Home » ತುಳಸಿ ಎಲೆ: ಈ ಸಮಸ್ಯೆ ಇರುವವರು ತಪ್ಪಿಯೂ ತಿನ್ನಲೇಬಾರದು

ತುಳಸಿ ಎಲೆ: ಈ ಸಮಸ್ಯೆ ಇರುವವರು ತಪ್ಪಿಯೂ ತಿನ್ನಲೇಬಾರದು

by Praveen Mattimani
health-benefits-of-tulsi-leaves-in-kannada-ತುಳಸಿ-ಎಲೆ

ತುಳಸಿ ಎಲೆ ಗಳಲ್ಲಿ ಹಲವು ಔಷಧೀಯ ಗುಣಗಳಿವೆ. ಆಯುರ್ವೇದದ ಪ್ರಕಾರ. ತುಳಸಿ ಎಲೆಗಳ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ.

ಆದರೆ ತುಳಸಿ ಎಲೆಗಳ (Tulsi leaves) ಸೇವನೆಯ ವೇಳೆ ಕೂಡಾ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಯಾಕೆಂದರೆ ತುಳಸಿ ಎಲೆ ಕೂಡಾ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ.

ತುಳಸಿ ಎಲೆಗಳಲ್ಲಿ ಹಲವು ಔಷಧೀಯ ಗುಣಗಳಿವೆ. ಆಯುರ್ವೇದದ ಪ್ರಕಾರ, ತುಳಸಿ ಎಲೆಗಳ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ.

ಆದರೆ ತುಳಸಿ ಎಲೆಗಳ (Tulsi leaves) ಸೇವನೆಯ ವೇಳೆ ಕೂಡಾ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಯಾಕೆಂದರೆ ತುಳಸಿ ಎಲೆ ಕೂಡಾ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ.

ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಎಚ್ಚರ :

ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಕೂಡಾ ತುಳಸಿ ಎಲೆಗಳನ್ನು ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯಬೇಕು.

ವೈದ್ಯರ ಸಲಹೆಯಿಲ್ಲದೆ ಯಾವುದೇ ಕಾರಣಕ್ಕೂ ತುಳಸಿ ಎಲೆಗಳನ್ನು ತಿನ್ನಬಾರದು. ಇದು ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತದೆ.

ಮಧುಮೇಹದ ಸಮಸ್ಯೆಯಿದ್ದರೆ ತುಳಸಿ ಸೇವಿಸಬೇಡಿ :

ಮಧುಮೇಹ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ, ತುಳಸಿ ಎಲೆಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ. ತುಳಸಿ ಎಲೆಗಳು ಅನೇಕ ಗುಣಗಳನ್ನು ಹೊಂದಿದೆ. ಆದರೆ ನೀವುಮೊದಲೇ ಯಾವುದಾದರೂ ಔಷಧಿ ತೆಗೆದುಕೊಳ್ಳುತ್ತಿದ್ದರೆ, ತುಳಸಿ ಎಳೆಯನ್ನು ತಿನ್ನುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.

ಹಲ್ಲುಗಳಿಗೆ ಹಾನಿ :

ತುಳಸಿ ಎಲೆಗಳಲ್ಲಿMercury Content  ಇರುತ್ತದೆ. ತುಳಸಿ ಎಲೆಯನ್ನು ಅಗಿಯುವಾಗ, ಈ ಅಂಶಗಳು ಹೊರಬರುತ್ತವೆ ಮತ್ತು ಅದು ನಿಮ್ಮ ಹಲ್ಲುಗಳಿಗೆ ಹಾನಿ ಮಾಡುತ್ತದೆ. ತುಳಸಿಯ ಎಲೆಗಳು ಆಮ್ಲೀಯವಾಗಿರುತ್ತವೆ ಮತ್ತು ಅದನ್ನು ಪ್ರತಿದಿನ ಹೆಚ್ಚು ಅಗಿಯುತ್ತಿದ್ದರೆ, ಹಲ್ಲಿನ ದಂತಕವಚದ ಮೇಲೆ ಪರಿಣಾಮ ಬೀರುತ್ತದೆ.

ವಿಚಾರವು ಗೊತ್ತಿರಲಿ :

ಆಯುರ್ವೇದದ ಪ್ರಕಾರ, ತುಳಸಿ ಎಲೆಗಳು ರಕ್ತ ಹೆಪ್ಪುಗಟ್ಟುವಿಕೆಯನ್ನು ತೆಗೆದುಹಾಕುವ ಗುಣವನ್ನು ಹೊಂದಿವೆ. ಆದರೆ ನಿಮಗೆ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಇಲ್ಲದಿದ್ದರೆ ಮತ್ತು ನೀವು ರಕ್ತ ತೆಳುಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ತುಳಸಿ ಎಲೆಗಳನ್ನು ಹೆಚ್ಚು ಸೇವಿಸಬೇಡಿ. ಇದರಿಂದ ರಕ್ತ ತೆಳುವಾಗಬಹುದು.

ಆರೋಗ್ಯಕ್ಕೆ ವೀಳ್ಯದೆಲೆಯ ಉಪಯೋಗಗಳು

ಆರೋಗ್ಯದಾಯಕ ಆಹಾರ ಪದ್ಧತಿ

ಉಪ್ಪಿನ ಉಪಯೋಗಗಳು

Related Articles