ಪಪ್ಪಾಯ (Papaya) ಅಂದರೆ ಪರಂಗಿ ಹಣ್ಣು ಸೇವಿಸುವುದರಿಂದ ಮನುಷ್ಯನ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶ ದೊರೆಯುತ್ತದೆ. ಪಪ್ಪಾಯ ಹಣ್ಣು ಉಪಯೋಗಿಸಿದರೆ ಮನುಷ್ಯನ ಚರ್ಮದ ಸೌಂದರ್ಯ ಹೆಚ್ಚಿಸಿಕೊಳ್ಳುತ್ತದೆ. ಇದರ ಸೇವನೆಯಿಂದ ಹೆಚ್ಚಿನ ಜೀವಸತ್ವ ಮತ್ತು ಖನಿಜಾಂಶಗಳನ್ನು ಹೊಂದಬಹುದು. ಅಲ್ಲದೇ ಕ್ಯಾನ್ಸರ್, ಅಸ್ತಮಾ, ಮಧುಮೇಹ ರೋಗ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.
ವರ್ಷ ಪೂರ್ತಿ ಸಿಗುವ ಹಣ್ಣು ಎಂದರೆ ಪರಂಗಿ ಹಣ್ಣು ಎಂದು ಹೇಳಬಹುದು. ಕೇವಲ ಮಾರು ಕಟ್ಟೆಯಲ್ಲಿ ಮಾತ್ರವಲ್ಲದೆ ನಾವೇ ಸ್ವತಹ ಇದನ್ನು ಮನೆಯ ಬಳಿ ಬೆಳೆಯಬಹುದು. ಭೂಮಿಯ ಫಲವತ್ತತೆಯ ಆಧಾರದ ಮೇಲೆ ಪರಂಗಿ ಹಣ್ಣಿನ ರುಚಿ ನಿಂತಿರುತ್ತದೆ. ಈಗ ವಿಷಯ ಎಂದರೆ ಖಾಲಿ ಹೊಟ್ಟೆಯಲ್ಲಿ ಪರಂಗಿ ಹಣ್ಣನ್ನು ತಿನ್ನುವುದರಿಂದ ಲಾಭಾ ಜಾಸ್ತಿ ಎಂದು.
1. ಕರುಳಿನ ಆರೋಗ್ಯದ ರಕ್ಷಣೆ

ಪಪ್ಪಾಯಿ (Papaya) ಹಣ್ಣಿನ ರಸವನ್ನು ಕುಡಿಯುವುದರಿಂದ ಜಂತುಹುಳುವಿನ ಸಮಸ್ಯೆಯನ್ನು ನಿವಾರಣೆಯಾಗುತ್ತದೆ. ಅದಲ್ಲದೇ ಹೊಟ್ಟೆಯಲ್ಲಿನ ಹುಣ್ಣಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
2. ಜೀರ್ಣ ಶಕ್ತಿ ಹೆಚ್ಚಿಸುತ್ತದೆ

ಪರಂಗಿ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಅಜೀರ್ಣತೆ ಸಮಸ್ಯೆ ದೂರವಾಗುತ್ತದೆ. ಪರಂಗಿ ಹಣ್ಣಿನ ಪ್ರಭಾವದಿಂದ ದೇಹದ ಜೀರ್ಣಶಕ್ತಿ ವೃದ್ಧಿಸುತ್ತದೆ. ಇಷ್ಟೇ ಅಲ್ಲದೆ ನಮ್ಮ ದೇಹ ನಾವು ತಿನ್ನುವ ಆಹಾರ ವನ್ನು ಅತ್ಯಂತ ಪರಿಣಾಮಕಾರಿಯಾಗಿ ಸಂಸ್ಕರಿಸಲು ನೆರವಾಗುತ್ತದೆ. ಬೆಳಗಿನ ಸಮಯದಲ್ಲಿ ಸಾಧ್ಯವಾದಷ್ಟು ನಾರಿನಾಂಶ ಹೆಚ್ಚಾಗಿರುವ ಹಣ್ಣು ತರಕಾರಿಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಂಡರೆ ತುಂಬಾ ಉತ್ತಮ.
3. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಪರಂಗಿ (Papaya) ಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಇದು ನಮ್ಮ ದೇಹದ ರೋಗ ನಿರೋಧಕ ಶಕ್ತಿಗೆ ಸಾಕಷ್ಟು ಅನುಕೂಲ ಮಾಡಿಕೊಡುತ್ತದೆ.
ಇದರಲ್ಲಿ ಸೋಂಕು ಮತ್ತು ಆರೋಗ್ಯದ ಅಸ್ವಸ್ಥತೆಗಳನ್ನು ದೂರ ಮಾಡುವ ಗುಣವಿದೆ. ಬೆಳಗಿನ ಸಮಯದಲ್ಲಿ ಇಂತಹ ಆಹಾರಗಳನ್ನು ಹೆಚ್ಚಾಗಿ ಸೇವಿಸಿ.
4. ಶುಗರ್ ಇರುವವರಿಗೆ ಪಪ್ಪಾಯ (Papaya) ಒಳ್ಳೆಯದು

ಪರಂಗಿ ಹಣ್ಣು ತನ್ನಲ್ಲಿ ಕಡಿಮೆ ಸಕ್ಕರೆ ಪ್ರಮಾಣವನ್ನು ಹೊಂದಿದ್ದು ಅಧಿಕ ನಾರಿನಾಂಶವನ್ನು ಹೊಂದಿದೆ.
ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವು ದರಿಂದ ಸಕ್ಕರೆ ಕಾಯಿಲೆ ಇರುವವರಿಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಉತ್ತಮವಾಗಿ ನಿರ್ವಹಣೆಯಾಗುತ್ತದೆ.
ಇದನ್ನೂ ಓದಿ: Pineapple: ಅನಾನಸ್ ಹಣ್ಣಿನ 10 ಆರೋಗ್ಯ ಪ್ರಯೋಜನಗಳು
5. ಉರಿಯುತ ನಿಯಂತ್ರಣ ಮಾಡುತ್ತದೆ

ಪರಂಗಿ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಇನ್ಫ್ಲ ಮೆಟರಿ ಲಕ್ಷಣಗಳು ಸಾಕಷ್ಟು ಕಂಡುಬರುವುದ ರಿಂದ ನಮ್ಮ ದೇಹದ ಉರಿಯುತ ಸಮಸ್ಯೆಯನ್ನು ಇದು ನಿವಾರಣೆ ಮಾಡುತ್ತದೆ.
ಖಾಲಿ ಹೊಟ್ಟೆಯಲ್ಲಿ ಪರಂಗಿ ಹಣ್ಣು ಸೇವಿಸುವು ದರಿಂದ ಉರಿಯುತಕ್ಕೆ ಸಂಬಂಧಪಟ್ಟಂತೆ ಬೇರೆ ಬಗೆಯ ಆರೋಗ್ಯ ಸಮಸ್ಯೆಗಳು ಕಾಣಿಸುವುದು ತಪ್ಪುತ್ತದೆ.
6. ತ್ವಚೆಯ ಸೌಂದರ್ಯ ವೃದ್ಧಿಸುತ್ತದೆ

ಪರಂಗಿ ಹಣ್ಣಿನಲ್ಲಿ ವಿಟಮಿನ್ ಎ ಹೆಚ್ಚಾಗಿರುವುದರಿಂದ ಆರೋಗ್ಯಕರವಾದ ಮತ್ತು ಸೌಂದರ್ಯದಿಂದ ಕೂಡಿದ ತ್ವಚೆಯನ್ನು ಹೊಂದಲು ಇದು ಸಹಾಯಮಾಡುತ್ತದೆ.
ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಪರಂಗಿ ಹಣ್ಣನ್ನು ತಿನ್ನುವು ದರಿಂದ ಮೊಡವೆಗಳು, ಸಣ್ಣ ಸಣ್ಣ ಗುಳ್ಳೆಗಳು, ಚರ್ಮದ ವಯಸ್ಸಾಗವಿಕೆ ಪ್ರಕ್ರಿಯೆ ಹೀಗೆ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ.
7. ಪಪ್ಪಾಯ (Papaya) ತೂಕ ನಿಯಂತ್ರಣ ಮಾಡುತ್ತದೆ

ಪಪ್ಪಾಯ ಹಣ್ಣಿನಲ್ಲಿ ಕ್ಯಾಲೋರಿಗಳು ಕಡಿಮೆ ಇರುವುದು. ಹೀಗಾಗಿ ಇದು ಖಾಲಿ ಹೊಟ್ಟೆಯಲ್ಲಿ ನಿಮ್ಮ ದೇಹ ಸೇರಿದರೆ ನಿಮ್ಮ ಹೊಟ್ಟೆ ಹಸಿವು ನಿಯಂತ್ರಣವಾಗುತ್ತದೆ ಮತ್ತು ನಿಮಗೆ ಇಡೀ ದಿನ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ.
ಪ್ರೋಟಿನ್ ಮತ್ತು ಇನ್ನಿತರ ಪೌಷ್ಟಿಕಾಂಶಗಳು ನಿಮ್ಮ ಆಹಾರ ಪದ್ಧತಿಯಲ್ಲಿ ಸಮತೋಲನವಾಗಿರುವಂತೆ ನೋಡಿಕೊಳ್ಳಿ.
8. ಹೃದಯದ ಆರೋಗ್ಯಕ್ಕೆ ಪಪ್ಪಾಯ (Papaya) ಒಳ್ಳೆಯದು

ಪರಂಗಿ ಹಣ್ಣಿನಲ್ಲಿ ಪೊಟ್ಯಾಶಿಯಂ, ನಾರಿನ ಅಂಶ ಮತ್ತು ಆಂಟಿ ಆಕ್ಸಿಡೆಂಡ್ ಅಂಶಗಳ ಪ್ರಮಾಣ ಹೇರಳವಾಗಿ ಕಂಡುಬರುತ್ತದೆ.
ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಪರಂಗಿ ಹಣ್ಣನ್ನು ಸೇವಿಸುವು ದರಿಂದ ಹೃದಯದ ಸಮಸ್ಯೆ, ಹೆಚ್ಚಿನ ಕೊಲೆಸ್ಟ್ರಾಲ್ ತೊಂದರೆ ಮತ್ತು ಪಾರ್ಶ್ವವಾಯು ತರಹದ ಲಕ್ಷಣಗಳು ದೂರವಾಗುತ್ತವೆ.
9. ಪಪ್ಪಾಯ (Papaya) ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ

ಪ್ರತಿನಿತ್ಯ ಪಪ್ಪಾಯಿ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಚರ್ಮದ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಸತ್ತ ಜೀವಕೋಶಗಳನ್ನು ತೊಡೆದುಹಾಕುವ ಮೂಲಕ ಮೊಡವೆಗಳು, ಮುಖದ ಮೇಲಿನ ಗುಳ್ಳೆಗಳು ಹಾಗೂ ಸುಕ್ಕುಗಟ್ಟುವಿಕೆಯಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ.
10. ಕೂದಲು ಬೆಳವಣಿಗೆಗೆ ಸಹಾಯಕಾರಿ

ಪಪ್ಪಾಯಿ ಹಣ್ಣಿನ ರಸವನ್ನು ದಿನನಿತ್ಯ ಸೇವನೆ ಮಾಡುವುದರಿಂದ ಕೂದಲು ಉದುರುವಿಕೆ ಸೇರಿದಂತೆ ಇನ್ನಿತ್ತರ ಸಮಸ್ಯೆಗಳು ದೂರವಾಗುತ್ತದೆ. ಕೂದಲು ಬೆಳವಣಿಗೆಗೂ ಸಹಾಯಕವಾಗಿದೆ.