ಸಂಶೋಧನೆಯೊಂದರ ಪ್ರಕಾರ ಅನಾನಸ್ (Pineapple) ಹಣ್ಣು ನಿಮ್ಮ ದೇಹಕ್ಕೆ ಬೇಕಾಗುವ ಉರಿಯೂತದ ಅಂಶಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೇರಳವಾಗಿ ನೀಡುತ್ತದೆ ಎಂದು ವರದಿಯಾಗಿದೆ. ಜೊತೆಗೆ ಈ ಪೌಷ್ಟಿಕ ಹಣ್ಣು ಆರೋಗ್ಯಕರ ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ. ಅಲ್ಲದೆ ನಿಮ್ಮ ಮೂಳೆಗಳು, ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಯೋಜನಕಾರಿಯಾಗಿದೆ.
1. ರೋಗ ನಿರೋಧಕ ಶಕ್ತಿ ಹೆಚ್ಚುವುದು

ಅನಾನಸ್ನಲ್ಲಿ (Pineapple) ವಿಟಮಿನ್ ಸಿ ಇರುವುದರಿಂದ ಜೀವಕಣಗಳು ಹಾನಿಯಾಗುವುದನ್ನು ತಡೆಗಟ್ಟಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.
ದೇಹಕ್ಕೆ ವಿಟಮಿನ್ ಸಿ ದೊರೆಯುವುದರಿಂದ ಸಂಧಿವಾತ, ಹೃದಯ ಸಮಸ್ಯೆ ಉಂಟಾಗದಂತೆ ದೇಹವನ್ನು ರಕ್ಷಣೆ ಮಾಡುತ್ತದೆ.
2. ಚರ್ಮಕ್ಕೆ ಪ್ರಯೋಜನಕಾರಿ

ಅನಾನಸ್ (Pineapple) ಜ್ಯೂಸ್ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳೊಂದಿಗೆ ಹೋರಾಡುವ ಜನರಿಗೆ ಉತ್ತಮ ಆಯ್ಕೆಯಾಗಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಮುಖದ ಮೇಲಿನ ಮೊಡವೆಗಳು ಮತ್ತು ಕಲೆಗಳಿಂದ ಪರಿಹಾರ ದೊರೆಯುತ್ತದೆ. ಅನಾನಸ್ ಜ್ಯೂಸ್ನಲ್ಲಿರುವ ಪೋಷಕಾಂಶಗಳು ಚರ್ಮದಿಂದ ಸತ್ತ ಜೀವಕೋಶಗಳನ್ನು ಕಡಿಮೆ ಮಾಡುತ್ತದೆ.
3. ಮೂಳೆಗಳನ್ನು ಬಲವಾಗಿಸುತ್ತದೆ

ಅನಾನಸ್ ಜ್ಯೂಸ್ ಸೇವನೆಯು ಹಲ್ಲು ಮತ್ತು ಮೂಳೆಗಳನ್ನು ಗಟ್ಟಿಯಾಗಿಸಲು ಉತ್ತಮ ಮಾರ್ಗವಾಗಿದೆ. ಈ ರಸದಲ್ಲಿ ಕ್ಯಾಲ್ಸಿಯಂ ಮತ್ತು ಮ್ಯಾಂಗನೀಸ್ ಸಮೃದ್ಧವಾಗಿರುವ ಕಾರಣ, ಇದು ಹಲ್ಲು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ನಿಮಗೆ ಹಲ್ಲು ಮತ್ತು ಮೂಳೆಗಳಲ್ಲಿ ನೋವು ಅಥವಾ ಊತದ ಸಮಸ್ಯೆ ಇದ್ದರೆ ಖಂಡಿತವಾಗಿಯೂ ಅನಾನಸ್ ಜ್ಯೂಸ್ ಕುಡಿಯಿರಿ.
4. ತೂಕ ಇಳಿಕೆಗೆ ಸಹಾಯಕ

ವಿಟಮಿನ್ ಸಿ ಅನಾನಸ್ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಅಷ್ಟೇ ಅಲ್ಲ, ಬೊಜ್ಜು ನಿವಾರಕ ಗುಣಗಳು ಇದರಲ್ಲಿದ್ದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಅನಾನಸ್ ರಸವು ನಿಮಗೆ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ: Apple: ಸೇಬು ಹಣ್ಣಿನ 10 ಆರೋಗ್ಯ ಪ್ರಯೋಜನಗಳು
5. ಸೈನಸ್ ನಿವಾರಣೆಗೆ ಪರಿಣಾಮಕಾರಿಯಾದ ಮನೆಮದ್ದು

ಮೂಗು ಕಟ್ಟಿ ತಲೆನೋವು ಕಾಣಿಸಿಕೊಂಡಿದ್ದರೆ ಇದನ್ನು ಹೋಗಲಾಡಿಸಲು ಪೈನಾಪಲ್ ತಿನ್ನಿ. ಇದರಲ್ಲಿರುವ ಬ್ರೊಮೆಲೈನ್ ಮೂಗುಕಟ್ಟುವುದನ್ನು ತಡೆಗಟ್ಟಿ ತಲೆನೋವು ಉಂಟಾಗದಂತೆ ತಡೆಯುತ್ತದೆ.
6. ಕಣ್ಣಿಗೆ ಪ್ರಯೋಜನಕಾರಿ

ಅನಾನಸ್ ರಸವು ಕಣ್ಣುಗಳಿಗೂ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ವಿಟಮಿನ್ ಎ ಮತ್ತು ಆ್ಯಂಟಿಆಕ್ಸಿಡೆಂಟ್ ಗಳಿದ್ದು ಕಣ್ಣಿನ ಸಮಸ್ಯೆಗಳನ್ನು ದೂರ ಮಾಡುತ್ತದೆ.
ಚಿಕ್ಕ ಮಗುವಿಗೆ ಮೊದಲಿನಿಂದಲೂ ಇದರ ರಸವನ್ನು ನೀಡಿ, ಚಿಕ್ಕ ವಯಸ್ಸಿನಲ್ಲೇ ದೃಷ್ಟಿ ದುರ್ಬಲವಾಗುವುದಿಲ್ಲ.
7. ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುತ್ತದೆ

ಪೈನಾಪಲ್ ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇನ್ನು ರಕ್ತ ಹೆಪ್ಪುಗಟ್ಟದ ಸಮಸ್ಯೆ ಇರುವವರು ಈ ಹಣ್ಣು ತಿನ್ನಲು ಹೋಗಬೇಡಿ.
8. ಅನಾನಸ್ (Pineapple) ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ

ಅನಾನಸ್ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುವ ಮೂಲಕ ಹೊಟ್ಟೆಯನ್ನು ತಂಪಾಗಿಸುವ ಕೆಲಸ ಮಾಡುತ್ತದೆ. ನೀವು ಅತಿಸಾರ ಅಥವಾ ಹೊಟ್ಟೆ ನೋವಿನಿಂದ ಬಳಲುತ್ತಿದ್ದರೆ, ಅನಾನಸ್ ರಸವು ಉತ್ತಮ ಆಯ್ಕೆಯಾಗಿದೆ.
ಇದರ ನಿಯಮಿತ ಸೇವನೆಯು ಜೀರ್ಣಾಂಗ ವ್ಯವಸ್ಥೆಯನ್ನು ಬಲವಾಗಿರಿಸುತ್ತದೆ. ನಿತ್ಯವೂ ಒಂದು ಲೋಟ ಇದರ ರಸವನ್ನು ಕುಡಿಯುವುದರಿಂದ ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
9. ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ

ಅನಾನಸ್ನಲ್ಲಿ (Pineapple) ವಿಟಮಿನ್ ಬಿ ಇದ್ದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕಾರಿ.
ತುಂಬಾ ಮಾನಸಿಕ ಒತ್ತಡವಿದ್ದಾಗ ಒಂದು ಬೌಲ್ ಅನಾನಸ್ ತಿನ್ನಿ, ನಿಮ್ಮ ಆಲೋಚನೆಗಳನ್ನು ಹೊರದೂಡಿ, ನಿಮ್ಮನ್ನು ರಿಲ್ಯಾಕ್ಸ್ ಮಾಡುವುದು.
10. ಶೀತ ಹಾಗೂ ಕೆಮ್ಮಿಗೆ ಉತ್ತಮವಾದ ಮನೆಮದ್ದು

ಅನಾನಸ್ನಲ್ಲಿ ಬ್ರೊಮೆಲೈನ್ ಹಾಗೂ ವಿಟಮಿನ್ ಸಿ ಇರುವುದರಿಂದ ಕೆಮ್ಮು, ಶೀತ ತಡೆಗಟ್ಟುವಲ್ಲಿ ಸಹಕಾರಿ. ಇನ್ನು ಕಾಯಿಲೆ ಬಿದ್ದಾಗ ಪೈನಾಪಲ್ ಜ್ಯೂಸ್ ಕುಡಿದರೆ ಬೇಗನೆ ಚೇತರಿಸಿಕೊಳ್ಳಬಹುದು.