ಹಣ್ಣುಗಳ ನಿಯಮಿತ ಸೇವನೆಯು ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಸಹಜವಾಗಿ ಮಾವಿನ ಹಣ್ಣುಗಳನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ ಆದರೆ ಹಣ್ಣುಗಳ ರಾಣಿ ಎಂದು ಕರೆಯಲ್ಪಡುವ ಒಂದು ಹಣ್ಣೂ ಇದೆ. ನಾವು ಮಾತನಾಡುತ್ತಿರುವ ಹಣ್ಣು ದ್ರಾಕ್ಷಿ(Grapes).
ವಿಟಮಿನ್ ಸಿಯಲ್ಲಿ ಸಮೃದ್ಧವಾಗಿರುವ ದ್ರಾಕ್ಷಿ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಪ್ರತಿಯೊಂದು ರೀತಿಯ ಹಣ್ಣುಗಳು ತನ್ನದೇ ಆದ ಆರೋಗ್ಯ ಪ್ರಯೋಜನ ಹೊಂದಿರುವಂತೆಯೇ, ದ್ರಾಕ್ಷಿಯು ಸಹ ಅಸಂಖ್ಯಾತ ಉಪಯೋಗಗಳನ್ನು ಹೊಂದಿದೆ. ಇದು ವಿಶೇಷವಾಗಿ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಪ್ರತಿದಿನ ದ್ರಾಕ್ಷಿ (Grapes) ಸೇವನೆ ಮಾಡುವುದರಿಂದ ಹಲವಾರು ಪ್ರಯೋಜನ ಸಿಗುತ್ತದೆ.
1. ಕೆಟ್ಟ ಕೊಲೆಸ್ಟ್ರಾಲ್ ಅಂಶಕ್ಕೆ ಮುಕ್ತಿ ನೀಡುತ್ತದೆ

ದೇಹದಲ್ಲಿ ರಕ್ತದ ಸಂಚಾರ ಸರಿಯಾಗಿ ನಡೆದರೆ ಮಾತ್ರ, ಆರೋಗ್ಯದಲ್ಲಿ ನಮಗೆ ಯಾವುದೇ ತೊಂದರೆ ಇರುವುದಿಲ್ಲ. ಇಲ್ಲದಿದ್ದರೆ, ಹೃದಯ ರಕ್ತನಾಳದಲ್ಲಿ ಸಮಸ್ಯೆಗಳು ಕಾಣಲು ಶುರುವಾಗುತ್ತದೆ.
ಇದರ ಜೊತೆಗೆ ಕಾಣಿಸಿಕೊಳ್ಳುವ ಈ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೃದಯದ ಕಾರ್ಯಚಟುವಟಿಕೆಗೆ ಇನ್ನಷ್ಟು ಸಮಸ್ಯೆ ಕೊಡುತ್ತದೆ.
ಹೀಗಾಗಿ ದ್ರಾಕ್ಷಿ ಹಣ್ಣುಗಳ ಸೇವನೆ ಮಾಡುವುದು ಆರೋಗ್ಯಕ್ಕೆ ಹಿತಕರ. ಅಲ್ಲದೇ ಇದು ಹೃದಯದ ಆರೋಗ್ಯವನ್ನು ಅಚ್ಚುಕಟ್ಟಾಗಿ ಕಾಪಾಡುತ್ತದೆ.
2. ದೇಹದ ತೂಕ ನಿಯಂತ್ರಣದಲ್ಲಿ ತುಂಬಾ ಸಹಾಯಕ

ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು ಇತ್ತೀಚಿನ ಜನರಿಗೆ ತುಂಬಾ ಪ್ರಯಾಸದ ಕೆಲಸವಾಗಿದೆ. ಆದರೆ ತಾವು ಮಾಡುವ ವ್ಯಾಯಾಮದ ಜೊತೆಗೆ ಆಹಾರ ಪದ್ಧತಿಯನ್ನು ಸರಿಯಾಗಿ ನಿರ್ವಹಿಸಿಕೊಂಡರೆ ಇದು ಕ್ರಮೇಣ ಸಾಧ್ಯವಾಗುತ್ತದೆ ಎಂದು ಹೇಳಬಹುದು.
ವ್ಯಾಯಾಮ ಮಾಡಿದ ನಂತರ ಒಂದು ಲೋಟ ದ್ರಾಕ್ಷಿ ಹಣ್ಣಿನ ರಸವನ್ನು ಪ್ರತಿ ದಿನ ಕುಡಿಯುವುದರಿಂದ ಸೊಂಟದ ಭಾಗದಲ್ಲಿರುವ ಬೊಜ್ಜು ಕಡಿಮೆಯಾಗಿ ದೇಹದ ತೂಕ ನಿಯಂತ್ರಣಕ್ಕೆ ಬರುತ್ತದೆ.
3. ದ್ರಾಕ್ಷಿ (Grapes) ಹಣ್ಣಿನಲ್ಲಿ ವಿಟಮಿನ್ ಸಿ ಜಾಸ್ತಿ ಪ್ರಮಾಣದಲ್ಲಿದೆ

ಆರೋಗ್ಯ ತಜ್ಞರು ಹೇಳುವ ಹಾಗೆ, ಅನಾರೋಗ್ಯ ಸಮಸ್ಯೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಪರೋಕ್ಷವಾಗಿ ನಮಗೆ ಸಹಾಯ ಮಾಡುವುದು ನಮ್ಮ ದೇಹದ ರೋಗನಿರೋಧಕ ಶಕ್ತಿ ಒಂದೇ.
ಹಾಗಾಗಿ ರೋಗನಿರೋಧಕ ಶಕ್ತಿ ಹೆಚ್ಚಾಗಬೇಕೆಂದರೆ ಅತಿ ಹೆಚ್ಚು ವಿಟಮಿನ್ ಸಿ ಅಂಶವನ್ನು ಒಳಗೊಂಡ ಹಣ್ಣುಗಳು, ಹಾಗೂ ಆಹಾರಗಳನ್ನು ಸೇವನೆ ಮಾಡಬೇಕು.
ಅದರಲ್ಲೂ ಈ ದ್ರಾಕ್ಷಿ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿ ಕಂಡು ಬರುತ್ತದೆ. ಹಾಗಾಗಿ ಈ ದ್ರಾಕ್ಷಿ ಹಣ್ಣನ್ನು ನಿಯಮಿತವಾಗಿ ಸೇವಿಸದರೆ ಒಳ್ಳೆಯದು.
4. ಜೀರ್ಣಶಕ್ತಿ ಹೆಚ್ಚಿಸಲು

ಈ ಹಣ್ಣಿನ ವಿಶೇಷತೆ ಏನೆಂದರೆ, ತನ್ನಲ್ಲಿ ಅಧಿಕ ಪ್ರಮಾಣದ ನಾರಿನಾಂಶ ಹಾಗೂ ಖನಿಜಾಂಶ ಗಳನ್ನು ಒದಗಿಸುವ ಸಾಮರ್ಥ್ಯ ಇದೆ.
ಇದರಿಂದಾಗಿ ದೇಹದ ತೂಕವನ್ನು ನಿಯಂತ್ರಣ ಮಾಡುವಲ್ಲಿ ಹಾಗೂ ಜೀರ್ಣಶಕ್ತಿಯನ್ನು ಸರಿಯಾಗಿ ನಡೆಸುವಲ್ಲಿ ಸಹಕಾರಿಯಾಗಲಿದೆ.
ಇದನ್ನೂ ಓದಿ: Mango: ಮಾವಿನ ಹಣ್ಣಿನ 10 ಆರೋಗ್ಯ ಪ್ರಯೋಜನಗಳು
5. ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕುತ್ತದೆ

ದ್ರಾಕ್ಷಿ ಹಣ್ಣುಗಳಲ್ಲಿ ನೀರಿನ ಅಂಶದ ಪ್ರಮಾಣ ಅಗಾಧ ಪ್ರಮಾಣದಲ್ಲಿದ್ದು, ನಮ್ಮ ದೇಹದ ಪೌಷ್ಟಿಕ ಸತ್ವಗಳ ಪ್ರಮಾಣವನ್ನು ಹೆಚ್ಚು ಮಾಡುತ್ತದೆ ಮತ್ತು ತನ್ನದೇ ಆದ ರೀತಿಯಲ್ಲಿ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ನರಮಂಡಲಗಳ ತೊಂದರೆಯನ್ನು ಕಡಿಮೆ ಮಾಡುತ್ತದೆ. ಮುಖ್ಯವಾಗಿ ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ದ್ರಾಕ್ಷಿ ಹಣ್ಣುಗಳ ಪಾತ್ರ ತುಂಬಾ ದೊಡ್ಡದು.
6. ಅಧಿಕ ಫೈಬರ್

ದ್ರಾಕ್ಷಿಯಲ್ಲಿ ಫೈಬರ್ ಅಂಶ ಕೂಡಾ ಅಧಿಕವಾಗಿದೆ. ಇದು ಉತ್ತಮ ಜೀರ್ಣಕಾರಿ ಆರೋಗ್ಯಕ್ಕೆ ಅವಶ್ಯಕವಾಗಿದೆ. ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಮಲಬದ್ಧತೆ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳನ್ನು ತಡೆಯುತ್ತದೆ.
7. ಉರಿಯೂತ ನಿವಾರಕ

ದ್ರಾಕ್ಷಿಯಲ್ಲಿ ಉರಿಯೂತ ನಿವಾರಕ ರಾಸಾಯನಿಕಗಳಿವೆ. ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕ್ಯಾನ್ಸರ್, ಆಲ್ಝೈಮರ್ನ ಕಾಯಿಲೆ ಮತ್ತು ಹೃದ್ರೋಗಗಳು ದೀರ್ಘಕಾಲದ ಉರಿಯೂತಕ್ಕೆ ಸಂಬಂಧಿಸಿದ್ದಾಗಿವೆ.
8. ಹೃದಯದ ಆರೋಗ್ಯ

ದ್ರಾಕ್ಷಿ ಹೃದಯದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇವುಗಳಲ್ಲಿ ಪಾಲಿಫಿನಾಲ್ ಗಳು ಅಡಗಿವೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದ್ರಾಕ್ಷಿಯನ್ನು ತಿನ್ನುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು.
9. ದ್ರಾಕ್ಷಿ (Grapes)ಅತ್ಯುತ್ತಮ ಉತ್ಕರ್ಷಣ ನಿರೋಧಕ ಹಣ್ಣು

ದ್ರಾಕ್ಷಿಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಫ್ರೀ ರಾಡಿಕಲ್ ಗಳಿಂದ ಉಂಟಾಗುವ ಹಾನಿಯಿಂದ ಜೀವಕೋಶಗಳನ್ನು ರಕ್ಷಿಸಲು ಇದು ಸಹಾಯ ಮಾಡುತ್ತದೆ. ಈ ಫ್ರೀ ರಾಡಿಕಲ್ಗಳು ಕ್ಯಾನ್ಸರ್ ಮತ್ತು ಹೃದ್ರೋಗ ಸೇರಿದಂತೆ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ.
10. ದ್ರಾಕ್ಷಿ (Grapes) ಕಣ್ಣುಗಳಿಗೆ (Eyes) ತುಂಬಾ ಒಳ್ಳೆಯದು

ಹೌದು ದ್ರಾಕ್ಷಿಯಲ್ಲಿ ವಿಟಮಿನ್ ಸಿ ಅಂಶವಿದೆ. ಆದುದರಿಂದ ಇದನ್ನು ಸೇವಿಸೋದರಿಂದ ಕಣ್ಣುಗಳ ದೃಷಿ ಉತ್ತಮವಾಗುತ್ತದೆ. ದ್ರಾಕ್ಷಿ ಪೌಷ್ಟಿಕಾಂಶದ ಆಗರವಾಗಿದೆ. ಇದನ್ನು ಸೇವನೆ ಮಾಡುವುದರಿಂದ ಉತ್ತಮ ಅರೋಗ್ಯ ಕಾಪಾಡುವ ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.