ಆರೋಗ್ಯದಾಯಕ ಆಹಾರ ಪದ್ಧತಿ: ಮಾನವನ ಅದ್ಭುತವಾದ ಈ ದೇಹ ತನ್ನ ಸಂರಕ್ಷ ಣೆಯನ್ನು ತಾನೇ ಮಾಡಿಕೊಳ್ಳುವುದು. ತನ್ನ ಸ್ವಚ್ಛತೆ ಯನ್ನು ತಾನೇ ಕಾಯ್ದುಕೊಳ್ಳುವುದು.
ತನ್ನ ರೋಗ ನಿರೋಧಕ ಶಕ್ತಿಯನ್ನು ತಾನೇ ಬೆಳೆಸಿಕೊಳ್ಳುವುದು.
ಇದಕ್ಕಾಗಿ ದೇಹಕ್ಕೆ ಯಾವ ಚಾರ್ಟುಗಳು, ಕ್ಯಾಲರಿ ಊಟದ ಲೆಕ್ಕಾಚಾರವೂ ಬೇಕಾಗಿಲ್ಲ. ನಾವೆಲ್ಲ ನೈಸರ್ಗಿಕ ಜೀವನ ವಿಧಾನ ನಡೆಸಿದರಷ್ಟೇ ಸಾಕು. ದೇಹವು ಆರೋಗ್ಯಪೂರ್ಣವೂ,ಕ್ರಿಯಾಶೀಲವೂ ಆಗಿರುವುದು.
*ಅದಕ್ಕಾಗಿ ಮುಂಜಾನೆಯ ಉಪಹಾರ ರದ್ದು ಮಾಡಿರಿ ಮದ್ಯಾಹ್ನ ಹನ್ನೆರಡರ ವರೆಗೆ ನಿಮಗೆ ಸೇರುವ ಯಾವುದೇ ಹಣ್ಣಿನ ರಸ ಇಲ್ಲವೇ ಮಜ್ಜಿಗೆಯಂತಹ ರಸಾಹಾರ ಸೇವಿಸಿರಿ.
* ಟೊಮೆಟೊ, ಗಜ್ಜರಿ , ಕಿತ್ತಳೆ , ದ್ರಾಕ್ಷಿ , ಮೋಸಂಬಿ , ಕಲ್ಲಂಗಡಿ,ಸೇಬು,ಚಿಕ್ಕು ಇವೇ ಮೊದಲಾದ ಹಣ್ಣು ಗಳನ್ನು ಸುಗ್ಗಿಗನುಸಾರ ಉಪಯೋಗಿಸಿರಿ.ಮಿಶ್ರ ರಸ ಇದ್ದರೆ ಇನ್ನೂ ಉತ್ತಮ.
*ಎರಡು ಮೂರು ವಾರ ಈ ಕ್ರಮ ಅನುಸರಿಸಿ ನೋಡಿ ದೇಹ ಉತ್ಸಾಹದ ಬುಗ್ಗೆಯಾಗುವುದನ್ನು ನೀವು ಅನುಭವಿಸುವಿರಿ.
* ಮದ್ಯಾಹ್ನ ಹನ್ನೆರಡರ ನಂತರ ರಾತ್ರಿ ಎಂಟು ಗಂಟೆಯ ಒಳಗಾಗಿ ನಿಮಗೆ ಬೇಕಾದ ನಿಮಗೆ ಸೇರುವ ಎರಡು ಊಟಗಳನ್ನು ಹಿತಮಿತವಾಗಿ ಮಾಡಿರಿ.ಮಿಶ್ರ ಊಟವಿರಲಿ. ಕಾಯಿಪಲ್ಲೆ, ತಪ್ಪಲು ಪಲ್ಲೆ , ಜೋಳದ ರೊಟ್ಟಿ , ಚಪಾತಿ , ಅನ್ನ , ಮೊಳಕೆ ಬರಿಸಿದ ಕಾಳು, ಸಾರು ಇರಲಿ.
ಮೊದಲಿಗೆ ಪೋಷಕಾಂಶಗಳು ಅಧಿಕ ಇರುವ ಆಹಾರಗಳನ್ನು ಸೇವಿಸಬೇಕು:
ನಾವು ತಿನ್ನುವ ಆಹಾರದಲ್ಲಿ (Healthy Eating Habits), ನಮ್ಮ ಆರೋಗ್ಯಕ್ಕೆ ಬೇಕಾಗುವಷ್ಟು ಪೌಷ್ಟಿಕ ಸತ್ವಗಳು, ವಿಟಮಿನ್ ಗಳು, ಖನಿಜಾಂಶಗಳು, ನಾರಿನಾಂಶ ಹಾಗೂ ಕ್ಯಾಲ್ಸಿಯಂ ಅಂಶಗಳು ಕಂಡು ಬಂದರೆ ಮಾತ್ರ ನಮ್ಮ ದೇಹಾ ರೋಗ್ಯವನ್ನು ಕಾಪಾಡಿಕೊಳ್ಳಬಹುದು. ಒಂದು ವೇಳೆ ಇದರಲ್ಲಿ ಕೊರತೆಯು ಕಂಡುಬಂದರೆ ಅದರಿಂದ ದೇಹದಲ್ಲಿ ಸಮಸ್ಯೆಗಳು ಆರಂಭವಾಗುವುದು.
ಮೊದಲು ಖಾಲಿ ಹೊಟ್ಟೆಗೆ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ:
ಬೆಳಗ್ಗೆ ಎದ್ದ ತಕ್ಷಣ, ಒಂದೆರಡು ಲೋಟ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಜೀರ್ಣಕ್ರಿಯೆ ವ್ಯವಸ್ಥೆಯು ಸುಗಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದು.
ಅಷ್ಟೇ ಅಲ್ಲದೆ ಮೂತ್ರ ವಿಸರ್ಜನೆ ಮಾಡುವ ವೇಳೆ, ದೇಹದೊಳಗಿನ ವಿಷಕಾರಿ ಅಂಶಗಳು ದ್ರವ ರೂಪದಲ್ಲಿ ಹೊರಗೆ ಹೋಗುವುದು, ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ನೆನೆಸಿಟ್ಟ ಬಾದಾಮಿ ಬೀಜಗಳನ್ನು ಸೇವನೆ ಮಾಡಿ:
ಬಾದಾಮಿ ಬೀಜಗಳು ದುಬಾರಿ ಎನ್ನುವ ಒಂದೇ ಕಾರಣ ಬಿಟ್ಟರೆ, ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರಮುಖವಾಗಿ ಈ ಒಣಫಲದಲ್ಲಿ ಆಗಾಧ ಪ್ರಮಾಣದ ವಿಟಮಿನ್ಗಳು, ಕ್ಯಾಲ್ಸಿಯಂ, ಖನಿಜಾಂಶ ಗಳು, ಪ್ರೋಟೀನ್ ಅಂಶಗಳು ಉತ್ತಮ ಪ್ರಮಾಣದಲ್ಲಿದ್ದು, ಸಾಕಷ್ಟು ಆರೋಗ್ಯಕರ ಪ್ರಯೋಜನ ಗಳನ್ನು ಇದು ಒಳಗೊಂಡಿದೆ.
ಇನ್ನೂ ಮುಖ್ಯವಾಗಿ ಬಾದಾಮಿ ಯಲ್ಲಿ ಒಳ್ಳೆಯ ಕೊಬ್ಬಿನಾಂಶದ ಜೊತೆಗೆ ನಾರಿನಾಂಶ ಹಾಗೂ ಕಡಿಮೆ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಅಂಶಗಳು, ಈ ಒಣಫಲದಲ್ಲಿ ಇರುವುದರಿಂದ ಮಧು ಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ನೆರವಾಗುತ್ತವೆ. ದಿನಾ ಬೆಳಿಗ್ಗೆ ಎದ್ದ ಕೂಡಲೇ ಎರಡೇ ಎರಡು ‘ನೆನೆಸಿಟ್ಟ ಬಾದಾಮಿ’ ತಿನ್ನಿ
ಪ್ರತಿದಿನ ಒಂದೆರಡು ಖರ್ಜೂರಗಳನ್ನು ಸೇವನೆ ಮಾಡಿ:
ಖರ್ಜೂರಗಳು ತಮ್ಮಲ್ಲಿ ಅಪಾರ ಪ್ರಮಾಣದ ಸಕ್ಕರೆ ಅಂಶವನ್ನು ಒಳಗೊಂಡಿರುವುದರಿಂದ, ಮಕ್ಕಳಿಂದ ಹಿಡಿದು, ಹಿರಿಯರವರೆಗೂ ಕೂಡ, ಇದು ಇಷ್ಟವಾಗುತ್ತದೆ.
ಪ್ರಮುಖವಾಗಿ ಖರ್ಜೂರಗಳಲ್ಲಿ ನಾರಿನಾಂಶ ಅಪಾರ ಪ್ರಮಾಣದಲ್ಲಿ ಕಂಡು ಬರುವುದರಿಂದ ದೇಹದ ಜೀರ್ಣ ಶಕ್ತಿಯನ್ನು ಹೆಚ್ಚಿಸಿ ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ.
ತಾಜಾ ತರಕಾರಿಗಳನ್ನು ಹಾಗೂ ಹಣ್ಣುಗಳನ್ನು ಸೇವನೆ ಮಾಡಿ:
ನಮ್ಮ ದೈನಂದಿನ ಆಹಾರ ಪದ್ಧತಿ ಯಲ್ಲಿ, ತಾಜಾ ಹಣ್ಣುಗಳು ಹಾಗೂ ತರಕಾರಿಗಳನ್ನು ಸೇರಿಸಿ ಕೊಂಡರೆ, ದೀರ್ಘಕಾಲದ ಕಾಯಿಲೆಗಳಾದ ಮಧುಮೇಹ, ರಕ್ತದೊತ್ತಡದ ಸಮಸ್ಯೆ, ಹೃದಯದ ಸಮಸ್ಯೆಗಳ ಜೊತೆಗೆ ಅಜೀರ್ಣ ಮಲಬದ್ಧತೆಯಂತಹ ಸಮಸ್ಯೆಗಳು ದೂರವಾಗಿ, ಆರೋಗ್ಯಕಾರಿ ಜೀವನಶೈಲಿ ನಮ್ಮದಾಗುತ್ತದೆ.
ಈ ಕ್ರಮ ಅನುಸರಿಸುವುದರಿಂದ ನಿಮ್ಮ ತೂಕ ನಿಯಂತ್ರಣಕ್ಕೆ ಬರುವುದು.ಆರೋಗ್ಯ ವೃದ್ಧಿಸುವುದು ಉತ್ಸಾಹ ಹೆಚ್ಚುವುದು. ದೈನಂದಿನ ಕೆಲಸ ಕಾರ್ಯಗ ಳನ್ನು ಚಟುವಟಿಕೆಯಿಂದ ಮಾಡುವಿರಿ.
ಸಂತೋಷ ಪೂರ್ಣ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಈ ಕ್ರಮ ಅನುಸರಿಸುವುದರಿಂದ ನಿಮ್ಮ ತೂಕ ನಿಯಂತ್ರಣಕ್ಕೆ ಬರುವುದು.
ಆರೋಗ್ಯ ವೃದ್ಧಿಸುವುದು ಉತ್ಸಾಹ ಹೆಚ್ಚುವುದು. ದೈನಂದಿನ ಕೆಲಸ ಕಾರ್ಯಗ ಳನ್ನು ಚಟುವಟಿಕೆಯಿಂದ ಮಾಡುವಿರಿ. ಸಂತೋಷ ಪೂರ್ಣ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.