Home » Banana Health Benefits: ಬಾಳೆ ಹಣ್ಣಿನ 10 ಆರೋಗ್ಯ ಪ್ರಯೋಜನಗಳು

Banana Health Benefits: ಬಾಳೆ ಹಣ್ಣಿನ 10 ಆರೋಗ್ಯ ಪ್ರಯೋಜನಗಳು

by Praveen Mattimani
banana health benefits in kannada

ಬಾಳೆ ಹಣ್ಣು (Banana) ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯ ಮತ್ತು ಸುಲಭವಾಗಿ ಲಭ್ಯವಾಗುವ ಹಣ್ಣುಗಳಲ್ಲಿ ಒಂದಾಗಿದೆ. ಪೌಷ್ಟಿಕಾಂಶಗಳಿಂದ ತುಂಬಿರುವ ಈ ಹಣ್ಣು ದೇಹದ ಆರೋಗ್ಯವನ್ನು ಬೆಂಬಲಿಸಲು ಮತ್ತು ಮನಸ್ಸಿಗೆ ಶಾಂತಿಯನ್ನು ನೀಡಲು ಸಹಕಾರಿಯಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಲ್ಲಿ ಬಾಳೆ ಹಣ್ಣು ವಿಶೇಷ ಸ್ಥಾನವನ್ನು ಹೊಂದಿದೆ, ಏಕೆಂದರೆ ಇದು ಶ್ರದ್ಧೆ, ಆಹಾರ, ಮತ್ತು ಆರೋಗ್ಯದ ನೋಟದಲ್ಲಿ ಅತಿ ಮುಖ್ಯವಾಗಿದೆ.

ಬಾಳೆಹಣ್ಣಿನಲ್ಲಿ (Banana) ಪೊಟ್ಯಾಶಿಯಮ್, ವಿಟಮಿನ್ ಸಿ, ವಿಟಮಿನ್ ಬಿ6, ಮತ್ತು ನಾರಿನಂತಹ ಪ್ರಮುಖ ಪೌಷ್ಟಿಕಾಂಶಗಳಿವೆ, ಇವು ದೇಹದ ವೈಯಕ್ತಿಕ ಆರೋಗ್ಯವನ್ನು ಸುಧಾರಿಸುತ್ತದೆ. ಈ ಹಣ್ಣು ಕೇವಲ ಆರೋಗ್ಯಕ್ಕಷ್ಟೇ ಅಲ್ಲ, ದೇಹದ ತೂಕನಿಯಂತ್ರಣ, ಹೃದಯದ ಆರೋಗ್ಯ ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಸಹಾಯಕವಾಗಿದೆ. ಬಾಳೆ ಹಣ್ಣು ತಿನ್ನುವುದು ಕೇವಲ ದೈಹಿಕ ಆರೋಗ್ಯವನ್ನೇ ಸುಧಾರಿಸುವುದಿಲ್ಲ; ಇದು ಮಾನಸಿಕ ಶಾಂತಿಗೆ ಸಹ ನೆರವಾಗುತ್ತದೆ.

1. ಬಾಳೆಹಣ್ಣಿನಲ್ಲಿ ಪೌಷ್ಟಿಕಾಂಶಗಳು ಅಗಾಧವಾಗಿವೆ:

banana health benefits in kannada

ಬಾಳೆಹಣ್ಣಿನಲ್ಲಿ ಅಪಾರವಾದ ಪೌಷ್ಟಿಕಾಂಶಗಳು ಇರಲಿದ್ದು, ಪೊಟ್ಯಾಶಿ ಯಮ್, ವಿಟಮಿನ್ ಸಿ ಜೊತೆಗೆ ವಿಟಮಿನ್ ಬಿ6, ನಾರಿನ ಪ್ರಮಾಣ ಮತ್ತು ಇನ್ನಿತರ ಅಂಶಗಳು ಸಾಕಷ್ಟು ಸಿಗುತ್ತವೆ. ಎಲ್ಲವೂ ಸಹ ನಮ್ಮ ದೇಹಕ್ಕೆ ಸಮರ್ಪಕವಾಗಿ ಬೇಕಾದ ಪೌಷ್ಟಿಕ ಸತ್ವಗಳೇ ಆಗಿವೆ.

ಬಾಳೆ ಹಣ್ಣನ್ನು ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡಿಕೊಳ್ಳಬಹುದು ಮತ್ತು ಬಾಳೆಹಣ್ಣಿನಲ್ಲಿ ಕಬ್ಬಿಣದ ಅಂಶವೂ ಇರುವುದರಿಂದ ಅದು ರಕ್ತದ ಒತ್ತಡ ಕಡಿಮೆ ಮಾಡುವುದರ ಜೊತೆಗೆ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚು ಮಾಡುತ್ತದೆ.

2. ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಮ್ ಹೆಚ್ಚಾಗಿದೆ:

banana health benefits in kannada

ಬಾಳೆ ಹಣ್ಣಿನಲ್ಲಿ ಪ್ರಮುಖವಾಗಿ ಪೊಟ್ಯಾಶಿಯಮ್ ಅಂಶ ಸಿಗುತ್ತದೆ. ಇದು ನಮ್ಮ ದೇಹದ ಸೋಡಿಯಂ ಅಂಶವನ್ನು ಸಮತೋಲನ ಮಾಡಿ ನಮಗೆ ರಕ್ತದ ಒತ್ತಡ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.

ಇದರಿಂದ ನಮಗೆ ಯಾವುದೇ ತರಹದ ಹೃದಯದ ಸಮಸ್ಯೆ ಬರುವುದಿಲ್ಲ ಮತ್ತು ಪಾರ್ಶ್ವ ವಾಯು ಕೂಡ ಕಾಣಿಸುವುದಿಲ್ಲ.

3. ಬಾಳೆಹಣ್ಣಿನಲ್ಲಿ ಕಂಡುಬರುವ ನಾರಿನ ಪ್ರಮಾಣ:

banana health benefits in kannada

ಬಾಳೆಹಣ್ಣಿನಲ್ಲಿ ಕಂಡುಬರುವ ನಾರಿನ ಪ್ರಮಾಣ ಮುಖ್ಯವಾಗಿ ನಮ್ಮ ಕರುಳಿನ ಸಂಚಲನವನ್ನು ಹೆಚ್ಚು ಮಾಡುವ ಪೆಕ್ಟ್ಟಿನ್ ಪ್ರಮಾಣವನ್ನು ಹೆಚ್ಚಾಗಿ ಒಳಗೊಂಡಿದ್ದು, ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ. ನಮ್ಮ ಸಂಪೂರ್ಣ ದೈಹಿಕ ಆರೋಗ್ಯಕ್ಕೆ ಇದು ಬಹಳ ಒಳ್ಳೆಯದು ಎಂದು ಹೇಳಬಹುದು.

ಒಂದು ಗ್ಲಾಸ್ ಹಾಲು ಮತ್ತು ಬಾದಾಮಿಯನ್ನು ತಿನ್ನುವುದರಿಂದ ಎಷ್ಟು ಪೊಟ್ಯಾಶಿಯಂ ಅಂಶವು ದೇಹಕ್ಕೆ ದೊರೆಯುತ್ತದೋ ಅಷ್ಟೊಂದು ಪೊಟ್ಯಾಶಿಯಂ ಅಂಶವನ್ನು ಒಂದು ಬಾಳೆಹಣ್ಣು ತಿನ್ನುವುದರಿಂದ ನಾವು ಪಡೆಯಬಹುದು.

4. ದೇಹಕ್ಕೆ ತುಂಬಾ ಹಗುರ:

banana health benefits in kannada

ನೀವು ಒಂದು ವೇಳೆ ಭಾರವಾದ ಆಹಾರ ಸೇವನೆ ಮಾಡಿದ್ದರೆ, ನಿಮಗೆ ಒಂದು ವೇಳೆ ಹೊಟ್ಟೆ ಉಬ್ಬರ ಕಂಡು ಬರುತ್ತಿದ್ದರೆ, ನಿಮ್ಮ ಜೀರ್ಣಾಂಗ ಆರೋಗ್ಯವನ್ನು ಇದು ಅಭಿವೃದ್ಧಿಪಡಿಸುತ್ತದೆ. ಇದರಿಂದ ನಿಮ್ಮ ದೇಹ ತುಂಬಾ ಹಗುರವಾಗುತ್ತದೆ ಮತ್ತು ಕೆಟ್ಟು ಹೋದ ಹೊಟ್ಟೆ ಸರಿ ಹೋಗುತ್ತದೆ.

ಇದನ್ನೂ ಓದಿ: Sapota: ಸಪೋಟ ಹಣ್ಣಿನ 10 ಆರೋಗ್ಯ ಪ್ರಯೋಜನಗಳು

5. ರಕ್ತದ ಒತ್ತಡದ ಸಮಸ್ಯೆಯನ್ನು ಬಾಳೆ ಹಣ್ಣು ನಿಯಂತ್ರಣ ಮಾಡುತ್ತದೆ:

banana health benefits in kannada

ಪೊಟ್ಯಾಶಿಯಮ್ ಅಂಶ ಹೆಚ್ಚಾಗಿರುವ ಬಾಳೆಹಣ್ಣನ್ನು ಸೇವನೆ ಮಾಡು ವುದರಿಂದ ನಮ್ಮ ರಕ್ತದ ಒತ್ತಡ ಕಡಿಮೆಯಾಗುತ್ತದೆ.

ಇದರಿಂದ ಯಾವುದೇ ಸಂದರ್ಭದಲ್ಲಿ ಎದುರಾಗಬಹುದಾದ ಹೃದಯದ ಸಮಸ್ಯೆ ಇರುವುದಿಲ್ಲ ಮತ್ತು ಪಾರ್ಶ್ವವಾಯು ಸಹ ಕಂಡುಬರುವುದಿಲ್ಲ.

ಸೈನಸ್ ಅಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತಹ ವ್ಯಕ್ತಿಗಳು ಬಾಳೆಹಣ್ಣಿನ ಜ್ಯೂಸ್ ಅನ್ನು ಪ್ರತಿದಿನ ಕುಡಿಯುವುದರಿಂದ ಈ ಸಮಸ್ಯೆಗೆ ಬೇಗನೇ ಉಪಶಮನ ಕಂಡುಕೊಳ್ಳಬಹುದು.

6. ತೂಕ ನಿರ್ವಹಣೆ ಸಾಧ್ಯ:

Banana : ಬಾಳೆ ಹಣ್ಣಿನ 10 ಆರೋಗ್ಯ ಪ್ರಯೋಜನಗಳು

ಬಾಳೆಹಣ್ಣಿನಲ್ಲಿ ಕ್ಯಾಲೋರಿಗಳು ಕಡಿಮೆ ಇರುತ್ತವೆ. ಕೊಬ್ಬಿನ ಅಂಶ ಕೂಡ ಕಡಿಮೆ ಇರುತ್ತದೆ. ಆದರೆ ನಾರಿನ ಪ್ರಮಾಣ ಜಾಸ್ತಿ ಇರುತ್ತದೆ.

ಹೀಗಾಗಿ ಬಾಳೆಹಣ್ಣು ಸೇವನೆ ಮಾಡುವುದರಿಂದ ಹೊಟ್ಟೆ ತುಂಬಿದ ಅನುಭವ ನಿಮ್ಮದಾಗುತ್ತದೆ. ದೇಹದ ತೂಕ ಕೂಡ ಅಷ್ಟೇ ಚೆನ್ನಾಗಿ ನಿರ್ವಹಣೆ ಆಗುತ್ತದೆ.

7. ಮಾನಸಿಕ ಆರೋಗ್ಯಕ್ಕೆ ಬಾಳೆ ಹಣ್ಣು ಒಳ್ಳೆಯದು:

Banana : ಬಾಳೆ ಹಣ್ಣಿನ 10 ಆರೋಗ್ಯ ಪ್ರಯೋಜನಗಳು

ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6 ಹೆಚ್ಚಾಗಿರುವ ಕಾರಣದಿಂದ ಮೆದುಳಿನ ಆರೋಗ್ಯಕ್ಕೆ ಮತ್ತು ನರಮಂಡಲಗಳ ಅಭಿವೃದ್ಧಿಗೆ ನೆರವಾಗುವ ಅಂಶಗಳು ಇದರಲ್ಲಿ ಸಿಗುತ್ತವೆ.

ಇದು ಮಾನಸಿಕವಾಗಿ ನಮ್ಮ ಆರೋಗ್ಯ ವನ್ನು ಅಭಿವೃದ್ಧಿ ಪಡಿಸುತ್ತದೆ. ಅಂದರೆ ಮಾನಸಿಕ ಒತ್ತಡ ಮತ್ತು ಖಿನ್ನತೆಯನ್ನು ದೂರ ಮಾಡುತ್ತದೆ.

ಉದರದ ಸಮಸ್ಯೆ ಇದ್ದರೆ ಅಂತಹವರು ಬಾಳೆಹಣ್ಣನ್ನು ಮೊಸರು ಮತ್ತು ಸಕ್ಕರೆಯೊಂದಿಗೆ ಬೆರೆಸಿ ತಿನ್ನುವುದರಿಂದ ಉದರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.

8. ಚರ್ಮಕ್ಕೆ ಬಾಳೆ ಹಣ್ಣು ಬಹಳ ಒಳ್ಳೆಯದು:

Banana : ಬಾಳೆ ಹಣ್ಣಿನ 10 ಆರೋಗ್ಯ ಪ್ರಯೋಜನಗಳು

ಬಾಳೆಹಣ್ಣಿನಿಂದ ವಿವಿಧ ಬಗೆಯ ಫೇಸ್ ಪ್ಯಾಕ್ ಮಾಡಿಕೊಂಡು ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ.

ಏಕೆಂದರೆ ಇದು ಚರ್ಮದ ವಯಸ್ಸಾಗುವಿಕೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಯೌವನವನ್ನು ಹೆಚ್ಚಾಗುವಂತೆ ಮಾಡುತ್ತದೆ. ಬಾಳೆ ಹಣ್ಣು ಚರ್ಮಕ್ಕೆ ಫ್ಲೆಕ್ಸಿಬಲ್ ಗುಣವನ್ನು ಕೊಡುತ್ತದೆ.

9. ನೈಸರ್ಗಿಕವಾದ ಸಿಹಿ ಬಾಳೆಹಣ್ಣಿನಲ್ಲಿದೆ:

Banana : ಬಾಳೆ ಹಣ್ಣಿನ 10 ಆರೋಗ್ಯ ಪ್ರಯೋಜನಗಳು

ಆರೋಗ್ಯಕರವಾದ ರೀತಿಯಲ್ಲಿ ಬಾಳೆಹಣ್ಣು ನಿಮ್ಮ ಸಿಹಿ ತಿನ್ನುವ ಅಭ್ಯಾಸವನ್ನು ಕಡಿಮೆ ಮಾಡಿಸುತ್ತದೆ. ಅಂದರೆ ಹೆಚ್ಚು ಸಿಹಿ ತಿಂದು ನಿಮ್ಮ ಶುಗರ್ ಕಂಟ್ರೋಲ್ ತಪ್ಪುವ ಸಾಧ್ಯತೆ ಬಾಳೆಹಣ್ಣಿನಿಂದ ಕಡಿಮೆಯಾಗುತ್ತದೆ.

ಏಕೆಂದರೆ ಬಾಳೆಹಣ್ಣಿನಲ್ಲಿ ನೈಸರ್ಗಿಕವಾಗಿ ಸಿಹಿ ಪ್ರಮಾಣ ಮೊದಲೇ ಇರುತ್ತದೆ. ನೀವು ತಯಾರು ಮಾಡುವ ವಿವಿಧ ಆಹಾರ ಪದಾರ್ಥಗಳಲ್ಲಿ ಸಿಹಿಗಾಗಿ ಸಕ್ಕರೆ ಬದಲು ಬಾಳೆಹಣ್ಣನ್ನು ಬಳಸಬಹುದು.

ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ, ಕ್ಯಾಲ್ಶಿಯಂ, ಸಲ್ಫರ್, ಕಾರ್ಬೊಹೈಡ್ರೇಟ್ ನಂತಹ ಸಾಕಷ್ಟು ಅಂಶಗಳು ಇವೆ. ಇದು ನಮ್ಮ ದೇಹಕ್ಕೆ ಬೇಕಾಗಿರುವ ಅಂಶಗಳು. ಬಾಳೆ ಹಣ್ಣನ್ನು ತಿನ್ನುವುದರಿಂದ ಸ್ಟ್ರೆಸ್ ಆಗಿದ್ದಲ್ಲಿ ಒಳ್ಳೆ ರಿಲ್ಯಾಕ್ಸೇಷನ್ ಸಿಗುತ್ತದೆ.

10. ಬಾಳೆ ಹಣ್ಣು ಜೀರ್ಣಶಕ್ತಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ದೂರ ಮಾಡುತ್ತದೆ:

Banana : ಬಾಳೆ ಹಣ್ಣಿನ 10 ಆರೋಗ್ಯ ಪ್ರಯೋಜನಗಳು

ಬಾಳೆಹಣ್ಣಿನಲ್ಲಿ ಕಂಡು ಬರುವ ಅಗಾಧ ಪ್ರಮಾಣದ ನಾರಿನಾಂಶವು ಕರುಳಿನ ಭಾಗಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶ ಸಿಕ್ಕಂತಾಗಿ ಕರುಳು ಚೆನ್ನಾಗಿ ಕೆಲಸ ಮಾಡಲು ಪ್ರಾರಂಭ ಮಾಡುತ್ತದೆ.

ಇದರಿಂದ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಎಂದು ಆರೋಗ್ಯ ತಜ್ಞರಾದ ಲವ್ನೀತ್ ಬಾತ್ರ ಅವರು ಸಲಹೆ ನೀಡುತ್ತಾರೆ.

ಬಾಳೆ ಹಣ್ಣು (Banana) ಆರೋಗ್ಯದ ಕಣಜವೇ ಆಗಿದ್ದು, ದೈನಂದಿನ ಜೀವನದಲ್ಲಿ ಇದರ ಮಹತ್ವವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಇದು ಕೇವಲ ಪೌಷ್ಟಿಕಾಂಶಗಳಿಂದ ತುಂಬಿ ತುಳುಕಿರುವ ಹಣ್ಣುಮಾತ್ರವಲ್ಲ, ದೇಹದ ಆರೋಗ್ಯವನ್ನು ಸುಧಾರಿಸಲು ಮತ್ತು ಸಂಪೂರ್ಣ ತೃಪ್ತಿಯನ್ನು ನೀಡಲು ಸಹಾಯ ಮಾಡುತ್ತದೆ. ಪೊಟ್ಯಾಶಿಯಮ್, ನಾರಿನಂಶ, ಮತ್ತು ವಿಟಮಿನ್‌ಗಳ ಪ್ರಚುರತೆಯಿಂದ ಬಾಳೆ ಹಣ್ಣು ಹೃದಯ ಆರೋಗ್ಯದಿಂದ ಹಿಡಿದು ಜೀರ್ಣಕ್ರಿಯೆ ಮತ್ತು ಮಾನಸಿಕ ಒತ್ತಡ ನಿವಾರಣೆಯವರೆಗೆ ಅನೇಕ ಅನನ್ಯ ಪ್ರಯೋಜನಗಳನ್ನು ಒದಗಿಸುತ್ತದೆ.

Related Articles