Home » 60+ Good Morning Quotes in Kannada | ಶುಭೋದಯ ಕ್ವೋಟ್ಸ್

60+ Good Morning Quotes in Kannada | ಶುಭೋದಯ ಕ್ವೋಟ್ಸ್

by Praveen Mattimani

ಪ್ರತಿ ಹೊಸ ದಿನವೇ ಹೊಸ ಪ್ರಾರಂಭ, ಹೊಸ ಆಸೆ, ಹೊಸ ಸವಾಲುಗಳೊಂದಿಗೆ ಬರುತ್ತದೆ. ಬೆಳಿಗ್ಗೆ ಎದ್ದು ಮೊದಲನೆಯದಾಗಿ ನಾವು ಕೇಳುವ, ಓದುವ ಮಾತುಗಳು ನಮ್ಮ ದಿನವನ್ನೇ ರೂಪಿಸಬಹುದು. ಒಂದು ಸಕಾರಾತ್ಮಕ ಶುಭೋದಯ (Good Morning Quotes in Kannada) ಸಂದೇಶ ಅಥವಾ ಕ್ವೋಟ್ಸ್ ನಮ್ಮ ಮನಸ್ಸಿಗೆ ಚೈತನ್ಯ ನೀಡುತ್ತದೆ, ನಾವು ದಿನದ ಉದ್ದಕ್ಕೂ ಉತ್ಸಾಹದಿಂದ ಇರುವಂತೆ ಮಾಡುತ್ತದೆ. ಇಂದಿನ ತೊಂದರೆಗಳು, ಸಮಸ್ಯೆಗಳನ್ನು ಜಯಿಸುವ ಧೈರ್ಯ ಮತ್ತು ಆಶಾವಾದವನ್ನು ತುಂಬಲು ಒಂದು ಚಂದಾದ ಶುಭೋದಯ ಸಂದೇಶ ಸಾಕು.

ಕನ್ನಡದಲ್ಲಿ ಇರುವ ಶುಭೋದಯ ಕ್ವೋಟ್ಸ್ ಇವು, ನವ ಜೀವನದ ನೋಟವನ್ನು ನೀಡುತ್ತವೆ, ನಮ್ಮ ಮನಸ್ಸನ್ನು ಪ್ರೇರೇಪಿಸುತ್ತವೆ, ಮತ್ತು ಸಕಾರಾತ್ಮಕತೆ ತುಂಬಿ, ದಿನವನ್ನು ಹಸನ್ಮುಖದಿಂದ ಎದುರಿಸಲು ಸಹಕಾರಿಯಾಗಿದೆ. ಈ ಬ್ಲಾಗ್ ಪೋಸ್ಟ್ನಲ್ಲಿ ನಿಮ್ಮ ದಿನವನ್ನು ಸಂತೋಷದಿಂದ ಪ್ರಾರಂಭಿಸಲು ಪ್ರೇರೇಪಕ, ಆನಂದಕರ ಮತ್ತು ಮನಸಿಗೆ ಶಕ್ತಿ ನೀಡುವ ಕನ್ನಡ ಶುಭೋದಯ ಸಂದೇಶಗಳನ್ನು (Good Morning Quotes in Kannada) ಸಂಗ್ರಹಿಸಿದ್ದೇವೆ. ಈ ಕ್ವೋಟ್ಸ್ ಅನ್ನು ಓದಿ, ನಿಮ್ಮ ಪ್ರಿಯವರೊಂದಿಗೆ ಹಂಚಿಕೊಂಡು, ಅವರ ದಿನವನ್ನೂ ಕಂಗೊಳಿಸೋಣ!

” ಶುಭ ಮುಂಜಾನೆಯ ಶುಭಾಶಯಗಳೊಂದಿಗೆ ನಿಮ್ಮ ಹೂವಿನಂತ ಮನಸ್ಸು ಸದಾ ನಗುವಿನಿಂದ ತುಂಬಿರಲಿ.”  –  ಶುಭೋದಯ!

” ಕಣ್ಣುಗಳು ತಮ್ಮನ್ನು ತಾವು ನೋಡಿಕೊಳ್ಳುವುದನ್ನು ಬಿಟ್ಟು ಉಳಿದೆಲ್ಲವನ್ನೂ ನೋಡುತ್ತವೆ, ಹಾಗೆಯೆ ಜನರು ತಮ್ಮ ತಪ್ಪುಗಳನ್ನು ಬಿಟ್ಟು ಬೇರೆಯವರ ತಪ್ಪುಗಳನ್ನೇ ನೋಡುತ್ತಾರೆ.” – ಶುಭೋದಯ!

” ಕನಸಿನಿಂದ ಜಾರಿ ಬೆಳಗಿನ ಭವಿಷ್ಯಕ್ಕೆ ಚಿಗುರೊಡೆಯುವ ಮನಸ್ಸುಗಳಿಗೆ ಬೆಳಗಿನ ಶುಭೋದಯ.”

” ಮನುಷ್ಯನ ಉದ್ಯೋಗಕ್ಕೂ ಆದರ್ಶಕ್ಕೂ ಪರಸ್ಪರ ಹೊಂದಿಕೆ ಬಾರದೇ ಹೋದಲ್ಲಿ, ಜೀವನದಲ್ಲಿ ಸುಖ ಸಿಗಲಾರದು.” – ಶುಭ ಮುಂಜಾನೆ!

” ಗೆದ್ದವರು ಸಂತೋಷದಿಂದ ಇರುತ್ತಾರೆ, ಸೋತವರು ಯೋಚಿಸುತ್ತ ಇರುತ್ತಾರೆ, ಸೋಲು ಗೆಲುವು ಶಾಶ್ವತ ಅಲ್ಲ ಎಂದು ತಿಳಿದವರು ಪ್ರತಿದಿನ ಸಂತೋಷದಿಂದ ಇರುತ್ತಾರೆ.” – ಶುಭ ಮುಂಜಾನೆ!

” ಈ ದಿನ ನೀವು ಬಯಸಿದಂತೆ ಆಗಲಿ ಶುಭ ದಿನ.”

” ಸೋಲು ಕನಸಲ್ಲಿ ಇರಲಿ, ಗೆಲುವು ಮನಸಲ್ಲಿ ಇರಲಿ, ನಗು ಜೀವನದಲ್ಲಿ ಇರಲಿ” – Good morning!

” ಬದುಕು ಅನ್ನೋ ಹೊಲದಲ್ಲಿ ಸಮಸ್ಯೆ ಅನ್ನೋ ಕಳೆ ಬೆಳೆಯುತ್ತಲೇ ಇರುತ್ತೆ, ಹಾಗಂತ ಹೊಲ ಬಿಟ್ಟು ಹೋಗೋಕಾಗುತ್ತಾ, ಕಳೆ ಕೀಳೋ ಕಲೆ ಕಲಿತು ಬಾಳಬೇಕು ಅಷ್ಟೇ. – Good morning!

” ಹೂಗಳಿಂದ ತುಂಬಿದ ತೋಟ ಎಷ್ಟು ಸುಂದರವಾಗಿರುತ್ತೋ, ಒಳ್ಳೆಯ ಆಲೋಚನೆಗಳಿಂದ ತುಂಬಿದ ಮನಸ್ಸು ಸಹ ಅಷ್ಟೇ ಸುಂದರವಾಗಿರುತ್ತೆ.”

“ನಾಳೆಯ ಒಳಿತಿಗಾಗಿ ಇಂದಿನ ಕೆಲ ಸಮಯವನ್ನು ಮೀಸಲಿಡುವುದು ತಪ್ಪಲ್ಲ, ಆದರೆ ಬರಿ ನಾಳೆಯ ಚಿಂತೆಯಲ್ಲೇ ಇಂದಿನ ಸಂತೋಷವನ್ನು ಕಳೆದುಕೊಳ್ಳಬಾರದು.” – ಶುಭ ಮುಂಜಾವು!

” ಮುಂಜಾನೆಯ ಎಳೆ ಬಿಸಿಲು ನಿಮ್ಮಲ್ಲಿ ಎಳೆತನ ತರಲಿ.” – ಶುಭೋದಯ!

” ಶಾಂತತೆಯ ಸೂರ್ಯ ಸ್ವಾಗತಿಸಲಿ ನಿಮ್ಮನ್ನು ಒಳ್ಳೆಯ ದಿನಕ್ಕೆ.” – ಶುಭೋದಯ!

” ಮಂಜಿನ ಮಬ್ಬು ಮುತ್ತಿಡುತ್ತಿರುವುದು ಹೂವಿಗೆ ಸುಂದರವಾಗಿ, ಏಳಿರಿ ನೀವು ಅದನ್ನು ನೋಡಲು.” – ಶುಭೋದಯ!

” ಶುಭ ಶುಭೋದಯವು ಸುಂದರವಾಗಿರಲಿ ನಿಮ್ಮಂತೆ.”  – ಶುಭೋದಯ!

” ಸುಲಲಿತವಾಗಿರುವ ಸುಪ್ರಭಾತವ ಕಾಣಲು ಏಳಿರಿ ನೀವು.” – ಶುಭೋದಯ!

“ಸುಂದರವಾಗಿರುವ ಸುಪ್ರಭಾತವು ಬರುತ್ತಿರಲು ನಿಮಗೆ ಸುಭಾಷಿತ ಹೇಳಲು.” – ಶುಭೋದ!

” ಮೂಡಣದಲ್ಲಿ ಮೂಡುವ ಅರುಣ ನಿಮ್ಮ ಬದುಕಲ್ಲಿ ಬೆಳಕು ಚೆಲ್ಲಲಿ” – ಶುಭೋದಯ!

” ಬೆಳಕು ಚೆಲ್ಲುವವ ಬಂದಾಯ್ತು ಏಳಿರಿ ನೀವು ನಿಮ್ಮ ಬದುಕಲ್ಲಿ ಬೆಳಕು ತರಲು.” – ಶುಭೋದಯ

” ಸುಮನೋಹರದ ಸುಪ್ರಭಾತವು ಮೂಡುತಿರುವುದು ಪ್ರಕೃತಿಯ ಮಡಿಲಲ್ಲಿ, ನಿಮ್ಮಲ್ಲಿ ಮೂಡಿಸಲಿ ಸುಭಿಕ್ಷೆಯನ್ನು.” – ಶುಭೋದಯ

“ಈ ದಿನದ ಸೂರ್ಯೋದಯವು ನಿಮಗೆ ಶುಭ ಸುದ್ದಿಯನ್ನು ತರಲಿ.” – ಶುಭೋದಯ

” ಸೂರ್ಯನ ಉದಯದ ಕಿರಣಗಳು ನಿಮ್ಮಲ್ಲಿ ನವ ಉತ್ಸಾಹ ತರಲಿ.” – ಶುಭೋದಯ

” ಈ ದಿನದ ಅರುಣೋದಯವು ನಿಮ್ಮ ಬದುಕಿಗೆ ಅನನ್ಯವಾಗಿರಲಿ.” – ಶುಭೋದಯ

” ಈ ದಿನದ ರವಿಯ ಹುಟ್ಟು ನಿಮಗೆ ಸಂತೋಷದ ದಿನ ತರಲಿ.” – ಶುಭೋದಯ

” ರಮನೀಯವಾದ ಸೂರ್ಯೋದಯವು ನಿಮ್ಮ ಬದುಕಿಗೆ ಸೌಂದರ್ಯತೆ ತರಲಿ.” – ಶುಭೋದಯ

” ಸೂರ್ಯೋದಯದ ತಂಪು ನಿಮ್ಮ ಬಾಳಲ್ಲಿ ಇಂಪನ್ನು ಕೂಡಿಸಲಿ.”  – ಶುಭೋದಯ

” ಹಕ್ಕಿಯ ಚಿಲಿಪಿಲಿಯ ಕೇಳುತಾ ಏಳಿರಿ ಬಾನಲ್ಲಿ ಮೂಡುತ್ತಿರುವ ಸೂರ್ಯನನ್ನು ನೋಡುತ್ತಾ.” – ಶುಭೋದಯ

” ಮುಂಜಾನೆಯ ಮಂಜು ನಿಮ್ಮ ಮುಂದಿನ ದಿನಗಳನ್ನು ಅಧ್ಬುತಗೊಳಿಸಲಿ.” – ಶುಭ ಮುಂಜಾನೆ

” ಈ ದಿನದ ಶುಭೋದಯವು ಶುಭವಾಗಿರಲಿ ನಿಮಗೆ.” – ಶುಭೋದಯ

” ಸಾಕ್ಷಿಯಾಗಲಿ ಸೂರ್ಯೋದಯವು ನಿಮ್ಮ ಒಳ್ಳೆಯ ದಿನಗಳ ಪರಿಶ್ರಮಕ್ಕೆ.” – ಶುಭೋದಯ

” ಈ ದಿನವು ಅಧ್ಬುತವಾಗಿರಲಿ ನಿಮ್ಮ ಬಾಳಲಿ.” – ಶುಭೋದಯ

” ಮೂಡಣ ದಿಕ್ಕಿನಲ್ಲಿ ಭಾಸ್ಕರನು ಮೂಡಿಸುವ ಕಿರಣಗಳು, ನಿಮ್ಮ ಕನಸುಗಳ ಮೇಲೆ ಬೆಳಕು ಚೆಲ್ಲಿ, ಅವುಗಳನ್ನು ಸಾಕಾರಗೊಳಿಸಲಿ.” – ಶುಭಮುಂಜಾನೆ

” ಬಿಟ್ಟಹೋದವರ ಚಿಂತೆಯನ್ನು ಬಿಟ್ಟು, ನಮಗೆಂದು ಇರುವವರಿಗೆ ಇಂದಿನ ಜೀವನ ನಗುತ್ತಾ ಕಳೆಯೋಣ.”  – ಈ ನಿಮ್ಮ ದಿನ ಶುಭದಿನವಾಗಿರಲಿ

” ಮುಂಜಾನೆಯ ಸೂರ್ಯ ಮಲಗಿದವರನ್ನು ಎಚ್ಚರಗೊಳಿಸುವ ಹಾಗೆ, ನೀವು ಕೂಡ ನಿಮ್ಮ ಕನಸುಗಳೊಂದಿಗೆ ಎಚ್ಚರಗೊಳ್ಳಿ ಮತ್ತು ಅವುಗಳನ್ನು ನನಸು ಮಾಡಿಕೊಳ್ಳಲು ಮುನ್ನುಗ್ಗಿ.”  – ಮುಂಜಾನೆಯ ಶುಭಾಶಯಗಳು

” ನಿನ್ನೆಯ ಸೋಲನ್ನು ಮನದಲ್ಲಿಟ್ಟುಕೊಂಡು, ಇಂದಿನ ಗೆಲುವಿಗಾಗಿ ಹೋರಾಟ ನಡೆಸಿ.”   – ಶುಭೋದಯ

” ನಿನ್ನ ಆತ್ಮಬಲವೇ ನಿನಗೊಂದು ದೊಡ್ಡ ಶಕ್ತಿ, ನಿನ್ನ ಮೇಲೆ ನಿನಗೆ ವಿಶ್ವಾಸವಿರಲಿ.”  – ಶುಭೋದಯ

” ಕಷ್ಟ ಎಂಬ ಕತ್ತಲು ಸರಿದು, ಬೆಳಕೆಂಬ ಸುಖವು ಮುಂದೆ ನಿನ್ನ ಜೀವನದಲ್ಲಿ ಬರುತ್ತದೆ, ಆತ್ಮವಿಶ್ವಾಸ ಮತ್ತು ಛಲ ನಿನ್ನದಾಗಿರಲಿ ”  – ಶುಭೋದಯ

” ಈ ಮುಂಜಾನೆಯ ಸೂರ್ಯೋದಯವು, ನಿಮ್ಮ ಬಾಳಿನಲ್ಲಿ ಹೊಸ ಚೈತನ್ಯ ತರಲಿ.” – ಶುಭೋದಯ

” ಈ ದಿನ ನಿಮ್ಮ ಬಾಳಿನಲ್ಲಿ ನವ ಉತ್ಸಾಹ ತರಲಿ, ನಿಮ್ಮ ಜೀವನವು ಸುಂದರವಾಗಿರಲಿ.”

” ಸಂಕಷ್ಟಗಳೆಂಬ ಕತ್ತಲು ಸರಿದು ಸಂತೋಷದ ದಿನಗಳು ಬರುತ್ತವೆ, ತಾಳ್ಮೆಯೊಂದು ನಿನ್ನ ಜೊತೆಗಿರಲಿ.”  – ಮುಂಜಾನೆಯ ಶುಭಾಶಯಗಳು

” ನಾಳೆ ಎಂಬುದು ಶತ್ರು, ಇವತ್ತು ಎಂಬುವುದೇ ಸಂಬಂಧಿಕರು,  ಈಗ ಎಂಬುದೇ ಮಿತ್ರ, ಈ ಕ್ಷಣ ಎಂಬುವುದೇ ಜೀವನ.”

” ಪ್ರೀತಿ ಜಗದ ನಿಯಮ, ಸಾವು ಆ ದೇವರ ನಿಯಮ,  ಸಾವಿಗಾಗಿ ಕಾಯಬಾರದು, ಪ್ರೀತಿಗಾಗಿ ಸಾಯಬಾರದು …”   – ಬೆಳಗಿನ ವಂದನೆಗಳು

” ಬದುಕು ನಾವೆಣಿಸಿದಂತೆ ಅತಿ ಸುಲಭವೂ ಅಲ್ಲ ಕಷ್ಟವು ಅಲ್ಲ,  ಬಂದಂತೆ ಸ್ವೀಕರಿಸಿದರೆ ಎದುರಿಸುವಾ ಶಕ್ತಿ ತಂತಾನೆ ಬರುತ್ತದೆ.” – ಶುಭೋದಯ

” ಹಾಲಿನ ಜೊತೆ ಸೇರಿಸಿದ ನೀರು ಕೊಡ ಹಾಲಾಗುತ್ತದೆ,  ಹಾಗೆ ಗುಣವಂತನ ಆಶ್ರಯ ಪಡೆದ ಗುಣಹೀನನು ಗುಣವಂತನಾಗುತ್ತಾನೆ.” – Good morning

” ಒಮ್ಮೆ ನಮ್ಮನ್ನು ದೂರ ಇರಿಸುತ್ತಿದ್ದಾರೆ ಎಂದು ಭಾವಿಸಿದರೆ,  ಅವರಿಗೇ ಎಂದಿಗೂ ನಾವು ತೊಂದರೆ ಕೊಡಬಾರದು.”  – Good morning

” ಜೀವನದಲ್ಲಿ ನಾವು ಸೋಲುವುದು ಸಣ್ಣ ತಪ್ಪುಗಳಿಗೆ ಹೊರತು ದೊಡ್ಡ ತಪ್ಪುಗಳಿಗಲ್ಲ, ಉದಾಹರಣೆಗೆ ನಾವು ಎಡವುದೂ ಸಣ್ಣ ಕಲ್ಲಿಗೆ ಹೊರತು ದೊಡ್ಡ ಬಂಡೆಗಲ್ಲಿಗಲ್ಲ. – ಶುಭೋದಯ

” ಒಳ್ಳೆಯ ಸಮಯಕ್ಕಿಂತ ಒಳ್ಳೆಯ ಮನುಷ್ಯನ ಸಂಭಂಧವಿರಲಿ,  ಏಕೆಂದರೆ ಒಳ್ಳೆಯ ಮನುಷ್ಯ ಒಳ್ಳೆಯ ಸಮಯವನ್ನು ತರಬಲ್ಲ,  ಆದರೆ ಒಳ್ಳೆಯ ಸಮಯವೂ ಒಳ್ಳೆಯ ಮನುಷ್ಯನನ್ನು ತರಲಾರದು,  – ಬೆಳಗಿನ ಶುಭೋಧಯ.

” ಅತಿಯಾಗಿ ಪರಾವಲಂಬನೆಯಾಗುವುದು ಬೇಡ,  ಯಾಕಂದರೆ ಮುಂದೊಂದು ದಿನ ನಾವು ಏಕಾಂಗಿಯಾಗಿಯೇ ನಡೆಯಬೇಕು.”  – ಗುಡ್ ಮಾರ್ನಿಂಗ್

” ಬದುಕಿನ ದಾರಿಯನ್ನು ಕಂಡುಕೊಳ್ಳಬೇಕಾದರೆ,  ತನಗೆ ಏನೇನು ತಿಳಿದಿಲ್ಲವೆಂಬ ಮನೋಭಿಪ್ರಾಯವನ್ನು ಹೊಂದಿರಬೇಕು..”  – ಗುಡ್ ಮಾರ್ನಿಂಗ್

” ದುಃಖ ಪಡಬೇಡಿ ನೀವು ಕಳೆದುಕೊಂಡಿದ್ದು,  ಇನ್ಯಾವುದಾದರೂ ರೂಪದಲ್ಲಿ ನಿಮ್ಮ ಮುಂದೆ ಬಂದೆ ಬರುತ್ತದೆ..”  – ಗುಡ್ ಮಾರ್ನಿಂಗ್

” ಎಲ್ಲಾ ಶಕ್ತಿ ನಿಮ್ಮೊಳಗೆ ಇದೆ, ನೀವು ಏನು ಬೇಕಾದರೂ ಮಾಡಬಹುದು.”  – ಸ್ವಾಮಿ ವಿವೇಕಾನಂದ

” ರೂಪಕ್ಕಿಂತ ಗುಣ ದೊಡ್ಡದು,  ಹಣಕ್ಕಿಂತ ಮಾನವೀಯತೆ ದೊಡ್ಡದು,  ಎಲ್ಲಕ್ಕಿಂತ ನಿಮ್ಮ ಪ್ರೀತಿ ಮತ್ತು ಸ್ನೇಹ ದೊಡ್ಡದು.”  – ಶುಭ ಮುಂಜಾನೆ

” ಪ್ರಯತ್ನ ಎಂಬುದು ಬೀಜದ ಹಾಗೆ,  ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ,  ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ.” – ಗುಡ್ ಮಾರ್ನಿಂಗ್

” ನಿಮ್ಮ ಜೀವನವನ್ನು ಬದಲಿಸಿಕೊಳ್ಳುವ ಕೀಲಿಕೈ ಇರುವುದು ನಿಮ್ಮ ಬಳಿಯೇ, ಅದನ್ನು ಬೇರೆಡೆಗೆ ಹುಡುಕದಿರಿ..” – ಗುಡ್ ಮಾರ್ನಿಂಗ್

” ಸುಮ್ಮನೆ ಕುಳಿತುಕೊಳ್ಳುವುದರಿಂದ ಸಂತೋಷ ಅನುಭವಕ್ಕೆ ಬರುವುದಿಲ್ಲ, ಸದಾ ಕಾಲ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿರುವಾಗ ಮಾತ್ರ ಸಂತೋಷದ ಕೊಡು ನಿಗರಿ ನಿಂತಿರುತ್ತದೆ… – ಗುಡ್ ಮಾರ್ನಿಂಗ್

” ನಾಳೆ ಎಂಬುದು ಶತ್ರು, ಇವತ್ತು ಎಂಬುವುದೇ ಸಂಬಂಧಿಕರು,  ಈಗ ಎಂಬುದೇ ಮಿತ್ರ ಈ ಕ್ಷಣ ಎಂಬುವುದೇ ಜೀವನ.”  – ಶುಭ ಮುಂಜಾನೆ

” ಕೊರೆವ ಚುಮು ಚುಮು ಚಳಿಯ ಮುಂಜಾನೆಯಲ್ಲಿ,  ಸುಡುವ ಅವಳ ಬಿಸಿ ಬಿಸಿ ಚಲುವ ಹೃದಯದ ಪ್ರೀತಿಯ ಹೂವ ಮೇಲಿನಾ   ಒಲವಿನ ಮಂಜುಗಡ್ಡೆ ನಾ…”  – ಶುಭ ಮುಂಜಾನೆ

” ನಗುವ ಮೊಗದಲ್ಲಿ ಬೆಟ್ಟದಷ್ಟು ನೋವಿದೆ,  ನೋವಿರುವ ಮನದಲ್ಲಿ ಕಾಣದಷ್ಟು ಕನಸಿದೆ, ಕನಸ ಕಾಣುವ ಹಾದಿಯಲ್ಲಿ ಕಂಡರಿಯದ ಛಲವಿದೆ, ಛಲವಿರುವ ಜೀವದಲ್ಲಿ ಗುರಿಮುಟ್ಟುವ ಬಲವಿದೆ…” – ಗುಡ್ ಮಾರ್ನಿಂಗ್

” ಕಷ್ಟಪಡುವವರಿಗೆ ನಗು ಬರಲ್ಲ, ನಗುವವರಿಗೆ ಕಷ್ಟ ಬರಲ್ಲ,” – Happy Friday

” ಈ ಜಗತ್ತಿನಲ್ಲಿ ಸೋಲದೆ ಗೆದ್ದವರು ಯಾರು ಇಲ್ಲ,   ಸೋತು ಗೆದ್ದವರೇ ಸಾಧಕರೆಲ್ಲ …” – Good morning

“ನೀವು ಎತ್ತರಕ್ಕೆ ಏರಿದಾಗ ಜನ ನಿಮ್ಮತ್ತ ಕಲ್ಲು ತೂರುತ್ತಾರೆ,  ಹಾಗೆಂದು ನೀವು ಕೆಳಕ್ಕೆ ನೋಡುತ್ತಾ ನಿಲ್ಲಬೇಡಿ, ಬದಲಿಗೆ ಇನ್ನು ಎತ್ತರಕ್ಕೇರಿ, ಆಗ ಆ ಕಲ್ಲುಗಳು ನಿಮಗೆ ತಾಗುವುದೇ ಇಲ್ಲಾ.”- Good morning

” ಪ್ರಪಂಚದಲ್ಲಿ ಯಾರನ್ನು ಬೇಕಾದರೂ ಸೋಲಿಸಬಹುದು,  ಆದರೆ ಸೋಲಿನಲ್ಲೂ ನಗುವವರನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ.”  – Good Morning

 “ಸಾರ್ಥಕ ಬದುಕು ಎಂದರೇ ,  ಯಾರಿಗೂ ಹೊರೆಯಾಗದಂತೆ ಬದುಕುವುದು…” – ಶುಭೋದಯ

ಶುಭೋದಯ ಎಂದರೆ ಹೊಸ ದಿನದ ಪ್ರಾರಂಭ. ಪ್ರತೀ ದಿನ ಹೊಸ ಅವಕಾಶಗಳನ್ನು, ಹೊಸ ಕನಸುಗಳನ್ನು, ಮತ್ತು ಹೊಸ ಉತ್ಸಾಹವನ್ನು ನಮ್ಮ ಜೀವನಕ್ಕೆ ತರುತ್ತದೆ.

ಬೆಳಗಿನ ದಿನಚರಿಯನ್ನು ಶ್ರದ್ಧೆ ಮತ್ತು ಶಾಂತತೆಯಿಂದ ಆರಂಭಿಸುವುದು ನಮಗೆ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಒಂದು ಉತ್ತಮ ಶುಭೋದಯ ನಮ್ಮ ದಿನದ ಶೀಘ್ರಗಾಮಿತ್ವವನ್ನು ನಿರ್ಧರಿಸಬಹುದು.

ಶುಭೋದಯ ಸಮಯದಲ್ಲಿ ಪ್ರಪಂಚವು ಶಾಂತವಾಗಿರುತ್ತದೆ, ಪ್ರಕೃತಿಯ ಶಬ್ದಗಳು ನಮ್ಮ ಮನಸ್ಸನ್ನು ತಾಜಾ ಮಾಡುತ್ತವೆ.

ಈ ಹೊತ್ತಿನಲ್ಲಿ ನಾವು ಸ್ವಲ್ಪ ಸಮಯ ಯೋಗ, ಪ್ರಾಣಾಯಾಮ ಅಥವಾ ಧ್ಯಾನಕ್ಕೆ ಮೀಸಲಿಡುವ ಮೂಲಕ ದಿನದ ಶ್ರೇಷ್ಠ ಆರಂಭವನ್ನು ಅನುಭವಿಸಬಹುದು.

ಶುದ್ಧವಾದ ಯೋಚನೆಗಳು ಮತ್ತು ಸ್ವಚ್ಛ ಮನೋಭಾವದಿಂದ ದಿನವನ್ನು ಶುರುಮಾಡಿದರೆ, ಸಕಾರಾತ್ಮಕತೆ ನಮ್ಮ ಕೆಲಸಗಳಲ್ಲಿ ವ್ಯಕ್ತವಾಗುತ್ತದೆ.

ಶುಭೋದಯವೇ ದಿನದ ಮೊದಲ ಹಾದಿ. ನಿಮ್ಮ ಸಮಯವನ್ನು ಶಿಸ್ತುಬದ್ಧವಾಗಿ ಬಳಸುವುದು, ಕೃತಜ್ಞತೆಯ ಮನೋಭಾವವನ್ನು ಬೆಳಸುವುದು.

ಮತ್ತು ನಿಮ್ಮ ಗುರಿ ಕಡೆಗೆ ಪ್ರೇರಣೆಯಿಂದ ಹೆಜ್ಜೆ ಇಡುವುದು ಯಶಸ್ವಿಯ ದಿನವನ್ನು ರೂಪಿಸುತ್ತದೆ.
ಆದ್ದರಿಂದ, ಪ್ರತೀ ದಿನದ ಶುಭೋದಯವನ್ನು ಅರ್ಥಪೂರ್ಣವಾಗಿ ಪ್ರಾರಂಭಿಸಿ, ನಿಮ್ಮ ಬದುಕನ್ನು ಹೊಸ ಉತ್ಸಾಹದಿಂದ ತುಂಬಿಸಿ. ಪ್ರತೀ ದಿನದ ಪ್ರಾರಂಭ ಹೊಸ ಮುಕ್ತಾಯಕ್ಕೆ ದಾರಿ ತೆಗೆಯುತ್ತದೆ!

Related Articles