Home » Crows: ಕಾಗೆ ಬಗ್ಗೆ ಯಾರಿಗೂ ತಿಳಿಯದ ಸ್ವಾರಸ್ಯಕರ ವಿಷಯಗಳು ಇಲ್ಲಿವೆ! 

Crows: ಕಾಗೆ ಬಗ್ಗೆ ಯಾರಿಗೂ ತಿಳಿಯದ ಸ್ವಾರಸ್ಯಕರ ವಿಷಯಗಳು ಇಲ್ಲಿವೆ! 

by Praveen Mattimani
fascinating facts about crows in kannada

ಕಾಗೆ (Crow) ಎಂದರೆ ಭಾರತದಲ್ಲಿ ಅತ್ಯಂತ ಸಾಮಾನ್ಯವಾಗಿ ಕಾಣಬಹುದಾದ ಪಕ್ಷಿ. ಕಾಗೆ ಕೇವಲ ಒಂದು ಸಾಮಾನ್ಯ ಪಕ್ಷಿಯೇ ಅಲ್ಲ, ಇದು ಭಾರತದ ಸಂಸ್ಕೃತಿ, ಜನಪದ ಸಾಹಿತ್ಯ ಮತ್ತು ಕತೆಗಳಲ್ಲಿ ವಿಶೇಷ ಸ್ಥಾನ ಹೊಂದಿದೆ. ಕಾಗೆಯ ಕುರಿತು ಹಲವು ಜಾನಪದ ಕಥೆಗಳು, ಚುಟುಕುಗಳು ಮತ್ತು ಕಗ್ಗೊಲೆಗಳು ನಮ್ಮ ಹಿರಿಯರು ಹಂಚಿಕೊಂಡಿದ್ದು, ನಮ್ಮ ಜೀವನದ ಪಾಠಗಳನ್ನು ಕಲಿಸುತ್ತವೆ.

ತನ್ನ ಬುದ್ಧಿಮತ್ತೆ, ಜಾಣ್ಮೆ, ಹಾಗೂ ತಕ್ಷಣದ ಪ್ರತಿಕ್ರಿಯೆಗಾಗಿ ಪ್ರಸಿದ್ಧ. ಕಾಗೆ ಹಸಿವು ತಣಿಸಲು ಬಣ್ಣ ಬಣ್ಣದ ಹಣ್ಣು, ಕಾಯಿ, ಮತ್ತು ಇತರ ಆಹಾರವನ್ನು ಹುಡುಕುವುದರಲ್ಲಿ ಪರಿಣತಿ ಹೊಂದಿದೆ. ಇದರ ಜೀವವೈಜ್ಞಾನಿಕ ನೈಪುಣ್ಯವನ್ನು ಗಮನಿಸಿದರೆ, ಕಾಗೆಯ ನೆಲೆಯ ಬದಲಾವಣೆಗೆ ತಕ್ಷಣದ ಪ್ರತಿಕ್ರಿಯೆ ಹಾಗೂ ಪರಿಸರದಲ್ಲಿ ಅನುಗುಣವಾಗಿ ತಾನು ಬದಲಾಯಿಸುವ ಸಾಮರ್ಥ್ಯವು ಅದಕ್ಕೆ ವಿಶೇಷ ಸ್ಥಾನ ನೀಡುತ್ತದೆ.

ಈ ಬ್ಲಾಗ್ ಪೋಸ್ಟ್‌ನಲ್ಲಿ ಕಾಗೆಯ ಜೀವನ ಚಕ್ರ, ಅದರ ಆಹಾರ ಪದ್ಧತಿ, ವಾಸಸ್ಥಾನ, ಹಾಗೂ ಸಾಮಾಜಿಕ ವರ್ತನೆಗಳನ್ನು ವಿವರಿಸುತ್ತೇವೆ. ಜೊತೆಗೆ, ಕಾಗೆಯನ್ನು (Crow) ಭಾರತೀಯ ಸಂಸ್ಕೃತಿಯಲ್ಲಿ ಪ್ರಮುಖವಾಗಿ ಬಳಸಲಾಗುವುದರ ಹಿಂದಿನ ಕಾರಣಗಳನ್ನು ಕನ್ನಡದಲ್ಲಿ ವಿಸ್ತಾರವಾಗಿ ತಿಳಿದುಕೊಳ್ಳಿ.

ಕಾಗೆ (Crows) ಬಗ್ಗೆ ಮಾಹಿತಿ ಕನ್ನಡ:

ಕಾಗೆಗಳು ಸಾಮಾನ್ಯವಾಗಿ ಒಂದೇ ಸಂಗಾತಿಯನ್ನು ಹೊಂದಿರುತ್ತವೆ, ಸುಮಾರು 3-7 ಮೊಟ್ಟೆಗಳನ್ನು ಒಮ್ಮೆಗೆ ಇಡುತ್ತದೆ.

ಕಾಗೆಯ ಮಕ್ಕಳು ಹಾರಲು ಶುರುಮಾಡಿದ ಮೇಲೆ,ತಂದೆ ತಾಯಿಗೆ ಗೂಡನ್ನು ಕಾಯುವುದು ಮತ್ತು ಹೊಸ ಮರಿಗಳನ್ನು (ಸ್ವಂತ ತಮ್ಮಾ ತಂಗಿಯರನ್ನು) ನೋಡಿಕೊಳ್ಳಲು ಬಹಳ ಸಹಾಯ ಮಾಡುತ್ತವೆ, ಕೆಲವು ಬಾರಿ ತಂದೆ ತಾಯಿಗೆ ಆಹಾರ ಒದಗಿಸಿದರೆ ಕೆಲವು ಬಾರಿ ತಮ್ಮಾ ತಂಗಿಯರಿ ತಾವೇ ತಿನಿಸುವುದನ್ನು ಗಮನಿಸಲಾಗಿದೆ, ಈ ತರ ಸುಮಾರು 5 ವರುಷಗಳವರೆಗೂ ಮುಂದುವರಿಸುತ್ತವೆ.

ಒಂದು ಕಾಗೆ ಸತ್ತರೆ ಅದರ ಸುತ್ತಲೂ ಹಲವು ಕಾಗೆಗಳು ಕೂಗುತ್ತವೆ ಇದು ಸತ್ತಕಾಗೆ ಕೊಡುವ ಗೌರವವೂ ಹೌದು ಮತ್ತು ಬೇರೆ ಕಾಗೆಗಳಿಗೆ ಸಾವಿನ ಹಿಂದಿರುವ ಪರಿಸ್ಥಿತಿಯಬಗ್ಗೆ ಕೊಡುವ ಎಚ್ಚರವೂ ಹೌದು. ಸತ್ತ ಕಾಗೆಯ ಸುತ್ತಲಿನ ಪರಿಸರವನ್ನು ತುಂಬಾ ಆಳವಾಗಿ ತನಿಖೆ ಮಾಡುತ್ತವೆ ಮತ್ತು ಸಾಮಾನ್ಯವಾಗಿ ಆ ಪರಿಸರವನ್ನು ಭವಿಷ್ಯದಲ್ಲಿ ಪ್ರವೇಶಿಸಲು ಹಿಂಜರಿಯುತ್ತವೆ.

ಕಾಗೆಗಳು ಎಷ್ಟು ಬುದ್ಧಿಶಾಲಿಗಳೆಂದರೆ, ಅವುಗಳನ್ನು “feathered apes”(ಆಕಾಶದ ಮಂಗಗಳು) ಎಂದು ಕರೆಯುತ್ತಾರೆ.

ಕಾಗೆಗಳಿಗೆ ಪಕ್ಷಿ ಸಂಕುಲದಲ್ಲೇ ದೊಡ್ಡ ಗಾತ್ರದ ಮೆದುಳಿದೆ( ದೇಹದ ಅನುಪಾತಕ್ಕೆ), ಅವುಗಳಿಗೆ ಮುಬಾಗದ ಮೆದುಳಿನಲ್ಲಿ ನ್ಯೂರೋನ್ಗಳು ಹೇರಳವಾಗಿದೆ ಆದುದರಿಂದ ಬುದ್ಧಿವಂತಿಕೆಯಲ್ಲಿ ಮನುಷ್ಯನನ್ನು ಬಿಟ್ಟರೆ ಪಕ್ಷಿಗಳಲ್ಲಿ ಕಾಗೆಯೇ ಶ್ರೇಷ್ಠ.

ಕಾಗೆಗಳು ಸುಮಾರು 20 ತರಹದ ಧ್ವನಿಯನ್ನು ಹೊರಡಿಸಬಲ್ಲದು, ಒಂದು ಪ್ರದೇಶದ ಕಾಗೆಗಳ accent ಮತ್ತೊಂದು ಪ್ರದೇಶದ ಕಾಗೆಗಳ accent ಬೇರೆ ಇರುತ್ತದೆ. ಕೇಳಲು ಒಂದೇ ತರಯಿದ್ದರು ಅವುಗಳ ಶಬ್ಧತರಂಗಗಳಲ್ಲಿ ವ್ಯತ್ಯಾಸವಿರುತ್ತದೆ, ಮನುಷ್ಯರಲ್ಲಿ ಹೇಗೋ ಹಾಗೆ.

ಇದನ್ನೂ ಓದಿ: 30 Interesting Facts in Kannada ಕುತೂಹಲಕಾರಿ ಸಂಗತಿಗಳು

ಕಾಗೆಗಳು ಮನುಷ್ಯರ ಮುಖ ಮತ್ತು ಧ್ವನಿಯನ್ನು ತುಂಬಾ ಚೆನ್ನಾಗಿ ಗುರುತು ಹಿಡಿಯಬಲ್ಲವು. ಕಾಗೆಗಳ ಜೊತೆ ವೈರತ್ವ ಒಳ್ಳೆಯದಲ್ಲ, ಒಂದು ಅಧ್ಯಯನದ ಪ್ರಕಾರ ಯಾವ ವ್ಯಕ್ತಿಯನ್ನು ಕಾಗೆಗಳು ಅಪಾಯಕಾರಿ ಎಂದು ಗುರುತಿಸುತ್ತವೋ ಆ ವ್ಯಕ್ತಿಯನ್ನು 5 ವರುಷದ ನಂತರವೂ ಗುರುತುಹಿಡಿಯಬಲ್ಲವು ಮತ್ತು ಅವುಗಳು ತಮ್ಮ ಮುಂದಿನ ತಲೆಮಾರಿಗೂ ಈ ವಿಷಯವನ್ನು ಹಂಚಿಕೊಳ್ಳಬಲ್ಲವು.

New Caledonian crow (Corvus moneduloides) ಎಂಬ ಕಾಗೆಯು ಹುಳ ಹಪ್ಪಟೆಗಳನ್ನು ಸಣ್ಣ ರಂಧ್ರಗಳಿಂದ ಹೊರತೆಗೆಯಲು ಒಂದು ಹುಕ್ಕನ್ನು(tool) ಕಡ್ಡಿಗಳಿಂದ ಮಾಡಿಕೊಳ್ಳುತ್ತವೆ, ಹೊಸ ಉಪಕರಣವನ್ನು ಮಾಡಿಕೊಂಡು ಅದನ್ನು ಬಳಸುವ ಮನೋಶಕ್ತಿ ಇರುವ ಪ್ರಪಂಚದ ಏಕೈಕ ಪಕ್ಷಿ ಇದು, ಇದನ್ನು ಬಿಟ್ಟರೆ ಮೊದಲನೆಯದು (Homo sapiens)ಅಂದರೆ ನಾವು ಮನುಷ್ಯರು ಮತ್ತೊಂದು ಕೆಲವು ಮಂಗಗಳು.

ಯೂರೋಪಿನಲ್ಲಿ ಕಾಗೆಯನ್ನು spirit animal ಎಂದು ಕರೆಯುತ್ತಾರೆ, ಮನುಷ್ಯ ಸತ್ತನಂತರ ಅವನ ಆತ್ಮವನ್ನು ಪುನರ್ಜನ್ಮದಎಡೆಗೆ ಕರೆದೊಯ್ಯುವ ಪಕ್ಷಿ ಎಂದು ನಂಬುತ್ತಾರೆ.

ಪಾಶ್ಚಾತ್ಯ ದೇಶಗಳಲ್ಲಿ, ಮನೆಯಲ್ಲಿ ಸಾವಿನನಂತರ 12 ದಿನದೊಳಗೆ ಕಾಗೆ ಮನೆಯ ಎದುರು, ಕಿಡಕಿ ಮೇಲೆ, ಬಾಗಿಲಲ್ಲಿ, ಉಯಾಲೆ ಮೇಲೆ ಬಂದು ಕೂತರೆ/ಕೂಗಿದರೆ…ಆ ಮನೆಯಲ್ಲಿ ಸತ್ತ ವ್ಯಕ್ತಿ ಪುನರ್ಜನ್ಮ ಹೊಂದಿದ್ದಾನೆ ಎಂಬ ಒಂದು ನಂಬಿಕೆ ಇದೆ.

Related Articles