ಕುತೂಹಲ (Interesting Facts in Kannada) ಎಂದರೆ ಜೀವನಕ್ಕೆ ಚೈತನ್ಯ ನೀಡುವ ಮಹತ್ವದ ಭಾವನೆ. ನಮ್ಮ ಇಂದಿನ ಜೀವನದ ಪ್ರತಿಯೊಂದು ಕ್ಷಣದಲ್ಲೂ ವಿಸ್ಮಯ ಅಂಶವಿರುತ್ತದೆ.
ಕೇವಲ ಮಕ್ಕಳಲ್ಲಿ ಮಾತ್ರವಲ್ಲ, ವಯಸ್ಕರಲ್ಲಿ ಸಹ ಇದು ತುಂಬಾ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೊಸ ವಿಷಯಗಳನ್ನು ಅರಿಯಲು ಮತ್ತು ನಾವಿಲ್ಲದ ಪ್ರಪಂಚದ ಬಗ್ಗೆ ತಿಳಿಯಲು ತೀವ್ರವಾದ ಆಸಕ್ತಿ ಕುತೂಹಲ.
ನಾವು ದೊಡ್ಡವರಾದಂತೆ ನಮ್ಮ ಜೀವನವು ಒಣ ಮತ್ತು ನಿರೂಪಕವಾಗುತ್ತಾ ಹೋಗುತ್ತದೆ. ಆದರೆ, ನಮ್ಮೊಳಗಿನ ಕುತೂಹಲವನ್ನು ಜೀವಂತವಾಗಿಟ್ಟುಕೊಂಡರೆ, ಪ್ರತಿಯೊಂದು ದಿನವು ಹೊಸ ಅನುಭವಗಳೊಂದಿಗೆ ತುಂಬಿರುತ್ತದೆ.
ಕುತೂಹಲದ ಅಲೆಯಿಂದಲೇ ನಾವು ಹೊಸ ವಿಷಯಗಳನ್ನು ಕಲಿಯುತ್ತೇವೆ, ಹೊಸ ಪ್ರತಿಭೆಗಳನ್ನು ಹೊಂದುತ್ತೇವೆ ಮತ್ತು ನಿರಂತರ ಸೃಜನಶೀಲತೆಯನ್ನು ಪಡೆಯುತ್ತೇವೆ.
ಉದಾಹರಣೆಗೆ, ಅರ್ಥಮಾಡಿಕೊಳ್ಳಲು ಕಷ್ಟವಾಗುವ ವೈಜ್ಞಾನಿಕ ಸತ್ಯಗಳು, ಭಾವಚಿತ್ರಗಳ ಹಿಂದಿನ ಕಥೆಗಳು, ಅಥವಾ ಮನಸ್ಸು ಮೆಲುಕು ಹಾಕಿಸುವ ಇತಿಹಾಸದ ಸಂಗತಿಗಳು – ಇವೆಲ್ಲವುಗಳು ನಮ್ಮ ಮನಸ್ಸನ್ನು ಆಕರ್ಷಿಸುತ್ತವೆ.
ಕುತೂಹಲವು ನಮ್ಮನ್ನು ಸೃಜನಾತ್ಮಕ, ಹೊಸತನದ ಅಭಿಮಾನಿಯಾಗಿ ಮಾಡುತ್ತದೆ, ನಮ್ಮ ಜೀವನವನ್ನು ಸಂಪೂರ್ಣವಾಗಿ ಅನುಭವಿಸುವಂತಹ ವ್ಯಕ್ತಿತ್ವವನ್ನೂ ರೂಪಿಸುತ್ತದೆ.
ಈ ಬ್ಲಾಗ್‌ನಲ್ಲಿ, ನಾವು ಪ್ರಪಂಚದ ವಿವಿಧ ಕುತೂಹಲಕಾರಿ ಸಂಗತಿಗಳನ್ನು ತಿಳಿಯುವ ಪ್ರಯತ್ನ ಮಾಡುತ್ತೇವೆ, ನಮ್ಮಲ್ಲಿ ಮತ್ತಷ್ಟು ಜಿಜ್ಞಾಸೆಯನ್ನು ಹುಟ್ಟಿಸುವ ವಿಷಯಗಳನ್ನು ಕುರಿತಂತೆ ಚರ್ಚಿಸುತ್ತೇವೆ. ಇದನ್ನು ಓದುವುದರ ಮೂಲಕ ನೀವು ಹೊಸ ಅಂಶಗಳನ್ನು ಅನ್ವೇಷಿಸಲು ಪ್ರೇರಿತವಾಗುತ್ತೀರಿ.
ಪ್ರಕೃತಿಯ ಕುತೂಹಲಕಾರಿ ಸಂಗತಿಗಳು (Amazing Facts in Kannada):
ನಾಗರ ಪಂಚಮಿಯ:
ನಾಗರ ಪಂಚಮಿಯ ಹಬ್ಬವನ್ನು ಶ್ರಾವಣ ತಿಂಗಳಲ್ಲಿ ಆಚರಿಸಲಾಗುತ್ತದೆ. ಇಂದು ಈ ವರ್ಷದ ನಾಗರಪಂಚಮಿ ಹಬ್ಬ. 12 ದೇವ ಸರ್ಪಗಳಾದ ಅನಂತ, ವಾಸುಕಿ, ಶೇಷ, ಪದ್ಮ, ಕಂಬಲ, ಅಶ್ವತಾರ, ಶಂಖಪಾಲ, ಧೃತರಾಷ್ಟ್ರ, ತಕ್ಷಕ, ಕಾಳಿಂಗ ಮತ್ತು ಪಿಂಗಲವನ್ನು ಇಂದು ಪೂಜಿಸಲಾಗುತ್ತದೆ.
ನಾಗಗಳ ಹೆಸರನ್ನು ನೆನಪಿಸಿಕೊಂಡರೆ ಸಂಪತ್ತು ಬರುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ನಾಗ ದೇವತೆಯನ್ನು ಪೂಜಿಸುವುದರೊಂದಿಗೆ ರುದ್ರಾಭಿಷೇಕ ಮಾಡುವ ವ್ಯಕ್ತಿಯು ಎಲ್ಲಾ ತೊಂದರೆಗಳಿಂದ ಮುಕ್ತಿಯನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ.
ಆಷಾಢ ಮಾಸದಲ್ಲಿ ನವ ವಿವಾಹಿತರು ದೂರ ದೂರ ಇರುತ್ತಾರೆ ಕಾರಣ.
ಆಷಾಢ ಮಾಸದಲ್ಲಿ ತಾಯಿ ಗರ್ಭ ಧರಿಸಿದರೆ ಮಗು ಬೇಸಿಗೆಕಾಲದಲ್ಲಿ ಹುಟ್ಟುತ್ತದೆ. ಈ ವೇಳೆ ತಾಯಿ ಮತ್ತು ಮಗುವಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚು ಬಾಧಿಸುತ್ತವೆ. ಆಷಾಢದಲ್ಲಿ ಗಾಳಿ ಹೆಚ್ಚು ಜೋರಾಗಿ ಬೀಸುತ್ತಿರುತ್ತದೆ.
ಈ ಹಿನ್ನೆಲೆ, ಆ ವೇಳೆ ಬೆಳೆ ಕಟಾವು ಇರಲ್ಲ. ಪರಿಣಾಮ ಹಣದ ಕೊರತೆ ಇರುತ್ತದೆ. ಈ ವೇಳೆ ದೇವಾಲಯದ ಉತ್ಸವ, ಪ್ರಾರ್ಥನೆಗಳು ಅಧಿಕ. ಈ ಹಿನ್ನೆಲೆ ಮದುವೆಗಳಿಗೆ ಹಾಜರಾಗಲು ಅರ್ಚಕರಿಗೆ ಕಡಿಮೆ ಸಮಯ ಎಂಬುದು ಒಂದು ಕಾರಣ.
ಸೂರ್ಯಾಸ್ತದ ಬಳಿಕ ಬೇರೆಯವರಿಗೆ ಹಣ ನೀಡಿದಲ್ಲಿ ಮನೆಯಿಂದ ಲಕ್ಷ್ಮೀ ದೂರವಾಗುತ್ತಾಳೆ ಎಂಬ ನಂಬಿಕೆಯಿದೆ.
ಜ್ಯೋತಿಷ್ಯದ ಪ್ರಕಾರ ಸೂರ್ಯಾಸ್ತದ ನಂತರ ಹಾಲನ್ನು ಬೇರೆ ಮನೆಗೆ ನೀಡಿದಲ್ಲಿ ಮನೆಯಲ್ಲಿನ ಬೆಳವಣಿಗೆ ನಿಂತುಹೋಗುತ್ತದೆ. ಮೊಸರು ನೀಡಿದಲ್ಲಿ ಸಂತೋಷ, ವೈಭವದಲ್ಲಿ ಕೊರತೆಯಾಗುತ್ತದೆ.
ಸೂರ್ಯಾಸ್ತದ ಬಳಿಕ ಅರಿಶಿನ ನೀಡಿದರೆ ವ್ಯಕ್ತಿಯ ಸಂಪತ್ತು & ಆರೋಗ್ಯದಲ್ಲಿ ಕೊರತೆ ಆಗುತ್ತದೆ. ಸೂರ್ಯಾಸ್ತದ ಬಳಿಕ ಬೆಳ್ಳುಳ್ಳಿ &ಈರುಳ್ಳಿ ನೀಡಬಾರದು ಇದು ವಾಮಾಚಾರ ವಿಚಾರಕ್ಕೆ ಸಂಬಂಧಿಸಿದ್ದಾಗಿದೆ.
ಸೋದರ ಸಂಬಂಧಿಗಳ ಮಧ್ಯೆ ವಿವಾಹವೇರ್ಪಟ್ಟರೆ ಜನ್ಮಜಾತ ವಿರೂಪಗಳು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಸಾಮಾನ್ಯವಾಗಿ ಈ ರೀತಿಯ ವಿವಾಹವಾದಲ್ಲಿ ಮಾನಸಿಕ ಸಮಸ್ಯೆಗಳು ಕಂಡುಬರುವುದು. ಕೆಲವೊಮ್ಮೆ ಹುಟ್ಟುವಂತಹ ಮಕ್ಕಳು ಬುದ್ದಿಮಾಂದ್ಯತೆ ಮತ್ತು ಅರಿವಿನ ವೈಫಲ್ಯ ಹೊಂದಿರುವರು.
ಕೆಲ ಮಹಿಳೆಯರಲ್ಲಿ ಗರ್ಭಪಾತವಾಗುವ ಸಾಧ್ಯತೆ ಇರುವುದು. ಹುಟ್ಟುವ ಮಗು ಜನನ ವೇಳೆ ಸಾಯುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸುತ್ತದೆ.
ಇಂಥವರು ಪಪ್ಪಾಯಿ ಸೇವಿಸಬಾರದು.
ಪಪ್ಪಾಯಿಯಲ್ಲಿ ವಿಟಮಿನ್ ಎ ಜೀವಸತ್ವವಿದ್ದು, ಕಣ್ಣಿನ ದೃಷ್ಟಿ ದೋಷ ನಿವಾರಣೆಯಾಗಲಿದೆ. ಆದರೆ ಈ ಹಣ್ಣನ್ನು ಉಸಿರಾಟ ತೊಂದರೆ ಇರುವವರು, ಗರ್ಭಿಣಿಯರು, ಮಧುಮೇಹಿಗಳು ಹಾಗೂ ಅಧಿಕ ರಕ್ತದೊತ್ತಡ ಇರುವವರು ತಿನ್ನಬಾರದು.
ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ, ಗರ್ಭಿಣಿಯರಲ್ಲಿ ಗರ್ಭಪಾತಕ್ಕೆ ಕಾರಣವಾಗುತ್ತದೆ, ಅಸ್ತಮಾ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಾಗಾಗಿ ಇಂಥವರು ಈ ಹಣ್ಣನ್ನು ತಿನ್ನಲೇಬಾರದು. ಗರ್ಭಿಣಿಯರು ಅನಾನಸ್ ಹಣ್ಣನ್ನೂ ಕೂಡ ತಿನ್ನಬಾರದು.
ಇತಿಹಾಸದಲ್ಲಿ ಅಚ್ಚರಿ ಮೂಡಿಸುವ ಘಟನೆಗಳು (Fascinating Facts in Kannada):
ಬಿಸಿ ನೀರಿಗೆ ಬೆಲ್ಲ ಸೇರಿಸಿ ಕುಡಿದರೆ ಆರೋಗ್ಯ ವೃದ್ಧಿ.
ಆಯುರ್ವೇದದ ಪ್ರಕಾರ ಬಿಸಿ ನೀರಿನೊಂದಿಗೆ ಬೆಲ್ಲವನ್ನು ಸೇರಿಸಿ ಸೇವಿಸಿದಾಗ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಇದರ ಸೇವನೆಯಿಂದ ಹೃದಯದ ಆರೋಗ್ಯ ಉತ್ತಮವಾಗುತ್ತದೆ.
ತೂಕ ಇಳಿಸಲು ಸಹಕಾರಿಯಾಗಿದೆ. ಹೊಟ್ಟೆ ಸಂಬಂಧಿತ ಸಮಸ್ಯೆಗಳು ಪರಿಹಾರವಾಗುತ್ತದೆ. ನಿದ್ರಾಹೀನತೆ ನಿವಾರಣೆಯಾಗಲು ನೆರವಾಗುತ್ತದೆ. ಬಾಯಿಯ ಕಾಯಿಲೆ ದೂರವಾಗುತ್ತದೆ. ಕಿಡ್ನಿಯಲ್ಲಿನ ಕಲ್ಲಿನ ಸಮಸ್ಯೆಗೆ ಪರಿಹಾರವಾಗಿದೆ.
ಕಬ್ಬಿನ ಹಾಲಿನಲ್ಲಿದೆ ‘ಹೃದಯ’ಕ್ಕೆ ಮದ್ದು.
ಕಬ್ಬಿನ ಹಾಲಿನಲ್ಲಿ ಕಾರ್ಬೋಹೈಡ್ರೆಟುಗಳು, ಪ್ರೋಟಿನ್, ಗಂಧಕ, ಕ್ಯಾಲ್ಸಿಯಂ, ಕಬ್ಬಿಣದಂತ ಖನಿಜಗಳ ಸಹಿತ, ಹಲವು ಅವಶ್ಯಕ ಪೋಷಕಾಂಶಗಳಿವೆ. ಸಕ್ಕರೆ ಬೆರೆಸಿದ ಇತರ ಪಾನೀಯಗಳಿಗಿಂತ ಕಬ್ಬಿನ ಹಾಲು ಕುಡಿಯುವುದು ಅತ್ಯುತ್ತಮ.
ಇದರಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಥವಾ ಎಲ್ಲಿಎಲ್ ಪ್ರಮಾಣ ಕಡಿಮೆಯಾಗಿ ಹೃದಯದ ಆರೋಗ್ಯ ಉತ್ತಮವಾಗುತ್ತೆ. ಕಬ್ಬು ಜಗಿದು ರಸ ಹೀರುವುದರಿಂದ ಹಲ್ಲು & ಒಸಡುಗಳು ಗಟ್ಟಿಗೊಳ್ಳುವುದರ ಜೊತೆ ಬಾಯಿಯ ದುರ್ವಾಸನೆಯೂ ದೂರವಾಗುತ್ತೆ.
ಹೃದ್ರೋಗ, ಕ್ಯಾನ್ಸರ್ ತಡೆಯುತ್ತದೆಯಂತೆ ಒಗ್ಗರಣೆಗೆ ಹಾಕುವ ಕರಿಬೇವಿನಸೊಪ್ಪು.
ಭಾರತೀಯ ಕಿಚನ್ ನಲ್ಲಿ ಕರಿಬೇವಿನಸೊಪ್ಪಿಗೆ ( Curry Leves) ಅದರದ್ದೇ ಆದ ಮಹತ್ವ ಇದೆ, ಒಗ್ಗರಣೆ ಹಾಕುವಾಗ ಕರಿಬೇವಿನ ಸೊಪ್ಪು ಇಲ್ಲದೇ ಹೋದರೆ, ಅಡುಗೆ ಅಪೂರ್ಣ. ಕರಿಬೇವಿನ ಸೊಪ್ಪು ಅಡುಗೆಗೆ ನೀಡುವ ರುಚಿಯೇ ಬೇರೆ.
ಆದರೆ, ಸುವಾಸನೆ ಅಡುಗೆಯ ರುಚಿಯನ್ನು ಇನ್ನೂ ಹೆಚ್ಚಿಸುತ್ತದೆ. ಆರೋಗ್ಯ ವಿಚಾರದಲ್ಲೂ ಕರಿಬೇವಿನ ಸೊಪ್ಪಿಗೆ ಸಾಕಷ್ಟು ಮಹತ್ವ ಇದೆ. ಕರಿಬೇವಿನ ಸೊಪ್ಪು ತಿಂದರೆ, ಅದು ಹೃದ್ರೋಗ, ಕ್ಯಾನ್ಸರ್ (Cancer) ವಿರುದ್ಧ ರಕ್ಷಾ ಕವಚವಾಗಿ ವರ್ತಿಸುತ್ತದೆ.
ಎಂದು ಹೇಳುತ್ತದೆ ಹೈದರಾಬಾದಿನ ಸೆಂಟ್ರಲ್ ಇನ್ಸಿಟ್ಯೂಟ್ ಆಫ್ ಮೆಡಿಸಿನಲ್ ಮತ್ತು ಆರೋಮಾಟಿಕ್ ಪ್ಲಾಂಟ್ಸ್ ಸಂಸ್ಥೆಯ ವರದಿ. ಕರಿಬೇವಿನ ( Curry Leaves) ಸೊಪ್ಪಿನ ರಸ ದೇಹದಲ್ಲಿ ಕೊಲೆಸ್ಟರಾಲ್ (cholesterol) ಮತ್ತು ಟೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಹೃದ್ರೋಗ (Heart disease) ಕಡಿಮೆ ಮಾಡುತ್ತದೆ.
ಅಷ್ಟೇ ಅಲ್ಲ ಸ್ತನ ಮತ್ತು ಶ್ವಾಸಕೋಶ ಕ್ಯಾನ್ಸರ್ ನಿಂದ (Cancer) ರಕ್ಷಣೆ ನೀಡುತ್ತದೆ, ಇದು ಸಂಶೋಧನೆಯಲ್ಲಿ ದೃಢಪಟ್ಟಿದೆ ಎಂದು ಹೇಳಿದೆ ಸಂಸ್ಥೆ.
ಬೆಳ್ಳುಳ್ಳಿ ಸೇವನೆಯಿಂದ ಆರೋಗ್ಯ ವೃದ್ಧಿ.
ಆಯುರ್ವೇದದಲ್ಲಿ ಬೆಳ್ಳುಳ್ಳಿಯ ಔಷಧೀಯ ಗುಣಗಳನ್ನು ತಿಳಿಸಲಾಗಿದ್ದು, ಬೆಳ್ಳುಳ್ಳಿ ಸೇವನೆಯಿಂದ ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್ ಕಾಯಿಲೆ ದೂರವಾಗುತ್ತದೆ.
ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗುತ್ತದೆ. ರಕ್ತ ಶುದ್ಧಿ ಮಾಡುವುದರ ಜತೆಗೆ ಜಠರಕ್ಕೆ ಸೋಂಕನ್ನು ತಡೆಯುತ್ತದೆ. ಶೀತ, ಕೆಮ್ಮು ನಿವಾರಣೆಯಾಗುತ್ತದೆ. ಹೃದಯ & ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ರಕ್ತಹೀನತೆ ಹತೋಟಿಗೆ ತರುವಲ್ಲಿ ಸಹಾಯಕವಾಗಿದೆ.
ದೊಣ್ಣೆ ಮೆಣಸಿನ ಕಾಯಿ.
ಸಿಟ್ರಸ್ ಯುಕ್ತ ಹಣ್ಣುಗಳು ಅಥವಾ ತರಕಾರಿಗಳಲ್ಲಿ ಕ್ಯಾಪ್ಪಿಕಂ ಬರುವುದಿಲ್ಲ ಎಂದು ಯೋಚನೆ ಮಾಡುತ್ತಿರಬೇಕು ಅಲ್ವಾ? ಹೌದು, ಇದು ಸಿಟ್ರಸ್ ಆಗಿಲ್ಲದಿದ್ದರೂ, ಇದರಲ್ಲಿ ವಿಟಮಿನ್ ಸಿ ಯನ್ನು ಸ್ವಲ್ಪ ಪ್ರಮಾಣದಲ್ಲಿ, ಅದಕ್ಕಿಂತ ಮುಖ್ಯವಾಗಿ ಬೀಟಾ ಕ್ಯಾರೋಟಿನ್ ಸಮೃದ್ಧವಾಗಿದೆ.
ಕ್ಯಾಲ್ಸಿಕಂನಲ್ಲಿರುವ ಖನಿಜಗಳು ಮತ್ತು ಜೀವಸತ್ವಗಳು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತವೆ. ಜೊತೆಗೆ ಚರ್ಮದ ಟೋನ್ ಮತ್ತು ಕಣ್ಣುಗಳನ್ನು ಆರೋಗ್ಯವಾಗಿಡಲು ಸಹ ಸಹಾಯ ಮಾಡುತ್ತದೆ.
ಭಾರತದ ಕುತೂಹಲಕಾರಿ ಸಂಸ್ಕೃತಿ ಮತ್ತು ಪರಂಪರೆ (Curious Facts in Kannada):
ಮಣ್ಣಿನ ಪಾತ್ರೆಯಿಂದ ಮಾಡುವ ಅಡುಗೆಯಿಂದ ಒಳ್ಳೆಯ ರುಚಿಯ ಜೊತೆಗೆ ಉತ್ತಮ ಆರೋಗ್ಯವನ್ನೂ ಪಡೆಯಬಹುದಾಗಿದೆ.
ಮಣ್ಣಿನ ಪಾತ್ರೆಯಲ್ಲಿ ಸಾಂಬಾರು, ಇನ್ನಿತರ ಅಡುಗೆ ಮಾಡುವಾಗ ಹೆಚ್ಚಿನ ಎಣ್ಣೆಯ ಬಳಕೆ ಅಗತ್ಯವಿರುವುದಿಲ್ಲ. ಇದರಿಂದ ಅನಗತ್ಯ ಕೊಬ್ಬಿನಂಶ ದೇಹವನ್ನು ಸೇರುವುದನ್ನು ತಡೆಯಲು ಸಾಧ್ಯವಾಗುತ್ತದೆ.
ದೇಹದ ಜೀರ್ಣ ಕ್ರಿಯೆ ಉತ್ತಮವಾಗಲು ಮಣ್ಣಿನ ಪಾತ್ರೆಯಲ್ಲಿ ತಯಾರಿಸಿದ ಆಹಾರ ಸಹಕಾರಿಯಾಗಿದ್ದು, ಇದು ದೇಹಕ್ಕೆ ಪೋಷಕಾಂಶಗಳನ್ನು ಒದಗಿಸಲು ಪ್ರಮುಖ ಪಾತ್ರವಹಿಸುತ್ತವೆ.
ಬಹುಪಯೋಗಿ ದೊಡ್ಡಪತ್ರೆ.
ಮಳೆಗಾಲದಲ್ಲಿ ಶೀತ, ಕೆಮ್ಮು, ಜ್ವರದ ಸಮಸ್ಯೆಗಳು ಹೆಚ್ಚು ಹೀಗಾಗಿ ದೊಡ್ಡಪತ್ರೆ ಎಲೆಗಳನ್ನು ಸೇವಿಸಿದರೆ ಇವುಗಳಿಂದ ಪಾರಾಗಬಹುದು. ಅಲ್ಲದೆ ದೊಡ್ಡಪತ್ರೆಯ ಎಲೆಗಳನ್ನು ಸೇವಿಸುವುದರಿಂದ ಕಾಮಾಲೆ ರೋಗ ನಿವಾರಣೆಯಾಗಿ, ಜೀರ್ಣಶಕ್ತಿ ಸಹ ಹೆಚ್ಚುತ್ತದೆ.
ಇನ್ನು ದೊಡ್ಡಪತ್ರೆ ಚಟ್ಟಿಯನ್ನು ಸೇವಿಸಿದರೆ ತಲೆ ಸುತ್ತು ಕಡಿಮೆಯಾಗುತ್ತದೆ. ದೊಡ್ಡಪತ್ರೆ ಎಲೆಗಳಿಗೆ ಕಾಳು ಮೆಣಸು, ಉಪ್ಪು ಹಾಕಿ ಚೆನ್ನಾಗಿ ಅರೆದು ರಸವನ್ನು ಕುಡಿದರೆ ಬಾಯಿಯಿಂದ ಬರುವ ದುರ್ವಾಸನೆ ದೂರವಾಗಿ ಪಿತ್ತ ಶಮನವಾಗುತ್ತದೆ.
ಬಾರ್ಲಿಯ ಉಪಯೋಗಗಳು.
ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ರಕ್ತದೊತ್ತಡವನ್ನು ಸಮತೋಲನದಲ್ಲಿ ಇಡುತ್ತದೆ. ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
ಹೃದಯ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ರಕ್ತಹೀನತೆಯನ್ನು ನಿಯಂತ್ರಿಸುತ್ತದೆ. ಮೊಳೆಗಳು ಬಲಗೊಳ್ಳುತ್ತವೆ. ಕೂದಲಿಗೆ ಹೊಳಪನ್ನು ನೀಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಬಹುಪಯೋಗಿ ಹರಿವೆ ಸೊಪ್ಪು.
ಹರಿವೆ ಸೊಪ್ಪು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಹರಿವೆ ಸೊಪ್ಪಿನಲ್ಲಿ ಫೈಟೊನ್ಯೂಟ್ರಿಯೆಂಟ್ಸ್ & ಆ್ಯಂಟಿ ಆಕ್ಸಿಡೆಂಟ್ ಇದ್ದು, ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇನ್ನು ಹರಿವೆ ಸೊಪ್ಪಿನ ಸೇವನೆಯಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ದೇಹದಲ್ಲಿ ಬಿ ಮಿಟಮಿನ್ ವೃದ್ಧಿಯಾಗುತ್ತದೆ. ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ಜೀರ್ಣಕ್ರಿಯೆ ಉತ್ತಮವಾಗುತ್ತದೆ.
ಸಿಟ್ರಸ್ ಹಣ್ಣುಗಳು.
ವಿಟಮಿನ್ ಸಿ ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಬಹುತೇಕ ಎಲ್ಲಾ ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ. ಕೆಲವು ಜನಪ್ರಿಯ ಸಿಟ್ರಸ್ ಹಣ್ಣುಗಳಲ್ಲಿ ಕಿತ್ತಳೆ, ನಿಂಬೆಹಣ್ಣು ಇನ್ನೂ ಹಲವು ಸೇರಿವೆ.
ಜೀವನಶೈಲಿಯ ಕುರಿತಾದ ಕುತೂಹಲಕರ ವಿಚಾರಗಳು (Surprising Facts in Kannada):
ಬೂದುಗುಂಬಳಕಾಯಿಯ ಉಪಯೋಗ.
ಅಧಿಕ ರಕ್ತದೊತ್ತಡ ಕಡಿಮೆಗೊಳಿಸಿ ಮತ್ತೆ ಆವರಿಸುವುದರಿಂದ ತಡೆಯುತ್ತದೆ. ಕಣ್ಣುಗಳಿಗೂ ಒಳ್ಳೆಯದು. ಬೂದುಗುಂಬಳದಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದೆ ಹಾಗೂ ಜೀರ್ಣಕ್ರಿಯೆಯಲ್ಲಿ ಸಹಕರಿಸಿ ಹೊಟ್ಟೆಯುಬ್ಬರಿಕೆ, ಮಲಬದ್ಧತೆ ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ.
ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸುತ್ತದೆ. ತೂಕ ಇಳಿಸಲು ನೆರವಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಹಾಗೂ ಉರಿಯೂತದ ವಿರುದ್ಧ ಹೋರಾಡುತ್ತದೆ.
ಆರೋಗ್ಯಕ್ಕೆ ಒಳ್ಳೆಯದು ತುಳಸಿ ಚಹಾ.
ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಒಂದು ಮಧ್ಯಮ ಗಾತ್ರದ ಚಹಾ ಪಾತ್ರೆ ತೆಗೆದುಕೊಳ್ಳಿ ಮತ್ತು ಎರಡು ಕಪ್ ನೀರು ಹಾಕಿ. ಈ ಪಾತ್ರೆಯನ್ನು ಒಲೆಯ ಮೇಲಿಡಿ.
ನೀರು ಕುದಿಯಲು ಬಿಡಿ. ಈಗ ಬೆಂಕಿ ನಂದಿಸಿ ಮತ್ತು ಬಿಸಿ ನೀರಿಗೆ ತುಳಸಿ ಎಲೆಗಳನ್ನು ಹಾಕಿ, 20 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ತುಳಸಿ ಎಲೆಗಳನ್ನು ಸೋಸಿಕೊಳ್ಳಿ. ಇದರ ಬಳಿಕ ಜೇನುತುಪ್ಪ ಹಾಕಿಕೊಂಡು ಚಹಾ ಕುಡಿಯಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
ಹಲಸಿನ ಹಣ್ಣಿನಲ್ಲಿದೆ ಆರೋಗ್ಯಕರ ಗುಣಗಳು.
ದೇಹದಲ್ಲಿ ಗಾಯವಾಗಿದ್ದರೆ ಹಲಸಿನ ಮರದ ತೊಗಟೆಯನ್ನು ಸುಟ್ಟು ಬೂದಿ ಮಾಡಿ ಆ ಬೂದಿಯನ್ನು ತೆಂಗಿನ ಎಣ್ಣೆ ಜೊತೆ ಕಲಸಿ ಹಚ್ಚಿದರೆ ಗಾಯ ಬೇಗ ಮಾಯುತ್ತದೆ.
ಹಲಸಿನ ಹಣ್ಣನ್ನು ನಿಯಮಿತವಾಗಿ ಸೇವಿಸಿದರೆ ದೇಹದ ಶಕ್ತಿ ಹೆಚ್ಚುತ್ತದೆ. ಭೇದಿ ಆಗುತ್ತಿದ್ದರೆ ಹಲಸಿನ ಮರದ ತೊಗಟೆಯನ್ನು ನೀರಿನ ಜತೆ ಕಷಾಯ ಮಾಡಿ ಸೇವಿಸಿದರೆ ಭೇದಿ ನಿಲ್ಲುತ್ತದೆ. ಹಲಸಿನ ಕಾಯಿ ಪಲ್ಯ ಸೇವಿಸಿದರೂ ಭೇದಿ ನಿಲ್ಲುತ್ತದೆ.
ಹಲಸಿನ ಎಲೆ ಮತ್ತು ಬೇರಿನ ಕಷಾಯವನ್ನು ನಿಯಮಿತವಾಗಿ ಸೇವಿಸಿದರೆ ಚರ್ಮದ ಸಮಸ್ಯೆ ಗುಣವಾಗುತ್ತದೆ.
ಹೃದಯಕ್ಕೆ ಬಾದಾಮಿ ಮದ್ದು.
ಬಾದಾಮಿ ಹಾಲು ಚರ್ಮಕ್ಕೆ ರಂಗು ತುಂಬುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಇದೀಗ ವಿಜ್ಞಾನಿಗಳು ಬಾದಾಮಿ ಸೇವನೆ ಯಿಂದ ರಕ್ತನಾಳಗಳು ಆರೋಗ್ಯಕರ ವಾಗಿರುತ್ತವೆ ಮತ್ತು ಆ ಮೂಲಕ ಹೃದಯ ರೋಗಗಳಿಗೆ ಇದು ರಾಮ ಬಾಣ ಅಂತಿದ್ದಾರೆ.
ನಿಯಮಿತವಾಗಿ ಸೇವಿಸುವವರ ರಕ್ತಪ್ರವಾಹದಲ್ಲಿ ಅಪಕರ್ಷಣಕಾರಿಗಳ ಸಂಖ್ಯೆ ಹೆಚ್ಚಾಗುತ್ತದೆ, ರಕ್ತದ ಒತ್ತಡ ಕಡಿಮೆಯಾಗಿ ರಕ್ತದ ಪರಿಚಲನೆ ಸರಾಗವಾಗಿರುತ್ತದೆ ಎಂದು ಬರ್ಮಿಂಗ್‌ಹ್ಯಾಮ್‌ನ ವಿಜ್ಞಾನಿಗಳ ತಂಡ ನಡೆಸಿದ ಸಂಶೋಧನೆ ಹೇಳಿದೆ.
ಅದರಲ್ಲಿ ಯುವಕರು ಮತ್ತು ಮಧ್ಯ ವಯಸ್ಸಿನವರಲ್ಲಿ ಇದು ಹೆಚ್ಚು ಅನುಕೂಲಕಾರಿ. ಅಂದ ಹಾಗೆ ಬಾದಾಮಿ ಸಿಕ್ಕಾಪಟ್ಟೆ ತಿನ್ನಬೇಕಾಗಿಲ್ಲ, ತಿಂಗಳಿಗೆ 50 ಗ್ರಾಂ ಸಾಕಾಗುತ್ತದೆ.
ನುಗ್ಗೆಕಾಯಿಗೆ 300 ರೋಗ ಗುಣಪಡಿಸೋ ಗುಣ.
ಆಹಾರದಲ್ಲಿ ನುಗ್ಗೇ ಇರಲಿ! ಕಬ್ಬಿಣದ ಅಂಶವಿರುವುದರಿಂದ ಇದು ಅನಿಮಿಯಾದಿಂದ ರಕ್ಷಿಸುತ್ತದೆ. ಫಲವತ್ತತೆಗೆ : ಇದರಲ್ಲಿ ಜಿಂಕ್ ಇರುತ್ತದೆ. ಇದನ್ನು ಸೇವಿಸುವುದರಿಂದ ವೀರ್ಯಾಣು ಸಂಖ್ಯೆ ಹೆಚ್ಚುತ್ತದೆ.
ಗರ್ಭಾವಸ್ಥೆಯಲ್ಲಿ : ಇದರಲ್ಲಿ ಫಾಲಿಕ್ ಆ್ಯಸಿಡ್ ಇರುತ್ತದೆ. ರೈಬೋಪ್ಲೇವಿನ್ ಇರುತ್ತದೆ. ಇದು ಗರ್ಭಾವಸ್ಥೆಯಲ್ಲಿ ಸಹಕಾರಿಯಾಗಿದೆ. ಕಣ್ಣಿನ ದೃಷ್ಟಿಗೆ + ಇದರಲ್ಲಿ ವಿಟಮಿನ್ ಎ ಇದೆ. ಇದು ಕಣ್ಣಿನ ದೃಷ್ಟಿಯನ್ನು ಸರಿಯಾಗಿಡುತ್ತದೆ.
ನಾನು ಮೊದಲ ಬಾರಿಗೆ ಕೇಳಿದ ಕುತೂಹಲ ಸಂಗತಿಗಳು:
ಸಮಸ್ಯೆಯ ಬಗ್ಗೆ ಯೋಚಿಸುವುದನ್ನು ನಿಲ್ಲಿಸಬೇಕೇ?
ನಿಮ್ಮ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಿ. ಆಪ್ತರೊಂದಿಗೆ ಸಮಸ್ಯೆಗಳ ಕುರಿತು ಸಂವಹನ ನಡೆಸಿ. ಕೀಳರಿಮೆ ಬೇಡ, ನಿಮ್ಮ ಯಶಸ್ಸನ್ನು ನೀವೇ ಪ್ರಶಂಸಿಸಿ ನೋಡಿ. ಆಳವಾದ ಉಸಿರಾಟ ಅಥವಾ ಧ್ಯಾನವನ್ನು ಅಭ್ಯಾಸ ಮಾಡಿ.
ಇದು ಮನಸು ಶಾಂತ ಚಿತ್ತವಾಗಿರಿಸಲು ನೆರವಾಗುತ್ತದೆ. ಸಮಸ್ಯೆಗಳು ಎಷ್ಟೇ ಕಠಿಣವಾದರೂ ಅವುಗಳನ್ನು ಚಿಕ್ಕದಾಗಿ ನೋಡಿ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಿರಿ ಆಸಕ್ತಿ ಇರುವ ವಿಷಯಗಳ ಬಗ್ಗೆ ಬೇರೆ ರೀತಿಯ ಯೋಜನೆಯನ್ನು ಮಾಡಿಕೊಳ್ಳಿ.
ಮೆದುಳನ್ನು ಸಕ್ರಿಯವಾಗಿಡಲು.
ಹೊಸ ವಿಷಯಗಳನ್ನು ಕಲಿಯುವುದು. ಪಜಲ್, ಚೆಸ್, ಸುಡುಕೋ.. ಇತರ ವಿಧಾನಗಳ ಮೂಲಕ ಜ್ಞಾನವನ್ನು ಪರೀಕ್ಷಿಸುವುದು. ಆರೋಗ್ಯಕರ ಆಹಾರವನ್ನು ಸೇವಿಸುವುದು. ಪುಸ್ತಕಗಳನ್ನು ಓದುವುದು.
ಸಾಕಷ್ಟು ನಿದ್ರೆ ಮಾಡುವುದು. ನಿಯಮಿತವಾಗಿ ವ್ಯಾಯಾಮ ಮಾಡುವುದು. ಪ್ರಕೃತಿಯೊಂದಿಗೆ ಹೆಚ್ಚು ಸಮಯ ಕಳೆಯುವುದು.
ವಾರದಲ್ಲಿ 10 ನಿಮಿಷ ಮಾತನಾಡಿ.
ವಾರದಲ್ಲಿ 10 ನಿಮಿಷಗಳ ಕಾಲ ಯಾರೊಂದಿಗಾದರೂ ಫೋನ್‌ನಲ್ಲಿ ಮಾತನಾಡುವುದು ಹಾಗೂ ಸಂಭಾಷಣೆಯ ಮೇಲೆ ನಿಯಂತ್ರಣವನ್ನು ಇಟ್ಟು ಕೊಳ್ಳುವುದರಿಂದ ಒಂಟಿತನವನ್ನು ಕಡಿಮೆ ಮಾಡಬಹುದು. ಇದರಿಂದಾಗಿ ಜನರಲ್ಲಿ ಕಾಡುತ್ತಿರುವ ಖಿನ್ನತೆ ಮತ್ತು ಆತಂಕ ದೂರವಾಗುತ್ತದೆ.
ಜೊತೆಗೆ ಒಂಟಿತನದ ಅನುಭವವನ್ನು ಕೂಡ ದೂರ ಮಾಡಬಹುದಾಗಿದೆ. ನಿಮ್ಮ ಪ್ರೀತಿಪಾತ್ರರಲ್ಲಿ ಕನಿಷ್ಟ ವಾರದಲ್ಲಿ 10 ನಿಮಿಷ ಮಾತನಾಡುವುದರಿಂದ ನಿಮ್ಮ ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.
ಹೆಚ್ಚು ಕೋಪ ಬಂದ್ರೆ ಹೀಗೆ ಮಾಡಿ.
ನಮ್ಮನ್ನು ನಾವು ಪ್ರೋತ್ಸಾಹಿಸಿಕೊಳ್ಳುವುದರಿಂದ ನಿಮ್ಮೊಳಗಿನ ಕೋಪ, ಅಸಮಾಧಾನ ನಿಯಂತ್ರಣಕ್ಕೆ ಬರುತ್ತದೆ. ಧಾನ್ಯದಂತಹ ಅಭ್ಯಾಸಗಳು ನಿಮ್ಮ ಭಯ ಹಾಗೂ ಆತಂಕ, ಕೋಪವನ್ನು ಕಡಿಮೆ ಮಾಡುತ್ತವೆ.
ಸತ್ಸಂಗ ಚಟುವಟಿಕೆಗಳ ಮೂಲಕ ಕೋಪವನ್ನು ನಿಯಂತ್ರಣಕ್ಕೆ ತರಬಹುದು (Interesting Facts in Kannada). ಸ್ನೇಹಿತರೊಡನೆ ಸಂಭಾಷಣೆ ನಡೆಸುತ್ತಿರಲಿ ಜೊತೆಗೆ ಆಧ್ಯಾತ್ಮವು ಮನಸ್ಸನ್ನು ಶಾಂತಗೊಳಿಸುತ್ತದೆ. ಸಿಟ್ಟಿನ ಸಮಯದಲ್ಲಿ 1 ರಿಂದ 10 ರ ವರೆಗೆ ಎಣಿಸಿರಿ.
ಈ ಜಾಗದಲ್ಲಿ ಫೋನ್ ಇಟ್ರೆ ಲೈಂಗಿಕ ಜೀವನ ಹಾಳಾಗುತ್ತೆ…!
ಪ್ಯಾಂಟ್ ಮುಂಭಾಗದಲ್ಲಿ ಫೋನ್ ಇಡುವುದರಿಂದ ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟದಲ್ಲಿ ಕುಸಿತವಾಗಿ ಲೈಂಗಿಕ ಸಮಸ್ಯೆ ಕಾಡಬಹುದು. ದಿಂಬಿನ ಕೆಳಗೆ ಫೋನ್ ಇಟ್ಟು ಮಲಗುವುದರಿಂದ ನಿದ್ರೆ ಹಾಳಾಗುತ್ತದೆ.
ಪ್ಯಾಂಟ್ ಹಿಂಬದಿ ಫೋನ್ ಇಡುವುದರಿಂದ ಸಯಾಟಿಕಾ ರಕ್ತನಾಳದಲ್ಲಿ ನೋವುಂಟಾಗಿ ಸೊಂಟದ ಕೆಳಭಾಗದ ಮೇಲೆ ಪರಿಣಾಮ ಬೀರಬಹುದು. ಹಾಸಿಗೆ ಬಳಿ ಚಾರ್ಜ್ ಹಾಕುವುದರಿಂದ ಹೆಚ್ಚಿನ ವಿಕಿರಣ ಹೊರಸೂಸಿ ಚರ್ಮ, ಮೆದುಳು ಹಾಗೂ ವೀರ್ಯದ ಮೇಲೆ ಹಾನಿಕಾರಕವಾಗಬಹುದು.
ಜೀವನಶೈಲಿಯ ಕುರಿತಾದ ಕುತೂಹಲಕರ ವಿಚಾರಗಳು :
ಬೆಳಿಗ್ಗೆ ಬೇಗ ಎದ್ದರೆ.
ಸೂರ್ಯೋದಯಕ್ಕೂ ಮುಂಚಿತವಾಗಿ ಏಳುವುದು ತುಂಬಾ ಒಳ್ಳೆಯದು ಎನ್ನುತ್ತಾರೆ ತಜ್ಞರು. ಇದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ ಹಾಗೆ ಮೆದುಳಿನ ಕಾರ್ಯಕ್ಷಮತೆ ಕೂಡ ಹೆಚ್ಚುತ್ತದೆ (Interesting Facts in Kannada).
ಜೊತೆಗೆ ದೇಹ ಸಕಾರಾತ್ಮಕತೆಯಿಂದ ಕೂಡಿರುತ್ತದೆ. ಬೇಗನೆ ಎಚ್ಚರಗೊಳ್ಳುವ ಜನರಿಗೆ ಹೃದ್ರೋಗ ಮತ್ತು ಬೊಜ್ಜು ಬರುವ ಸಾಧ್ಯತೆ ಕಡಿಮೆ. ರೋಗನಿರೋಧಕ ಶಕ್ತಿ ಹೆಚ್ಚಾಗಿದೆ.
ಒತ್ತಡ ಮತ್ತು ಖಿನ್ನತೆಯಂತಹ ಸಮಸ್ಯೆಗಳು ದೂರವಾಗುತ್ತವೆ. ಇಡೀ ದಿನ ಉಲ್ಲಾಸ-ಉತ್ಸಾಹದಿಂದ ಇರುವಂತೆ ಮಾಡುತ್ತದೆ.
ಪರೀಕ್ಷೆಯ ಸಮಯದಲ್ಲಿ ಈ ಆಹಾರ ಸೇವಿಸಬೇಡಿ.
ಹುರಿದ ಆಹಾರಗಳು ಮೆದುಳಿನ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ. ಇದರಿಂದ ಸ್ಯಾಚುರೇಟೆಡ್ ಕೊಬ್ಬು ಹೆಚ್ಚಾಗಿ ಏಕಾಗ್ರತೆ ಕಡಿಮೆಯಾಗುತ್ತದೆ(Interesting Facts in Kannada).
ಹೆಚ್ಚು ಸಕ್ಕರೆ ಅಂಶವಿರುವ ಆಹಾರ ಸೇವನೆಯಿಂದ ದೀರ್ಘಕಾಲೀನದಲ್ಲಿ ಅಲ್ಪಾವಧಿಯ ಮೆಮೊರಿ ನಷ್ಟವಾಗಬಹುದು.
ಕಾಫಿ ಕುಡಿಯುವುದರಿಂದ ಕೆಫೀನ್ ಅಂಶವು ನಿದ್ರೆಯನ್ನು ತಡೆಯುತ್ತದೆ. ಇದರಿಂದ ದೇಹವು ಆತಂಕ, ಹೆಚ್ಚಿದ ಹೃದಯ ಬಡಿತ ಉಂಟಾಗುತ್ತದೆ. ಇದು ಪರೀಕ್ಷೆಯ ಸಮಯದಲ್ಲಿ ಆತಂಕ ಹೆಚ್ಚಿಸುವ ಸಾಧ್ಯತೆ ಇರುತ್ತದೆ.
ಸ್ಮಾರ್ಟ್ಫೋನ್ ಮಾರುವ ಮುನ್ನ ಈ ಕೆಲಸ ಮಾಡಿ.
ಟ್ವಿಟ್ಟರ್, ಫೇಸ್ಸುಕ್, ಇನ್ಮಾಗ್ರಾಂ, ಫೋನ್ ಪೇ, ಗೂಗಲ್ ಪೇ, ಪೇಟಿಎಂ ಅಕೌಂಟ್‌ಗಳಿಂದ ಲಾಗ್ ಜೇಟ್ ಆಗಿ. ಫೋನ್ ಮಾರಾಟ ಮಾಡುವ ಮುನ್ನ ರಿಸೆಟ್ ಮಾಡುವುದು ಉತ್ತಮ ಆಯ್ಕೆ.
ಸೆಟ್ಟಿಂಗ್ಸ್- ಸೆಕ್ಯೂರಿಟಿ-ಲಾಕ್ಷೀನ್ ಓಪನ್ ಮಾಡಿ. ನಂತರ ಫ್ಯಾಕ್ಟರಿ ರಿಸೆಟ್ ಮಾಡುವ ಮೂಲಕ ಎಲ್ಲಾ ಡೇಟಾವನ್ನು ಅಳಿಸಿಹಾಕಬಹುದು.
ಐಫೋನ್ ಬಳಕೆದಾರರು ಡೇಟಾ ಡಿಲೀಟ್ ಮಾಡಲು ಸೆಟ್ಟಿಂಗ್ಸ್-ಯೂಸರ್ ಪ್ರೊಫೈಲ್-ಐಕ್ಸ್ಡ್-ಫೈಂಡ್ ಮೈ ಐಫೋನ್ ಆಯ್ಕೆಯನ್ನು ಕ್ಲಿಕ್ ಮಾಡಿ ಡಾಟಾ ತೆಗೆಯಿರಿ.
ಎಡಬದಿ ತಿರುಗಿ ಮಲಗುವುದರ (Interesting Facts in Kannada) ಪ್ರಯೋಜನಗಳು.
ಹೊಟ್ಟೆ ಹಾಗೂ ಜೀರ್ಣಗ್ರಂಥಿ ಇರುವುದು ಎಡಭಾಗದಲ್ಲಿ. ಹಾಗಾಗಿ ಎಡಬದಿಗೆ ಹೊರಳಿ ಮಲಗುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ . ಎಡ ಭಾಗಕ್ಕೆ ಹೊರಳಿ ಮಲಗುವುದರಿಂದ ಹೃದಯಕ್ಕೆ ರಕ್ತ ಸಂಚಾರ ಸುಗಮವಾಗುತ್ತದೆ.
ಇದರಿಂದ ಹೃದಯಕ್ಕೂ ಸ್ವಲ್ಪ ವಿಶ್ರಾಂತಿ ದೊರಕುತ್ತದೆ. ಗರ್ಭಿಣಿ ಮಹಿಳೆಯರು ಎಡಭಾಗಕ್ಕೆ ತಿರುಗಿ ಮಲಗುವುದರಿಂದ ಗರ್ಭಕೋಶಕ್ಕೆ ಹೆಚ್ಚು ರಕ್ತ ಪೂರೈಕೆಯಾಗುತ್ತದೆ. ಗೊರಕೆ ಹೊಡೆಯುವವರು ಎಡಭಾಗಕ್ಕೆ ಹೊರಳಿ ಮಲಗಿದರೆ ಗೊರಕೆ ಹೊಡೆಯುವುದು ಕಡಿಮೆಯಾಗುತ್ತದೆ.