Home » 250+ Kannada Love Quotes – Romantic, Cute, Sad & Funny – ಪ್ರೀತಿಯ ಸಂದೇಶಗಳು

250+ Kannada Love Quotes – Romantic, Cute, Sad & Funny – ಪ್ರೀತಿಯ ಸಂದೇಶಗಳು

by Praveen Mattimani
kannda love quotes

Love Quotes in Kannada: ಪ್ರೀತಿ ಎನ್ನುವುದು ಮನಸ್ಸಿನಿಂದ ಅಲ್ಲ, ಬರುವ ಹೃದಯದ ಆಳವಾದ ಭಾವನೆ. ಸ್ನೇಹದಿಂದ ಆರಂಭವಾಗಿ ಅದು ಪ್ರೀತಿಯ ಕಡೆಗೆ ಸಾಗುತ್ತದೆ. ಇದು ಬಲವಾದ ಆಕರ್ಷಣೆ ಮತ್ತು ಆಪ್ತ ಸಂಬಂಧದ ಭಾವನೆ, ಇದು ನಿಮ್ಮನ್ನು ಎಲ್ಲವನ್ನೂ ಮರೆತು ಅವರೊಂದಿಗೆ ಸಮಯ ಕಳೆಯುವಂತೆ ಪ್ರೇರೇಪಿಸುತ್ತದೆ. ನಿಮ್ಮ ಪ್ರೀತಿ ವ್ಯಕ್ತಪಡಿಸಲು ಮತ್ತು ಪ್ರೀತಿಯ ಭಾವನೆಗಳನ್ನು ಹಂಚಿಕೊಳ್ಳಲು ಸುಲಭವಾಗಲು, ನಾವು ಕನ್ನಡದಲ್ಲಿ ಪ್ರೀತಿಯ ಶ್ರೇಷ್ಠ Love Quotes in Kannada ಅನ್ನು ಇಲ್ಲಿ ತರುತ್ತಿದ್ದೇವೆ.

Kannada Love quotes:

1. “ಬಳುಕ ಬೇಡ ಹುಡುಗಿ ಜಾಸ್ತಿ ಉಳುಕಬಹುದು ಸೊಂಟ ನೋಡುವಷ್ಟು ನೋಡಿ ಹಿಡಿದೇ ಬಿಡುವೆ ಗೊತ್ತಿರಲಿ ನಿನ್ನುಡುಗ….ಸ್ವಲ್ಪ ತುಂಟ….”

2. “ನಮ್ಮ ಅತಿಯಾದ ನಿರೀಕ್ಷೆಗಳೇ ನೋವಿಗೆ ಕಾರಣ ಅಂತಾರೆ ಅದು ನಿನ್ನ ವಿಷಯದಲ್ಲಿ ನನಗೆ PROVE ಆಗೋಯ್ತು..”

3. “ಮೊದಲೆಲ್ಲ …ಎಷ್ಟು ಮಾತಾಡಿದರು ಇನ್ನೂ ಮುಗಿದಿಲ್ಲ ಅಂತಿದ್ದವಳು ಈಗೆಲ್ಲಾ…ಏನಾಯ್ಯೋ ಗೊತ್ತಿಲ್ಲ ಏನ್ ಮಾತಾಡೋದಿದೆ ಅಂತ ಕೇಳ್ತಳೆ..”

4. “ನಿನ್ನ ಮೇಲಿರೊ ಪ್ರೀತಿ ಕಾಳಜಿಯಿಂದಲೆ ದೂರ ಉಳಿದಿರೋದು.. ಸುಮ್ಮನೆ ಭಾವನೆಗಳ ಜೊತೆ ಆಟಾಡಿ ಕೈಬಿಡೊ ಮನಸ್ಸಿಲ್ಲ ಕಣೆ ನನಗೆ..”

5. “ಪ್ರೀತಿ ಹೆಸರಲ್ಲಿ ಜೊತೆಗಿದ್ದು ಸಮಯ ನೋಡಿ ಬಿಟ್ಟು ಹೋದೆ ನೀನು ಊರೆಲ್ಲಾ… ಸುತ್ತಿಸಿ ಕೊನೆಗೆ ಮನೆ ಹೊರಗೆ ಬಿಡೋ ಚಪ್ಪಲಿ ತರ…”

6. “ಪ್ರಯತ್ನವೇ ಮಾಡದೆ ಸೋತೆ…. ಆಗಲ್ಲ ಅಂತ ಕೂರೋದು ದಡ್ಡತನ..”

7. “ನಿನ್ನ ಮನಸ್ಸಲ್ಲಿ ಬೇಡದ ಭಾವನೆಗಳನ್ನ ಹುಟ್ಟು ಹಾಕಿದವನೂ ನಾನೇ… ಚಿಗುರಿದ ಕನಸುಗಳನ್ನ ಕೊಂದು ಈಗ ನೋವು ಅನುಭವಿಸುತ್ತಿರುವವನೂ ನಾನೇ…”

8. “ಅವಳ ನನಗೆಂದೆ ಕೆತ್ತಿರುವ ಬ್ರಹ್ಮ ನಿಜವಾಗಿಯೂ ಅದ್ಭುತ ಶಿಲ್ಪಿ ಮನೆಯಲ್ಲಿ ಇದ್ದು ಇದ್ದು ಇತ್ತೀಚೆಗೆ ಆಗಿರುವಳು ಸ್ವಲ್ಪ ಕೆಂಪಿ ಕಚ್ಚಿ ತಿನ್ನಬೇಕೆನಿಸುವ ಅವಳ ಕೆನ್ನೆ ನನಗೆ..ಕೈಗೆಟುಕದ ಕುಲ್ಪಿ ನನ್ನೆದುರು ಬರದೆ..ನಾಚುವ ಸುಂದರಿ ಅವಳೇ ನನ್ನಾಕೆ…”

9. “ಕೆಲವೊಮ್ಮೆ..ಕೆಲಸ ಇರಬೇಕು ಅದಕ್ಕೆ BUSYಅಂದುಕೊಳ್ಳೋದು ತಪ್ಪು ಅವರಿಗೆ ನಾವು ಬೇಡದವರದಾಗ ಎಲ್ಲವೂ ಬದಲಾಗುತ್ತೆ..”

10. “ನಾ ನಿನ್ನ ಪ್ರೀತಿಸಿ, ನೀ ನನಗೆ ಸಿಗದೇ ದೂರಾಗಿ ನೋವು ಪಡೋದಕ್ಕಿಂತ ಜೀವನಪೂರ್ತಿ ಜೊತೆಗೆ ಇರಬೇಕು ನಿನಗೆ ಒಳ್ಳೆಯ ಸ್ನೇಹಿತನಾಗಿ..”

11. “ಪ್ರತಿಯೊಂದು ಹನಿ ಕಣ್ಣೀರಲ್ಲೂ ಅವನ ನೆನಪಿರುತ್ತೆ… ಎಷ್ಟು ಸರಿ ಹೊರಗೆ ಹಾಕಿದ್ರು ಮತ್ತೆ ಮತ್ತೆ ಬರ್ತಾನೆ ಇರುತ್ತೆ…”

12. “ಅವಳು ಹೇಳಿದ ತಕ್ಷಣ..ಎಣ್ಣೆ ಸಿಗರೇಟು ಬಿಟ್ಟೆ ಅನ್ನೋ ನಂಬಿಕೆಯಲ್ಲಿ ಈಗ “ನನ್ನನ್ನು ಬಿಟ್ಟಿಡು” ಅಂತಿದ್ದಾಳೆ ಏನು ಹೇಳೋದು ಅವಳಿಗೆ…”

13. “ನನಗೆ ಒಂಟಿತನ ಕಾಡುವಾಗ ನಿನ್ನನ್ನ ತಬ್ಕೊಂಡು ಅಳಬೇಕು ಅನ್ನುತ್ತೆ ನನ್ನ ಜೊತೆಗೆ ಇದ್ದುಬಿಡು ಅಂತ ಹೇಳಬೇಕು ಅನ್ನುತ್ತೆ ಕಣೋ…”

14. “ನನಗೆ ಕಣ್ಣಾಮುಚ್ಚಾಲೆ ಆಟ ಮೈದಾನದಲ್ಲಿ ಆಡಿ ಅಷ್ಟೇ ಗೊತ್ತಿತ್ತು ಬದುಕಲ್ಲೂ ಕೂಡ ಆಡ್ತಾರೆ ಅಂತ ಅವನಿಂದಲೆ ಗೊತ್ತಾಗಿದ್ದು…”

15. “ಯಾಕೆಹುಡುಗಿ ತೊಡುವೆ ಸೀರೆಯ ಒಕ್ಕಳು ಕಾಣುವ ಹಾಗೆ ನೋಡಿದ ಕೂಡಲೆ ನಾನಾಗಿ ಬಿಡುವೆ ಮದನ ಮೋಹನ ಮೈಮೇಲೆ ಬಂದಂಗೆ…”

16. “ಆರೋಗ್ಯವೇ ಅತಿ ದೊಡ್ಡ ಉಡುಗೆರೆ, ನೆಮ್ಮದಿಯೇ ಮಹಾ ಸಂಪತ್ತು, ನಂಬಿಕೆಯೇ ನಿಜವಾದ ಸಂಬಂಧ.”

17. “ಹೆಣ್ಣಾಗಿ ಜೀವನ ಮಾಡುವುದು ಸುಲಭದ ಆಟವಲ್ಲ . ಪ್ರತಿದಿನ ಸೂರ್ಯನಾಗಿ ಹುಟ್ಟ ಬೇಕಾಗುತ್ತದೆ, ಎದುರಿಗೆ ಘನವಾದ ಕತ್ತಲೆ ಇದ್ದರು ಎಲ್ಲರ ಜೀವನದಲ್ಲಿ ಬೆಳಕನ್ನು ಕೊಡಬೇಕಾಗುತ್ತದೆ.”

Kannada Love Quotes

“ಹಣವೇ ಮುಖ್ಯಅಂದುಕೊಂಡವನಿಗೆ ಒಳ್ಳೆಯತನ ಕಡಿಮೆ,,,,, ಒಳ್ಳೆಯ ತನವೆ ಮುಖ್ಯ ಅಂದುಕೊಂಡವನಿಗೆ ಹಣಕಡಿಮೆ.”

Kannada Love Quotes

“ಸಿಹಿ ಹಣ್ಣು ಕೊಡುವ ಮರವೆ ಜನರಿಂದ ಹೆಚ್ಚು ಹೆಚ್ಚು ಕಲ್ಲೇಟು ತಿನ್ನುವುದು..ಹಾಗೇಯೇ ಎಲ್ಲರ ಒಳಿತನ್ನು ಬಯಸುವ ಹೆಣ್ಣಿಗೆ ಹೆಚ್ಚು ಕಷ್ಟ ನಿಂದನೆ ಅಪವಾದಗಳು ಬರುವುದು.”

Kannada Love Quotes

“ಕೊನೆವರೆಗೂ ಜೊತೆಲಿ ಇರ್ತಿವಿ ಅಂತ ಹೇಳ್ತಾರೆ ಆದರೆ ಯಾರೂ ಜೊತೆಗಿರಲ್ಲ… ಮದ್ಯದಲ್ಲೇ ಬಂದು ಮದ್ಯದಲ್ಲೇ ಹೋಗ್ತಾರೆ.. ಬರುವಾಗ ನಗು ತಂದು ಹೋಗುವಾಗ ಅಳು ಕೊಟ್ಟು ಹೋಗ್ತಾರೆ.”

Kannada Love Quotations:

1. “ನೋಡಿ…ಜನ ಅವರಿಗೆ ಬೇಕಾದ ವ್ಯಕ್ತಿಗಳ ಜೊತೆ ಇರುವಾಗ ನಾವೊಬ್ಬರು ಇದೀವಿ ಅನ್ನೋ ನೆನಪು ಕೂಡ ಮಾಡಿಕೊಳ್ಳಲ್ಲ..”

2. “ಇತ್ತೀಚೆಗೆ ಅವನು ನನ್ನ ಕಡೆ ಗಮನ ಹರಿಸೋದು ಕಮ್ಮಿಯಾಗಿದೆ ಕೆಲಸದಲ್ಲಿ BUSY ಇದ್ದಾನೊ…. ಬೇಡ ಅಂತ ಬಿಟ್ಟಾಕಿದ್ದಾನೊ ಗೊತ್ತಿಲ್ಲ…”

3. “ಹೃದಯದಿ ದಿನವೂ ನಡೆದಿದೆ ನೋಡು ಪ್ರೀತಿಯ ಮೆರವಣಿಗೆ….ಮುಗಿಯದು ಗೆಳತಿ ಎಷ್ಟೇ ಬರೆದರು ನೆನಪಿನ ಬರವಣಿಗೆ…”

4. “ಹೇಳದ ಪ್ರೀತಿ ಕೋಲೆಗೆ ಸಮಾನ ಅಂತಾದರೆ ಈಗಾಗಲೇ ಬೇಜಾನ್ ಮರ್ಡರ್ ಆಗಿದೆ ನನ್ನಿಂದ (ಆದರೆ ನಾನ್ DON ಅಲ್ಲ)…”

5. “ನೀ ನನಗೆ ಬೇಕು ಅನ್ನುವ ಸ್ವಾರ್ಥದಲ್ಲಿ ಸುಳ್ಳು ಹೇಳಿದ್ದೆ ನಿಜ…. ಆದರೆ ನನದು ಮೋಸದ ಪ್ರೀತಿಯಲ್ಲ ಹಾಲಿನಷ್ಟೇ ಶುದ್ಧವಾಗಿದೆ…”

6. “ನಿನ್ನ ಬದುಕಲ್ಲಿ ನಾನು ನಗುವ ಹೂವಾಗದಿದ್ದರು ಪರವಾಗಿಲ್ಲ…. ಯಾವತ್ತು ಕೂಡ ಚುಚ್ಚಿ ನೋವಿಡೋ ಮುಳ್ಳು ಮಾತ್ರ ಆಗಲ್ಲ…”

7. “ನನ್ನಿಂದ ಏನಾದ್ರು ಬೇಜಾರಾಗಿದ್ರೆ ಹೇಳ್ಕೊಬೇಕು ನಮ್ಮವರಾಗಿ…. ಅದುಬಿಟ್ಟು ದೂರ ಉಳಿಯೋದಲ್ಲ ಮೂರನೆ ವ್ಯಕ್ತಿಯಾಗಿ…”

8. “ಗೆಳತಿ ಕನಸೊಂದು ನೀನಾಗಿ, ನನ್ನೆದುರು ಬಂದಂತೆ.. ಕವಿಯಾಗಿ ನಾನು ಪದಗಳಲಿ ಕರೆದಂತೆ ಹೊರಟ ಹಾದಿಯ ಮರೆತು ಹಗಲಲ್ಲಿ ನಾ ಹಾಳಾದಂತೆ. ಕೈಯಿಡಿದು ನೀ ನನ್ನ ಜೊತೆಯಲ್ಲೇ ಇರುವಂತೆ..”

9. “ಯಾಕೆ ನೆನ್ನೆ ಸೀರೆ ಹುಟ್ಟಿಲ್ಲ ಅಂದ ಬರಲ್ಲ ಕಣೋ..ಅಂದೆ ಹೇಳಿದ್ರೆ ನಾನೆ ಬಂದು ಉಡುಸ್ತಿದ್ದೆ ಅನ್ನೋದ…ಭಲೆ ಇದ್ದಾನೆ ನಮ್ಮುಡುಗ…”

10. “ನೀನು ನನ್ನ ಜೀವನದ ಚಿರಕಾಲದ ಸಹಾಯಕ, ನನ್ನ ಹೃದಯದ ಆಸರೆ.”

11. “ಒಂದು ಸಣ್ಣ ತಪ್ಪಿನ ನೆಪ ಹುಡುಕಿ ಬೇರೆಯಾಗಿ.. ಮತ್ತೊಬ್ಬರಿಗೆ ಹತ್ತಿರ ಆಗಿದ್ದೀಯ ಇಷ್ಟು ದಿನ ಜೊತೆಗಿದ್ರು..ನಿನ್ನ ಅರ್ಥ ಮಾಡ್ಕೊಳೋಕೆ ಆಗ್ಲಿಲ್ಲ ಕಣೆ…”

12. “ಬಡ್ಡಿಮಗ ಆಗೆಲ್ಲಾ ಚಡ್ಡಿನೆ ಆಗ್ತಿರಲಿಲ್ಲ..ಅಂಗಿರುವಾಗ ಗೊತ್ತಲ್ಲ..ನಾವು ಚಿಕ್ಕವಯಸ್ಸಿನಿಂದ ಚಡ್ಡಿ ದೋಸ್ ಮಗ ಅಂತನೆ…”

13. “ಒಬ್ಬರ ಪ್ರೀತಿ ವಿಶ್ವಾಸ ಗಳಿಸೋದು ಸುಲಭದ ಕೆಲಸವೆ…. ಆದರೆ ಅದನ್ನು ಉಳಿಸಿಕೊಳ್ಳೋಕೆ ಒಂದು ಯೋಗ್ಯತೆ ಬೇಕು…”

14. “ಹೊಸ ಪರಿಚಯಗಳು ಆದಂತೆ ಸಹಜವಾಗಿ ನಡೆಯೋದು ಅಂದರೆ…ನಾವು ಬೇಕು ಅನ್ನುವವರು ನಮಗೆ ಸಿಗಲ್ಲ ನಮ್ಮನ್ನ ಬಯಸೋರಿಗೆ ನಾವು ಸಿಗಲ್ಲ…”

15. “ನಿನ್ನ ಮೇಲೆ ಪ್ರೀತಿ ಇರೋದರಿಂದಲೆ ನಿನ್ನಿಂದ ದೂರ ಇರೋದು… ಆಹೆಸರು ಹೇಳ್ಕೊಂಡು FLIRT ಮಾಡೋಕೆ ಬರಲ್ಲ ಕಣೆ ನಂಗೆ…”

16. “ನಿಮ್ಮ ಭಾವನೆಗಳಿಗೆ ಕಣ್ಣೀರಿನ ಸಹಾಯ ಕೊಡಬೇಡಿ ನಿಮ್ಮ ಸಿಟ್ಟಿಗೆ ನಾಲಗೆಯ ನೆರವು ನೀಡಬೇಡಿ.ಆಗ ನೀವು ಸದಾ ಸಂತಸದಿಂದ ಇರುತ್ತೀರಿ… ಹುಡುಕುತ್ತ ಹೋದ ಧರ್ಮರಾಯನಿಗೆ ಕೆಟ್ಟವರು ಸಿಗಲಿಲ್ಲ , ಎಷ್ಟು ಹುಡುಕಿದರೂ ಕೌರವನಿಗೆ ಒಳ್ಳೆಯವರ ದರ್ಶನವಾಗಲಿಲ್ಲ,,, ನೋಡುವ ದೃಷ್ಟಿ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ.”

17. “ಇಷ್ಟ ಪಟ್ಟ ವಸ್ತುಗಳನ್ನು ಪಡೆದುಕೊಳ್ಳುವುದು ಮುಖ್ಯವಲ್ಲ … ಅವುಗಳನ್ನು ಕಳೆದುಕೊಂಡಾಗ ತಾಳ್ಮೆಯಿಂದಿರುವುದು ಮುಖ್ಯ.”

Kannada Love Quotes

“ಜೀವನದಲ್ಲಿ ಎರಡು ವಿಷಯಗಳಿಗೆ ಬಹಳ ಎಚ್ಚರಿಕೆಯಿಂದ ಇರಬೇಕು, ಯಾರನ್ನು ಅತಿಯಾಗಿ ಪ್ರೀತಿಸಬಾರದು, ಎರಡನೆಯದ್ದು ಯಾರನ್ನು ಅತಿಯಾಗಿ ನಂಬಬಾರದು.”

Kannada Love Quotes

“ಜೀವನದಲ್ಲಿ ಯಾವಾಗಲೂ ಎರಡು ವಿಷಯಗಳಲ್ಲಿ ತುಂಬಾ ಜಾಗರೂಕರಾಗಿಬೇಕು,,, ಯಾರನ್ನು ಅತಿಯಾಗಿ ಪ್ರೀತಿಸಬಾರದು,, ಯಾರನ್ನು ಅತಿಯಾಗಿ ನಂಬಬಾರದು.”

Kannada Love Quotes

“ಯಾರಿಗೆ ಯಾರು ಎಂದು ಆ ದೇವರು ಬರೆದಿರುತ್ತಾನೆ, ಪ್ರೀತಿ, ಪ್ರೇಮ ಅಂತ ನಾವು ಎಷ್ಟೇ ಪ್ರಯತ್ನ ಪಟ್ಟರೂ ಬರಿ ನೋವು, ದುಃಖ ನೆನಪು ಮಾತ್ರ.”

Heart Touching Love Quotes Kannada:

1. “ಸಂಸ್ಕಾರದಿಂದ ಪ್ರಪಂಚವನ್ನು ಗೆಲ್ಲಬಹುದು,,,,ಆದರೆ ಅಹಂಕಾರದಿಂದ ಗೆದ್ದು ಕೂಡ ಸೋಲಬಹುದು…”

2. “ಯಾರಿಗಾದರೂ ಬೇಜಾರ್ ಮಾಡುವ ಮುನ್ನ ಒಮ್ಮೆ ಯೋಚಿಸಿ,,, ಅವರಿಗೂ ಒಂದು ಮನಸ್ಸು ಇರುತ್ತ ಅಂತಾ…?”

3. “ನಾನಿದ್ದೀನಿ ಅನ್ನೋ ಒಂದು ಮಾತು ಸೋಲಿನಲ್ಲೂ ನಗಲು ಕಲಿಸುತ್ತೇ…”

4. “ಅಗತ್ಯ ವೇಳೆಯಲ್ಲಿ ಕೊಟ್ಟಿದ್ದು ಅಲ್ಪವಾದರು… ಅಮೂಲ್ಯನೇ…”

5. “ಕಾಯುವುದಕ್ಕೂ ಒಂದು ಅರ್ಥ ಇರುತ್ತೆ ಆದರೆ ಅದೇ ಕಾಯುವಿಕೆ ಪ್ರತಿ ಸಲನೂ ನಿರಾಸೆ ಆದರೆ,,,, ಇರುವ ನಂಬಿಕೆನು ಹೊರಟು ಹೋಗುತ್ತೆ…”

6. “ಕೆಲವರಿಗೆ ನಮ್ಮ ನೆನಪ ಆಗೋದು ಅವರಿಗೆ ಅಗತ್ಯ ಇದ್ದಾಗ ಮಾತ್ರ,, ಅವರ ಕೆಲಸ ಆದ ಮೇಲೆ ನಾವಾಗಿ ಮಾತಾಡಿದ್ರು ಅವರಿಗೆ ಮಾತಾಡೋಕೆ ಸಮಯ ಇರಲ್ಲ…”

7. “ನಿಮ್ಮನ್ನ ಪದೆ ಪದೆ ನೆನೆಸ್ಕೊತೀವಲ್ಲ ನಾವೇ ದಡ್ಡರು,,,,ನಮ್ಮ ನೆನಪೇ ಇಲ್ಲದೆ ಹಾಗೆ ಇರ್ತಿರಲ್ಲ,,, ನಿವೇ ಬುದ್ದಿವಂತರು…”

8. “ನನ್ನ ಇಷ್ಟಾ ಪಡೋ ಹೃದಯ ಯಾವ ಮೂಲೆಯಲ್ಲಿ ಪಾತ್ರೆ ತೋಳಿತಿದೆಯೊ ಯಾರಿಗಿ ಗೊತ್ತು…”

9. “ಬದುಕು ನಮ್ಮನ್ನು ಎಷ್ಟೇ ನೋಯಿಸಿದರು, ನಾವು ಮುಂದೆ ಸಾಗಲೇಬೇಕು,,, ನಮಗಾಗಿ ಅಲ್ಲದಿದ್ದರೂ ನಮ್ಮವರಿಗಾಗಿ…”

10. “ಸೌಂದರ್ಯಕ್ಕೆ ಬಹಳ ಬೇಗ ಮರುಳಾಗಿಬಿಡುತೇವೆ ಆದರೆ, ಬಾಳಬೇಕಾಗಿರುವುದು ವ್ಯಕ್ತಿತ್ವದ ಜೊತೆಗೆ ಎಂಬ ವಾಸ್ತವ ಗೊತ್ತಿರುವುದಿಲ್ಲ…”

11. “ನಿಮ್ಮನ್ನು ಆಯ್ಕೆ ಮಾಡಿಕೊಳ್ಳುವವರನ್ನು, ನೀವು ಆಯ್ಕೆ ಮಾಡಿ…”

12. “ನಿಮ್ಮಲ್ಲಿ ಬೆಟ್ಟದಷ್ಟು ಒಳ್ಳೆಯತನ ಇದ್ರು, ಜನ ಮೊದಲು ಬೆರಳು ಮಾಡಿ ತೋರಿಸುವುದು ನೀವು ಮಾಡಿರೋ ಸಾಸಿವೆಯಷ್ಟು ಚಿಕ್ಕ ತಪ್ಪುಗಳನ್ನೇ…”

13. “ದುಡ್ಡು ” ಎಲ್ಲರಿಗೂ ಸಿಗುತ್ತೆ.. ಆದರೆ “ಒಳ್ಳೆಯವರು” ದುಡ್ಡಿಗೆ ಸಿಗುವುದಿಲ್ಲ.

14. “ಪ್ರೀತಿ ಮತ್ತು ಸ್ನೇಹ ಎಂಬ ಎರಡು ಅಕ್ಷರ ಬರಿಯಲು ಸ್ವಲ್ಪ ಜಾಗ ಸಾಕು ಉಳಿಸಿಕೊಳ್ಳಲು ವಿಶಾಲ ಹೃದಯ ಬೇಕು..”

15. ಬರೆದವನಿಗೆ ಅಳಿಸಲಾಗದ ಬರಸಿಕೊಂಡವನಿಗೆ ಓದಲಾಗದ ಬರಹ,,, “ಹಣೆಬರಹ”.

16. “ಬೇರೊಬ್ಬರು ನಮ್ಮನ್ನು ಒಪ್ಪಲಿ ಬಿಡಲಿ, ಮುಖವಾಡ ಹಾಕಿ ಮೆಚ್ಚಿಸುವುದಕ್ಕಿಂತ ನಾವು ನಾವಾಗಿರುವುದೇ ಚೆಂದ. ಜನ ನಮ್ಮ ನಾಟಕೀಯತೆ, ಬೂಟಾಟಿಕೆ, ಆಷಾಢಭೂತಿತನ ನಂಬುವಷ್ಟು ದಡ್ಡರಲ್ಲ..”

17. “Respect ತೆಗೆದುಕೊಳ್ಳುವುದು ದೊಡ್ಡದಲ್ಲ, ಅದನ್ನು ತೆಗೆದುಕೊಳ್ಳಲು ನಾವು perfect ಆಗಿ ಇದ್ದೀವಾ ಅಂತ ತಿಳಿದುಕೊಂಡರೆ ಒಳ್ಳೆಯದು”

Kannada Love Quotes

“ನಮಗೆ ಅರಿವಿಲ್ಲದೆ ಕಣ್ಣೀರು ಹರಿಯುತ್ತಿದ್ದರೆ, ನಮ್ಮ ದೇಹ ಬದುಕಿದೆ ಆದರೆ ಮನಸ್ಸು ಸತ್ತಿದೆ ಅಂತ.”

Kannada Love Quotes

“ನಿನ್ನ ಅಗಲಿಕೆಯಿಂದ ಕರಗುತ್ತಿದೆ ನನ್ನ ಕನಸ್ಸು, ಅದರಿಂದಲೇ ದಿನವೂ ಸುಡುತ್ತಿದೆ ನನ್ನ ಮನಸ್ಸು, ತಡೆಯಲಾಗದೆ ನಾ ಬಯಸುತ್ತಿರುವೆ ಎಂದು. ಮುಗಿಯುವುದು ನನ್ನ ಆಯಸ್ಸು.”

Kannada Love Quotes

“ಜೀವನದ ಹಾದಿಯಲ್ಲಿ ಸಿಗುವವರೆಲ್ಲ ಒಳ್ಳೆಯವರೆ ಆಗಬೇಕಂತೇನಿಲ್ಲ , ನಾವ್ ಒಳ್ಳೆಯವರಾದ್ರೆ ನಮ್ ಒಳ್ಳೆತನಕ್ಕೆ ಕೆಟ್ಟವರು ಸಹ ಸ್ವಲ್ಪ ಸಮಯ ಒಳ್ಳೆಯವರಾಗುತ್ತಾರೆ..”

Love Feeling Quotes in Kannada:

1. ನಗಿಸಿದವರು ನಾಲ್ಕು ದಿನ ನೆನಪಿನಲ್ಲಿದ್ದರೆ.. “ನೋಯಿಸಿದವರು. ಜೀವನಪೂರ್ತಿ – ನೆನಪಿನಲ್ಲಿ ಉಳಿಯುತ್ತಾರೆ.”

2. “ಪ್ರತಿಯೊಬ್ಬರ ಕಷ್ಟಕ್ಕೆ ನೀ ಸ್ಪಂದಿಸು, ನಿನ್ನ ಕಷ್ಟಕ್ಕೆ ಖಂಡಿತ ಭಗವಂತ ಸ್ಪಂದಿಸುತ್ತಾನೆ.”

3. “ಕನಸು ಖುಷಿ ಕೊಡುತ್ತೆ ನಿಜವಾಗಿರಲ್ಲ ಬದುಕು ನಿಜವಾಗಿರುತ್ತೆ ಖುಷಿಯಾಗಿರಲ್ಲ.”

4. “ನೋಡ್ ತಮ್ಮಾ…. ತಾಯಿ ಇರುವಷ್ಟು ಕಾಲ ನಾವು ಇರುತ್ತೇವೆ ಆದ್ರೆ, ನಾವು ಇರು ಅಷ್ಟು ಕಾಲ ತಾಯಿ ಇರಲ್ಲ. ಅದಕ್ಕೆ ಅವರು ಇರುವಷ್ಟು ಕಾಲ ಸಂತೋಷದಿಂದ ನೋಡಿಕೊಳ್ಳಿ.”

5. “ಆತ್ಮೀಯತೆ ಅನ್ನುವುದು ಒತ್ತಾಯದಿಂದ ಬರುವಂತದಲ್ಲ,, ಹೃದಯದಿಂದ ಬರುವಂತದ್ದು..”

6. “ಜೀವನ ಎಂದರೆ ಅಭಿನಂದಿಸುವುದಲ್ಲ,,,, ಅನುಭವುಸುವುದು..”

7. “ನೀನಗೆ ಮರ್ಯಾದೆ ಸಿಗದ ಜಗದಲ್ಲಿ ನೀನು ಹಾಕುವ ಚಪ್ಪಲಿಯನ್ನು ಕೂಡ ಬಿಡಬೇಡ..”

8. “ಉಪ್ತಿನಂತಾಗಿ ಹೋಗಿದೆ ಬದುಕು, ಜನರು ಅವರವರ ರುಚಿಗೆ ತಕ್ಕಷ್ಟು ನಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ..”

9. “ಬೇಡವೆಂದ ಸಂಬಂಧಕ್ಕಾಗಿ ಪರದಾಡಬೇಡ …! ಬೇಡವೆಂದು ಬಿಟ್ಟು ಹೋದಮೇಲೆ ಚಿಂತೆ ಮಾಡಿ ಕೊರಗಬೇಡ.”

10. “ನಮ್ಮಿಂದ ದೂರ ಇರಲು ಬಯಸುವವರಿಂದ ಅವರಿಗಿಂತ ಮೊದಲು ನಾವೇ ಹೆಚ್ಚು ಹೆಚ್ಚು ದೂರ ಇದ್ದು ಬಿಡಬೇಕು…”

11. “ಸಿಕ್ಕ ಸಿಕ್ಕವರನ್ನ ಸಿಕ್ಕಾಪಟ್ಟೆ ಇಷ್ಟ ಪಡುವುದಕ್ಕಿಂತ ಇಷ್ಟ ಪಟ್ಟವರನ್ನ ಇಷ್ಟಪಟ್ಟಾದರೂ ಪ್ರೀತಿಸಬೇಕು ಅದೇ ನಿಜವಾದ ಪ್ರೀತಿ..”

12. “ನಮ್ಮ ನಡವಳಿಕೆಯಲ್ಲಿ ಸ್ವಲ್ಪ ವ್ಯತ್ಯಾಸ ಆದ್ರೂ ಏನಾಯ್ತು ಅಂತ ಕೇಳ್ತಾರಲ್ಲ ಅವರೇ ನಮ್ಮವರು…”

13. “ಕೆಲವರನ್ನು ತುಂಬಾ ಎತ್ತರದ ಸ್ಥಾನದಲ್ಲಿ ಇಟ್ಟಿರ್ತಿವಿ ಆದರೆ ಅವರು ನಮ್ಮನ್ನು ತುಂಬಾ ಕೆಳಮಟ್ಟದಲ್ಲೇ ನೋಡುತ್ತಿರುತ್ತಾರೆ…”

14. “ಮನಸ್ಸು ಎನ್ನುವದು ನೀರಿದಂತ್ತೆ, ಹೆಚ್ಚು ಕಲಕಿದರೆ ಏನೂ ಕಾಣುವುದಿಲ್ಲ. ಅದು ಶಾಂತವಾಗಿದ್ದರೆ ಮಾತ್ರ ಎಲ್ಲವು ಸ್ಪಷ್ಟವಾಗಿ ಕಾಣುತ್ತದೆ..”

15. “ಕೆಲವರು ಹಣವಿದೆ ಎಂದು ಮೆರೆಯುತ್ತಾರೆ,, ಇನ್ನು ಕೆಲವರು ಸೌಂದರ್ಯವಿದೆ ಎಂದು ಬೀಗುತ್ತಾರೆ.ಆದರೆ ಮುಂದೊಂದು ದಿನ ತಿಳಿಯುವುದು ಎಲ್ಲದಕ್ಕೂ ಮಿಗಿಲಾದದ್ದು “ಗುಣ” ಎಂದು…”

16. “ಒಂದು ಹೆಣ್ಣಿಗೆ ನಾಲ್ಕು ಗೋಡೆ ಮಧ್ಯೆ ಅಪಮಾನವಾದರೆ ಸಹಿಸಿಕೊಳ್ಳುವಳು, ಅದೇ ನಾಲ್ಕು ಜನಗಳ ಮುಂದೆ ಅವಮಾನವಾದರೆ ತನ್ನ ನಿಜರೂಪ ತೋರಿಸುವಳು.”

17. “ಕೆಲವರು ಸತ್ತನಂತರವು ನಮ್ಮ ಮನಸ್ಸಿನಲ್ಲಿ ನೆನಪಾಗುವಂತೆ ಮಾಡುವುದು,ಅವರ ಒಳ್ಳೆಯ ನಡೆನುಡಿ,ಗುಣ ಮತ್ತು ಮರೆಯದಂತಹ ಮುಗ್ಧ ಸೌಂದರ್ಯ…”

Kannada Love Quotes

“ಬೇಜಾರದಾಗೆಲ್ಲ ಡಿಪಿ Rewove ಮಾಡೋದಲ್ಲ… ಒಂದ್ ಸಾರಿ ಆ ಬೇಜಾರ್ಗೆ ಕಾರಣವಾದ ವ್ಯಕ್ತಿಯನ್ನ ಲೈಫ್ ಯಿಂದ Remove ಮಾಡಿ ನೋಡಿ ಏನಾದ್ರು ಸ್ವಲ್ಪಾ ವ್ಯತ್ಯಾಸ ಆಗಬಹುದು..”

Kannada Love Quotes

“ಒಂದು ಹೆಣ್ಣು ತನ್ನ ನೋವೆಲ್ಲವನ್ನೂ ಇನ್ನೊಬ್ಬರ ಜೊತೆ ಕಣ್ಣೀರಿನ ಮೂಲಕ ತನ್ನ ಮನಸ್ಸಿನಿಂದ ಹೊರ ಹಾಕಿದರೆ ಅವಳು ಎಲ್ಲರಂತೆ ಮಾಮೂಲಿ ಮನುಷ್ಯ, ಎಲ್ಲಾ ನೋವನ್ನು ಮನಸ್ಸಲ್ಲೇ ಬಚ್ಚಿಟ್ಟುಕೊಂಡು ತನ್ನ ದುಃಖವನ್ನು ತಾನೇ ನುಂಗಿ ಬಾಳುತ್ತಿದ್ದರೆ ಅವಳೇ ದೇವತೆ…”

Kannada Love Quotes

“ಜೀವನದಲ್ಲಿ ಎದುರಾಗೋ ಕಷ್ಟಗಳು ನಮ್ಮನ್ನ ಘಾಸಿಗೊಳಿಸೋದಷ್ಟೇ ಅಲ್ಲ ಬದಲಿಗೆ ಗಟ್ಟಿಯಾಗು ಮಾಡುತ್ತವೆ…”

Kannada Quotes About Love:

1. “ನಮ್ಮ ಬಗ್ಗೆ ನಮಗೆ clarity ಇಲ್ಲದೆ ಇರುವಾಗ, ಇನ್ನೂ ಬೇರೆಯವರ purity ಬಗ್ಗೆ ಮಾತನಾಡುವ ಯೋಗ್ಯತೆ ನಮಗೆ ಇಲ್ಲ.”

2. “ಸಹಿಸಿಕೊಂಡು ಇರುವವರೆಗೂ ಮಾತ್ರ ನಮ್ಮವರು… ಒಂದೇ ಒಂದು ಸಾರಿ ತಿರುಗಿಸಿ ಸರಿಯಾಗಿ – ಉತ್ತರ ಕೊಟ್ಟರೆ ನಮ್ಮವರೇ ನಮಗೆ ವೈರಿಗಳು… ಇಷ್ಟೇ ಇವಾಗಿನ ಸಂಬಂಧಗಳು.”

3. “ಒಂದು ಹೆಣ್ಣಿನ ಮನಸ್ಸಿಗೆ ತೀರಾ ಆಘಾತ ” ಆಗುವುದು, ಅವಳ ಆಸೆ, ಕನಸಿಗೆ ತಿಲಾಂಜಲಿ ಬೀಳುವುದು ಯಾವಾಗ ಅಂದ್ರೆ, ಅವಳು ಪ್ರೀತಿಸಿದವ’ ಕೈಕೊಟ್ಟಾಗ, ‘ಇಲ್ಲ ತಂದೆ ಹುಡುಕಿದ ಗಂಡ ಅವಳ ಕೈಬಿಟ್ಟಾಗ..”

4. “ಇಲ್ಲಿ ಮನಸಿಗೆ ಒಪ್ಪಿ ಮದುವೆಯಾದವರಿಗಿಂತ ಪರಿಸ್ಥಿತಿಗೆ ಒಪ್ಪಿ ಮದುವೆಯಾದವರೇ ಜಾಸ್ತಿ..”

5. “ಆರ್ಥಿಕ ಸ್ಥಿತಿ ಎಷ್ಟೇ ಚೆನ್ನಾಗಿದ್ದರೂ ಕೂಡಾ ಜೀವನದ ನಿಜವಾದ ಸಂತೋಷವನ್ನು ಅನುಭವಿಸುವುದಕ್ಕೆ ಮಾನಸಿಕ ಸ್ಥಿತಿ ಚೆನ್ನಾಗಿರುವುದು ಅಷ್ಟೇ ಅವಶ್ಯಕ.”

6. “ನಾವು ಮುಚ್ಚಿಟ್ಟಷ್ಟು ಹೆಚ್ಚಾಗುವುದು ಹಣವಲ್ಲ ಕೇವಲ ಪ್ರೀತಿ ಮಾತ್ರ.”

7. “ಹೆಣ್ಣಿಗೆ ಎಲ್ಲವನ್ನೂ ಕಲಿಯುವುದು ಗೊತ್ತು, ಎಲ್ಲರಿಗೂ ಕಲಿಸುವುದು ಗೊತ್ತು, ಅದೇ ಅವಳಿಗೆ ದೇವರು ಕೊಟ್ಟ ಸಂಪತ್ತು..”

8. “ಜೊತೆಗೂಡೀಆಡಿದ ಮಾತು ಜೊತೆಯಲ್ಲಿ ಕಳೆದ ಸಮಯ ಜೊತೆಸೇರೀ ಕೂಡಿಟ್ಟ ಕನಸು, ಜೊತೆಯಲ್ಲೇ ಬದುಕುವ ಆಸೆ, ಎಲ್ಲವನ್ನೂ ಮರೆತಿರುವೆ ನೀನು,ಆದರೆ ಎಲ್ಲವನ್ನೂ ನೆನೆಯುತ್ತಿರುವ ದಿನವೂ ನಾನು.”

9. “ಹೆತ್ತವರು ತಮ್ಮ ಮಗಳಿಗೆ ಒಳ್ಳೆ ವಿದ್ಯೆ, ಹುದ್ದೆ ಕೊಡಲಿಲ್ಲ ಅಂದ್ರು ಅವಳಿಗೆ ಬದುಕು ಕಷ್ಟ ಅನಿಸಲ್ಲ, ಆದರೆ ಅವಳು ಸೇರುವ ಮನೆ ಸರಿಯಿಲ್ಲ ಅಂದ್ರೆ ಅವಳು ಮರಳಿ ಜೀವಂತ ನಿಮ್ಮ ಬಳಿ ಬರಲ್ಲ..”

10. “ಕೋಪ ಮತ್ತೆ ಬೇಜಾರು ಒಂತರಾ ಒಂದೇ ನಾಣ್ಯದ ಎರಡು ಮುಖಗಳಿದ್ದ ಹಾಗೇ… ವ್ಯತ್ಯಾಸ ಏನಂದ್ರೆ ಕೋಪದಲ್ಲಿದ್ದಾಗ ಸಾವಿರ ಮಾತಾಡಬಹುದು ಆದ್ರೆ ಬೇಜಾರಲ್ಲಿದ್ರೆ ಒಂದೇ, ಒಂದು ಮಾತು ಹೊರಬರೋಲ್ಲ.”

11. “ಹೆಣ್ಣಿನ ಬಣ್ಣ ನೋಡಿ ಪ್ರೀತಿಸಬೇಡಿ ಬುಗುರಿ ತರ ಆಡಿಸುವಳು,ಒಳ್ಳೆ ಮನಸ್ಸು ನೋಡಿ ಪ್ರೀತ್ಸಿ ಮಗು ತರ ಪ್ರೀತಿಸುವಳು.”

12. “ಕೆಲವೊಂದು ಜೀವದ ಜೊತೆ ಮಾತಾಡಿದಾಗ ನನ್ನೊಳಗಿರೋ ನೋವು ನಗುತ್ತೆಂದರೆ… ಆ ಜೀವದ ಮನಸ್ಸು ಎಷ್ಟು ಸುಂದರವಿರಬಹುದು..”

13. “ಓದಿನಿಂದ ಕಲಿತ ಪಾಠಗಳು ಮರತರು ಮರೆಯಬಹುದು ಆದರೆ. ಜೀವನದಲ್ಲಿ ಅನುಭವದಿಂದ ಕಲಿತ ಪಾಠವನ್ನು ಮರೆಯಲು ಸಾಧ್ಯವಿಲ್ಲ.”

14. “ನಿನ್ನ ಯಾರಾದರೂ ಅವಮಾನಿಸಿದರೆ ಹೆದರಬೇಡ, ಹುಚ್ಚು ಜನು ವಜ್ರವನ್ನು ಗಾಜು ಅಂದುಕೊಂಡಿರುತ್ತಾರೆ.”

15. “ಯಾವತ್ತೂ ಕಾಯುತ್ತ ಯೋಚಿಸುತ್ತ ಕಾಲ ಕಳೆಯಬೇಡ, ಏಕೆಂದರೆ ಬದುಕು ಯೋಚೆನೆಗಳಿಗಿಂತಲೂ ವೇಗವಾಗಿ ಸಾಗುತ್ತಿರುತ್ತದೆ.”

16. “ಹೆಣ್ಣಿಗೆ ಪ್ರೀತಿಯಲ್ಲಿ ಕರಗುವುದು ಗೊತ್ತು, ತನ್ನ ಪ್ರೀತಿಯಿಂದ ಬೇರೆಯವರನ್ನು ಕೊರಗುವಂತೆ ಮಾಡುವುದು ಗೊತ್ತು…”

17. “ಹೆಣ್ಣು ಮಕ್ಕಳು ಮೈ ಮೇಲೆ ಎಷ್ಟಿದ್ದರೇನು ಚಿನ್ನ ಮನಸ್ಸಿಗೆ ನೆಮ್ಮದಿ,ಮುಖದಲ್ಲಿ ನಗು ಇಲ್ಲಾಂದ್ರೆ..”

18. “ಜನ ನಿಮ್ಮನ್ನ ಪ್ರೀತಿಸುತ್ತಾರೆ ಅಂತ ಜಾಸ್ತಿ ಒಳ್ಳೆಯವರಾಗಿ ಬದುಕಬೇಡಿ… ಅವರು ನಿಮ್ಮನ್ನ ಪ್ರೀತಿಸುವುದಿಲ್ಲ. ಉಪಯೋಗಿಸಿಕೊಳ್ಳುತ್ತಾರೆ..”

19. “ಮನಸ್ಸಲ್ಲಿ ಅಹಂಕಾರ ಇಟ್ಟುಕೊಂಡು ಮೈತುಂಬಾ ಅಲಂಕಾರ ಮಾಡಿಕೊಂಡರೆ ಏನು ಬಂತು ಪ್ರಯೋಜನ…”

20. “ಬೆಲೆ ಇಲ್ಲದ ಜಾಗದಲ್ಲಿ ನೆಲೆ ಕಾಣಬೇಡಿ; ಪ್ರೀತಿ ಇಲ್ಲದ ಜಾಗದಲ್ಲಿ ಆಶ್ರಯ ಕೇಳಬೇಡಿ…”

Love Breakup Quotes in Kannada:

1. “ನಮ್ಮ ದೇಹಕ್ಕೆ expire date ಯಾವಾಗ ಅಂತ ಆ ದೇವರಿಗೆ ಗೊತ್ತು ಹಾಗೆ ನಮ್ಮ ಆಸೆಗಳಿಗೆ ಫೈರ್ ಹಚ್ಚುವುದು ಹೇಗೆ ಅಂತ ನಮ್ಮ ಜೊತೆ ಪ್ರೀತಿಯ ನಾಟಕ ಆಡುವವರಿಗೆ ಗೊತ್ತು.”

2. “ನಾನ್ ಯಾಕೆ ಮೊದಲು CALL ಮಾಡಬೇಕು ಅಥವಾ MSG ಮಾಡಬೇಕು ಅನ್ನೋದು ಅಹಓ..ಯಾವಾಗ್ಲೂ ನಾನೇ ಯಾಕೆ ಮೊದಲು CALL ಅಥವಾ MSG ಮಾಡಬೇಕು ಅಂತ ಅರಿತುಕೊಳ್ಳೋದು ಸ್ವಾಭಿಮಾನ….. ಎರಡಕ್ಕೂ ತುಂಬಾನೇ – ವ್ಯತ್ಯಾಸ ಇದೆ.”

3. “ಸಂಬಂಧವನ್ನ ಕಡಿದುಕ್ಕೊಳ್ಳೋದು ಕಷ್ಟನೇ ನಿಜ.. ಆದ್ರೆ ನಮ್ಮ ತನವನ್ನೆ ಪ್ರತಿದಿನ ಕೊಲೆಮಾಡೋ ಅಂತ ಸಂಬಂಧಗಳಿಂದ ದೂರ ಆಗೋದೇ ಉತ್ತಮ.”

4. “ಜೀವನ ನಿಮಗೆ ಎರಡನೇ ಅವಕಾಶ ಕೊಡಬಹುದು ಆದ್ರೆ ಜೀವನದಲ್ಲಿ ಬರೋ ಅಂತಾ ವ್ಯಕ್ತಿಗಳು ಪದೇ ಪದೇ ಅಥವಾ ಎರಡನೇ ಅವಕಾಶ ಕೊಡೋಲ್ಲ ಅದಕ್ಕೆ ಹತ್ತಿರ ಇದ್ದಾಗಲೇ ಗೌರವಿಸಿ ಪ್ರೀತಿಸಿ, ಒಂದು ಸಾರಿ ದೂರ ಆದಮೇಲೆ ಏನೇ ಮಾಡಿದರು ಪ್ರಯೋಜನವಿಲ್ಲ.”

5. “ಒಂದು ಹೆಣ್ಣಿಗೆ ಎಷ್ಟೇ ಕಷ್ಟ ಇರಲಿ,, ಯಾರೇ ನೋವುಂಟು ಮಾಡಲಿ, ಎಲ್ಲವನ್ನೂ ಮರೆತು ಅವಳು ಮನಬಿಚ್ಚಿ ನಗುವುದು ತನ್ನ ಮಕ್ಕಳ ಜೊತೆ ಮಗುವಾದಾಗ ಮಾತ್ರ.”

6. “ಮರ್ಯಾದೆ ಎಲ್ಲರಿಗೂ ಕೊಡೋಣ… ಆದ್ರೆ ನಂಬಿಕೆ ಯೋಗ್ಯರ ಮೇಲೆ ಮಾತ್ರ ಇಡೋಣ.”

7. “ಈ ಹೊಟ್ಟೆ ತುಂಬಿದವರಿಗೆ ಊಟ ಕೊಡೋದು,,,ದುಡ್ಡಿನ ಅಮಲಿನಲ್ಲಿ ತೇಲುತ್ತಲಿರೋರಹತ್ರ ಕಷ್ಟ ಹೇಳ್ಕೊಳೋದು… ಎರಡು ಸ್ವಲ್ಪಾ ಒಂದೇ ತರ ಎರಡಕ್ಕೂ ಬೆಲೆ ಸಿಗುಲ್ಲಾ ವ್ಯರ್ಥ ಅಷ್ಟೇ..”

8. “ಎಲ್ಲರ ಬದುಕಿನಲ್ಲಿ ಇರುತ್ತದೆ ಒಂದು ಸುಂದರ ಕಥೆ. ಆದ್ರೆ ಈ ನನ್ನ ಜೀವನ ಸುಂದರ ಆಗಬೇಕು ಅಂದ್ರೆ ನೀವು ಇರಬೇಕು ನನ್ನ ಜೊತೆ..”

9. “ಮೊದಲು ನಾ ಅಷ್ಟು ಅಳೋಕೆ ಸುರು ಮಾಡಿದೆ…..ನೀನು ನಂಗೆ ಒಂದು ಮಾತ್ ಹೇಳ್ತಿದ್ದೆ ಹೀಗೆ ಅಳೋದು ನೋಡಿದ್ರೆ ನಂಗೆ ತಡಿಯೋಕೆ ಆಗ್ತಿಲ್ಲ ಅಂತ,,,,,, ಆದ್ರೆ…..ಈಗ ನೀನೆ ಏಳೇಳು ಜನ್ಮ ಆಗೋವಷ್ಟು ಕಣ್ಣೀರು ಹಾಕಿಸ್ತಿದ್ದೀಯಾ..”

10. “ನನ್ನ ನೈಜ ನೆಲಸಿರುವ ಸ್ಥಾನ, ನೀನೇ ಅದರ ಸುಪ್ರಭ.”

11. “ಲೇ ಹುಡುಗಾ ನೀ ಕೊಟ್ಟ ನೆನಪಿನ ಕಾಲ್ಗೆಜ್ಜೆಯು ನೀರಲ್ಲಿ ನೆನೆದಾಗ ಎಲ್ಲಿ ನಿನಗೆ ನೆಗಡಿ ಯಾಗುವುದೋ ಎಂದು ನೆನೆನೆನೆದು ನಗು ಉಕ್ಕಿ ಬರುತ್ತಿದೆಯಲ್ಲೊ.”

12. “ಅತಿಥಿಗಳು ಮನೆಗೆ ಯೋಗಕ್ಷೇಮ ಕೇಳಲು ಬರಬೇಕೆ ಹೊರತು ಸಮಸ್ಯೆಗಳನ್ನು ಬಗೆಹರಿಸಲು ಬರಬಾರದು.”

13. “ಸಾಧಿಸುವ ಮುನ್ನ ಅಸಹ್ಯವಾಗಿ ನೋಡುತ್ತಾರೆ, ಸಾಧಿಸಿದ ನಂತರ ವಿಶೇಷವಾಗಿ ನೋಡುತ್ತಾರೆ.”

14. “ಹಾಗೇ ಇರಲಿ ನೋಟ ನನಗಂತು ಮುಂಗಾರುಮಳೆಯಲಿ ಬೆಳೆದ ಭತ್ತದ ತೆನೆ ನೋಡಿದಷ್ಟೆ ಖುಷಿಯಾಗುತ್ತಿದೆ.”

15. “ವೇಶ್ಯ ತನ್ನ ಆತ್ಮಕಥೆಯ ಪುಟದಲ್ಲಿ ಬರೆದ ಮೊದಲ ಸಾಲುಗಳು “,,”ಮೈ ಮಾರಿಕೊಂಡೇ ಆದರೆ ಮನಸ್ಸಲ.”

16. “ತಪ್ಪು ಮಾಡಿದ್ರೂ ಅಂತ ಬಿಟ್ಟೋಗೊದಲ್ಲಾ ಪ್ರೀತಿ, ತಿದ್ದಿ ಜೋತೆಗಿರೋದು ನಿಜವಾದ ಪ್ರೀತಿ.”

17. “ಮಾಡುತಿರು ನನ್ನ ಹೃದಯಕೆ ನಿನ್ನ ಪ್ರೀತಿಯ ಸಂದಾಯ,,, ತಪ್ಪದೆ ಕಟ್ಟುವೆನು ನಾನು ನಿನಗೆ ಮುತ್ತುಗಳ ಕಂದಾಯ..”

18. “ಮೈಸೂರ್ ಪಾಕು ಅವಳ ಗಲ್ಲ ಕಚ್ಚಿ ತಿನ್ನೇಕು ಅನ್ನುತ್ತೆ ನೋಡಿದಾಗೆಲ್ಲ.”

19. “ಎಷ್ಟು ವರ್ಷ ಜೊತೆಗಿದ್ದರೇನು,,,, ಅಂತರಾಳವ ಅರಿಯದೆ ಮೇಲೆ.”

20. “ನೀನು ಕೊಡುವ ಆ ಮುತ್ತೆ? ” ನನ್ನ ಫೆವರಿಟ್ ಸ್ವೀಟ್ಸ್..”

Fake Love Quotes in Kannada:

1. “ಮದುವೆಯಾಗಿ ಬಂದ ಹೆಣ್ಣಿನ ಬಳಿ ತವರು ಮನೆಯಿಂದ ಏನೇನು ತಂದೆ? ಎಂದು ಕೇಳುವವರೇ ಹೆಚ್ಚು. ಆದರೆ ಯಾರು ಕೂಡ, ಏನೇನು ಬಿಟ್ಟು ಬಂದೆ ಎಂದು , ವಿಚಾರಿಸುವುದಿಲ್ಲ.”

2. “ಕೆಲವೊಬ್ಬರು ಜೀವನವನ್ನು ಕಲಿಸುತ್ತಾರೆ. ಆದ್ರೆ ಜೀವನದ ಉದ್ದಕ್ಕೂ ಇರುವುದಿಲ್ಲ.”

3. “ನಮಗೆ ರಾಯಲ್ ಆಗಿ ಇರೋದು ಗೊತ್ತು, ಲೋಕಲ್ ಆಗಿ ಇರೋದು ಗೊತ್ತು ಆದ್ರೆ ನಾವು ಯಾವಾಗೂ ಸಿಂಪಲ್ಲಾಗಿ ಇರೋಕೆ ಇಷ್ಟಪಡ್ತೀವಿ.”

4. “ಮನಸ್ಸು ಬೇಸರದಲ್ಲಿದ್ದಾಗ ಬೇಕಾಗಿರುವುದು ಕೆಲಸಕ್ಕೆ ಬಾರದ ಭೋಧನೆಯಲ್ಲ ನೋವಿಗೆ ಸ್ಪಂದಿಸುವ ಮನಸ್ಸು.”

5. “ಬಂಜೆಯೊಬ್ಬಳು ಅಡುಗೆ ಮಾಡಿ, ಭಿಕ್ಷುಕನಿಗಾಗಿ ಕಾದು ಕುಳಿತಿದ್ದಳು. ಕಾರಣ ಅವನು ಕೂಗುವ ‘ಅಮ್ಮಾ’ ಎಂಬ ಶಬ್ದ ಕೇಳಲು.”

6. “ನಾವಿರುವ ಜಾಗಕ್ಕೆ ಇನ್ಯಾರೋ ಬಂದಿದ್ದಾರೆ ಎಂದು ತಿಳಿದಾಗ ನಮ್ಮ ಪಾಡಿಗೆ ನಾವಿರಬೇಕು.”

7. “ನೋಡಿದಾಕ್ಷಣ ಗೊತ್ತಾಗೋಕೆ, ಮಾತಾಡಿದಾಕ್ಷಣ ಅರ್ಥವಾಗೋಕೆ ಸ್ತ್ರೀ ವಸ್ತುವಲ್ಲ. ಹೆಣ್ಣಿಗೂ ಕೂಡ ಮನಸ್ಸಿದೆ, ಸ್ವಾತಂತ್ರ್ಯಕೊಡಿ. ಬುದ್ದಿ ಇದೆ, ಅಂದುಕೊಂಡಿದನ್ನ ಮಾಡಲು ಬಿಡಿ. ಅವಳಿಗೂ ಹೃದಯವಿದೆ, ಪ್ರೀತಿಮಾಡೋಕೆ ಬಿಡಿ. ಪ್ರಾಣವಿದೆ, ಜೀವನ ಮಾಡೋಕೆ ಬಿಡಿ.”

8. “ಹೆಣ್ಣಿನ ಭಾವನೆಗಳಿಗೆ ಯಾರು ಬೆಲೆ ಕೊಡದಿದ್ದರು ಯಾರು ಪ್ರೀತಿಸದಿದ್ದರು ಸಹಿಸುವಳು ಆದರೇ ತನ್ನ ಪತಿಯು ಅವಳಿಗೆ ಬೆಲೆ ಕೊಡದೇ ಅವಳನ್ನು ಪ್ರೀತಿಸದಿದ್ದರೆ ನರಕ ಯಾತನೆ ಅನುಬವಿಸುವಳು.”

9. “ಭೂಮಿಗೆ ಭಾರ ಆದರೂ ಪರವಾಗಿಲ್ಲ ಆದರೆ ಬೇರೆಯವರ ಮನಸ್ಸಿಗೆ ಎಂದು ಭಾರ ಆಗಬಾರದು ಜೀವನಕ್ಕೆ ಬೆಲೆನೆ ಇರಲ್ಲ.”

10. “ನಿನ್ನ ಮಾತಿಗೆ ಎಲ್ಲಿ ಬೆಲೆ ಇದೆಯೋ ಅಲ್ಲಿ ಮಾತನಾಡು… ಸುಮ್ಮ ಸುಮ್ಮನೇ ಎಲ್ಲೆಲ್ಲೂ ಮಾತಾನಾಡಿ ನಿಮ್ಮ ಮತ್ತು ನಿಮ್ಮ ಮಾತಿನ ಬೆಲೆಯನ್ನು ಕಳೆದು ಕೊಳ್ಳಬೇಡಿ.”

11. “ಬರೀ ಕಣ್ಣಿನಿಂದ ನೋಡಿದ್ರೆ ಎಲ್ಲಾರಲ್ಲು ದ್ವೇಷ ಕಾಣುತ್ತೆ ಒಂದು ಸಲ ಹೃದಯ ದಿಂದ ನೋಡು ಇಡಿ ಜಗತ್ತೆ ಸುಂದರವಾಗಿ ಕಾಣುತ್ತೆ.”

12. “ಬದುಕು ಎಂದರೆ ನದಿಯ ಹಾಗೆ ಕೊನೆ ಇಲ್ಲದ ಪಯಣ… ಯಾವುದೂ ನಮ್ಮ ಜೊತೆ ಶಾಶ್ವತವಾಗಿ ಉಳಿಯುವುದಿಲ್ಲ… ಉಳಿಯುವುದು ಒಂದೇ.. ಹೃದಯ ತಟ್ಟಿದ ನೆನಪುಗಳು ಮಾತ್ರ.”

13. “ಒಳ್ಳೆಯ ಪುಸ್ತಕಗಳು, ಒಳ್ಳೆಯ ವ್ಯಕ್ತಿಗಳು, ಸುಲಭವಾಗಿ ಅರ್ಥವಾಗುವುದಿಲ್ಲ. ಸರಿಯಾಗಿ ಓದಬೇಕಾಗುತ್ತದೆ.”

14. “ಹೆಣ್ಣಿನ ಸೌಂದರ್ಯ ನೋಡೋಕೆ ಕಣ್ಣಿರಬೇಕು ನಿಜ ಆದರೆ,,, ಅಂತರಂಗದ ಸೌಂದರ್ಯ ನೋಡಕ್ಕೆ ಸ್ವಚ್ಛ ಮನಸ್ಸಿರಲೇಬೇಕು.”

15. “ಅದೃಷ್ಟ ಅಂದ್ರೆ ಏನ್ ಗೊತ್ತಾ,,,, ನಾವು ಯಾರನ್ನ ಪ್ರೀತಿ ಮಾಡ್ತಿವೋ, ಅವರು ನಮ್ಮನ್ನ ನಮಗಿಂತ ಎರಡು ಪಟ್ಟು ಹೆಚ್ಚಾಗಿ ಪ್ರೀತಿಸುವುದು.”

16. “ದಿನವೆಲ್ಲಾ ನಿನ್ನ ಬಗ್ಗೆ ಯೋಚಿಸುವ ಒಬ್ಬ ಹುಚ್ಚಿ ಇರ್ತಾಳೆ, ಈಗ ಅದರ ಜೊತೆ ಸ್ವಲ್ಪ ಹೊತ್ತು ಮಾತಾಡಬೇಕು, ಇಲ್ಲ ಅಂದ್ರೆ ಅಳ್ತಾಳೆ, ಅನ್ನೋ ಆಲೋಚನೆ ಏನಾದ್ರು, ಇದ್ದೀಯ ನಿನಗೆ.”

17. “ಪ್ರೀತಿಗೆ ವಯಸ್ಸು ಹಣ ಮುಖ್ಯವಲ್ಲಾ ಒಳ್ಳೆಯ ಮನಸ್ಸು ಮುಖ್ಯ.”

18. “ತಪ್ಪು ಮಾಡಿದ್ರೂ ಅಂತ ಬಿಟ್ಟೋಗೊದಲ್ಲಾ ಪ್ರೀತಿ, ತಿದ್ದಿ ಜೋತೆಗಿರೋದು ನಿಜವಾದ ಪ್ರೀತಿ.”

19. “ಗುಣವಂತನಾದ ಗಂಡನ ಜೊತೆ ಗುಡಿಸಲಿನಲ್ಲಿ ಇರಬಹುದು,,, ಆದರೆ ಅರ್ಥ ಮಾಡಿಕೊಳ್ಳಲಾರದ ಗಂಡನ ಜೊತೆ ಅರಮನೆಯಲ್ಲಿ ಕೂಡ ಇರಲು ಸಾಧ್ಯವಿಲ್ಲ.”

20. “ಕಹಿಯಾದ ಸತ್ಯ..ತಪ್ಪುಗಳು ಸೊಸೆ ಮತ್ತು ಮಗಳು ಇಬ್ಬರಿಂದ ಆಗುತ್ತವೆ ಮಗಳು ತಪ್ಪುಗಳು ಮುಚ್ಚಿಡಲಾಗುತ್ತದೆ ಸೊಸೆಯ ತಪ್ಪುಗಳನ್ನು ಪ್ರಿಂಟ್ ಮಾಡಿ ಎಲ್ಲರಿಗೂ ಹಂಚಲಾಗುತ್ತದೆ .”

Kannada Love Quotes Text:

1. “ಎರಡು ಪುಟ್ಟ ಹೃದಯಗಳು ಚನ್ನಾಗಿ ಇರೋದನ್ನಾ ಕಂಡರೇ ಖುಷಿ ಪಡಬೇಕೆ ಹೋರತ್ತು,,, ಬೆಂಕಿ ಹಚೂ ಕೆಲಸಮಾಡಬೇಡಿ..”

2. “ಪರಿಸ್ಥಿತಿ ಏನೇ ಆಗಲಿ ಸಂದರ್ಭ ಯಾವುದೇ ಇರಲಿ ಸಮಸ್ಯೆ ಹೇಗೆ ಇರಲಿ ಜೀವ ಹೋಗೊವರೆಗು ಕೈಬಿಡುವುದಿಲ್ಲ ಎಂಬ ನಂಬಿಕೆ ಭರವಸೆ ಇದ್ದರೆ ಪ್ರೀತಿ ಮಾಡಿ..”

3. “ಕೆಲವು ಸ್ನೇಹಿತರು ಗಳು ಕೇವಲ ಸ್ನೇಹಿತರಾಗಿ ಇರುವುದಿಲ್ಲ, ಒಡಹುಟ್ಟಿದವರಿಗಿಂತ ಹೆಚ್ಚಿನ ಬಾಂಧವ್ಯ ಹೊಂದಿರುತ್ತಾರೆ..”

4. “ನಿನ್ನ ಮೇಲೆ ಪ್ರೀತಿ ಹೇಗೆ ಆಯಿತು ಗೊತ್ತಿಲ್ಲ,,, ಆದ್ರೆ ಈ ಪ್ರೀತಿಯ ಹುಚ್ಚು ಹಿಡಿಸಿದ ನಿನ್ನ ಯಾವತ್ತೂ ಮರೆಯೋಲ್ಲ.”

5. “ನಿನ್ನ ಯಾವಾಗ ನೋಡ್ತಿನೋ,, ನಿನ್ ಜೊತೆ ಯಾವಾಗ ಮಾತಾಡ್ತೀನೋ,, ನಿನ್ನ ಯಾವಾಗ ಮುದ್ದಾಡ್ತೀನೋ,, ಅಂತ ಕ್ಷಣ ಕ್ಷಣಕ್ಕು ಈ ಹೃದಯ ಒದ್ದಾಡುತ್ತೆ ಚಿನ್ನಿ.”

6. “ಬದುಕೆಂಬ ಪಯಣದಲ್ಲಿ ಖುಷಿಯಾಗಿ ಸಿಕ್ಕಿದ್ದು ನೀನು,,, ನಗುವನ್ನೇ ಮರೆತಿದ್ದ ನನಗೆ ನಗಿಸಿದ್ದು ನೀನು,,, ಯಾರಲ್ಲೂ ಸಿಗದಷ್ಟು ಆತ್ಮೀಯ ಬಾಂಧವ್ಯ ಕೊಟ್ಟಿದ್ದು ನೀನು,,, ಇಷ್ಟೆಲ್ಲ ನನಗೆ ಪರಿಚಯಿಸಿದ ನೀನು ಅಂದ್ರೆ ನನಗೆ ತುಂಬಾ ಇಷ್ಟ.”

7. “ಕೆಲವು ಸ್ನೇಹಿತರು ಗಳು ಕೇವಲ ಸ್ನೇಹಿತರಾಗಿರುವುದಿಲ್ಲ,,, ಒಡಹುಟ್ಟಿದವರಿಗಿಂತ ಹೆಚ್ಚಿನ ಬಾಂಧವ್ಯ ಹೊಂದಿರುತ್ತಾರೆ.”

8. “ಮಾತು ಮನಸ್ಸುಗಳನ್ನು ಒಂದು ಗೂಡಿಸಬೇಕೆ ಹೊರತು ಓಡೆಯಬಾರದು…”

9. “ನನ್ನ ಪ್ರೇಮದ ಕಥೆಯ ಹೊರಗಡೆ ನೀನೇ ಅದರ ಅದೃಷ್ಟ.”

10. “ನನ್ನ ಜೀವಕ್ಕೆ…ಜೀವಾ ಹಾಗಿರೋ ನನ್ನ…ಮುದ್ದು ಜೀವಾ ಕಣೇ ನೀನು.”

11. “ಮದುವೆ ಅನ್ನೋದು ಜಗತ್ತಿಗೆ ಸಾಕ್ಷಿ ಆದರೆ,,,, ಪ್ರೀತಿ ಅನ್ನೋದು ನಮ್ಮಿಬ್ಬ ಮನಸಿಗೆ ಸಾಕ್ಷಿ.”

12. “ಪ್ರೀತ್ಸೋರ ಹೆಸರು ಹೃದಯದಲ್ಲಿದ್ರೆ ಸಾಕಾಗಲ್ಲ,,, ಹಣೆಯಲ್ಲೂ ಆ ದೇವರು ಬರೆದಿರಬೇಕು.”

13. “ಸೃಷ್ಟಿಯಲ್ಲಿ ಮಧುರವಾದದ್ದು “ಪ್ರೀತಿ”, ಪ್ರೀತಿಯಲ್ಲಿ ಮಧುರವಾದದ್ದು ಮುತ್ತು(Kiss).”

14. “ಯಾವುದೇ ಹುಡುಗ ಒಂದು ಹುಡುಗಿಯ ಮುಂದೆ ತನ್ನ ತುಂಟತನ ತೋರಿಸ್ತಾನೆ ಅಂತ ಅಂದ್ರೆ ಆ ಹುಡುಗ ಹುಡುಗಿಯನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತಾನೆ ಅಂತ ಅರ್ಥ.”

15. “ಪ್ರೀತಿಸುವುದಿದ್ದರೆ ಇವತ್ತೇ ಕೊನೆಯ ದಿನವೆಂದು ಪ್ರೀತಿಸಿ ಯಾಕೆಂದರೆ ನಾಳೆ ಎಂಬುವುದು ನಮ್ಮದಲ್ಲ.”

16. “ನನ್ನ ಮನದಲಿ ಶುರುವಾಗಿದೆ ಪ್ರೀತಿಯ ದರಬಾರು ಇದಕೆಲ್ಲ ಕಾರಣ ನಿನ್ನ ಆ ನಗುವಿನ ಕಾರುಬಾರು.”

17. “ಪ್ರೀತಿ ಹೇಗಿರಬೇಕಂದ್ರೆ ಯಮನು ಕೂಡಾ ಒಂದು ಕ್ಷಣ ಯೋಚಿಸಬೇಕು ಹೇಗಪ್ಪಾ ಇವರನ್ನ ದೂರ ಮಾಡೋದು ಅಂತಾ.”

18. “ನಾನು ಯಾವತ್ತಾದ್ರೂ ನಿನ್ನ ಮೇಲೆ ಕೋಪ ಮಾಡಿಕೊಂಡು ನಿನ್ನನ್ನ ಬೈದುಬಿಟ್ಟರೆ, ನೀನು ನೋವು ಪಡಬೇಡ; ನಾನು ಸ್ವಲ್ಪ ಕೋಪ ಮಾಡಿಕೊಳ್ತಿನಿ ಆದರೆ,…ಅನಂತರ ಅದಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತೀನಿ.”

19. “ಮೇಲ್ನೋಟದ ನಕಲಿ ಸೌಂದರ್ಯವು ಸವಿಯ ನೀಡುವುದು ನಯನಕ್ಕೆ.. ಅಂತರಾಳದ ಉತ್ತಮ ಸೌಂದರ್ಯವು ಕುರೂಪಿಯಾದರು ಹಿತಬಯಸುವುದು ಮನಸ್ಸಿಗೆ.”

20. “ಈ ಮನಸ್ಸು ಮೊದಲು ಇಷ್ಟ ಪಟ್ಟಿದ್ದು ನಿನ್ನನ್ನೆ,,, ಮೊದಲು ಪ್ರೀತಿ ಇದ್ದು ನಿನ್ನನ್ನೆ,,, ಇವಾಗ ಪ್ರೀತಿ ಮಾಡ್ತಾ ಇರೋದು ನಿನ್ನನ್ನೆ,,, ಮುಂದೆ ಪ್ರೀತಿ ಮಾಡೊಡು ನಿನ್ನನ್ನೆ,,,, ಯಾವತ್ತು ಈ ಮನಸ್ಸು ನಿನ್ನ, ಪ್ರೀತಿ ಮಾಡೋದನ್ನ ನಿಲ್ಲಿಸುತ್ತೊ, ಆವತ್ತೆ ಈ ಉಸಿರು ಕೂಡ ನಿಲ್ಲತ್ತೆ.”

Love Quotes in Kannada Text with Image:

1. “ಒಬ್ಬಳು ಒಳ್ಳೆಯ ಗೆಳತಿ ಸಾವಿರಾರು ಪ್ರೇಯಸಿಯರಿಗೆ ಸಮ.”

2. “ನಾನು ನಿನ್ನಿಂದ ಹೆಚ್ಚಿಗೆ ಎನು ಕೇಳಲ್ಲ,,, ಸ್ವಲ್ಪ ಪ್ರೀತಿ, ಸ್ವಲ್ಪ ಸಮಯ ನೀಡಿದರೆ ಸಾಕು ಮುದ್ದು.”

3. “ಲೇ ಚಿನ್ನ,, ಅಸೆ ಪಟ್ಟು ತಗೊಂಡಿರೋ ಮೊಬೈಲ್ ನೇ 5 ನಿಮಿಷ ಬಿಟ್ಟಿರಲ್ಲ,,,ಅಂಥದ್ರಲ್ಲಿ ಮನಸಾರೆ ಪ್ರೀತಿಸಿರೋ ನಿನ್ನಾ ಬಿಟ್ಟು ಇರ್ತಿನಾ ಚಿನ್ನು.”

4. “ಮನಸುಗಳು ಹೊಡೆದು ಹೋದ್ರೆ ದೇಹದ ಮೇಲೆ ಅಸೆ ಬರೋಲ್ಲ,,, ದೇಹ ಹೊಡೆದು ಹೋಗಿದ್ರು ಮನಸು ಮನಸು ಒಂದಾಗಿ ಇರ್ತವೆ ಕೊನೆಗೆ ಪ್ರೀತಿ ಒಂದೇ ಮುಖ್ಯ ದೇಹ ಅಲ್ಲ.”

5. “ಹೃದಯ ನಂದೇ ಆದ್ರೂ ಅದ್ರಲ್ಲಿರೋ ನೆನಪುಗಳು ಮಾತ್ರ ಬೇರೆಯವರದ್ದೇ.”

6. “ಒಂದೊಳ್ಳೆ ಸ್ನೇಹಾನಾ ಪ್ರೀತಿ ಅನ್ಕೊಂಡು ಸಂಬಂಧ ಹಾಳು ಮಾಡಿಕೊಳ್ಳಬೇಡಿ.”

7. “ಬದುಕು ಪ್ರತಿ ದಿನ ಪ್ರತಿ ಕ್ಷಣ ಏನೆಲ್ಲಾ ಪಾಠ ಕಳ್ಸಿದ್ರು,,, ಯಾರನ್ನ ನಂಬಬೇಕು ಯಾರನ್ನ ನಂಬಬಾರದು ಅನ್ನೋ ಪಾಠ ಮಾತ್ರ ಎಷ್ಟೇ ಪ್ರಯತ್ನ ಪಟ್ರು ಅರ್ಥನೇ ಆಗ್ತಾ ಇಲ್ಲ ಇನ್ನು.”

8. “ನಿನ್ನ ನಗುವನ್ನೇ ಕೊoದಿರೋರಿಗೋಸ್ಕರ ನೀನ್ ಅಳೋದ್ರಲ್ಲಿ ಅರ್ಥ ಇಲ್ಲಾ..”

9. “ಮನಸ್ಸಲ್ಲಿರೋ ಕೆಲವಂದು ವಿಷಯ ಹೇಳೋದಿಕ್ಕೆ ಧೈರ್ಯ ಬೇಕು.”

10. “ಹಠಕ್ಕೆ ಬಿದ್ದು ಗೆಲ್ಲೋದಕಿಂತ ಪ್ರೀತಿಯಿಂದ ಗೆಲ್ಲೋದು ಒಳ್ಳೆಯದು.”

11. “ತಿಳಿದುಕೋ… ಪ್ರತಿಯೊಬ್ಬ ವಕ್ತಿಯ ಜೀವನದಲ್ಲಿ ಒಬ್ಬರು ‘ವರವಾಗಿ’ ಬಂದರೆ, ಇನ್ನೊಬ್ಬರು ‘ಪಾಠವಾಗಿ’ ಬರುತ್ತಾರೆ.”

12. “ಕೆಲವರು ಏರೋದ್ರಲ್ಲೇ ಖುಷಿಂದ ಇರ್ತಾರೆ ಅಲ್ವಾ.”

13. “ಕಲ್ಪನೆಯಲ್ಲೂ ಅವನೆಷ್ಟು ಚಂದ ಕೈಗೇ ಸಿಗದಷ್ಟು ವರ್ಣಿಸಲಾಗದಷ್ಟು.”

14. “ಇದ್ದಾಗ ಸಹಾಯಕ್ಕೆ ಬಾರದೇ ಇರುವವರು ಸತ್ತಮೇಲೆ ಬರ್ತಾರೆ ಏನ್ ಜನನೋ ಗುರು.”

15. “ಅರಿಯದೇ ಹೋದ ಅವನು ನನ್ನ ಮನ ನಾ ಅರೆತರು ಕಾದಿದೆ ಅವನ ನೆನಪು.”

16. “ಹೇ ನೆನಪುಗಳೇ ಕ್ಷಣ ಕ್ಷಣಕ್ಕೂ ಕೊಲ್ಲದಿರಿ.”

17. “ಕನಸಿನೊಡತಿಯ ಹುಡುಕಾಟದಲಿ ಮುಂದುವರೆದಿದೆ ಅಲೆದಾಟ,, ಕನಸಲಿ ಕಾಡುತಿದೆ ಅವಳ ಮುಂಗುರುಳ ಮರೆಯ ಜುಮುಕಿಯ ರಾರಾಟ,, ಪದೇ ಪದೇ ನನ್ನ ನಿದ್ದೆಗೆಡುಸುತಿದೆ ಅವಳ ಕುಡಿಹುಬ್ಬಿನಲ್ಲೇ ಕೆಣಕುವ ನೋಟ.”

18. “ಮುಖವಾಡ ಹಾಕೊಂಡಿರೋ ಜನರಿಗಿಂತ,, ರಾತ್ರಿ ಕನಸಲ್ಲಿ ಬರುವ ದೆವ್ವಗಳೇ ಎಷ್ಟೋ ವಾಸಿ.”

19. “ಕೇಳು ನನ್ನೆದೆಯ ಪ್ರತಿ ಬಡಿತವು ನಿನಗಾಗಿ,, ನಿನ್ನ ಪ್ರೀತಿಗಾಗಿ.”

20. “ಅವನ ಬಗ್ಗೆ ಎಲ್ಲವನ್ನು ಅರಿತೇ ಆದರೆ ಮೋಸವನ್ನು ಅರಿಯದೇ ಹೋದೆ.”

Kannada Love Quotes for WhatsApp:

1. “ಯಾರ್ ನಮ್ ಜೊತೆ ನಿಯತ್ತಾಗಿ ಇರ್ತಾರೋ,, ಯಾರ್ ನಿಯತ್ತಾಗಿ ಇರೋ ಹಾಗೆ ನಾಟಕ ಮಾಡ್ತಾರೋ ಅಂತ ಕಂಡು ಹಿಡಿಯೋದ್ರಲ್ಲೇ ನಮ್ ಜೀವನ ಮುಗಿದುಹೋಗುತ್ತೆ.”

2.”ನೀನು ನನ್ನ ಪ್ರೇಮದ ಪುಷ್ಪ, ನನ್ನ ಜೀವನದ ವನ.”

3. “ಪ್ರೇಮದಂತರಂಗದೊಳಗಿನ ಅವಳೆಂಬ ಭಾವ ನನ್ನ ಮನದಿ ಮಡಿಚಿಟ್ಟ ಕಲ್ಪನೆಯ ಸಾಲು.”

4. “ಕಂಡ ಕನಸೇ ಬೇರೆ, ಸಾಗುತ್ತಿರುವ ದಾರಿನೇ ಬೇರೆ.”

5. “ಹೃದಯ ಕಲರವದಿ ಕಲ್ಪನೆಯೂಳು ಅವಿತು ಕುಳಿತು ಕಾಣದೆ ನನ್ನಲ್ಲೆ ಬೆರೆತ ಕಾವ್ಯಗಳೆಲ್ಲ ಕಾಲ್ನಡಿಗೆಯ್ಲಲಿ ಹೊರಟಂತಿವೆ ಇವಳ ಕಾಲ್ಗೆಜ್ಜೆಯ ಸದ್ದಿನ ಪದಗಳ ಸಾಲಿಗೆ.”

6. “ನನ್ನ ಪ್ರೀತ್ಸೋರಿಗೆ ನನ್ನ Care ಮಾಡೋರಿಗಷ್ಟೇ ನಾನ್ ಕೇರ್ ಮಾಡೋದು ನನ್ Life ನನ್ನಿಷ್ಟ ಗುರು.”

7. “ನನ್ನ ನೋವಿಗೆ, ಕಣ್ಣೀರಿಗೆ ನಾನೇ ಕರಣ ಅನ್ಸುತ್ತೆ ಯಾಕಂದ್ರೆ,, ಪ್ರೀತಿಯಲ್ಲಿ ನನ್ನದೇ ಆಯ್ಕೆ ತಪ್ಪಿತ್ತು.”

8. “ನಾ ಬಯಸಿದ ಪ್ರೀತಿ ನನ್ನಿಂದ ದೂರ ಸರಿದಿದೆ ನಾ ಬಯಸದ ಪ್ರೀತಿ ನನ್ನ ಬಳಿ ಬಂದು ನಿಂತಿದೆ..”

9. “ಪ್ರತಿಯೊಂದು ಕನಸಲ್ಲೂ ನೀನೇ ಇರುವಾಗ ಬೇರೆ ಕನಸ್ಸಿಗೆ ಜಾಗ ಎಲ್ಲಿದೆ..”

10. “ಸೀರೆ ಊಟ್ಟೊರೆಲ್ಲ ಒಳ್ಳೆಯವರಾಗಿರಲ್ಲ,,ಜೀನ್ಸ್ ಹಾಕಿರೋರೆಲ್ಲ ಕೆಟ್ಟೋರಾಗಿರಲ್ಲ,, ಗುಣ ಅನ್ನೋದು ಹಾಕಿರೋ ಬಟ್ಟೇಲಿರಲ್ಲ ನಡೆದುಕೊಳ್ಳುವ ರೀತಿಲಿ ಇರುತ್ತೆ.”

11. “ಇರುಳ ಪಯಣವದು ನನ್ನೊಳಗೆ ಎದೆ ಬಡಿತದ ದಾರಿಯು ನಿನ್ನೆಡೆಗೆ ನಾ ನಿನ್ನ ಹೆಜ್ಜೆಯ ನೋಡುತಲಿ ನಿನ್ನ ನೆನಪ ನೆನೆಯುತ ಕುಳಿತಿಹೆನು ಕಾಲ್ಗೆಜ್ಜೆ ಸಪ್ಪಳ ಕೇಳುತಲಿ ಸಿಹಿ ಕನಸೊಂದ ನಾ ಹೆಣೆಯುತಲಿ.”

12. “ಭಾವಶರಾದಿಯ ಪರದೆಯ ಮರೆಯಲಿ ನಾಚುತ ನಿಂತಿಹ ಸಖಿಯ ಮೈಮಾಟದ ತಳುಕು ಬಳುಕಿನ ವಯ್ಯಾರದ ಚೆಲುವೆ ಶೃಂಗಾರ ಕಾವ್ಯಗಳಲ್ಲಿ ವರ್ಣಿಸಿ ಬರೆದಿಹ ಕವಿತೆಗೆ ಸ್ಫೂರ್ತಿಯ ಸೆಲೇನಿನಾಗಿರಲು.”

13. “ಮಂದಿರವ ಕಟ್ಟ ಹೊರಟಿಹರು ಜಗನ್ಮಾತೆಯ ಪ್ರತಿರೂಪಕೆ ರಕ್ಷಣೆ ಇಲ್ಲದ ರಾಮ ರಾಜ್ಯದಲ್ಲಿ,,ಮನುಷ್ಯತ್ವ ಮರೆತು ಮೆರೆದಿಹರು ರಾಕ್ಸಸರು ಸೀತೆಯ ರಕ್ಷೆಣೆಗೆ ಶ್ರೀರಾಮ ಬರಲಿಲ್ಲ ಶ್ರೀಕೃಷ್ಣ ಅವತರಿಸಲಿಲ್ಲ ಮಸೀದಿ ಮಂದಿರಗಳ ನಡುವೆ ಅವಳ ಉಸಿರು ನಿಲ್ಲಲಿಲ್ಲ.”

14. “ಮಾತು ಬಾರದೆ ಇರಭವುದು ಇವುಗಳ ಪ್ರೀತಿಯಲ್ಲಿ ಯಾವುದೇ ಮೋಸ ಕಪಟ ಇರುವುದಿಲ್ಲ.”

15. “ನೂರು ತಿರುವುಗಳ ಬದುಕಿನ ದಾರಿಗೆ ಜೊತೆಯಾಗುವವರು ಯಾರೋ ಕೊನೆಗೇ.”

16. “ನಿಮ್ಮಿಂದ ಯಾರದರೂ ಖುಷಿಂದ ಇರ್ತಾರೆ ಅಂದ್ರೆ ಅವರಿಗೋಸ್ಕರ ಸ್ವಲ್ಪ ಟೈಮ್ ಕೊಡಿ.”

17. “ನೋವಿನ ಬೆನ್ನಲ್ಲೇ ನಗು ಇರುತ್ತೆ ಅನ್ನೋದನ್ನ ಮರೀಬೇಡ.”

18. “ಕೆಲವು ಸಲ ಜವಾಬ್ದಾರಿಗಳು ವಯಸ್ಸನ್ನು ಮೀರಿ ನಿಲ್ಲಿಸುತ್ತವೆ.”

19. “ಸ್ವಪ್ನ ಸುಂದರಿ ಅವಳು ಸ್ವಪ್ನದಂತೆ ಕಾಡುಹಳು ಮನದ ಕವಿತೆಯಲಿ ಮರೆಯಾಗಿಹಳು ನನ್ನ ಕಲ್ಪನೆಯ ಕಥಯಲಿ ಭವಾನ್ವೇಷಿಣಿಯಾಗಿಹಳು.”

20. “ಹೆಚ್ಚು ನೋವು ಅನುಭವಿಸಿದವರು ಅವರು ಯಾರೊಂದಿಗೂ ಬೆರೆಯಲು ಇಷ್ಟ ಪಡೋದಿಲ್ಲ.”

21. “ನೀನು ನನ್ನ ಜೀವನದ ಚಿರಕಾಲದ ಸಹಾಯಕ, ನನ್ನ ಹೃದಯದ ಆಸರೆ.”

22. “ನನ್ನ ಪ್ರೇಮದ ಕಥೆಯ ಹೊರಗಡೆ ನೀನೇ ಅದರ ಅದೃಷ್ಟ.”

23. “ಕುಟುಂಬ ಪ್ರೇಮ ಸೃಷ್ಟಿಸುವ ಮಹಾಕಾವ್ಯವೇನೆಂದರೆ ಅದು ಹಂಚಿದ ಪ್ರೀತಿಯ ಅಮೃತಶಿಲೆ.

24. “ಕುಟುಂಬದ ಸಂಬಂಧಗಳು ಪ್ರೇಮದ ದಾರಿಯನ್ನು ಬೆಳೆಸುತ್ತವೆ, ಆಕರ್ಷಣೆ ಮತ್ತು ಅನ್ನುವ ಹೃದಯದಿಂದ.”

25. “ಕುಟುಂಬದಲ್ಲಿ ಪ್ರೀತಿ ಇಲ್ಲದಿದ್ದರೆ ಜೀವನವು ಒಂದು ಅಕ್ಷಯವಲಯದಂತೆ ಆಗುತ್ತದೆ.”

Romantic Kannada Love Quotes:

1. “ಹುಣ್ಣಿಮೆಯ ರಾತ್ರಿಯ ತಂಪಲ್ಲಿ ಚಿಕ್ಕದೊಂದು ಕನಸು,, ಆ ಕನಸ ತುಂಬಾ ನಿನ್ನದೇ ಸುಂದರ ನಗುಮೊಗದ ಸೊಗಸು,, ನಿನ್ನ ಚೆಲುವ ನಡುಗೆಯ ನಾಜೂಕಿನ ವಯ್ಯಾರದ ವರ್ಚ್ಛಸ್ಸು,, ಹಾಲ್ಗೆನ್ನೆಯಲ್ಲಿ ತುಸು ಮೂಡಿದೆ ಸೌಂದರ್ಯದ ಮುನಿಸು.”

2. “ನನ್ನ ಹೃದಯದ ಹೊತ್ತ ನಕ್ಷತ್ರ, ನೀನೇ ಅದರ ಪ್ರಕಾಶ.”

3. “ಪ್ರೀತಿ ಅನ್ನೋ ರತ್ನ ಜೊತೆಗಿದ್ರೆ ಯಾರು ಬಡವರಲ್ಲ.”

4. “ಸೀರೆಯ ಸೆರಗಂಚಲಿ ಜೀಕುವ ಸಾಲು ಕುಚ್ಚಗಳಿಗೂ ಮನದಲ್ಲೇ ಮಾತಂತೆ ಈ ಸೌಂದರ್ಯದರಮನೆಯ ಪಟ್ಟದರಸಿಯ ಅಂದ ವರ್ಣಿಸಲುತಿರಲು ಪದಗಳೇ ಸೋಲುತಿಹುವಂತೆ ಕವಿಯ ಕಲ್ಪನೆಯಲ್ಲಿ.”

5. “ನಿರೀಕ್ಷಿಸಿದಷ್ಟು ನಿರ್ಲ್ಯಕ್ಷ್ಯ ಜಾಸ್ತಿ ಅಲ್ವ.”

6. “ಶಾಲೆಯಲ್ಲಿ ಪಾಠ ಕಲಿಸೋರು ಮಾತ್ರ ಗುರುಗಳಲ್ಲ, ಜೀವನದ ಪಾಠ ಕಲಿಸೋರು ಸಹ ಗುರುಗಳೇ.”

7. “ನೀನೇ ನನ್ನ ಪ್ರೇಮದ ಸಂಗೀತ, ಹಾಡುವ ಮೂಡಿಗೆ ನಾನು ಸವಾರಿಸುತ್ತಿದ್ದೇನೆ.”

8. “ನಾ ನಿನ್ನ ಪ್ರೀತಿಯನ್ನು ಕಣ್ಣು ಮುಚ್ಚಿ ಒಪ್ಪಿಕೊಂಡಿದ್ದೆ ನೀ ನನ್ನ ಕಣ್ಣು ತೆರೆಸಿಬಿಟ್ಟೆ ಮೋಸದ ಪ್ರೀತಿಯಿಂದ.”

9. “ನೀನು ನನ್ನ ಚಿರಕಾಲದ ಹುಡುಕಾಟ, ನನ್ನ ಪ್ರೇಮದ ನಿಧಿ.”

10. “ನನ್ನ ಹೃದಯದಲ್ಲಿ ನೀನೇ ಹೂವಾಗಿ ನೆಲಸಿದ್ದೀಯೆ, ನನ್ನ ಜೀವನದ ಸುಂದರ ಹೂ.”

11. “ನನ್ನ ನೇತ್ರಗಳು ನೀನೇ ಕಾಣುವ ಸೂರ್ಯ, ನನ್ನ ಜಗತ್ತಿನ ಬೆಳಕು.”

12. “ನಾನು ನನ್ನ ಬೇಲಿಗೆ ನೀನೇ ಗಂಧ, ನನ್ನ ಹೃದಯಕ್ಕೆ ನೀನೇ ಸಜ್ಜನ.”

13. “ನೀನು ನನ್ನ ಪ್ರಪಂಚ, ನನ್ನ ಜೀವನದ ಮಿತ್ರ.”

14. “ನೀನು ನನ್ನ ಹೃದಯದಲ್ಲಿ ಮೂಡಿರುವ ಮೊಗ, ನನ್ನ ಜೀವನದ ಸ್ಮಿತ.”

15. “ನನ್ನ ಪ್ರೇಮದ ಕಥೆಯ ಮೊದಲ ಅಕ್ಷರ, ನೀನೇ ಆಗಿದ್ದೀಯೆ.”

16. “ನನ್ನ ಹೃದಯದಲ್ಲಿ ನೀನು ನೆಲಸಿದ್ದೀಯೆ, ಅಲ್ಲಿ ನಾನು ನೀನೇ ನೋಡುತ್ತಿದ್ದೇನೆ.”

17. “ನನ್ನ ಬೆನ್ನಿನ ಬಲಗೆ ನೀನೇ ಸಂಗೀತ, ನನ್ನ ಜೀವನದ ಸ್ವರಾಜ್ಯ.”

18. “ನನ್ನ ಪ್ರೇಮದ ಕಾದಂಬರಿಯಲ್ಲಿ ನೀನೇ ಪ್ರತಿಧ್ವನಿ, ಅದರ ಹಿಂದೆ ನನ್ನ ಹೃದಯ.”

19. “ನನ್ನ ನಕ್ಷತ್ರ, ನನ್ನ ಪ್ರೇಮದ ಆಕಾಶ.”

20. “ನೀನು ನನ್ನ ಜೀವನದ ಸುಂದರ ಅಂಗ, ನನ್ನ ಹೃದಯದ ಆನಂದ.”


ಪ್ರೀತಿ ಜೀವನದ ಅತ್ಯಂತ ಶಕ್ತಿಯುತ ಮತ್ತು ಸುಂದರ ಭಾವನೆ. ಇದು ಬಾಳಿಗೆ ಅರ್ಥ ನೀಡುತ್ತದೆ, ಮನಸ್ಸಿಗೆ ಸಂತೋಷ ತರುತ್ತದೆ, ಮತ್ತು ಸಂಬಂಧಗಳಿಗೆ ಬಲ ನೀಡುತ್ತದೆ. ಪ್ರೀತಿ ಇರುತ್ತದೆಂದರೆ ಅದರಲ್ಲಿ ನಿಸ್ವಾರ್ಥತೆಯು ಮುಖ್ಯ, ಪ್ರೀತಿಯ ಭಾಷೆಯು ಹೃದಯದಿಂದ ಬರುತ್ತದೆ. ಕನ್ನಡ ಪ್ರೀತಿಯ ಕ್ವೋಟ್ಸ್‌ಗಳು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು, ಪ್ರೀತಿಯನ್ನು ಉಳಿಸಲು, ಮತ್ತು ನಿಮ್ಮ ಪ್ರೀತಿಪಾತ್ರರ ಮನಸ್ಸು ಗೆಲ್ಲಲು ಸಹಾಯ ಮಾಡುತ್ತವೆ. ಈ ಕ್ವೋಟ್ಸ್‌ಗಳ ಪ್ರೇರಣೆಯಿಂದ ಪ್ರೀತಿಯ ಶಕ್ತಿ ತಿಳಿಯಿರಿ ಮತ್ತು ನಿಮ್ಮ ಜೀವನವನ್ನು ಪ್ರೀತಿಯಿಂದ ತುಂಬಿ ಸಮೃದ್ಧಗೊಳಿಸಿ.

200+ Kannada Quotes | Life, Love, Jeevana, Motivational, Sad

70+ Beautiful Romantic Love quotes in Kannada – ಲವ್ ಕ್ವೋಟ್ಸ

60 Good Morning Quotes in Kannada

Related Articles