ರಸಭರಿತ ಹಣ್ಣು ಎಂದಾಕ್ಷಣ ನೆನಪಿಗೆ ಬರುವ ಮೊದಲ ಹಣ್ಣು ಎಂದರೆ, ಅದು ಕಲ್ಲಂಗಡಿ ಹಣ್ಣು (Watermelon). ಸಾಕಷ್ಟು ಮಂದಿ ಕಲ್ಲಂಗಡಿ ಹಣ್ಣು ಇಷ್ಟಪಟ್ಟು ಸೇವಿಸುತ್ತಾರೆ. ಹಣ್ಣಿನಲ್ಲಿ ನೀರಿನಾಂಶ ಹೆಚ್ಚಾಗಿರುವುದರಿಂದ ಬೇಸಿಗೆಯಲ್ಲಂತೂ ಈ ಹಣ್ಣು ಅಮೃತವೆಂದೇ ಭಾಸವಾಗುವುದುಂಟು. ಕಲ್ಲಂಗಡಿ ಹಣ್ಣು (Watermelon) ಹೆಚ್ಚು ಸಿಹಿಯಾಗಿರುವುದರ ಜತೆಗೆ ಆಂಟಿ ಆಕ್ಸಿಡೆಂಟ್ಗಳನ್ನು ಹೊಂದಿರುತ್ತದೆ. ಜತೆಗೆ ಜೀವಸತ್ವಗಳು, ಖನಿಜಗಳು ಮತ್ತು ಇತರ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ಕ್ಯಾಲೊರಿ ಕಡಿಮೆ ಇರುತ್ತದೆ. ಇದರಲ್ಲಿ ವಿಟಮಿನ್ ಸಿ ಮತ್ತು ಎ ಅಂಶವಿರುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
1. ಕ್ಯಾನ್ಸರ್ ವಿರುದ್ಧ ಇದು ರಾಮಬಾಣ

ಕಲ್ಲಂಗಡಿ (Watermelon) ಹಣ್ಣಿನಲ್ಲಿ ನೈಸರ್ಗಿಕವಾದ ಲೈಕೋಪಿನ್ ಅಂಶ ಹೆಚ್ಚಾಗಿ ಕಂಡುಬರುತ್ತದೆ.
ಇದು ಪ್ರಮುಖವಾಗಿ ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯನ್ನು ತಡೆ ಹಾಕುತ್ತದೆ ಎಂದು ಹೇಳುತ್ತಾರೆ.
2. ಕಲ್ಲಂಗಡಿ ಹಣ್ಣು (Watermelon) ನಿಮ್ಮ ದೇಹವನ್ನು ಹೈಡ್ರೇಟೆಡ್ ಆಗಿ ಇರಿಸುತ್ತದೆ

ಕಲ್ಲಂಗಡಿ ಹಣ್ಣಿನಲ್ಲಿ (Watermelon) ನೀರಿನ ಅಂಶ ಹೆಚ್ಚಾಗಿರುವುದರಿಂದ ದೇಹವನ್ನು ನಿರ್ಜಲೀಕರಣದಿಂದ ಕಾಪಾಡಿ, ಹೈಡ್ರೇಟೆಡ್ ಆಗಿರಿಸುವಲ್ಲಿ ಸಹಕಾರಿಯಾಗಿದೆ.
ಅಲ್ಲದೆ, ಇದು ಕಡಿಮೆ ಕ್ಯಾಲರಿಗಳನ್ನು ಹೊಂದಿರುವ ಕಾರಣ ತೂಕ ಕಳೆದುಕೊಳ್ಳಲು ಸಹಕಾರಿಯಾಗಿದೆ.
ಇದು ನಿಮ್ಮ ಹೃದಯ ಮತ್ತು ಚರ್ಮದ ಆರೋಗ್ಯಕ್ಕೆ ಉತ್ತಮ. ಬಿಸಿಲಿನ ಈ ವಾತಾವರಣದಲ್ಲಿ, ಕಲ್ಲಂಗಡಿ ನಿಮ್ಮ ದೇಹದ ಉಷ್ಣತೆಯನ್ನು ತಂಪಾಗಿಸುತ್ತದೆ.
3. ತೂಕ ನಷ್ಟಕ್ಕೆ ಸಹಕಾರಿ ಕಲ್ಲಂಗಡಿ ಹಣ್ಣು (Watermelon)

ಕಲ್ಲಂಗಡಿ ಹಣ್ಣಿನಲ್ಲಿ ಶೇ. 92ರಷ್ಟು ನೀರು ಇರುವುದರಿಂದ, ಇದನ್ನು ಸೇವಿಸಿದ ಕೂಡಲೇ ನಿಮಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ.
ಇದರಿಂದ ನೀವು ಅನಾರೋಗ್ಯಕರ ಆಹಾರವನ್ನು ಸೇವಿಸುವ ಸಾಧ್ಯತೆ ಕಡಿಮೆ. ಕಲ್ಲಂಗಡಿ ಹಣ್ಣು (Watermelon) ಕಡಿಮೆ ಕ್ಯಾಲರಿ ಹೊಂದಿದೆ. ಹೀಗಾಗಿ ತೂಕ ನಷ್ಟಕ್ಕೆ ಇದು ಸಹಕಾರಿ.
4. ರಕ್ತದಲ್ಲಿನ ಸಕ್ಕರೆ ಮಟ್ಟ ನಿರ್ವಹಣೆ

ಅಮೈನೋ ಆಮ್ಲವಾದ ಎಲ್ ಸಿಟ್ರುಲಿನ್ ಅಂಶವನ್ನು ಕಲ್ಲಂಗಡಿ ಹಣ್ಣು ಹೊಂದಿದೆ.
ಈ ಅಮೈನೋ ಆಮ್ಲಗಳು ನಿಮ್ಮ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಇನ್ಸುಲಿನ್ ಅನ್ನು ಸರಿಯಾಗಿ ಬಳಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Pineapple: ಅನಾನಸ್ ಹಣ್ಣಿನ 10 ಆರೋಗ್ಯ ಪ್ರಯೋಜನಗಳು
5. ಹಲ್ಲಿನ ಸಮಸ್ಯೆ ನಿವಾರಣೆ

ಪ್ರತಿದಿನ ಕಲ್ಲಂಗಡಿ ಹಣ್ಣನ್ನು ತಿನ್ನುವುದರಿಂದ ವಸಡು ಸಮಸ್ಯೆಯನ್ನು ತಡೆಯಬಹುದು. ಬಹುತೇಕ ಮಂದಿ ವಸಡು ನೋವಿನಿಂದ ಬಳಲುತ್ತಿದ್ದಾರೆ.
ಕಲ್ಲಂಗಡಿಯಲ್ಲಿರುವ ವಿಟಮಿನ್ ಸಿ ವಸಡುಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಪ್ರತಿದಿನ ಒಂದು ಕಪ್ ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ವಸಡು ಕಾಯಿಲೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
6. ಉರಿಯೂತದ ವಿರುದ್ಧ ಹೋರಾಡಲು ಕಲ್ಲಂಗಡಿ ಹಣ್ಣು (Watermelon) ಸಹಕಾರಿ

ಉರಿಯೂತವು ಹೃದ್ರೋಗ, ಕ್ಯಾನ್ಸರ್ ಮತ್ತು ಫೈಬ್ರೊಮ್ಯಾಲ್ಗಿಯಂಥ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಅನೇಕ ಜನರು ಉರಿಯೂತದಿಂದ ಬಳಲುತ್ತಿದ್ದಾರೆ. ಕಲ್ಲಂಗಡಿ ತಿನ್ನುವುದು ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
7. ನರಗಳು ಸರಿಯಾಗಿ ಕೆಲಸ ಮಾಡಲು ಸಹಕಾರಿ

ಕಲ್ಲಂಗಡಿಯಲ್ಲಿ ಪೊಟ್ಯಾಸಿಯಮ್ ಇದೆ. ಇದು ನಿಮ್ಮ ನರಗಳು ಸರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.
ಪೊಟ್ಯಾಸಿಯಮ್ ನಿಮ್ಮ ದೇಹದ ಮೂಲಕ ನರ ಸಂಕೇತಗಳನ್ನು ಕಳುಹಿಸಲು ಅನುವು ಮಾಡಿಕೊಡುತ್ತದೆ. ನಿಮ್ಮ ಕಾಲುಗಳಲ್ಲಿ ಆಗಾಗ್ಗೆ ಸೆಳೆತವಾಗುತ್ತಿದ್ದರೆ, ಕಲ್ಲಂಗಡಿ ರಸವನ್ನು ಕುಡಿಯಿರಿ.
8. ಜೀರ್ಣಕ್ರಿಯೆ ಸುಧಾರಣೆ

ಕಲ್ಲಂಗಡಿಯಲ್ಲಿ ನೀರು ಮತ್ತು ನಾರಿನಂಶವಿದೆ. ಇವು ನಿಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಫೈಬರ್ ಮಲಬದ್ಧತೆ ಮತ್ತು ಅಜೀರ್ಣವನ್ನು ತಡೆಯಲು ಸಹಾಯ ಮಾಡುತ್ತದೆ.
ಕಲ್ಲಂಗಡಿಯಲ್ಲಿರುವ ಫೈಬರ್ ಮತ್ತು ನೀರು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ.
9. ಶಾಖದ ಹೊಡೆತದಿಂದ ರಕ್ಷಣೆ

ಬಿಸಿಲಿನ ಪ್ರಖರತೆ ಹೆಚ್ಚಿರುವುದರಿಂದ ಹೀಟ್ ಸ್ಟ್ರೋಕ್ನಂಥ ಗಂಭೀರ ಸಮಸ್ಯೆ ಎದುರಿಸಬಹುದು. ದೇಹವು ತುಂಬಾ ಬಿಸಿಯಾದಾಗ, ಜ್ವರದಂಥ ಗಂಭೀರ ಸಮಸ್ಯೆಗಳು ಎದುರಾಗಬಹುದು.
ಕಲ್ಲಂಗಡಿ ರಸವನ್ನು ಸೇವಿಸುವುದರಿಂದ ಶಾಖದ ಹೊಡೆತವನ್ನು ತಡೆಯಲು ಸಹಾಯ ಮಾಡುತ್ತದೆ. ಇದು ತಾಪಮಾನ ನಿಯಂತ್ರಿಸಲು ಸಹಕಾರಿಯಾಗಿದೆ.
10. ಪೌಷ್ಟಿಕ ಸತ್ವಗಳ ಮಹಾಪೂರವೇ ಇದರಲ್ಲಿದೆ

ಮೊದಲೇ ಹೇಳಿದಂತೆ ಕಲ್ಲಂಗಡಿ ಹಣ್ಣಿನಲ್ಲಿ ಕ್ಯಾಲೊರಿಗಳು ಕಡಿಮೆ ಇದ್ದರೂ ಕೂಡ ವಿಟಮಿನ್ ಅಂಶಗಳು ಮತ್ತು ಖನಿಜಾಂಶಗಳಿಗೆ ಇದರಲ್ಲಿ ಯಾವುದೇ ಕೊರತೆ ಇಲ್ಲ.
ಪ್ರಮುಖವಾಗಿ ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಷಿಯಂ, ಮೆಗ್ನೀಷಿಯಂ ಜೊತೆಗೆ ವಿಟಮಿನ್ b1,b5 ಮತ್ತು b6 ಅಂಶಗಳು ಇದರಲ್ಲಿ ಸಾಕಷ್ಟು ಕಂಡುಬರುತ್ತವೆ. ಇವೆಲ್ಲವೂ ಸಹ ದೇಹಕ್ಕೆ ಅಗತ್ಯವಾಗಿ ಬೇಕಾದ ಅಂಶಗಳಾಗಿರುತ್ತವೆ.