ಟೊಮೆಟೊ ಅಥವಾ ಟಮೋಟಾ (Tomato) ಎಲ್ಲರಿಗೂ ಪರಿಚಿತವಾದ ಒಂದು ಸಾಮಾನ್ಯ ಹಣ್ಣು. ಇದು ನಮ್ಮ ಅಡುಗೆಗೆ ಬರುವ ಅವಶ್ಯಕ ತಾರ್ಕಾರಿಗಳಲ್ಲಿ ಒಂದು. ಟೊಮೆಟೊವು ಆಹಾರದಲ್ಲಿ ಹೊಸ ರುಚಿಯನ್ನು ಸೇರಿಸಲು ಮಾತ್ರವಲ್ಲ, ನಮ್ಮ ಆರೋಗ್ಯವನ್ನು ಬಲಪಡಿಸಲು ಸಹ ಪ್ರಮುಖ ಪಾತ್ರ ವಹಿಸುತ್ತದೆ.
ಇದರಲ್ಲಿ ವಿಟಮಿನ್ C, ವಿಟಮಿನ್ A, ಪೊಟ್ಯಾಸಿಯಂ, ಫೋಲಿಕ್ ಆಸಿಡ್ ಮತ್ತು ಆಂಟಿ-ಆಕ್ಸಿಡೆಂಟ್ಸ್ ಮುಂತಾದ ಅನೇಕ ಪೋಷಕಾಂಶಗಳು ದೊರೆಯುತ್ತವೆ. ಟೊಮೆಟೊನಲ್ಲಿ ಲೈಕೊಪಿನ್ ಎಂಬ ಶಕ್ತಿಯಾದ ಆಂಟಿ-ಆಕ್ಸಿಡೆಂಟ್ ಅಂಶವಿದೆ, ಇದು ಹೃದಯದ ಆರೋಗ್ಯವನ್ನು ಸುಧಾರಿಸಲು, ಕ್ಯಾನ್ಸರ್ ಅಡೆತಡೆಯಲು ಮತ್ತು ಚರ್ಮದ ತಾಜಾತನವನ್ನು ಕಾಪಾಡಲು ಸಹಾಯ ಮಾಡುತ್ತದೆ.
ಜೊತೆಗೆ, ಈ ಹಣ್ಣು ಕಡಿಮೆ ಕ್ಯಾಲೊರಿಗಳಿಂದ ಕೂಡಿದೆ, ಅದು ದೇಹದ ತೂಕ ನಿಯಂತ್ರಿಸಲು ಹಾಗೂ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಕಾರಿ. ನಿತ್ಯ ಟೊಮೆಟೊ ಸೇವನೆಯಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯಘಾತದ ಹಾನಿಗಳನ್ನು ತಡೆಯಲು ಸಾಧ್ಯ.
ಟೊಮೆಟೊವನ್ನು ತಾಜಾ, ಹುಳಿ, ಸಾಸ್ ಅಥವಾ ಸ್ಯಾಲಡ್‌ಗಳಲ್ಲಿ ಬಳಸಬಹುದು. ಈ ಬ್ಲಾಗ್‌ನಲ್ಲಿ ಟೊಮೆಟೊ ಸೇವನೆಯ ಪ್ರಯೋಜನಗಳು ಮತ್ತು ಅದನ್ನು ಆಹಾರದಲ್ಲಿ ಹೇಗೆ ಬಳಸಬಹುದು ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಿ.
ಆರೋಗ್ಯದ ವಿಷಯದಲ್ಲಿ ಟೊಮ್ಯಾಟೋವಿನ (Tomato) ಪ್ರಯೋನಜನಗಳು ಹಲವಾರು. ಟೊಮ್ಯಾಟೋವಿನಲ್ಲಿರುವ ಆಮ್ಲ ಒಬ್ಬ ಮನುಷ್ಯನಿಗೆ ಹಲವಾರು ರೀತಿಯಲ್ಲಿ ಸಹಾಯ ಮಾಡುತ್ತದೆ. ಅಂತಹ ಕೆಲವು ಲಾಭಗಳ ಪಟ್ಟಿ ಇಲ್ಲಿದೆ.
1. ಟೊಮೆಟೊ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ಟೊಮ್ಯಾಟೋವಿನಲ್ಲಿರುವ ಪೌಷ್ಟಿಕಾಂಶಕಗಳನ್ನು ಪರಿಗಣಿಸಿದಾಗ, ಅದರಲ್ಲಿ ವಿಟಮಿನ್ ಆ ಮತ್ತು ವಿಟಮಿನ್ ಸಿ ಸಮೃದ್ಧವಾಗಿರುವುದನ್ನು ಕಂಡುಬರುತ್ತದೆ.
ಈ ಎರಡೂ ಬಗೆಯ ವಿಟಮಿನ್ ಗಳು ಆರೋಗ್ಯಕರವಾಗಿದ್ದು, ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ.
ಅದರೊಂದಿಗೆ, ನಿಮ್ಮ ದೃಷ್ಟಿ, ಕಣ್ಣು ಮತ್ತು ಹಲ್ಲುಗಳ ಆರೋಗ್ಯವನ್ನೂ ಸುಧಾರಿಸುತ್ತದೆ. ಟೊಮ್ಯಾಟೋವಿನ ಅತ್ಯುತ್ತಮ ಅರೋಗ್ಯ ಪ್ರಯೋಜನಗಳಲ್ಲಿ ಇದೂ ಒಂದು ಎಂದು ಪರಿಗಣಿಸಬಹುದು.
2. ಟೊಮೆಟೊ ಕೊಲೆಸ್ಟರೋಲ್ (Cholesterol) ಕಡಿಮೆಗೊಳಿಸುತ್ತದೆ:

ಟೊಮೇಟೊ ರಸ ಇನ್ನೊಂದು ಅದ್ಭುತ ಪ್ರಯೋಜನ – ಕೊಲೆಸ್ಟರೋಲ್ ಕಡಿಮೆಗೊಳಿಸುವ ಸಾಮರ್ಥ್ಯ. ಟೊಮ್ಯಾಟೋವಿನಲ್ಲಿಫೈಬರ್ ಅಂಶ ಅಧಿಕವಾಗಿದೆ.
ಟೊಮೇಟೊ ರಸವನ್ನು ಕುಡಿಯುವುದರಿಂದ ನಿಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟರೋಲ್ ಅನ್ನು ಒಡೆಯುವಲ್ಲಿ ಸಹಾಯ ಮಾಡುತ್ತದೆ.
ಟೊಮ್ಯಾಟೊನಲ್ಲಿರುವ ವಿಟಮಿನ್ ಸಿ ಮತ್ತು ನಿಯಾಸಿನ್ ಕೂಡಾ ಕೊಲೆಸ್ಟರೋಲ್ ಅನ್ನು ಸ್ಥಗಿತಗೊಳಿಸುವಲ್ಲಿ ಸಹಾಯ ಮಾಡುತ್ತದೆ.
3. ತೂಕ ಕಡಿಮೆಗೊಳಿಸುವಲ್ಲಿ ಟೊಮೆಟೊ ಸಹಾಯ ಮಾಡುತ್ತದೆ:

ಇದು ಟೊಮ್ಯಾಟೋವಿನ (Tomato) ಮತ್ತೊಂದು ಅತ್ಯುತ್ತಮ ಲಾಭ. ಸಾಮಾನ್ಯವಾಗಿ, ಹೆಚ್ಚಿನ ತೂಕವನ್ನು ಕಳೆದುಕೊಳ್ಳಲು ಜನರು ಬಹಳಷ್ಟು ಕೆಲಸ ಮಾಡುತ್ತಾರೆ.
ಟೊಮ್ಯಾಟೋಸ್ ಉತ್ತಮ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ಗಳು ಮತ್ತು ವಿಟಮಿನ್ಗಳನ್ನು ಹೊಂದಿರುತ್ತದೆ.
ಟೊಮೇಟೊ ರಸವನ್ನು ಸೇವಿಸುವುದರಿಂದ ವ್ಯಕ್ತಿಯ ಶಕ್ತಿಯನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳಬಹುದು. ಇದರಿಂದ ಹಸಿವು ಸಹ ಆಗುವುದಿಲ್ಲ.
ಟೊಮ್ಯಾಟೋಗಳು ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ನೀಡಿ, ದೇಹ ಆರ್ಧಾರಿಕಾರಿಯಾಗಿ ಉಳಿಯಲು ಸಹಾಯ ಮಾಡುತ್ತದೆ.
ಟೊಮೇಟೊ ರಸವನ್ನು ಸೇವಿಸಿದ ನಂತರ ದೀರ್ಘಕಾಲದವರೆಗೆ ಹಸಿವು ಕಾಡದ ಕಾರಣ, ತೂಕ ಕಡಿಮೆಗೊಳ್ಳುತ್ತದೆ.
4. ನಿರ್ವಿಷೀಕರಣದಲ್ಲಿ (Detoxification) ಸಹಾಯ ಮಾಡುತ್ತದೆ:

ಮಾನವ ದೇಹದಲ್ಲಿರುವ ಯಕೃತ್ತು ಮತ್ತು ಮೂತ್ರಪಿಂಡ ದೇಹವನ್ನು ನಿರ್ವಿಷೀಕರಣಗೋಲ್ರಿಸುವ ಕಾರ್ಯದಲ್ಲಿ ಭಾಗವಹಿಸುವ ಮುಖ್ಯ ಭಾಗಗಲ್ಲಾಗಿವೆ. ಇವೆರಡು ದೇಹದ ಭಾಗಗಳು ಸರಿಯಾಗಿ ಕಾರ್ಯನಿರ್ವಹಿಸುವುದು ದೇಹದ ಅರೋಗ್ಯ ಸ್ಥಿತಿ ನಿರ್ವಹಿಸಲು ಅತ್ಯಗತ್ಯ.
ಟೊಮ್ಯಾಟೋನಲ್ಲಿರುವ ಕ್ಲೋರಿನ್ ಮತ್ತು ಸಲ್ಫರ್ ಈ ಎರಡು ಭಾಗಗಳ ಅರೋಗ್ಯ ಸ್ಥಿತಿಯನ್ನು ನಿರ್ವಹಿಸುತ್ತದೆ. ಟೊಮೇಟೊ ಈ ಎರಡು ಅಂಶಗಳನ್ನು ಹೇರಳವಾಗಿ ಹೊಂದಿದ್ದು, ಟೊಮೇಟೊ ರಸವಣ್ಣಿ ಪ್ರತಿದಿನ ಸೇವಿಸುವುದರಿಂದ ನಿಮ್ಮ ದೇಹದ ನಿರ್ವಿಷೀಕರಣ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತದೆ.
ಇದನ್ನೂ ಓದಿ: Avocado: ಆವಕಾಡೊ ಹಣ್ಣಿನ 10 ಆರೋಗ್ಯ ಪ್ರಯೋಜನಗಳು
5. ಹಲವು ಬಗೆಯ ಕ್ಯಾನ್ಸರ್ ಗಳ ವಿರುದ್ಧ ಟೊಮೆಟೊ ಹೋರಾಡುತ್ತದೆ:

ಚೆರ್ರಿ ಟೊಮ್ಯಾಟೋಗಳ (Tomato) ಕೆಂಪು ಬಣ್ಣಕ್ಕೆ ಕಾರಣ -ಅದರಲ್ಲಿರುವ ಲಿಕೋಪಿನ್. ಈ ಲಿಕೋಪಿನ್ ಕೊಬ್ಬು ಕರಗಿಸುವ ಆಂಟಿಆಕ್ಸಿಡೆಂಟ್ ಆಗಿದೆ.
ಟೊಮೇಟೊ ರಸವನ್ನು ಸೇವಿಸುವುದರಿಂದ ಹಲವು ಬಗೆಯ ಕ್ಯಾನ್ಸರ್ ಗಳ (ಪ್ರಾಸ್ಟೇಟ್ ಕ್ಯಾನ್ಸರ್, ಸ್ತನದ ಕ್ಯಾನ್ಸರ್, ಪಕ್ಕ್ರಿಯಾಟಿಕ್ ಕ್ಯಾನ್ಸರ್, ಪರಿಧಮನಿಯ ಕಾಯಿಲೆ, ಅಥೆರೋಸ್ಕ್ಲೆರೋಸಿಸ್) ವಿರುದ್ಧ ಹೋರಾಡಲು ಇದು ಸಹಾಯ ಮಾಡುತ್ತದೆ.
6. ಮೊಡವೆ ವಿರುದ್ಧ ಟೊಮೆಟೊ ಹೋರಾಡುತ್ತದೆ:

ಇದು ಟೊಮ್ಯಾಟೋ ನಿಮ್ಮ ಮುಖಕ್ಕೆ ಮಾಡಬಹುದಾದ ಅತ್ಯದ್ಭುತ ಮತ್ತು ಉತ್ಕೃಷ್ಟ ಲಾಭಗಳಲ್ಲಿ ಒಂದು. ಲಿಂಗಗಳ ಭೇದವಿಲ್ಲದೆ, ಎಲ್ಲರಿಗೂ ಮೊಡವೆಯ ತೊಂದರೆ ಕಾಡುವುದು ಸಹಜ. ಸಾಮಾನ್ಯವಾಗಿ ಮೊಡವೆಯನ್ನು ಹೋಗಲಾಡಿಸಲು ವಿವಿಧ ರೀತಿಯ ಫೇಸ್ ಕ್ರೀಮ್ ಮತ್ತು ಮಾಸ್ಕ್ ಗಳನ್ನೂ ಬಾಲಸುತ್ತಾರೆ.
ಆದರೆ ಅವುಗಳು ಯಾವುದೇ ರೀತಿಯ ಸಹಾಯ ಮಾಡುವುದಿಲ್ಲ. ಮೊಡವೆಯನ್ನು ಕಡಿಮೆಗೊಳಿಸುಳ ಉನ್ನತ ವಿದ್ಧನ ಎಂದರೆ ಟೊಮೇಟೊ ರಸವನ್ನು ಮೊಡವೆಯ ಮೇಲೆ ಲೇಪಿಸುವುದು.
ಟೊಮೇಟೊ ಹಣ್ಣನ್ನು ಕಿವುಚಿ, ಅದರಿಂದ ಬಂಡ ರಸವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಅದು ಒಣಗಿದ ನಂತರ, ಬಾಚನೆಯ ನೀರಿನಿಂದ ನಿಮ್ಮ ಮುಖವನ್ನು ತೊಳೆದುಕೊಳ್ಳಿ. ಇದನ್ನು ನಿಯಮಿತವಾಗಿ ಮಾಡಿದರೆ ಮೊಡವೆಗಳನ್ನು ತಡೆಗಟ್ಟಬಹುದು.
7. ಟೊಮೇಟೊ ಫೇಸ್ ಪ್ಯಾಕ್ ರಂಧ್ರಗಳನ್ನು ಕುಗ್ಗಿಸುತ್ತದೆ:

ಇದು ಟೊಮ್ಯಾಟೋವಿನ ಪ್ರಮುಖ ಪ್ರಯೋಜನಗಳಲ್ಲಿ ಒಂದು. ನಿಮ್ಮ ಮುಖದ ಮೇಲಿರುವ ರಂಧ್ರಗಳನ್ನು ಕುಗ್ಗಿಸುವಲ್ಲಿ ಈ ಟೊಮೇಟೊ ಫೇಸ್ ಪ್ಯಾಕ್ ಅತ್ಯಂತ ಉಪಯೋಗಕಾರಿ. 3-4 ಹನಿ ನಿಂಬೆ ರಸವನ್ನು ಟೊಮೇಟೊ ರಸದೊಂದಿಗೆ ಸೇರಿಸಿ ಲೇಪಿಸಿರಿ.
ಈ ಮಾಸ್ಕ್ ಒಣಗಿದ ನಂತರ, ಬಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಟೊಮ್ಯಾಟೊದಲ್ಲಿರುವ ಆಮ್ಲ ನಿಮ್ಮ ಮುಖದ pH ನಿರ್ವಹಿಸುವಲ್ಲಿ ಸಹಾಯ ಮಾಡಿ, ನಿಮ್ಮ ಮುಖದ ಮೇಲಿರುವ ರಂಧ್ರಗಳನ್ನು ಕುಗ್ಗಿಸುತ್ತದೆ.
8. ಟೊಮೆಟೊ ಚರ್ಮದ ಆರೋಗ್ಯವನ್ನು ವರ್ಧಿಸುತ್ತದೆ:

ಬೇಸಿಗೆಯಲ್ಲಿ ಸೂರ್ಯನ ಕೀರ್ಣಗಳಿಂದಾಗಿ ನಿಮ್ಮ ಚರ್ಮದ ಬಣ್ಣ ಕಂದಾಗುವುದು ಸರ್ವೇಸಾಮಾನ್ಯ. ಇದನ್ನು ಟಾನ್ ಎಂದು ಕರೆತ್ತರೆ.
ಇದನ್ನು ತೆಗೆದು ಹಾಕಲು, ಕೇವಲ ಒಂದು ಟೊಮೇಟೊ ಫೇಸ್ ಪ್ಯಾಕ್ ಸಾಕು. ಒಂದು ಟೊಮ್ಯಾಟೊವನ್ನು ಕಿವುಚಿ, ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. 5 ನಿಮಿಷದ ನಂತರ, ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ.
9. ಮುಖದ ಎಣ್ಣೆಯನ್ನು ಕಡಿಮೆಗೊಳಿಸಿ, ಕಪ್ಪುಚುಕ್ಕೆಗಳನ್ನು ತೆಗೆದುಹಾಕುತ್ತದೆ:

ಎಣ್ಣೆಯುಕ್ತ ಚರ್ಮದವರಿಗೆ ಸಹಜವಾಗಿ ಕಾಡುವ ಸಮಸ್ಯೆ ಎಂದರೆ ಅವರ ಮುಖದ ಮೇಲೆಯಾಗುವ ತೈಲದ ಸಂಗ್ರಹಣೆ. ಟೊಮೇಟೊ ಮತ್ತು ಸೌತೆಕಾಯಿ ಬಳಸಿ ಮಾಡುವ ಫೇಸ್ ಪ್ಯಾಕ್ ನಿಂದ ಮುಖದ ಎಣ್ಣೆ ಉತ್ಪಾದನೆ ಕಡಿಮೆಗೊಳಿಯಬಹುದು.
ಎಣ್ಣೆಯುಕ್ತ ತ್ವಛೆಯುಳ್ಳವರಿಗೆ ಕಪ್ಪು ಚುಕ್ಕೆ ಅಥವಾ ಬ್ಲಾಕ್-ಹೆಡ್ಸ್ ಅತಿ ದೊಡ್ಡ ಸಮಸ್ಯೆಯಾಗಿದೆ. ಈ ರೀತಿಯ ಕಪ್ಪುಚುಕ್ಕೆಗಳ ಮೇಲೆ ಟೊಮೇಟೊ ರಸವನ್ನು ಹಚ್ಚಿದರೆ, ಕೆಲವೇ ದಿನಗಳಲ್ಲಿ ನೀವು ವ್ಯತ್ಯಾಸವನ್ನು ಕಾಣಬಹುದು.
10. ಟೊಮೆಟೊ ಫೇಸ್ ಪ್ಯಾಕ್ ಮುಖದಲ್ಲಿ ಚೈತನ್ಯ ತುಂಬುತ್ತದೆ:

ನೀವು ಸನ್-ಬರ್ನ್ ಅಥವಾ ಮಂದ ಚರ್ಮದಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಮೊಸರು ಮತ್ತು ಟೊಮೇಟೊ ಫೇಸ್ ಪ್ಯಾಕ್ ಬಳಸಿ. ಟೊಮೇಟೊ ರಸವನ್ನು ಮೊಸರಿನೊಂದಿಗೆ ಸೇರಿಸಿ, ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ.
2೦ ನಿಮಿಷದ ನಂತರ, ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಟೊಮೇಟೊ ನಿಮ್ಮ ಚರ್ಮ ತಣ್ಣಗಾಗಲು ಸಹಾಯ ಮಾಡಿದರೆ, ಮೊಸರು ನಿಮ್ಮ ಚರ್ಮವನ್ನು ಪೋಷಿಸುತ್ತದೆ.
ಟೊಮೆಟೊ ಒಂದು ಬಹುಮುಖ ಮತ್ತು ಪೋಷಕಾಂಶಗಳಲ್ಲಿ ಶ್ರೀಮಂತ ಹಣ್ಣು, ಅದು ನಮ್ಮ ಆರೋಗ್ಯಕ್ಕೆ ಅನೇಕ ಲಾಭಗಳನ್ನು ಒದಗಿಸುತ್ತದೆ. ಇದು ವಿಟಮಿನ್‌ಗಳು, ಖನಿಜಗಳು ಮತ್ತು ಆಂಟಿಆಕ್ಸಿಡಂಟ್‌ಗಳಿಂದ ಸಂಪನ್ನವಾಗಿದ್ದು.
ಹೃದಯದ ಆರೋಗ್ಯವನ್ನು ಕಾಪಾಡುವುದು, ಚರ್ಮದ ಕಾಳಜಿಗಳನ್ನು ತಡೆಯುವುದು, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವ ಮೂಲಕ ಆರೋಗ್ಯಕರ ಜೀವನಕ್ಕೆ ನೆರವಾಗುತ್ತದೆ.
ತಾಜಾ ಟೊಮೆಟೊಗಳನ್ನು ತಿನ್ನುವುದು ಅಥವಾ ಅಡುಗೆಯಲ್ಲಿ ವಿವಿಧ ರೀತಿಯ ಪದಾರ್ಥಗಳಲ್ಲಿ ಬಳಸುವುದು, ಇದು ನಿಮ್ಮ ಆಹಾರಕ್ಕೆ ರುಚಿ ಮತ್ತು ಪೋಷಕಾಂಶಗಳಾದ್ದನ್ನು ಸೇರಿಸುತ್ತದೆ.
ಟೊಮೆಟೊವನ್ನು ನಿಯಮಿತವಾಗಿ ಸೇವಿಸುವ ಮೂಲಕ ನಿಸ್ಸಂದೇಹವಾಗಿ ನೀವು ಆರೋಗ್ಯಕರ ಮತ್ತು ಸಮತೋಲನಯುತ ಜೀವನಶೈಲಿಯನ್ನು ಅನುಸರಿಸಬಹುದು.