ರಕ್ತಚಂದನದ ದೇಶೀಯ ಹೆಸರುಗಳು:
ರಕ್ತಚಂದನ ಈ ಹೆಸರು ನಮ್ಮ ದೇಶದಲ್ಲಿ ಬಹಳ ಹೆಸರುವಾಸಿ, ತೆಲುಗು ರಾಜ್ಯಗಳಲ್ಲಿ ಇದು ತುಂಬಾ ಫೇಮಸ್. ಇದನ್ನು ವಿಜ್ಞಾನಿಗಳು ಪೆಟೋಕಾರ್ಪಸ್ ಸ್ಯಾಂಟಲಿನಸ್ ಅಂತ ಕರೀತಾರೆ.
ಚಿತ್ತೂರಿನ ಕೂಲಿಕಾರ್ಮಿಕರು ಚಂದನ್ ಅಂತ ಕರಿದರೆ, ತಮಿಳುನಾಡಿನ ಕೂಲಿಕಾರ್ಮಿಕರು ಇದನ್ನು ಒಪ್ಪು ಚಂದನ್ ಅಂತ ಕರೀತಾರೆ.
ರಕ್ತಚಂದನದ ಮಳೆ ಸುರಿಸುವ ಮರ, ಇದು ಅತ್ಯಂತ ಅಪರೂಪದ ಅದ್ಭುತವಾದ ಮರ. ಮೊನ್ನೆ ಅಷ್ಟೇ ತೆರೆಕಂಡ ಅಲ್ಲು ಅರ್ಜುನ್ ತೆಲುಗು ಸಿನಿಮಾ ಪುಷ್ಫ ದಲ್ಲಿ ಈ ರಕ್ತಚಂದನದ ಬಗ್ಗೆ ಸಾಕಷ್ಟು ಮಟ್ಟಿಗೆ ತಿಳಿಸಿಕೊಟ್ಟಿದ್ದಾರೆ.
ಪ್ರಪಂಚದಲ್ಲಿ ತುಂಬಾ ದಷ್ಟಪುಷ್ಟವಾದ ಮತ್ತು ಅತೀ ಉತ್ತಮ ಗುಣಮಟ್ಟದ ರಕ್ತಚಂದನ ಮರಗಳು ಬೆಳೆಯುವುದು ನಮ್ಮ ದಕ್ಷಿಣ ಭಾರತದ ತೆಲುಗು ರಾಜ್ಯದ ಶೇಷಾಚಲಂ ಕಾಡುಗಳಲ್ಲಿ.
ರಕ್ತಚಂದನ ಉಪಯೋಗವನ್ನು ನಮ್ಮ ಪೂರ್ವಿಕರು ಎಂದೂ ಕಂಡುಹಿಡಿದಿದ್ದರು. ಚಂದನದ ಎಲೆಗಳನ್ನು, ಕಾಂಡಗಳನ್ನು, ಮತ್ತು ಬೇರುಗಳನ್ನು ಆಯುರ್ವೇದದಲ್ಲಿ ಬಳಸುತ್ತಿದ್ದರು. ನಂತರ ಚರ್ಮದ ರೋಗಗಳಿಗೆ ಇದನ್ನು ಬಳಕೆ ಮಾಡುತ್ತಿದ್ದರು.
ನಂತರದ ದಿನಗಳಲ್ಲಿ ವಿಜ್ಞಾನವು ಬೆಳೆಯುತ್ತ ಹೋದಂತೆ ರಕ್ತಚಂದನದ ಶ್ರೇಷ್ಠತೆ ಇಡೀ ಜಗತ್ತಿಗೆ ತಿಳಿಯಲಾರಂಭಿಸಿತು.
ಔಷಧೀಯ ಮೌಲ್ಯಗಳು:
ಇದನ್ನು ಜ್ವರ ನಿವಾರಕ, ಊರಿಯೂತ ನಿವಾರಕ, ಅಂತೆಲ್ಮಿಂತಿಕ್, ರಕ್ತ ಸ್ರಾವ, ಭೇದಿ, ಕಾಮೊತ್ತೆಜಕ ಇಗೆ ವಿವಿಧ ಔಷಧಗಳಾಗಿ ಉಪಯೋಗ ಮಾಡಲಾಗುತ್ತೆ.
ಇದರಿಂದ ದಕ್ಷಿಣ ಭಾರತದ ಗಂಧದ ಮರಗಳಿಗಿಂತ ರಕ್ತಚಂದನಕ್ಕೆ ಬೇಡಿಕೆ ಹೆಚ್ಚಾಯಿತು. ರಕ್ತಚಂದನ ಬೇಕಾದ ವಾತಾವರಣ ಮತ್ತು ಉತ್ತಮ ಗುಣಮಟ್ಟದ ಮಣ್ಣಿನ ಪಲವತ್ತತೆ ನೆಲ್ಲ ಮಲ್ಲ ಕಾಡಿನಲ್ಲಿ ಇರುವ ಕಾರಣ ಚಿತ್ತೂರ್, ಕಡಪ, ನೆಲ್ಲೂರು ಜಿಲ್ಲೆಯಾಧೇಂಥ ರಕ್ತಚಂದನ ಹಾಸು ಹೊಕ್ಕಾಗಿ ಬೆಳೆದು ನಿಂತಿದೆ.
ಅತ್ಯಂತ ಉತ್ತಮ ಗುಣಮಟ್ಟ ಈ ಕಾಡುಗಳಲ್ಲಿ ಬೆಳೆಯುವ ಮರಗಳಿಗೆ ಇರೋದು. ರಕ್ತಚಂದನದ ಮರ ಕನಿಷ್ಠ 8 ಮೀಟರ್ಗಳಷ್ಟು ಬೆಳೆಯುತ್ತೆ. ಚಿಕ್ಕಮರಗಳು ಸಹ 5 ಮೀಟರ್ ಗಳಿಗಿಂತ ಕಡಿಮೆ ಅಂತೂ ಇರಲ್ಲ.
ರಕ್ತಚಂದನದ ಮರಗಳ ಮಧ್ಯೆ ನಡೆಯುತ್ತಿದ್ದರೆ ಅಕ್ಷರಸಹ ರಿಸರ್ವ್ ಬ್ಯಾಂಕ್ ನಲ್ಲಿ ನಡಿಯುತ್ತಿದ್ದೇವೆಂದು ಎಂದು ಅರ್ಥ. ಯಾಕಂದ್ರೆ ಅತ್ಯಂತ ಬೆಲೆಬಾಳುವ ಮರಗಳಿವು, ನೋಡೋದಕ್ಕೆ ಬರಿ ಸಾಮಾನ್ಯ ಮರ ಅಷ್ಟೇ.
ಆದ್ರೆ ಮಾರಾಟ ಮಾಡಿದ್ರೆ ಒಂದೇ ಬಾರಿಗೆ ಕುಬೇರ ಆಗುವುದು ಖಚಿತ. ಜಗತ್ತಿಗೆ ಈ ಮರದ ಬೆಲೆ ಏನು ಅಂತಾನೇ ಗೊತ್ತಿಲ್ಲ ಇರುವಂತ ಕಾಲದಲ್ಲಿ ಕಳ್ಳರು ಕೋಟಿಗಟ್ಟಲೆ ದುಡ್ಡು ಮಾಡಿಕೊಂಡಿದ್ದರು.
ಆದ್ರೆ ಯಾವಾಗ ಇದರ ಬೆಲೆ ಒರಜಗತ್ತಿಗೆ ಗೊತಾಯ್ತೋ ರಾಜಕಾರಣಿಗಳು ಇದರಿಂದ ದುಡ್ಡು ಮಾಡೋಕೆ ಶುರುಮಾಡಿದ್ರು. ಯಾವಾಗ ರಾಜಕಾರಣಿಗಳು ಇದರ ರುಚಿ ನೋಡಿದ್ರೋ ರಕ್ತಚಂದನ ಚರಿತ್ರೆ ಬದಲಾಗಿ ಹೊಯ್ತು.
ಕಾಡುಗಳಲ್ಲಿ ಇದರ ಬಗ್ಗೆ ಗೊತ್ತಿರುವ ಪೊಲೀಸರಗೆ ಮತ್ತು ಅರಣ್ಯ ಅಧಿಕಾರಿಗಳಿಗೆ ಲಂಚದ ರುಚಿ ತೋರೊಸಿ ಟನ್ ಗಟ್ಟಲೆ ಸ್ಮಗಲ್ ಮಾಡೋಕೆ ಶುರು ಮಾಡುತ್ತಾರೆ.
ದೊಡ್ಡ ದೊಡ್ಡ ನಾಯಕರುಗಳು ಅಂದರೆ ಎಂಎಲ್ಎಗಳು, ಎಂಪಿಗಳು ಮತ್ತು ಅವರ ಸಂಬಂಧಿಗಳು ಈ ರಕ್ತಚಂದನದ ಕಳ್ಳಸಾಗಾಣಿಕೆ ಯಿಂದ ಕೋಟಿಗಟ್ಟಲೆ ಹಣ ಕೊಳ್ಳೆಹೊಡಿದದ್ದು ಸುಳ್ಳಲ್ಲ.
ಯಾವಾಗ ಚೀನಾದಲ್ಲಿ ರಕ್ತಚಂದನದ ಬೇಡಿಕೆ ಹೆಚ್ಚಾಯ್ತೋ ಹಾಗಾ ಶೇಷಾಚಲಂ ಕಾಡಿನಲ್ಲಿ ಕ್ಷೋಭೆ ಹೆಚ್ಚಾಯಿತು.
ಮರಗಳ ಮಾರಣ ಹೋಮ ಶುರುವಾಯಿತು, ಯಾಕಂದರೆ ಚೀನಾದಲ್ಲಿ ರಕ್ತಚಂದನದಿಂದ ತಯಾರು ಮಾಡುವ ಡಿಸೈನರ್ ಗೊಂಬೆಗಳಿಗೆ ಅಥಿಯಂಥ ಬೇಡಿಕೆ ಇದೆ ಮತ್ತು ಇದು ದುಬಾರಿ ಕೂಡ.
ರಕ್ತಚಂದನ ಉಪಯೋಗ:
ಇದರ ಜೊತೆಗೆ ಜಪಾನಿನಲ್ಲಿ ಈ ರಕ್ತ ಚಂದನ (Red sandalwood) ದಿಂದ ಸಂಗೀತವಾದ್ಯಗಳನ್ನು ತಯಾರಿಸಲಾಗುತ್ತೆ. ಹಾಗಾಗಿ ಈ ಮರಗಳಿಗೆ ಜಪಾನಿನಲ್ಲಿ ಕೂಡ ಬೇಡಿಕೆ ಹೆಚ್ಚು.
ಇಷ್ಟೇ ಅಲ್ಲದೆ ವಿವಿಧ ದೇಶಗಳಲ್ಲಿ ವಯಾಗ್ರ ತಯಾರಿಕೆಯಿಂದ ಇಡಿದು ಔಷದಗಳ ತಯಾರಿಕೆ ವರೆಗೂ ರಕ್ತ ಚಂದನ ಬಳಕೆಯಾಗುತ್ತೆ.
ಬ್ಯೂಟಿ ಪ್ರೋಡಕ್ಸ್ ಮತ್ತು ಪರ್ಫ್ಯೂಮ್ ತಯಾರಿಕೆ ಹೀಗೆ ನೂರಾರು ವಿವಿಧ ವಸ್ತುಗಳ ತಯಾರಿಕೆಯಲ್ಲಿ ರಕ್ತಚಂದನವನ್ನು ಬಳಸಲಾಗುತ್ತದೆ. ಈ ಕಾರಣಗಳಿಂದ ಇದರ ಬೆಲೆ ನೋಡುನೋಡುತ್ತಿದ್ದಂತೆ ಬೆಲೆ ಗಗನಕ್ಕೇರಿ ಹೋಹಿತು.
ರಕ್ತಚಂದನವನ್ನು ಡೈರೆಕ್ಟಾಗಿ ಬೀಜಿಂಗೆ ರಪ್ತು ಮಾಡುವುದು ಒಂದು ದಾರಿ ಆದ್ರೆ, ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಸಮುದ್ರ ಮಾರ್ಗಗಳ ಮೂಲಕ ಕೌಲಾಲಂಪುರಕ್ಕೆ ರಪ್ತು ಮಾಡ್ತಿದ್ದಾರೆ ಸ್ಮಗ್ಲರ್ಗಳು.
ಒಂದು ಕಾಲದಲ್ಲಿ ಚಿತ್ತೂರ್ನಲ್ಲಿ ಕೂಲಿ ಮಾಡುವ ಕೂಲಿಗಳು ಡೈರೆಕ್ಟಾಗಿ ಕಾಡಿನೊಳಗೆ ಹೋಗಿ ಮರಗಳನ್ನು ಕಡಿತ ಇದ್ದರೂ. ಈ ಮೂಲಕ ಸ್ಮಗ್ಲರ್ ಗಳಿಗೆ ಸಹಾಯ ಮಾಡುತ್ತಿದ್ದರು.
ಕಾಡಿನ ಸುತ್ತ ಒಟ್ಟಾರೆ 240 ಗ್ರಾಮಗಳಲ್ಲಿ ಸರಿ ಸುಮಾರು 3 ,೦೦೦ ದ ವರಗೆ ರಕ್ತ ಚಂದನದ ಕೂಲಿಗಳು ನಮಗೆ ಕಾಣಸಿಗುತ್ತಾರೆ.
ಇತ್ತ ಪೊಲೀಸರ ಮೇಲೆ ಒತ್ತಡ ಹೆಚ್ಚಾಗುತ್ತಿದ್ದಂತೆ ಸ್ಥಳೀಯ ಕೂಲಿಗಳ ಮೇಲೆ ಹೆಚ್ಚು ನಿಗಾವಹಿಸಿಲು ಶುರುಮಾಡಿದರು. ಇದರಿಂದ ಸ್ಥಳೀಯ ಕೂಲಿಗಳನ್ನು ಕಾಡಿನೊಳಗೆ ಕರ್ಕೊಂಡು ಹೋದರೆ ಸಿಕ್ಕಿ ಬಿಳೋ ಕಾರಣದಿಂದ ದಾರಿ ಬದಲಾಹಿಸಿದ ಸ್ಮಗ್ಲರ್ಗಳು ತಮಿಳುನಾಡಿನಿಂದ ಕೂಲಿಗಳನ್ನು ಕರೆತರಲು ಶುರುಮಾಡಿದರು.
ಇದರಲ್ಲಿ ತುಂಬಾ ಪಳಗಿದ ನಿಷ್ಠರಾದ ಕೂಲಿಗಳು ತಿರುನೆಲ್ವೇಲಿಯಲ್ಲಿ ಸಿಕ್ತಾರೆ. ಆ ಗುಡ್ಡಗಾಡು ಪ್ರದೇಶದ ಜಾಡುಮಲೈ ಗ್ರಾಮದಲ್ಲಿ ಮನೆಗೊಬ್ಬ ಪಳಗಿದ ಪುಷ್ಪರಾಜ ಸಿಕ್ತಾನೆ.
ನಂಜು ನಿರೋಧಕ ಔಷಧ:
ಅಲ್ಲು ಅರ್ಜುನ್ ನಿರ್ವಹಿಸಿರುವ ಪುಷ್ಪ ಎನ್ನುವ ಪಾತ್ರ ಈ ಗ್ರಾಮಕ್ಕೆ ಸೇರಿದವನೇ ಆಗಿರುತ್ತಾನೆ.
ಹೌದು ಆತ ನಿಜವಾಗಿಯೂ ಇದ್ದಾನೆ, ಪೊಲೀಸರನ್ನ ಭೇದರಿಸುದು ಒಂದು ವೇಳೆ ತಿರುಗಿ ಬಿದ್ರೆ, ಪೊಲೀಸರ ಮೇಲೆ ಮತ್ತು ಫಾರೆಸ್ಟ್ ಆಫೀಸ ಅಧಿಕಾರಿಗಳ ಮೇಲೆ ಲಾರಿಯನ್ನು ಹತ್ತಿಸಿಕೊಂಡೆ ಹೋಗಿಬಿಡುವನು.
ಅವನಿಗೆ ಪೋಲಿಸ್ನವರು ನೂರಾರು ಬಾರಿ ಟ್ರೀಟ್ಮೆಂಟ್ ಪೊಲೀಸ್ ಕೊಟ್ಟಿರುತ್ತಾರೆ, ಆದರೂ ಸಹ ಅವನ ಚಾಳಿ ನಿಲ್ಲಿಸುವುದಿಲ್ಲ.
ಕೊಡಲಿ ಕೈಲಿ ಇಡಿದು ಪುಷ್ಪರಾಜ ಕಾಡಿಗೆ ಹೋದ ಅಂದ್ರೆ ಮುಗಿತು, ಮುಲ್ತಟೈಟಸ್ಕ್ಕಿಂಗ್ನಲ್ಲಿ ಈತ ಎತ್ತಿದಕೈ. ಬೇರೆಬೇರೆ ಗ್ಯಾಂಗಳನ್ನ ಹೊಡೆದೋಡಿಸುವುದು ಪ್ರತಿಯೊಂದು ಕೆಲಸವನ್ನು ಅವನೊಬ್ಬನೇ ನೋಡಿಕೊಳ್ಳಿತ್ತಿದ್ದ.
ತಮಿಳುನಾಡಿನ ಕೂಲಿಗೆ 3 ದಿನಕ್ಕೆ 15 ಸಾವಿರ ಕೊಡುತ್ತ ಇದ್ರೂ, ಆದರೆ ಪುಷ್ಪರಾಜ್ 3 ದಿನಕ್ಕೆ 50 ಸಾವಿರದವರೆಗೆ ಚಾರ್ಜ್ ಮಾಡುತ್ತಿದ್ದ. ವ್ಯಾಪಾರಿಗಳಿಗೆ ಟನ್ಗೆ 50 ರಿಂದ 60 ಲಕ್ಷ ಬರ್ತಾ ಇತ್ತು.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ A ಗ್ರೇಡ್ ರಕ್ತಚಂದನಕ್ಕೆ (Red sandalwood) ಒಂದರಿಂದ ಒಂದುವರೆ ಕೋಟಿವರೆಗೂ ಬೆಲೆ ಇದೆ ಅದಕ್ಕಾಗಿ ಈ ರೀತಿಯ ಕೂಲಿಗಳಿಗೆ ಡಿಮ್ಯಾಂಡ್ ಜಾಸ್ತಿ.
ತಿಂಗಳಲ್ಲಿ ಒಂದು ವಾರ ಕೆಲಸ ಮಾಡಿದರೆ ಸಾಕು 30 ರಿಂದ 40 ಸಾವಿರ ಸಂಪಾದನೆ ಮಾಡುತ್ತಾರೆ ತಮಿಳುನಾಡು ಕೂಲಿಗಳು. ಇನ್ನೂ ತೀರಾ ಬುದ್ಧಿವಂತ ಕೂಲಿಗಳ ಆದರೆ ಏಕಾಏಕಿ ಲಕ್ಷಗಟ್ಟಲೆ ಸಂಪಾದನೆ ಮಾಡುತ್ತಾರೆ.
ತಮಿಳುನಾಡು ಕೂಲಿಗಳನ್ನು ಎಷ್ಟು ಸಾರಿ ಅರೆಸ್ಟ್ ಮಾಡಿದರೂ ಅವರು ಭಯಪಡದೆ ಫಾರೆಸ್ಟ್ ಅಧಿಕಾರಿಗಳ ಮೇಲೆ ದಾಳಿಗೆ ಮುಂದಾಗುತ್ತಾರೆ.
ಈ ಕಾರಣಕ್ಕೆ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದ ಆಗಿನ ಕಾಲಕ್ಕೆ 20 ರಿಂದ 30 ಕೂಲಿಗಳು ಎನ್ಕೌಂಟರ್ ಆಗಿ ಸಾಯುತ್ತಾರೆ ಆಗಿನ ಕಾಲಕ್ಕೆ ಇದು ದೊಡ್ಡ ಬ್ರೇಕಿಂಗ್ ನ್ಯೂಸ್.
ಎಸ್ಜಿಮಾ ಸಮಸ್ಯೆ:
ಚಂದ್ರಬಾಬು ನಾಯ್ಡು ಯಾವಾಗಲೂ ಈ ಸ್ಮಗ್ಲರ್ ವಿಷಯದಲ್ಲಿ ತೀರಾ ಸ್ಟ್ರಿಕ್ಟ್ ಆಗೇ ಇರುತ್ತಿದ್ದರು ಕಾರಣ ಆಗಾಗ ಅಂದ್ರ ಮತ್ತು ತೆಲಂಗಾಣದಲ್ಲಿ ನಡೆಯುತ್ತಿದ್ದ ಬಾಂಬ್ ದಾಳಿಗೆ ಮತ್ತು ಮತ್ತಿತಿತರ ಸಮಾಜ ವಿರೋಧಿ ಕೃತ್ಯಗಳಿಗೆ.
ಈ ರಕ್ತಚಂದನದ ಸ್ಮಗ್ಲರ್ ಗಳಿಂದಲೇ ಫಂಡಿಂಗ್ ಆಗ್ತಾ ಇತ್ತುಅಂತ ಇಂಟಲಿಜೆನ್ಸಿ ರಿಪೋರ್ಟ್ನಲ್ಲಿ ತಿಳಿದಿತ್ತು.
2000 ನಂತರ ಈ ರಕ್ತ ಚಂದನವನ್ನು (Red sandalwood) ಅಳಿವಿನಚ್ಚಿನಲ್ಲಿರುವ ಜಾತಿ ಎಂದು IUCN ಪಟ್ಟಿ ಮಾಡಿದೆ. ನಂತರ ಕೇಂದ್ರ ಸರ್ಕಾರವು ಕಾಡಿನಲ್ಲಿ ಬೆಳೆಯುವ ರಕ್ತ ರಕ್ತ ಚಂದನದ ಮರಗಳನ್ನು ಕಡಿಯುವಂತಿಲ್ಲ ಎಂದು ನಿರ್ಬಂಧ ಹೇರಿದೆ.
ಆದರೆ ಅನುಕೂಲ ಪರಿಸ್ಥಿತಿಗಳಿಗೆ ಅನುಸಾರವಾಗಿ ಇದನ್ನು ಅರಣ್ಯ ಅಧಿಕಾರಿಗಳು ಮತ್ತು ಸರ್ಕಾರದ ಒಪ್ಪಿಗೆಯ ಮೇರೆಗೆ ಕಡಿದು ರಫ್ತು ಮಾಡಬಹುದು.
ಯಾಕೆಂದರೆ ರಕ್ತಚಂದನದ ಉಪಯೋಗ ಹೆಚ್ಚಾಗಿರುವ ಕಾರಣ ಸ್ವಲ್ಪಮಟ್ಟಿಗೆ ಅವಕಾಶ ನೀಡಿದ್ದಾರೆ.
ಕಾರಣ ತಲೆನೋವಿನಿಂದ ಹಿಡಿದು ಚರ್ಮ, ವ್ಯಾಧಿಗಳು ಮತ್ತು ವಿಷ ಕ್ರಿಮಿಗಳ ಕಡಿತಕ್ಕೆ ಮದ್ದು ಸಹ ರಕ್ತ ಚಂದನ ದಿಂದ ತಯಾರು ಮಾಡುತ್ತಿದ್ದಾರೆ.
ವಿವಿಧ ರೀತಿಯ ಔಷಧಿಗಳ ಜೊತೆ ಚೇಳು ಕಡಿತಕ್ಕೂ ಸಹ ಮದ್ದನ್ನು ಈ ಮರದಿಂದಲೇ ಈ ಮರದಿಂದಲೇ ತಯಾರು ಮಾಡುತ್ತಿದ್ದಾರೆ.
ಈ ಕಾರಣಗಳಿಂದಲೇ ಇದರ ಬೆಲೆ ಮುಗಿಲುಮುಟ್ಟಿದೆ ಪೊಲೀಸರು ಎಷ್ಟೇ ಗಮನಹರಿಸಿದರು ಮರಗಳು ಮಾತ್ರ ಮಾಯಾ ಆಗ್ತಾ ಇರುತ್ತವೆ. ಚೀನಾ ಜೊತೆಗೆ ಜಪಾನ್, ಮಲೇಶ್ಯಾ, ಮಯನ್ಮಾರ್ ಪೈಪೋಟಿಗೆ ಬಿದ್ದು ರಕ್ತಚಂದನವನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳುತಿದ್ದಾರೆ.
ಚೀನಾಗಿಂತ ತುಂಬಾ ವಿಭಿನ್ನವಾಗಿ ಲಕ್ಸುರಿ ಫರ್ನಿಚರ್ ಗಳನ್ನು ರಕ್ತ ಚಂದನ ದಿಂದ (Red sandalwood) ತಯಾರು ಮಾಡಲು ಶುರುಮಾಡಿತು ಜಪಾನ್.
ಅದಕ್ಕಾಗಿ ಚೀನಾಗಿಂತ ಹೆಚ್ಚಿನ ಬೆಲೆಯನ್ನು ಕೊಟ್ಟು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಕ್ತಚಂದನ ಖರೀದಿ ಮಾಡ್ತಾಯಿದೆ ಜಪಾನ್.
ಹೀಗಾಗಿ ಈ ರಕ್ತಚಂದನ ದಕ್ಷಿಣ ಭಾರತದಲ್ಲಿ ಮಾತ್ರ ಹೆಚ್ಚಾಗಿ ಬೆಳೆಯುವುದರಿಂದ ನಲ್ಲ ಮಲ್ಲ ಫಾರೆಸ್ಟ್ ರಕ್ತ ಚಂದನಕ್ಕೆ ಕೇರ್ ಆಫ್ ಅಡ್ರೆಸ್ ಆಗಿದೆ.
ಶ್ರೀಮಂತ ಕೆಂಪುಬಣ್ಣದ ರಕ್ತಚಂದನದ ಮರ ದೊರಕಿದೆ ಅಂದರೆ ಆತ ಕೋಟ್ಯಾಧಿಪತಿ ಆದ ಎಂದು ಅರ್ಥ.
ಹಾಗಾದ್ರೆ ಇದು ಅಷ್ಟು ದೊಡ್ಡ ಕಾಡಿನಿಂದ ಹೇಗೆ ಹೊರಗಡೆಗೆ ರಪ್ತು ಆಗುತ್ತೆ ಅನ್ನುವುದೇ ಒಂದು ದೊಡ್ಡ ವಿಷಯ. ಮೊದಲು ಆಂಧ್ರಪ್ರದೇಶದ ಬಾರ್ಡರ್ ದಾಟಿದರೆ ಸಾಕು ಕಳ್ಳರು ಸೇಫ್ ಅಂತಾನೆ ಅರ್ಥ.
ಅಲ್ಲಿಂದ ಡೈರೆಕ್ಟಾಗಿ ಚೆನ್ನೈ ಮುಕಾಂತರ ಕಾರ್ಗೋ ಶಿಪ್ನಿಂದ ಮರಗನ್ನು ತುಂಡರಿಸಿ ಫುಡ್ ಐಟಂಗಳಾಗಿ ಪ್ಯಾಕ್ ಮಾಡಿ ರಪ್ತು ಮಾಡ್ತಾ ಇದ್ದಾರೆ. ಮತ್ತು ಇದರ ಶಿಪ್ ಬಿಲ್ ಸಹ ಫುಡ್ ಐಟಂ ಹೆಸರಲ್ಲೇ ಇರುತ್ತವೆ.
ಅಂದರೆ ಮರವನ್ನು ಕಂಟೇನರ್ ಅತ್ತಿಸೋದಿಂದ್ರ ಇಡಿದು ಇಳಿಸಿಕೊಳ್ಳೋ ವರೆಗೂ ಎಲ್ಲವು ಸ್ಮುಗ್ಲರಗಳ ಅನುಕೂಲಕ್ಕೆ ತಕ್ಕಂತೆ ನಡೆಯುತ್ತೆ.
ಅದರಲ್ಲಿ ರಕ್ತ ಚಂದನ ಇದೆ ಎಂಬ ವಿಷಯ ಅಲ್ಲಿನ ಪ್ರತಿ ಕಸ್ಟಮ್ ಅಧಿಕಾರಿಗೂ ಗೊತ್ತಿರುತ್ತೆ ಆದರೆ ಅವರಿಗೆ ಕೊಡಬೇಕಾದದ್ದನ್ನು ಕೊಟ್ಟು ಸುಲಭವಾಗಿ ಚೀನಾ, ಜಪಾನ್, ಮಲೇಶ್ಯಾಗಳಿಗೆ ರಫ್ತು ಮಾಡ್ತಾ ಇದ್ದಾರೆ. ಇವುಗಳನ್ನು ಇವುಗಳ ತೂಕಕ್ಕೆ ಅನುಗುಣವಾಗಿ ಪ್ಯಾಕಿಂಗ್ ಮಾಡುತ್ತಾರೆ.
ಇಗೆ ಸುಲಭವಾಗಿ ಮತ್ತು ಶೀಘ್ರವಾಗಿ ಕಳ್ಳರನ್ನ ದೇಶದ ಗಡಿ ದಾಟಿಸುತ್ತಾರೆ . ಈ ಹಿಂದೆ ರಕ್ತಚಂದನದ ಸ್ಮಗ್ಲರ್ಸ್ಗೆ ಬಲೆ ಬೀಸಿ ಹಿಡಿದಾಗ ಆಂಧ್ರಪ್ರದೇಶಕ್ಕೆ ಏಕಾಏಕಿ ಸಾವಿರ ಕೋಟಿಗಳಷ್ಟು ಲಾಭವಾಗಿತ್ತು.
ರಕ್ತಚಂದನ ಮೊಡವೆ ನಿವಾರಣೆ ಮಾಡುವುದು:
ವರ್ಷವಿಡೀ ಭಾರತ ಸರಕಾರದ ಅನುಮತಿ ಇಂದ ಸರಿ ಸುಮಾರು ಐದು ಸಾವಿರ ಕೋಟಿಗಳಷ್ಟು ರಕ್ತಚಂದನ ಕಾನೂನು ರೀತಿಯಲ್ಲಿ ರಪ್ತು ಆಗುತ್ತೆ.
ಇನ್ನೂ ಸರ್ಕಾರಕ್ಕೆ ತಿಳಿಯದೆ ರಹಸ್ಯವಾಗಿ ಸುಮಾರು ಹತ್ತು ಸಾವಿರ ಕೋಟಿಯಷ್ಟು ರಕ್ತಚಂದನ ಅಕ್ರಮ ಸಾಗಾಣಿಕೆ ಆಗುತ್ತಿದೆ.
ಇತ್ತೀಚಿಗೆ ರೈತರು ರಕ್ತಚಂದನವನ್ನು (Red sandalwood) ಬೆಳೆಯುತ್ತಿರುವುದರಿಂದ ವ್ಯಾಪಾರಿಗಳು ಧೈರ್ಯವಾಗಿ ಅದನ್ನು ವಿದೇಶಗಳಿಗೆ ರಫ್ತು ಮಾಡುವ ಮುಖಾಂತರ ದುಪ್ಪಟ್ಟು ಬೆಲೆಗೆ ಅದನ್ನು ಮಾರಾಟ ಮಾಡಿ ಮನೆತುಂಬಾ ಹಣ ಮಾಡ್ತಾ ಇದ್ದಾರೆ.
ಆದರೆ ರೈತರು ಎಷ್ಟೇ ಮರಗಳನ್ನು ಬೆಳೆದರೂ ಸಹ ಉತ್ತಮ ಗುಣಮಟ್ಟದ ರಕ್ತಚಂದನ ಶೇಷಾಚಲ ದ ಕಾಡಿನಲ್ಲಿ ಬೆಳೆಯುತ್ತಲಿದೆ.
ಅದರ ಶ್ರೀಮಂತ ಕೆಂಪುಬಣ್ಣ ಬೇರೆ ಕಡೆ ಬೆಳೆದ ಮರಗಳಲ್ಲಿ ಕಂಡುಬರುವುದಿಲ್ಲ ಅದನ್ನ ಚಿನ್ನದ ಚಂದನ ಅಂತಾನೆ ಏಳಬಹುದು.
ಹೀಗಾಗಿನೇ ಎಷ್ಟು ಕಟ್ಟು ನಿಟ್ಟಾಗಿದ್ದರು ಕಳ್ಳರು ತಮ್ಮ ಕೈಚಳಕ ತೋರಿಸ್ತಾನೆ ಇರ್ತಾರೆ. ಅಧಿಕಾರಿಗಳ ಮತ್ತು ರಾಜಕೀಯ ನಾಯಕರುಗಳ ಕೈ ಬಿಸಿ ಮಾಡಿದರೆ ಸಾಕು ಮರಗಳು ಮಾಯ ಆಗ್ತಾನೆ ಹೋಗ್ತವೆ ಎಷ್ಟು ಮರಗಳನ್ನು ಕಡಿದು ಸಹ ಕಾಡಿನಲ್ಲಿ ಮರಗಳು ಈಗಲೂ ಕಡಿಮೆಯಾಗಲು ಕಾರಣ.
ಅಷ್ಟು ಗುಣಮಟ್ಟದ ಮರಗಳು ಮತ್ತೆ ಮತ್ತೆ ಅದೇ ಜಾಗದಲ್ಲಿ ಬೆಳೆಯಲು ಪ್ರಾರಂಭಿಸುತ್ತವೆ. ಜೊತೆಗೆ ಮೊದಲ ಮೂರು ವರ್ಷಗಳ ಕಾಲ ರಕ್ತಚಂದನದ ಮರಗಳು ಅತಿ ವೇಗವಾಗಿ ಬೆಳೆಯುತ್ತವೆ.
ಆ ತರುವಾಯ ಗಾತ್ರಕ್ಕೆ ತಕ್ಕಂತ್ತೆ ಕಾಂಡಗಳ ಬೆಳವಣಿಗೆಯಾಗುತ್ತದೆ. ಒಂದು ಲೋಡ್ ತುಂಬಿದ ಲಾರಿಯನ್ನು ರಾತ್ರೋರಾತ್ರಿ ಆಂಧ್ರದ ಗಡಿ ದಾಟಿಸಿದರೆ ಮಾತ್ರ ಕಳ್ಳರ ಸಕ್ಸಸ್ ಅಂತ ಅರ್ಥ.
ನಂತರ ಗಡಿಯಾಚೆ ಅವುಗಳನ್ನು ಸ್ವಾದೀನ ಪಡಿಸಿಕೊಳ್ಳಲು ಏಜೆಂಟ್ಗಳು ರೆಡಿ ಯಾಗಿ ನಿಂತಿರುತ್ತಾರೆ ಆದರೆ ಆ ಲೋಡನ್ನು ದಾಟಿಸಲು ಅರಣ್ಯ ಅಧಿಕಾರಿಗಳ ಕಣ್ಣು ತಪ್ಪಿಸಿ ದಾಟಿಸಬೇಕಾಗುತ್ತೆ.
ಇಲ್ಲಿ ಎಲ್ಲರೂ ಭ್ರಷ್ಟ ಅಧಿಕಾರಿಗಳು ಇರುವುದಿಲ್ಲ ಅಲ್ವ ಹೀಗಾಗಿ ಪ್ರಾಣವನ್ನು ಪಣಕ್ಕಿಟ್ಟು ಈ ರಕ್ತಚಂದನದ ಕೂಲಿಗಳು ಲೋಡ್ ತುಂಬಿಧ ಲಾರಿಗಳನ್ನು ಅರಣ್ಯ ದಾಟಿಸುತ್ತಾರೆ.
ಈ ಕಳ್ಳರಿಂದ ತಮ್ಮ ಪ್ರಾಣವನ್ನ ಕಾಪಾಡಿಕೊಂಡು ಜೊತೆಗೆ ರಕ್ತಚಂದನವನ್ನು ಸಹ ಕಾಪಾಡಿಕೊಂಡು ಬರುತ್ತಿದ್ದಾರೆ ಈ ಅರಣ್ಯಾಧಿಕಾರಿಗಳು.
ಆದರೆ ಕತ್ತಲಾಗುತ್ತಿದ್ದಂತೆ ಹುಲಿಗಳಿಂದ ಇಡಿದು ಸ್ಮಗಲರ್ಗಳ ಗಳವರೆಗೂ ಎಲ್ಲರಿಗೂ ಭಯ ಶುರುವಾಗುತ್ತೆ. ರಕ್ತ ಚಂದನವನ್ನು ಕಾಪಾಡುವುದು ಅರಣ್ಯ ಅಧಿಕಾರಿಗಳಿಗೆ ಸವಾಲಿನ ಮಾತೆ ಸರಿ.
ಹಾಗಾಗಿಯೇ ಇಲ್ಲಿ ಆಗಾಗ ರಕ್ತ ಚೆಲ್ತಾ ಇರುತ್ತೆ ರಕ್ತ ಚಂದನ ಇಂದ ಬರುವ ಹಣಕ್ಕಾಗಿ ಅಡವಿಯಲ್ಲಿ ರಕ್ತ ಬೀಳುತ್ತಲೇ ಇರುತ್ತದೆ ಇದು ಒಂದು ಗ್ಯಾಂಬಲಿಂಗ್ ಟ್ರೀ ಪ್ರಾಣದ ಮೇಲೆ ಭಯ ಮತ್ತು ಆಸೆ ಬಿಟ್ಟು ಬರೋನು ಗೆಲ್ಲಬಹದು ಅಥವಾ ಸಾಯಬಹುದು.