡುತ್ತದೆ.
7. ಕ್ಯಾನ್ಸರ್ ವಿರುದ್ಧ ಹೋರಾಡುವ ಎಲ್ಲಾ ಲಕ್ಷಣಗಳು ಈ ಮೋಸಂಬಿ (Moosambi) ಹಣ್ಣಿನಲ್ಲಿದೆ

ಮೊದಲೇ ಹೇಳಿದ ಹಾಗೆ ಈ ಹಣ್ಣಿನಲ್ಲಿ ಫ್ಲಾವನಾಯ್ಡ್ ಎನ್ನುವ ಆರೋಗ್ಯಕಾರಿ ಅಂಶ ಯಥೇಚ್ಛ ವಾಗಿ ಕಂಡು ಬರುವುದರಿಂದ ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳು ಬೆಳವಣಿಗೆ ಆಗದಂತೆ ನೋಡಿ ಕೊಳ್ಳುವ ಗುಣಲಕ್ಷಣಗಳನ್ನು ಒಳಗೊಂಡಿದೆ.
ಅಷ್ಟೇ ಅಲದೆ ಈ ಹಣ್ಣು ಆಂಟಿ ಆಕ್ಸಿಡೆಂಟ್ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣ ಗಳನ್ನು ಒಳಗೊಂಡಿರುವ ಜೊತೆಗೆ ವಿಟಮಿನ್ ಸಿ ಅಂಶ ಕೂಡ ಹೇರಳವಾಗಿ ಕಂಡು ಬರುವು ದರಿಂದ, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿ ಕ್ಯಾನ್ಸರ್ ವಿರುದ್ಧ ಹೋರಾಡಲು ನೆರವಾಗುತ್ತದೆ.
8. ಕೂದಲ ಸಮಸ್ಯೆಗೆ ಮೋಸಂಬಿ (Moosambi) ಒಳ್ಳೆಯದು

ಇದಲ್ಲದೇ ಅನೇಕರು ಎದುರಿಸುತ್ತಿರುವ ಕೂದಲ ಸಮಸ್ಯೆಗೆ ಮೋಸಂಬಿ ಒಳ್ಳೆಯದು ಎನ್ನುತ್ತಾರೆ ತಜ್ಞರು. ಕೂದಲು ಆರೋಗ್ಯವಾಗಿರಲು ಇವುಗಳನ್ನು ಸೇವಿಸಲು ಸೂಚಿಸಲಾಗುತ್ತದೆ. ಸ್ಲಿಟ್ ಕೂದಲುಗಳನ್ನು ತಡೆದು ಹೊಳೆಯುವಂತೆ ಮಾಡುತ್ತದೆ ಎಂದು ವೈದ್ಯರು ವಿವರಿಸುತ್ತಾರೆ.
9. ಮೋಸಂಬಿ (Moosambi) ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ

ಮೋಸಂಬಿಯಲ್ಲಿರುವ ವಿಟಮಿನ್ ಮತ್ತು ಮಿನರಲ್ಸ್ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ. ಚರ್ಮದ ಕಲೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡುವುದಲ್ಲದೆ, ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ ಮತ್ತು ಚರ್ಮವನ್ನು ಹಿಗ್ಗಿಸುವುದನ್ನು ತಡೆಯುತ್ತದೆ ಎಂದು ವೈದ್ಯರು ಹೇಳುತ್ತಾರೆ.
10. ಮೂಳೆಯ ಆರೋಗ್ಯ

ಮೋಸಂಬಿಯಲ್ಲಿರುವ ಪೋಷಕಾಂಶಗಳು ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ ಎಂದು ಹೇಳಲಾಗುತ್ತದೆ. ಅವರು ಆಸ್ಟಿಯೋ ಮತ್ತು ರುಮಟಾಯ್ಡ್ ಸಂಧಿವಾತದಿಂದ ಪ್ರಭಾವಿತವಾಗದಂತೆ ರಕ್ಷಿಸುತ್ತದೆ.