ಚೆರ್ರಿ (Cherry) ಸಿಹಿ ಮತ್ತು ಸ್ವಲ್ಪ ಹುಳಿ ರುಚಿಯನ್ನು ಹೊಂದಿರುವ ಈ ಹಣ್ಣುಗಳನ್ನು ನಾವೆಲ್ಲರೂ ಇಷ್ಟಪಡುತ್ತೇವೆ. ಈ ಹಣ್ಣು ಪೋಷಕಾಂಶಗಳು, ಜೀವಸತ್ವಗಳು, ಖನಿಜಗಳು, ಫೈಬರ್ ಇತ್ಯಾದಿಗಳಿಂದ ತುಂಬಿರುತ್ತದೆ. ಚೆರ್ರಿಯನ್ನು ಬಾಯಲ್ಲಿ ನೀರೂರಿಸುವ ಕೇಕ್, ಉಪ್ಪಿನಕಾಯಿ ಮತ್ತು ಜಾಮ್ಗಳಲ್ಲಿ ಬಳಸಲಾಗುತ್ತದೆ. ಚೆರ್ರಿ ರುಚಿಯಲ್ಲಿ ಹುಳಿ ಅಂತಾ ಅದನ್ನು ಕೆಲವರು ಸೇವನೆ ಮಾಡೋದಿಲ್ಲ. ಮತ್ತೆ ಕೆಲವರು ಸಿಹಿ – ಹುಳಿ ಯಾವುದೇ ಹಣ್ಣಿರಲಿ ಖುಷಿಯಿಂದ ಸೇವನೆ ಮಾಡ್ತಾರೆ. ಚೆರ್ರಿ ಹಣ್ಣು ಸಾಕಷ್ಟು ಆರೋಗ್ಯ ಪ್ರಯೋನವನ್ನು ಹೊಂದಿದೆ. ಹಾಗಾಗಿ ಇದನ್ನು ಪ್ರತಿಯೊಬ್ಬರೂ ಸೇವನೆ ಮಾಡ್ಬೇಕು.
ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ

ಚೆರ್ರಿ (Cherry) ನಮ್ಮ ರಕ್ತವನ್ನು ನೈಸರ್ಗಿಕವಾಗಿ ಶುದ್ಧೀಕರಿಸುವ ಮತ್ತು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ, ಇದು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ಹೃದ್ರೋಗ ಮತ್ತು ಪಾರ್ಶ್ವವಾಯುವನ್ನು ತಡೆಯುತ್ತದೆ.
ನಿದ್ರಾ ಹೀತನೆ ಕಡಿಮೆ ಮಾಡುತ್ತದೆ

ಚೆರ್ರಿಗಳಲ್ಲಿ ಮೆಲಟೋನಿನ್ ಎಂಬ ಹಾರ್ಮೋನ್ ಇದ್ದು ಅದು ಉತ್ತಮ ನಿದ್ರೆಗೆ ಸಹಕಾರಿ, ಮೆಲಟೋನಿನ್ ಮೆದುಳಿನಲ್ಲಿರುವ ಪೀನಿಯಲ್ ಗ್ರಂಥಿಯಿಂದ ಉತ್ಪತ್ತಿಯಾಗುವ ಹಾರ್ಮೋನ್.
ಇದು ನಿಮ್ಮ ನಿದ್ರೆ ಮತ್ತು ಎಚ್ಚರ ಚಕ್ರಗಳನ್ನು ನಿಯಂತ್ರಿಸುತ್ತದೆ ಮತ್ತು ಆಂತರಿಕ ದೇಹದ ಗಡಿಯಾರವನ್ನು ನಿಯಂತ್ರಿಸುತ್ತದೆ ಎಂದು ಹೇಳಲಾಗುತ್ತದೆ.
ಈ ಹಣ್ಣು ನಿಮ್ಮ ಚಯಾಪಚಯ ಕ್ರಿಯೆಯನ್ನು ಬಲಪಡಿಸುವ ವಿಟಮಿನ್‌ಗಳನ್ನು ಹೊಂದಿದೆ. ಅಲ್ಲದೇ ನಿಮ್ಮ ದೇಹದಲ್ಲಿರುವ ವಿಷದ ಅಂಶಗಳನ್ನು ಸಹ ಹೊರಹಾಕಲು ಸಹಾಯ ಮಾಡುತ್ತದೆ.
ತೂಕ ಇಳಿಕೆಗೆ ಸಹಕಾರಿ

ನೀವು ಸ್ವಲ್ಪ ತೂಕವನ್ನು ಕಳೆದುಕೊಳ್ಳಲು ಪ್ಲ್ಯಾನ್ ಮಾಡುತ್ತಿದ್ದರೆ, ನಿಮ್ಮ ಆಹಾರದಲ್ಲಿ ಚೆರ್ರಿಗಳನ್ನು ಸೇರಿಸಲು ಮರೆಯಬೇಡಿ.
ಚೆರ್ರಿಗಳು (Cherry) ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ ಅಂದರೆ ಒಂದು ಕಪ್ ಚೆರ್ರಿಗಳು 100 ಕ್ಯಾಲೊರಿಗಳಿಗಿಂತ ಕಡಿಮೆಯಿರುತ್ತವೆ (USDA ಪ್ರಕಾರ).
ಅವು ನಿಮ್ಮ ಚಯಾಪಚಯವನ್ನು ಬಲಪಡಿಸುವ ವಿಟಮಿನ್‌ಗಳಲ್ಲಿ ಸಮೃದ್ಧವಾಗಿವೆ ಮತ್ತು ನಿಮ್ಮ ದೇಹದಿಂದ ವಿಷವನ್ನು ಹೊರಹಾಕುವ ಅಂಶವನ್ನು ಹೊಂದಿರುತ್ತವೆ.
ರಕ್ತದೊತ್ತಡವನ್ನು ಕಡಿಮೆ ಮಾಡಲಿದೆ

ಚೆರ್ರಿಗಳು (Cherry) ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಅನ್ನು ಹೊಂದಿರುತ್ತವೆ ಹೀಗಾಗಿ ದೇಹದಿಂದ ಹೆಚ್ಚುವರಿ ಸೋಡಿಯಂ ಅಂಶವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಇದು ದೇಹದಲ್ಲಿನ ಪೊಟ್ಯಾಸಿಯಮ್ ಮತ್ತು ಸೋಡಿಯಂ ಎರಡರ ಪ್ರಮಾಣವನ್ನು ಸಮತೋಲನಗೊಳಿಸುತ್ತದೆ.
ಕಣ್ಣಿನ ಆರೋಗ್ಯ ಸುಧಾರಿಸುತ್ತೆ ಚೆರ್ರಿ (Cherry)

ಗ್ಲುಕೋಮಾ ವಯಸ್ಸಾದವರ ಸಾಮಾನ್ಯ ಕಣ್ಣಿನ ಕಾಯಿಲೆಗಳಲ್ಲಿ ಒಂದಾಗಿದೆ. ಇದು ಕುರುಡುತನದ ಅಪಾಯವನ್ನು ಹೆಚ್ಚಿಸುತ್ತದೆ. ಕಣ್ಣಿನೊಳಗಿನ ದ್ರವದ ಒತ್ತಡವು ಕ್ರಮೇಣ ಹೆಚ್ಚಾದಾಗ ಸಮಸ್ಯೆ ದೊಡ್ಡದಾಗುತ್ತದೆ.
ಇದು ಆಪ್ಟಿಕ್ ನರ ಹಾನಿಗೆ ಕಾರಣವಾಗುವ ಸಾಧ್ಯತೆತಯಿರುತ್ತದೆ. ಚೆರ್ರಿ ಹಣ್ಣಿನಲ್ಲಿ ಲೋಗಾನಿಕ್ ಆಮ್ಲ ಕಂಡು ಬರುತ್ತದೆ. ಇದು ಇಂಟ್ರಾಕ್ಯುಲರ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Cranberry Fruit: ಕ್ರಾನ್‌ಬೆರಿ ಹಣ್ಣಿನ 10 ಆರೋಗ್ಯ ಪ್ರಯೋಜನಗಳು
ಚರ್ಮದ ಸಮಸ್ಯೆ

ನಿವಾರಣೆ ಚರ್ಮದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.ಈ ಹಣ್ಣುಗಳು ಆ್ಯಂಟಿ ಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿರುವುದರಿಂದ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡಲು ಸಹಾಯವಾಗುತ್ತದೆ.
ಅಲ್ಲದೇ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಿ, ಆರೋಗ್ಯಕರವಾಗಿರುವಂತೆ ಮಾಡುತ್ತದೆ. ಚೆರ್ರಿಗಳು ನಿಮ್ಮ ಚರ್ಮದ ಕಪ್ಪು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಅದು ಸೂರ್ಯನ ಕಿರಣಗಳಿಂದ ಉಂಟಾಗುವ ತೊಂದರೆಯನ್ನು ಸಹ ನಿವಾರಿಸುತ್ತದೆ.
ಹೃದಯರಕ್ತನಾಳದ ಕಾಯಿಲೆಗಳನ್ನು ತಡೆಯುತ್ತದೆ

ಆಂಥೋಸಯಾನಿನ್‌ಗಳೆಂದು ಕರೆಯಲ್ಪಡುವ ಚೆರ್ರಿಗಳಲ್ಲಿ ಇರುವ ಆಂಟಿಆಕ್ಸಿಡೆಂಟ್‌ಗಳು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಉರಿಯೂತವನ್ನು ಉಂಟುಮಾಡುವ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ.
ತಲೆನೋವಿಗೆ ಪ್ರಯೋಜನಕಾರಿ

ಚೆರ್ರಿ ಸೇವನೆ ಮಾಡೋದ್ರಿಂದ ಮೈಗ್ರೇನ್ ಸೇರಿದಂತೆ ಎಲ್ಲ ರೀತಿಯ ತಲೆನೋವು ಕಡಿಮೆಯಾಗುತ್ತದೆ. ಒಂದು ಅಧ್ಯಯನದ ಪ್ರಕಾರ, 24 ವರ್ಷ ವಯಸ್ಸಿನ ಮಹಿಳಾ ರೋಗಿ ಮೈಗ್ರೇನ್ ನಿಂದ ಬಳಲುತ್ತಿದ್ದಳಂತೆ.
ಆಕೆಗೆ ಚೆರ್ರಿ ನೀಡಿದ ನಂತ್ರ ಮೈಗ್ರೇಣ್ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಆಂಟಿ ಏಜಿಂಗ್ ಗುಣಲಕ್ಷಣಗಳು

ಚೆರ್ರಿಗಳು (Cherry) ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ ಮತ್ತು ನಮಗೆ ತಿಳಿದಿರುವಂತೆ ಉತ್ಕರ್ಷಣ ನಿರೋಧಕಗಳು ಸ್ವತಂತ್ರ ರಾಡಿಕಲ್ಗಳೊಂದಿಗೆ ಹೋರಾಡುತ್ತವೆ ಅದು ಚರ್ಮವನ್ನು ಆರೋಗ್ಯಕರವಾಗಿ ಇಡುತ್ತದೆ.
ಚೆರ್ರಿಗಳು ಸೂರ್ಯನ ಹಾನಿಯಿಂದ ನಿಮ್ಮ ಚರ್ಮದಿಂದ ಕಾಣಿಸಿಕೊಳ್ಳುವ ಕಪ್ಪು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಉರಿಯೂತ ನಿವಾರಣೆಗೆ ಚೆರ್ರಿ (Cherry)

ಉರಿಯೂತದ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ಚೆರ್ರಿ ಪರಿಣಾಮಕಾರಿಯಾಗಿದೆ. ಸಂಶೋಧನೆಯ ಪ್ರಕಾರ, ತೀವ್ರವಾದ ಉರಿಯೂತ ಸಂಧಿವಾತ, ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಚರ್ರಿ ಸೇವನೆ ಮಾಡೋದ್ರಿಂದ ಉರಿಯೂತ ಸಮಸ್ಯೆ ಕಡಿಮೆಯಾಗುತ್ತದೆ