ಬಿಸಿಲಿನ ದಾಹ ನೀಗಿಸುವ ಬಗೆ ಬಗೆಯ ತಾಜಾ ಹಣ್ಣುಗಳು ಬೇಸಿಗೆಯಲ್ಲಿ ಬೆಳೆಯುತ್ತವೆ. ಕಲ್ಲಂಗಡಿ, ಕರಬೂಜದಿಂದ ಹಿಡಿದು ಹತ್ತಾರು ಹಣ್ಣುಗಳು ನಿಮ್ಮ ಬಾಯಲ್ಲಿ ನೀರೂರಿಸುತ್ತವೆ. ಅಂತಹ ಒಂದು ಹಣ್ಣು ಪೀಚ್ (Peach) ಆಗಿದೆ, ಆದರೆ ಹೆಚ್ಚಿನ ಜನರು ಸಾಮಾನ್ಯವಾಗಿ ಪೀಚ್ ಅನ್ನು ಅದರ ಬಣ್ಣದಿಂದ ತಿಳಿದಿದ್ದಾರೆ ಹೊರೆತು ತಿನ್ನುವವರು ಕಡಿಮೆ. ಪೀಚ್ ಹಣ್ಣುಗಳನ್ನು ತಿನ್ನುವುದರಿಂದ ದೇಹಕ್ಕೆ ಬೇಕಾದ ಹಲವು ಪೋಷಕಾಂಶಗಳು ದೊರೆಯುತ್ತದೆ. ಬೇಸಿಗೆಯ ಅಂತ್ಯಕ್ಕೆ ಪ್ರಕೃತಿಯಲ್ಲಿ ಕಂಡು ಬರುವ ಪೀಚ್ ಹಣ್ಣು ಕೂಡ ಆರೋಗ್ಯಕ್ಕೆ ಬಲು ಪ್ರಯೋಜನಕಾರಿ.
ಕ್ಯಾನ್ಸರ್ಗೆ ರಾಮಬಾಣ

ಈ ಹಣ್ಣಿನಲ್ಲಿ ಕಂಡುವ ಅ್ಯಂಟಿ-ಆಕ್ಸಿಡೆಂಟ್ಗಳು ಕ್ಯಾನ್ಸರ್ ರೋಗ ಬಾಧಿಸದಂತೆ ತಡೆಯುತ್ತದೆ. ಅಲ್ಲದೆ ಕಿಮೊಥೆರಪಿಯ ಅಡ್ಡ ಪರಿಣಾಮಗಳಿಂದ ದೇಹವನ್ನು ರಕ್ಷಿಸಲು ಪೀಚ್ ಹಣ್ಣು ಸಹಕಾರಿ ಎಂದು ಕೆಲ ಅಧ್ಯಯನಗಳೂ ಕೂಡ ತಿಳಿಸಿದೆ.
ಪೀಚ್ (Peach) ಹಣ್ಣುಗಳಲ್ಲಿ ಅನೇಕ ವಿಧದ ವಿಟಮಿನ್ಗಳು ಕಂಡುಬರುತ್ತವೆ. ಇದು ವಿಶೇಷವಾಗಿ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ, ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಜೊತೆಗೆ, ಇದು ಅನೇಕ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ.
ದಂತಕ್ಷಯಕ್ಕೆ ಪರಿಹಾರ

ಪೀಚ್ (Peach) ಹಣ್ಣಿನಲ್ಲಿ ಫ್ಲೋರೈಡ್ ಮತ್ತು ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುತ್ತದೆ. ಇದು ಹಲ್ಲು ಮತ್ತು ದೇಹದ ಮೂಳೆಗಳನ್ನು ಬಲಪಡಿಸುತ್ತದೆ. ಈ ಹಣ್ಣನ್ನು ದಿನನಿತ್ಯ ತಿನ್ನುವುದರಿಂದ ದಂತಕ್ಷಯದ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು.
ಕಿಡ್ನಿ ಸ್ಟೋನ್ಗೆ ಪರಿಹಾರ

ಈ ಹಣ್ಣು ಬರಪೂರ ಪೊಟಾಶಿಯಂ ಅಂಶ ಹೊಂದಿರುತ್ತದೆ. ಇದು ಕಡ್ನಿಯ ಆರೋಗ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಲ್ಲದೆ ಪ್ರತಿನಿತ್ಯ ಪೀಚ್ ಹಣ್ಣು ತಿಂದರೆ ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಬಹುದು.
ದೇಹದ ಆರೋಗ್ಯ ಹೆಚ್ಚಿಸುತ್ತದೆ

ಪೀಚ್ (Peach) ಹಣ್ಣಿನಲ್ಲಿ ಕಂಡುಬರುವ ಖನಿಜಾಂಶಗಳು ಮತ್ತು ಫೈಬರ್ಗಳು ದೇಹದ ಒಳಭಾಗವನ್ನು ಸ್ವಚ್ಚಗೊಳಿಸುತ್ತದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕಲು ಈ ಹಣ್ಣಿನ ಸೇವನೆ ತುಂಬಾ ಪ್ರಯೋಜನಕಾರಿ.
ಪೀಚ್ ಹಣ್ಣು ಬಳಸಿ ಟೀ ಕೂಡ ತಯಾರಿಸಲಾಗುತ್ತಿದ್ದು, ಪ್ರತಿನಿತ್ಯ ಈ ಪಾನೀಯ ಸೇವಿಸದರೆ ಉತ್ತಮ ಆರೋಗ್ಯವನ್ನು ತಮ್ಮದಾಗಿಸಿಕೊಳ್ಳಬಹುದು.
ಅಂಟಿ-ಆಕ್ಸಿಡೆಂಟ್ಗಳು

ಪೀಚ್ (Peach) ಹಣ್ಣಿನ ಸಿಪ್ಪೆಯು ಪಾಲಿಫೆನಾಲ್ ಎಂಬ ಅಂಶವನ್ನು ಒಳಗೊಂಡಿರುತ್ತದೆ. ಇದು ದೇಹದಲ್ಲಿ ಅಂಟಿ-ಆಕ್ಸಿಡೆಂಟ್ಗಳಾಗಿ ಕಾರ್ಯ ನಿರ್ವಹಿಸುತ್ತದೆ.
ಇದರಲ್ಲಿ ವಿಟಮಿನ್ ಸಿ ಗಣನೀಯ ಪ್ರಮಾಣದಲ್ಲಿದ್ದು, ಈ ಹಣ್ಣನ್ನು ಸಿಪ್ಪೆಯೊಂದಿಗೆ ತಿನ್ನುವುದು ಉತ್ತಮ.
ಇದನ್ನೂ ಓದಿ: Lychee: ಲಿಚ್ಚಿ ಹಣ್ಣಿನ 10 ಆರೋಗ್ಯ ಪ್ರಯೋಜನಗಳು
ಕಣ್ಣಿನ ಆರೋಗ್ಯ

ಈ ಹಣ್ಣಿನಲ್ಲಿ ವಿಟಮಿನ್ ಎ ಜೊತೆ ಕ್ಯಾರೊಟಿನ್ ಅಂಶಗಳು ಕಂಡು ಬರುತ್ತದೆ. ಇದು ಕಣ್ಣಿನ ರೆಟಿನಾದ ಮೇಲೆ ಪರಿಣಾಮ ಬೀರಿ ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ.
ಒತ್ತಡ ನಿಯಂತ್ರಣ

ಪೀಚ್ (Peach) ಹಣ್ಣಿನಲ್ಲಿರುವ ಖನಿಜಾಂಶಗಳು ಒತ್ತಡ ನಿವಾರಣೆಗೆ ಸಹಾಯಕವಾಗಿದೆ. ಇದರ ಹೂವುಗಳನ್ನು ಮನಸ್ಸನ್ನು ಶಾಂತಗೊಳಿಸಲು ಬಳಸಲಾಗುತ್ತದೆ.
ದೇಹದ ತೂಕ ಇಳಿಸಲು

ಪೀಚ್ ಹಣ್ಣಿನಲ್ಲಿ ಕ್ಯಾಲೊರಿ ತುಂಬಾ ಕಡಿಮೆ ಇರುತ್ತದೆ. 100 ಗ್ರಾಂ ಪೀಚ್ನಲ್ಲಿ ಕೇವಲ 39 ಕ್ಯಾಲೊರಿಗಳು ಕಂಡು ಬರುತ್ತದೆ. ಇದನ್ನು ತಿಂದು ಹೊಟ್ಟೆ ತುಂಬಿಸಿಕೊಂಡರೂ, ಯಾವುದೇ ರೀತಿಯಲ್ಲೂ ತೂಕ ಹೆಚ್ಚಾಗುವುದಿಲ್ಲ. ಅಲ್ಲದೆ ಪ್ರತಿನಿತ್ಯ ಈ ಹಣ್ಣನ್ನು ಸೇವಿಸುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ.
ಹಸಿವಾಗುವುದನ್ನು ತಡೆಯುತ್ತದೆ

ಈ ಪೌಷ್ಟಿಕ ಹಣ್ಣು ಕಡಿಮೆ ಕ್ಯಾಲೋರಿ ಹೊಂದಿದೆ. ಇದಲ್ಲದೆ, ಇದು ಕಡಿಮೆ ಕೊಬ್ಬಿನಂಶವನ್ನು ಹೊಂದಿದೆ. ಇದರಲ್ಲಿ ನಾರಿನಂಶ ಹೇರಳವಾಗಿರುವುದರಿಂದ ಹೊಟ್ಟೆ ತುಂಬಿಸುವುದಲ್ಲದೆ ಹಸಿವಾಗುವುದನ್ನು ತಡೆಯುತ್ತದೆ.
ಇದರಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಪೀಚ್‌ಗಳ ನಿಯಮಿತ ಸೇವನೆಯು ಕರಗಬಲ್ಲ ಫೈಬರ್‌ನಿಂದಾಗಿ ಮಲಬದ್ಧತೆಯನ್ನು ನಿವಾರಿಸುತ್ತದೆ. ನಿಮ್ಮ ಕರುಳಿನ ಬ್ಯಾಕ್ಟೀರಿಯಾದ ಸಮತೋಲನವನ್ನು ಸುಧಾರಿಸುವುದು ನಿಮ್ಮ ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸುತ್ತದೆ.
ಚರ್ಮದ ಆರೋಗ್ಯ

ಪೀಚ್ ಹಣ್ಣಿನಲ್ಲಿರುವ ಬೀಟಾ-ಕ್ಯಾರೋಟಿನ್ ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಯಾಗುತ್ತದೆ. ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ವಿಟಮಿನ್ ಎ ಪ್ರಮುಖ ಪಾತ್ರ ವಹಿಸುತ್ತದೆ.