ಅದೇ ಚಕ್ಕೋತ (Grapefruit) ಹಣ್ಣನ್ನು ನೀವು ತಿಂದರೆ ನಿಮ್ಮ ದೇಹಕ್ಕೆ ಇಷ್ಟೆಲ್ಲಾ ಲಾಭಗಳಿದೆ ಗೊತ್ತಾ? ಹೌದು, ಚಕ್ಕೋತ ಹಣ್ಣು ತಿನ್ನುವುದರಿಂದ ದೇಹಕ್ಕೆ ಹಲವಾರು ಲಾಭಗಳಿವೆ. ಥೇಟ್ ನಿಂಬೆ ಹಣ್ಣಿನಂತೆ ಇರುವ ಈ ಚಕ್ಕೋತಾ ದೇವನಹಳ್ಳಿಯ ಹಿರಿಮೆಯಾಗಿದೆ. ಎರಡೂವರೆ ಶತಮಾನಗಳ ಇತಿಹಾಸ ಇರೋ ಈ ವಿಶಿಷ್ಟ ಹಣ್ಣು ಇಂದಿಗೂ ಸಹ ಬೇಡಿಕೆಯಲ್ಲಿದೆ. ಈ ಚಕ್ಕೋತ ಹಣ್ಣು ದಕ್ಷಿಣ ಪೂರ್ವ ಏಷಿಯಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಒಗರು ಮತ್ತು ಸ್ವಲ್ಪ ಕಹಿಮಿಶ್ರಿತ ಇರುವುದರಿಂದ ಇದನ್ನು ಸಾಕಷ್ಟು ಮಂದು ತಿನ್ನಲು ಇಷ್ಟ ಪಡುವುದಿಲ್ಲ. ಆದ್ರೆ ಈ ಚಕ್ಕೋತ ಹಣ್ಣು ಆರೋಗ್ಯಕ್ಕೆ ತುಂಬಾನೇ ಪ್ರಯೋಜನಗಳನ್ನು ನೀಡುತ್ತದೆ. ಸಿಹಿ ಮತ್ತು ಹುಳಿ ಮಿಶ್ರಿತ ಇರೀ ಈ ಹಣ್ಣನ್ನು ಆಂಗ್ಲ ಭಾಷೆಯಲ್ಲಿ ಗ್ರೇಪ್ ಫ್ರೂಟ್ (Grapefruit) ಅಥವಾ ಪೊಮೆಲಾ (pomelo) ಎಂದು ಕರೆಯುತ್ತಾರೆ.
ವಿಟಮಿನ್ ಸಿ ಸಮೃದ್ಧವಾಗಿದೆ

ವಿಟಮಿನ್ ಸಿ ಆಂಟಿಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸ್ವತಂತ್ರ ರಾಡಿಕಲ್‌ಗಳ ಮೇಲೆ ದಾಳಿ ಮಾಡುತ್ತದೆ. ಇದು ಸೂಕ್ಷ್ಮಜೀವಿಯ ನಾಶ ಮತ್ತು ಫಾಗೊಸೈಟೋಸಿಸ್ ಅನ್ನು ಹೆಚ್ಚಿಸುತ್ತದೆ.
ಹಣ್ಣಿನಲ್ಲಿರುವ ಹೆಚ್ಚಿನ ಆಸ್ಕೋರ್ಬಿಕ್ ಆಮ್ಲವು ಸೋಂಕುಗಳ ವಿರುದ್ಧ ಹೋರಾಡಲು ಮತ್ತು ತಡೆಗಟ್ಟಲು ಬಿಳಿ ರಕ್ತ ಕಣಗಳ ಚಟುವಟಿಕೆಯನ್ನು ಹೆಚ್ಚಿಸುತ್ತದೆ.
ಚಕ್ಕೋತ (Grapefruit) ಹಣ್ಣು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ಪೊಟ್ಯಾಸಿಯಮ್ ಮಟ್ಟವು ಅಧಿಕವಾಗಿರುವ ಈ ಹಣ್ಣಿನಿಂದ ಸಾಮಾನ್ಯ ರಕ್ತದೊತ್ತಡದಿಂದ ನಿಮ್ಮನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಹೃದಯ ಸ್ನಾಯುವಿನ ಚಟುವಟಿಕೆಯನ್ನು ಉತ್ತೇಜಿಸುವಲ್ಲಿ ಕಾರ್ಯನಿರ್ವಹಿಸುತ್ತದೆ, ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ನೈಸರ್ಗಿಕವಾಗಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.
ಯಕೃತ್ತಿನ ಆರೋಗ್ಯ

ಫೈಟೊನ್ಯೂಟ್ರಿಯೆಂಟ್‌ಗಳು ಸಮೃದ್ಧವಾಗಿರುವ ಈ ಹಣ್ಣಿನಲ್ಲಿ, ಯಕೃತ್ತನ್ನು ಸ್ವತಂತ್ರ ರಾಡಿಕಲ್ ಟಾಕ್ಸಿನ್‌ಗಳಿಂದ ರಕ್ಷಿಸುವ ಅದ್ಭುತ ಪ್ರಯೋಜನಗಳನ್ನು ಹೊಂದಿದೆ. ಇದು ಯಕೃತ್ತಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ.
ಉತ್ಕರ್ಷಣ ನಿರೋಧಕ ಶಕ್ತಿ

ಈ ಹಣ್ಣಿನಲ್ಲಿ ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶದಿಂದಾಗಿ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ವಿಟಮಿನ್ ಸಿ ಸೇರಿದಂತೆ ಆಂಟಿಆಕ್ಸಿಡೆಂಟ್‌ಗಳು ಹಾನಿಕಾರಕ ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಚರ್ಮದ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಹೆಚ್ಚು ತಾರುಣ್ಯದ ನೋಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಹೃದಯದ ಆರೋಗ್ಯ

ಈ ಹಣ್ಣು ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿರುವ ಪೆಕ್ಟಿನ್ ಹೃದಯದ ಬಡಿತ ಹೆಚ್ಚು ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.
ಇದನ್ನೂ ಓದಿ: Peach: ಪೀಚ್ ಹಣ್ಣಿನ 10 ಆರೋಗ್ಯ ಪ್ರಯೋಜನಗಳು
ಚಕ್ಕೋತ (Grapefruit) ಹಣ್ಣು ರೋಗ ನಿರೋಧಕ ಶಕ್ತಿ

ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಬರುವ ಜ್ವರ, ನೆಗಡಿ, ಕೆಮ್ಮು, ಅಲರ್ಜಿ, ಅಸ್ತಮಾ ಮೊದಲಾದ ಕಾಯಿಲೆಗಳಿಗೆ ವಿಟಮಿನ್ ಸಿ ರಾಮಬಾಣ. ಆದ್ದರಿಂದ ಪ್ರತಿದಿನ ಚಕ್ಕೋತ ಹಣ್ಣು ತಿಂದರೆ ದೇಹಕ್ಕೆ ಬೇಕಾದ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ.
ಫೈಬರ್

ಚಕ್ಕೋತ ಹಣ್ಣು ತಿಂದರೆ ಹೆಚ್ಚಿನ ಫೈಬರ್ ದೇಹಕ್ಕೆ ಸಿಗುತ್ತದೆ. ಇದರಿಂದ ನೈಸರ್ಗಿಕ ರೀತಿಯಲ್ಲಿಯೇ ದೇಹದಲ್ಲಿರುವ ಕೊಬ್ಬು ಕರಗಿ ಹೋಗುತ್ತದೆ. ಇದರಲ್ಲಿ ಕಂಡುಬರುವ ಪೋಷಕಾಂಶಗಳಲ್ಲಿ ಆಂಟಿಆಕ್ಸಿಡೆಂಟ್‌ಗಳ ಜೊತೆಗೆ ಫೈಬರ್ ಬಹಳ ಮುಖ್ಯ.
ಇದಲ್ಲದೆ, ಇದು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ನಿಯಾಸಿನ್, ವಿಟಮಿನ್ ಬಿ6, ಪ್ಯಾಂಟೋನಿಕ್ ಆಮ್ಲ, ಸೆಲೆನಿಯಮ್ ಮತ್ತು ಥಯಾಮಿನ್ ಕೂಡ ಇದರಲ್ಲಿ ಕಂಡುಬರುತ್ತವೆ.
ಕೊಲೆಸ್ಟ್ರಾಲ್ ನಿಯಂತ್ರಿಸಲು

ಚಕ್ಕೋತದಲ್ಲಿ ವಿಟಮಿನ್ಸ್ ಮತ್ತು ಮಿನರಲ್ಸ್ ಕಂಡುಬರುತ್ತವೆ. ಇದು ಹೃದಯದ ಸಮಸ್ಯೆಗಳನ್ನು ನಿವಾರಿಸುತ್ತೆ. ಇದರ ಹುಳಿ ಮತ್ತು ಸೌಮ್ಯ ಮಾಧುರ್ಯವು ಹೃದಯದ ಸ್ನಾಯುಗಳನ್ನು ಬಲವಾಗಿರಿಸುತ್ತೆ.
ಅನೇಕ ರೀತಿಯ ರೋಗಗಳಿಂದ ರಕ್ಷಿಸುತ್ತೆ. ಇದು ಕೆಟ್ಟ ಕೊಲೆಸ್ಟ್ರಾಲ್ ನಿಂದ ದೇಹವನ್ನು ದೂರವಿರಿಸುತ್ತೆ. ಜೊತೆಗೆ ಸೋಂಕುಗಳ ವಿರುದ್ಧ ಹೋರಾಡಲು ದೇಹವನ್ನು ಬಲಪಡಿಸುತ್ತೆ.
ಚಕ್ಕೋತ (Grapefruit) ಹಣ್ಣು ಕ್ಯಾನ್ಸರ್ ವಿರುದ್ಧ ಹೋರಾಡುತ್ತೆ

ಚಕ್ಕೋತದಲ್ಲಿ ಕಂಡುಬರುವ ನಾರಿನಂಶ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದನ್ನು ಸೇವಿಸುವ ಮೂಲಕವೂ ತೂಕವನ್ನು ಕಡಿಮೆ ಮಾಡಬಹುದು.
ಇಷ್ಟೇ ಅಲ್ಲ, ಚಕ್ಕೋತದ ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತೆ.
ಮಧುಮೇಹಿಗಳು ಇದನ್ನು ತಿನ್ನುವುದರಿಂದ ಪ್ರಯೋಜನ ಪಡೆಯಬಹುದು

ಚಕ್ಕೋತ ಹಣ್ಣು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಗ್ಲೈಸೆಮಿಕ್ ಸೂಚ್ಯಂಕವು ಬ್ಲಡ್ ಶುಗರ್ ಮಟ್ಟವನ್ನು ನಿಯಂತ್ರಿಸುತ್ತದೆ.
ಆದರೆ ಊಟಕ್ಕೆ 2 ಗಂಟೆ ಮುನ್ನ ಈ ಹಣ್ಣಿನ ಒಂದು ಪೀಸ್ ಸೇವಿಸಿದರೆ 45 ದಿನಗಳ ಕಾಲ ಸ್ವಲ್ಪವೂ ಏರುಪೇರಾಗದಂತೆ ಬ್ಲಡ್ ಶುಗರ್ ಸಂಪೂರ್ಣ ನಿಯಂತ್ರಣವಾಗುತ್ತದೆ.