ಅಂಜೂರ (Fig) ಹಣ್ಣುಗಳು, ಮಲ್ಬೆರಿ ಕುಟುಂಬಕ್ಕೆ ಸೇರಿದ ಸಣ್ಣ, ಪಿಯರ್-ಆಕಾರದ ಹಣ್ಣುಗಳಾಗಿವೆ. ಅವು ಮೃದುವಾಗಿ ಮತ್ತು ಸಿಹಿಯಾಗಿರುತ್ತವೆ ಮತ್ತು ಕೋಮಲ ಚರ್ಮವನ್ನು ಹೊಂದಿರುತ್ತವೆ. ಒಣ ಅಂಜೂರದ ಹಣ್ಣಿನ ಆರೋಗ್ಯ ಪ್ರಯೋಜನಗಳು ಒಂದೆರಡಲ್ಲ.
ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಕೂಡ ಇದರಿಂದ ಆರೋಗ್ಯ ಲಾಭಗಳು ಸಿಗುತ್ತವೆ. ಎಲ್ಲಾ ಸಮಯದಲ್ಲೂ ಪ್ರಯೋಜನಕ್ಕೆ ಬರುವ ಅಂಜೂರದ ಹಣ್ಣು ನಮ್ಮ ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಇಷ್ಟು ಮಾತ್ರವಲ್ಲ, ಇದರಲ್ಲಿರುವ ಪೌಷ್ಟಿಕ ಸತ್ವಗಳು ನಮ್ಮ ಆರೋಗ್ಯದ ಲಾಭಗಳನ್ನು ಹೆಚ್ಚಿಸುತ್ತವೆ. ಅಂಜೂರ ತಾಜಾ ಅಥವಾ ಒಣಗಿಸಿ ಸಹ ತಿನ್ನಬಹುದು.
ಹೃದಯದ ಆರೋಗ್ಯ

ಹೃದಯದ ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳನ್ನು ನೀಡುವಂತಹ ಅಂಜೂರದ (Fig) ಹಾಲು ತನ್ನಲ್ಲಿ ನಾರಿನ ಪ್ರಮಾಣವನ್ನು ಹೊಂದಿರುವ ಕಾರಣದಿಂದ ಕೊಲೆಸ್ಟ್ರಾಲ್ ಅನ್ನು ಕರಗುವಂತೆ ನೋಡಿಕೊಳ್ಳುತ್ತದೆ.
ಪೊಟಾಸಿಯಂ ಕೂಡ ಇದರಲ್ಲಿ ಇರುವುದರಿಂದ ರಕ್ತದ ಒತ್ತಡ ಚೆನ್ನಾಗಿ ನಿರ್ವಹಣೆ ಆಗುತ್ತದೆ. ಬಿಪಿ ಹೆಚ್ಚಾಗಲು ಬಿಡುವುದಿಲ್ಲ.
ಉತ್ಕರ್ಷಣ ನಿರೋಧಕ

ಅಂಜೂರದ ಹಣ್ಣು ಉತ್ತಮ ಉತ್ಕರ್ಷಣ ನಿರೋಧಕವಾಗಿದ್ದು ಅದು ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಮತ್ತು ದೇಹದಲ್ಲಿನ ಹಾನಿಕಾರಕ ಸ್ವತಂತ್ರ ರಾಡಿಕಲ್ಗಳನ್ನು ತಟಸ್ಥಗೊಳಿಸಲು ಕಾರ್ಯ ನಿರ್ವಹಿಸುತ್ತದೆ.
ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುವುದರ ಜೊತೆಗೆ ಕೆಲವು ಕ್ಯಾನ್ಸರ್‌ಗಳಂತಹ ದೀರ್ಘಕಾಲದ ಕಾಯಿಲೆಗಳಿಂದಲೂ ನಿಮ್ಮನ್ನು ರಕ್ಷಿಸುತ್ತದೆ.
ತೂಕ ಇಳಿಕೆ

ಅಂಜೂರದಲ್ಲಿರುವ ನಾರಿನಂಶವು ಅತಿಯಾದ ಹಸಿವನ್ನು ತಡೆಯುತ್ತದೆ. ಮಾತ್ರವಲ್ಲ, ಅತಿಯಾಗಿ ಆಹಾರ ಸೇವಿಸುವುದನ್ನು ತಡೆಯಬಲ್ಲ ಸಾಮರ್ಥ್ಯವನ್ನು ಹೊಂದಿದೆ.
ಹಾಗಾಗಿ, ಅಂಜೂರ (Fig) ಸೇವನೆಯು ಆರೋಗ್ಯಕರವಾಗಿ ತೂಕ ಇಳಿಸಲು ಬಯಸುವವರಿಗೆ ವರದಾನಕ್ಕಿಂತ ಕಡಿಮೆ ಇಲ್ಲ ಎಂತಲೇ ಹೇಳಬಹುದು.
ಮಧುಮೇಹ ನಿಯಂತ್ರಣ

ಮಧುಮೇಹ ಇರುವವರು ಇನ್ನು ಮುಂದೆ ಹೆದರುವ ಅವಶ್ಯಕತೆ ಇಲ್ಲ. ಏಕೆಂದರೆ ಹಾಲಿನ ಜೊತೆ ಅಂಜೂರವನ್ನು ಮಿಶ್ರಣ ಮಾಡಿ ಕುಡಿಯುವುದರಿಂದ ಸಕ್ಕರೆ ಕಾಯಿಲೆ ಉತ್ತಮವಾಗಿ ಕಂಟ್ರೋಲ್ ಗೆ ಬರುತ್ತದೆ.
ನಿಮ್ಮ ಸಮತೋಲನ ಆಹಾರ ಪದ್ಧತಿಯಲ್ಲಿ ಅಂಜೂರವನ್ನು ಸೇರಿಸಿಕೊಳ್ಳುವುದರಿಂದ ದೀರ್ಘಕಾಲದಲ್ಲಿ ನಿಮಗೆ ಮತ್ತು ನಿಮ್ಮ ಆರೋಗ್ಯಕ್ಕೆ ಸಾಕಷ್ಟು ಉಪಯೋಗವಿದೆ.
ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು

ಅಂಜೂರದಲ್ಲಿ ಕ್ಯಾಲ್ಸಿಯಂ, ಫಾಸ್ಫರಸ್ ಮತ್ತು ಮೆಗ್ನೀಸಿಯಮ್-ಖನಿಜಗಳು ಹೆಚ್ಚಾಗಿದ್ದು, ಇದು ಅಸ್ಥಿಪಂಜರದ ಪವರ್ ಮತ್ತು ಮೂಳೆ ಫಿಟ್‌ನೆಸ್ ಕಾಪಾಡಿಕೊಳ್ಳುವಲ್ಲಿ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
ಇದನ್ನೂ ಓದಿ: Muskmelon Fruit: ಖರ್ಬೂಜ ಹಣ್ಣಿನ 10 ಆರೋಗ್ಯ ಪ್ರಯೋಜನಗಳು
ಹೃದಯದ ಆರೋಗ್ಯ

ಒಣ ಅಂಜೂರದ ಹಣ್ಣಿನಲ್ಲಿ ಸಾಕಷ್ಟು ಪೊಟ್ಯಾಸಿಯಮ್, ಸಾಮಾನ್ಯ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಎಲೆಕ್ಟ್ರೋಲೈಟ್ ಕಂಡು ಬರುತ್ತದೆ.
ಹೃದಯ ಸ್ನೇಹಿ ಪೋಷಕಾಂಶಗಳ ಅದ್ಭುತ ಗುಣಗಳಿಂದ ಸಮೃದ್ಧವಾಗಿರುವ ಅಂಜೂರವನ್ನು ನಿಮ್ಮ ನಿತ್ಯದ ಡಯಟ್ ಭಾಗವಾಗಿಸುವುದರಿಂದ ಆರೋಗ್ಯಕರ ಹೃದಯವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.
ಜೀರ್ಣಕ್ರಿಯೆ

ಅಂಜೂರದ ಹಾಲಿನಲ್ಲಿ ನಾರಿನ ಅಂಶ ಸಿಗುತ್ತದೆ. ಇದು ನಾವು ಸೇವಿಸುವ ಆಹಾರವನ್ನು ಚೆನ್ನಾಗಿ ಜೀರ್ಣ ಮಾಡುತ್ತದೆ. ಅಜೀರ್ಣತೆ ಮತ್ತು ಮಲಬದ್ಧತೆ ಉಂಟಾಗಲು ಬಿಡುವುದಿಲ್ಲ.
ಹೀಗಾಗಿ ನೀವು ಯಾವುದೇ ಆಹಾರ ತಿಂದರೂ ಸಹ ನಿಮಗೆ ಹೊಟ್ಟೆಯ ಹಾಗೂ ಕರುಳಿನ ಸಮಸ್ಯೆ ಬರಬಾರದು ಎಂದರೆ ಅಂಜೂರದ ಹಾಲಿನ ಸೇವನೆ ಬಹಳ ಮುಖ್ಯ.
ಸೂಕ್ಷ್ಮ ಪೋಷಕಾಂಶಗಳ ಮೂಲ

ಅಂಜೂರದ (Fig) ಹಣ್ಣಿನಲ್ಲಿ ಅದರಲ್ಲೂ ಒಣ ಅಂಜೂರದ ಹಣ್ಣಿನಲ್ಲಿ ಸ್ಪಾಟ್‌ಲೈಟ್ ಪೋಷಕಾಂಶಗಳ ಹೊರತಾಗಿ, ಸಾಮಾನ್ಯ ಫಿಟ್‌ನೆಸ್‌ಗೆ ಸಹಾಯ ಮಾಡುವ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳು ಹೆಚ್ಚಾಗಿ ಕಂಡು ಬರುತ್ತವೆ.
ರೋಗ ನಿರೋಧಕ ಶಕ್ತಿ

ಒಣ ಅಂಜೂರದಲ್ಲಿರುವ ವಿಟಮಿನ್ ಸಿ ಯಂತಹ ಜೀವಸತ್ವಗಳು ಮತ್ತು ಸತುವಿನಂತಹ ಖನಿಜಗಳು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಚರ್ಮದ ಆರೋಗ್ಯ

ಒಣ ಅಂಜೂರದ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳ ಜೊತೆಗೆ ವಿಟಮಿನ್ ಎ ಮತ್ತು ಇ ಇರುವಿಕೆಯು ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡುತ್ತದೆ, ಕಾಲಜನ್ ಉತ್ಪಾದನೆಯನ್ನು ಬೆಂಬಲಿಸುತ್ತದೆ. ಇದು ಚರ್ಮದ ಆರೋಗ್ಯವನ್ನು ಉತ್ತೇಜಿಸಿ ಚರ್ಮದ ನೈಸರ್ಗಿಕ ಹೊಳಪನ್ನು ಕಾಯ್ದುಕೊಳ್ಳಲು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.