Home » Home Remedies: 150 ಹಳೆ ಕಾಲದ ಮನೆಮದ್ದುಗಳು

Home Remedies: 150 ಹಳೆ ಕಾಲದ ಮನೆಮದ್ದುಗಳು

by Praveen Mattimani
home-remedies-in-kannada

ಮನೆ ಮದ್ದುಗಳು (Home Remedies) ನಮ್ಮ ಪುರಾತನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ದಶಕಗಳ ಕಾಲ ಜನರ ಆರೋಗ್ಯವನ್ನು ಕಾಯುವಲ್ಲಿ ಸಹಾಯಕರಾಗಿವೆ. ಇವು ಬಹುತೇಕ ದೈನಂದಿನ ಜೀವನದಲ್ಲಿ ಬಳಸುವ ಸಾಮಾನ್ಯ ಸಾಮಗ್ರಿಗಳನ್ನು ಒಳಗೊಂಡಿದ್ದು, ಯಾವುದೇ ಕೌಟುಂಬಿಕ ಔಷಧಿ ಪಟ್ಟಿ (Home Remedies) ಅಥವಾ ಪಕ್ಕ ಪ್ರಭಾವಳಿಲ್ಲದೆ, ಬಹು ಸುಲಭವಾಗಿ ಪ್ರಯೋಜನವನ್ನು ನೀಡುತ್ತವೆ. ನೆಮ್ಮದಿ ನೀಡುವ ಜೇನುತುಪ್ಪ, ಅಜ್ಜಿಯ ಕೈಯಿಂದ ತಯಾರಾದ ಹುಳಿಬೆವು ಅಥವಾ ಎಲೆ ಒಗ್ಗರಣೆ — all these remedies have been trusted for generations to cure common ailments.

ಮನೆ ಮದ್ದುಗಳು (Home Remedies) ವಿಪರೀತ ರಾಸಾಯನಿಕ ಬಳಕೆಯಿಲ್ಲದೆ, ಆಂತರಿಕ ಆರೋಗ್ಯವನ್ನು ಪೋಷಿಸುತ್ತವೆ. ಉದಾಹರಣೆಗೆ, ಗರಂ ನೀರಿನಲ್ಲಿ ನಿಂಬೆ, ಜೇನು ಸೇರಿಸಿದರೆ ವಾತ ಮತ್ತು ಜಲತಣಕ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸಿಗುತ್ತದೆ. ಅದೇ ರೀತಿ, ಅಲೋವೆರಾ ರಸ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ತ್ವಚೆಗೆ ತಾಜಾ ಆವರಣ ನೀಡುತ್ತದೆ.

ಇವು ಕೇವಲ ಶೀಘ್ರ ಪರಿಹಾರ ನೀಡುವುದಷ್ಟೇ ಅಲ್ಲದೆ, ನಿಮ್ಮ ಆರೋಗ್ಯದ ಸಂಪೂರ್ಣ ಸಂರಕ್ಷಣೆಗೂ ಸಹಾಯ ಮಾಡುತ್ತವೆ. ಜೀವನ ಶೈಲಿಯ ತೊಂದ್ರೆಗಳು, ಪೋಷಕಾಂಶ ಕೊರತೆಯಿಂದ ಉಂಟಾಗುವ ಸಮಸ್ಯೆಗಳಿಗೆ ಮನೆ ಮದ್ದುಗಳು (Home Remedies ಸೂಕ್ತ ಪರಿಹಾರಗಳನ್ನು ನೀಡುತ್ತವೆ. ಆದ್ದರಿಂದ, ಮನೆ ಮದ್ದುಗಳನ್ನು ಪಾಲಿಸೋದು, ಅತೀವ ಸೂಕ್ತವಾಗಿದೆ ಎಂಬುದನ್ನು ನಾವು ಮರೆಯಬಾರದು.

ಪ್ರಾಕೃತಿಕ ಮನೆ ಮದ್ದುಗಳು (Home Remedies) ಆರೋಗ್ಯಕರ ಜೀವನಕ್ಕೆ:

ಮನೆ ಮದ್ದು

“ಪ್ರತಿದಿನ ಕಿವಿ ಹಣ್ಣನ್ನು ಸೇವಿಸುವುದರಿಂದ.. ನಿಮ್ಮ ಕಣ್ಣಿನ ಸಮಸ್ಯೆ ದೂರವಾಗುತ್ತದೆ, ಮತ್ತು ಕಣ್ಣಿನ ದೃಷ್ಟಿ ಸುಧಾರಿಸುತ್ತದೆ..”

ಮನೆ ಮದ್ದು

“ಪ್ರತಿದಿನ ಒಣದ್ರಾಕ್ಷಿ ನೆನೆಸಿದ ನೀರನ್ನು ಕುದಿಸಿ ಕುಡಿಯುವುದರಿಂದ ಮಲಬದ್ಧತೆ, ಅಸಿಡಿಟಿ ಹಾಗೂ ಆಯಾಸ ಸಮಸ್ಯೆ ದೂರವಾಗುತ್ತದೆ.

ಈ ನೀರು ಕೊಲೆಸ್ಟ್ರಾಲ್ ಮಟ್ಟವನ್ನು ಸರಿಯಾಗಿಡುತ್ತದೆ. ಮುಖದ ಮೇಲಿನ ಸುಖ್ಖನ್ನು ಕಡಿಮೆ ಮಾಡಿ ಸೌಂಧರ್ಯ ವೃದ್ಧಿಸುವ ಕೆಲಸ ಮಾಡುತ್ತದೆ..”

ಮನೆ ಮದ್ದು

“ಹಸಿವಾಗದಿದ್ದಲ್ಲಿ, ಪ್ರತಿದಿನ 3೦ ಗ್ರಾಂ ಹಸಿರು ಕೊತ್ತಂಬರಿ ಸೊಪ್ಪಿನ ರಸವನ್ನು ಕುಡಿಯಿರಿ, ಅದು ಕೆಲವೇ ದಿನಗಳಲ್ಲಿ ಹಸಿವನ್ನು ಹೆಚ್ಚಿಸುತ್ತದೆ.”

ಮನೆ ಮದ್ದು

“ಚಾಕೋಲೇಟ್ ಐಸ್ ಕ್ರೀಮ್ ತಿನ್ನುವುದರಿಂದ ಭಾವನಾತ್ಮಕ ನೋವು ಹಾಗು ದೈಹಿಕ ನೋವು ಕಡಿಮೆಯಾಗುತ್ತದೆ..”

ಮನೆ ಮದ್ದು

“ಒಂದು ಚಿಕ್ಕ ತುಂಡು ಅರಿಶಿಣವನ್ನು ದಿನಾ ತಿಂದರೆ ಹೃದಯದ ಸ್ವಾಸ್ಥ್ಯಕ್ಕೆ ಒಳ್ಳೆಯದು. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನುತ್ತಾ ಬಂದರೆ ದೇಹದಲ್ಲಿ ರಕ್ತ ಸಂಚಲನ ಸರಾಗವಾಗಿ ನಡೆಯಲು ತುಂಬಾ ಸಹಕಾರಿಯಾಗುತ್ತದೆ.”

ಮನೆ ಮದ್ದು

“ಪ್ರತಿದಿನ 4-5 ಖರ್ಜುರ ನಿಯಮಿತವಾಗಿ ಸೇವನೆ ಮಾಡುವುದರಿಂದ ತೂಕ ಕಡಿಮೆ ಮಾಡಲು ಮತ್ತು ಕೂದಲು ಉದುರುವಿಕೆ ಕಡಿಮೆಯಾಗುತ್ತದೆ..”

ಮನೆ ಮದ್ದು

“ರಾತ್ರಿ 8-10 ಬಾದಾಮಿಯನ್ನು ನೀರಲ್ಲಿ ನೆನಸಿ ಬೆಳಿಗ್ಗೆ ಸಿಪ್ಪೆ ತೆಗೆದು ಸೇವಿಸುವುದರಿಂದ ನಿಮ್ಮ ಕಣ್ಣಿನ ದೃಷ್ಟಿ ಉತ್ತಮವಾಗುತ್ತದೆ..”

ಮನೆ ಮದ್ದು

“ಚಳಿಗಾಲದಲ್ಲಿ ಗೋಡಂಬಿ, ಬಾದಾಮಿಯಂತಹ ಡ್ರೈ ಫೂಟ್ಸ್ ತಿನ್ನುವುದರಿಂದ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ತೂಕವನ್ನು ಕಡಿಮೆ ಮಾಡಿ ಚರ್ಮದ ಅರೋಗ್ಯ ಕಾಪಾಡುತ್ತದೆ..”

ಮನೆ ಮದ್ದು

“ಪ್ರತಿದಿನ ಒಂದು ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ನೆಗಡಿ ಬರುವುದಿಲ್ಲ, ಬಾಯಾರಿಕೆ ಕಡಿಮೆಯಾಗುತ್ತದೆ, ಕಿಡ್ನಿ ಹಾಗೂ ಹೃದಯ ಸಂಬಂಧಿತ ಕಾಯಿಲೆಯಿಂದ ಸಹ ದೂರ ಉಳಿಯಬಹುದು,,”

ಮನೆ ಮದ್ದು

“ಬಿಸಿ ನೀರಿನಲ್ಲಿ ಜೀರಿಗೆಯ ಪುಡಿಯನ್ನು ಹಾಕಿ ಕುಡಿಯುದರಿಂದ ಹೊಟ್ಟೆಯ ಗ್ಯಾಸ್ ಸಮಸ್ಯೆ ಕಡಿಮೆಯಾಗುತ್ತದೆ…”

ಮನೆ ಮದ್ದು

“ಹಸುವಿನ ತುಪ್ಪ ಸೇವನೆಯಿಂದ ಎಂದಿಗೂ ತೂಕ ಹೆಚ್ಚಾಗುವುದಿಲ್ಲ. ಹಸುವಿನ ತುಪ್ಪವನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕ ಕಡಿಮೆ ಆಗುತ್ತದೆ ಎಂದು ಅಧ್ಯಯನ ತೋರಿಸುತ್ತದೆ..”

ಮನೆ ಮದ್ದು

“ಬಾಳೆದಿಂಡು ತಿಂದ್ರೆ ಸಣ್ಣಗಾಗ್ತಾರೆ ಅಂತಿದೆ ವಿಜ್ಞಾನ, ಡಯಾಬಿಟಿಸ್‌ಗೂ ಇದು ರಾಮಬಾಣವಂತೆ ! ಮಧುಮೇಹವನ್ನು ಹತೋಟಿಯಲ್ಲಿರಿಸಿ, ದೇಹತೂಕ ಇಳಿಸುವಲ್ಲಿ ಸಹಕಾರಿ ಎಂದು ಹೇಳಲಾಗಿದೆ.”

ಮನೆ ಮದ್ದು

“ಪ್ರತಿದಿನ ದಾಳಿಂಬೆ ಹಣ್ಣಿನ ಜ್ಯೂಸ್ ಅನ್ನು ಕುಡಿಯುವುದರಿಂದ ಹೃದಯ ಸಂಬಂಧಿ ಕಾಯಿಲೆಯಿಂದ ದೂರ ಉಳಿಯಬಹುದು. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ..”

ಮನೆ ಮದ್ದು

“ರಾತ್ರಿ ಒಂದು ಗ್ಲಾಸ್ ಹಸಿ ಹಾಲಿನಲ್ಲಿ ಒಂದು ಹಿಡಿ ಬೇಳೆಯನ್ನು ನೆನೆಸಿಟ್ಟು ಬೆಳಗ್ಗೆ ಸೇವನೆ ಮಾಡಿ.

ಇದರ ಜೊತೆ ಬೆಳಗ್ಗೆ 5 ರಿಂದ 6 ಒಣದ್ರಾಕ್ಷಿ ಮತ್ತು ಕಲ್ಲು ಸಕ್ಕರೆ ತಿನ್ನಿರಿ. ಇದನ್ನು ಪ್ರತಿದಿನ ಮಾಡಿ. ಒಂದು ತಿಂಗಳಲ್ಲಿ ಕ್ಷೀಣತೆ (ಕುಗ್ಗುವಿಕೆ) ಸಮಸ್ಯೆ ದೂರವಾಗುತ್ತದೆ,,”

ಮನೆ ಮದ್ದು

“ರೊಟ್ಟಿ ತಿನ್ನುವುದರ ದೊಡ್ಡ ಪ್ರಯೋಜನವೆಂದರೆ ಅದು ನಮ್ಮ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ, ದೇಹದಲ್ಲಿ ಇನ್ಸುಲಿನ್ ಮತ್ತು ಗ್ಲೂಕೋಸ್ ಮಟ್ಟವು ಸಮತೋಲನದಲ್ಲಿರುತ್ತದೆ.”

Simple Home Remedies:

ಮನೆ ಮದ್ದು

“ಎಳೆನೀರಿನ ಜೊತೆ ಜೇನುತುಪ್ಪವನ್ನು ಬೆರೆಸಿ ಕುಡಿದರೆ, ವಯಸ್ಸಾದಂತೆ ಕಾಣುವುದು ತಪ್ಪಿಸುತ್ತದೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಜೀರ್ಣಕ್ರಿಯೆಗೆ ಅತ್ಯುತ್ತಮ, ಕಿಡ್ನಿಯಲ್ಲಿ ಕಲ್ಲುಗಳಾಗದಂತೆ ತಡೆಯುತ್ತದೆ ಸಕ್ಕರೆ ಕಾಯಿಲೆಗಳು ಬರದಂತೆ ತಡೆಯುತ್ತದೆ.”

ಮನೆ ಮದ್ದು

“ಬಾಳೆ ಹೂವನ್ನು ಸೇವಿಸುವುದರಿಂದ ಸೋಂಕುಗಳನ್ನು ದೂರವಿರಿಸುತ್ತದೆ, ಮಧುಮೇಹ ನಿಯಂತ್ರಿಸುತ್ತದೆ, ಕ್ಯಾನ್ಸರ್ ಮತ್ತು ಹೃದ್ರೋಗ ತಪ್ಪಿಸುತ್ತದೆ.

ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಮೂತ್ರಪಿಂಡದ ಕಾರ್ಯವನ್ನು ಉತ್ತೇಜಿಸುತ್ತದೆ ಹಾಗೂ ಜೀರ್ಣಕ್ರಿಯೆ ಸಮಸ್ಯೆಗೆ ಪರಿಹಾರ ನೀಡುತ್ತದೆ..”

ಮನೆ ಮದ್ದು

“ಮೊಸರಿನೊಂದಿಗೆ ಬೆಲ್ಲ ಬೆರೆಸಿ ತಿನ್ನುವುದರಿಂದ ಶೀತ – ನೆಗಡಿ – ಕೆಮ್ಮು ನಿವಾರಣೆಯಗುತ್ತದೆ, ನಿದ್ರಾಹೀನತೆಯನ್ನು ನಿವಾರಿಸುವಲ್ಲಿ ಸಹ ಪ್ರಯೋಜನಕಾರಿ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.”

ಮನೆ ಮದ್ದು

“ಖಾಲಿ ಹೊಟ್ಟೆಯಲ್ಲಿ ನಿಂಬೆ ಜ್ಯೂಸ್ ಕುಡಿಯುವುದರಿಂದ ಸ್ಪಷ್ಟವಾದ ಚರ್ಮವನ್ನು ಪಡೆಯುತ್ತೀರಿ, ಉರಿಯೂತದಿಂದ ಪರಿಹಾರ ಕೊಡುತ್ತದೆ.

PH ಮಟ್ಟವನ್ನು ನಿಯಂತ್ರಿಸುತ್ತದೆ, ಸ್ಥಿರವಾದ ತೂಕ ನಷ್ಟ, ತೀಕ್ಷವಾದ ಮೆದುಳಿನ ಕಾರ್ಯ, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.”

ಮನೆ ಮದ್ದು

“ಎಳನೀರಿನಲ್ಲಿರುವ ಪೊಟ್ಯಾಷಿಯಂ ಅಂಶ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.”

ಮನೆ ಮದ್ದು

“ಮನೆಯಲ್ಲಿ ಅದ್ಭುತ ಸುವಾಸನೆ ಪಡೆಯಲು ಬಯಸಿದರೆ, ಕಿತ್ತಳೆ ಸಿಪ್ಪೆ ಮತ್ತು ಚಕ್ಕೆ ಇವೆರಡನ್ನು ಸೇರಿಸಿ ನೀರಿನಲ್ಲಿ ಕುದಿಸಿ..

ಇದು ಸುತ್ತಮುತ್ತಲಿನ ಗಾಳಿ ಸ್ವಚ್ಚಗೊಳ್ಳುತ್ತದೆ ಹಾಗೂ ಮನೆ ಘಮ – ಘಮ ಸುವಾಸನೆ ಬೀರುತ್ತದೆ..”

ಮನೆ ಮದ್ದು

“ಕೆಟ್ಟ ಆಲೋಚನೆಗಳಿಂದ ದೂರ ಉಳಿಯಲು ನಿಮ್ಮ ನೆಚ್ಚಿನ ಹಾಡು ಅಥವಾ ಸಂಗೀತ ಕೇಳಿ ಇದು ನಿಮ್ಮ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ.”

ಮನೆ ಮದ್ದು

“ಬೇಲ್ ಹಣ್ಣಿನ ರಸವನ್ನು ಬೆಲ್ಲದೊಂದಿಗೆ ಮಿಶ್ರಣ ಮಾಡಿ ದಿನನಿತ್ಯ ಕುಡಿದರೆ ಎದೆ ಉರಿ, ಹೊಟ್ಟೆಯ ಹುಣ್ಣು ನಿವಾರಣೆಯಾಗುತ್ತದೆ,ರಕ್ತ ಶುದ್ದಿಯಾಗುತ್ತದೆ ಹಾಗೂ ಮಧುಮೇಹ ನಿಯಂತ್ರಿಸುತ್ತದೆ..”

ಮನೆ ಮದ್ದು

“ಮಹಿಳೆಯರು ಬೆಳ್ಳಿಯ ಕಾಲ್ಗೆಜ್ಜೆಯನ್ನು ಧರಿಸುವುದರಿಂದ ಅವರ ದೇಹದ ಉಷ್ಣಾಂಶವು ಕಡಿಮೆಯಾಗುತ್ತದೆ, ರಕ್ತ ಪರಿಚಲನೆ ಹೆಚ್ಚುತ್ತದೆ, ಕಾಲು ನೋವು ಕಡಿಮೆಯಾಗುತ್ತದೆ, ಹಾಗೂ ರೋಗ ನಿರೋಧಕ ಶಕ್ತಿ ಸಹ ಹೆಚ್ಚುತ್ತದೆ..”

ಮನೆ ಮದ್ದು

“ಬಾಯಿ ಹುಣ್ಣಿನ ತೊಂದರೆ ಅನುಭವಿಸುವವರು, ಒಂದು ಲೋಟ ಹಸಿ ಹಾಲಿಗೆ ಎರಡು ಚಮಚ ತುಪ್ಪ, ಸಕ್ಕರೆ ಹಾಗೂ ಚಿಟಿಕೆ ಅರಿಶಿಣ ಹಾಕಿ ಕುಡಿದರೆ, ಬಾಯಿ ಹುಣ್ಣು ಕಡಿಮೆಯಾಗುತ್ತವೆ.”

ಮನೆ ಮದ್ದು

“ವಿಟಮಿನ್ ಬಿ-12 ಕೊರತೆಯಿಂದ ಸಣ್ಣ ವಯಸ್ಸಿನಲ್ಲಿ ಕೂದಲು ಬಿಳಿಯಾಗುತ್ತವೆ, ಇದಕ್ಕೆ ಪರಿಹಾರ ಹೆಚ್ಚಾಗಿ ವಿಟಮಿನ್ ಬಿ-12 ಇರುವ ಆಹಾರ – ಹಾಲು, ಮೊಸರು, ಮೊಟ್ಟೆ, ಮೀನು, ಚೀಸ್ ಹೆಚ್ಚಾಗಿ ಸೇವಿಸಿ..”

ಮನೆ ಮದ್ದು

“ಬ್ಲ್ಯಾಕ್ ಬೆರಿ ಹಣ್ಣನ್ನು ತಿನ್ನುವುದರಿಂದ ನಿಮ್ಮ ಮೆದುಳಿನ ಆರೋಗ್ಯ ಕಾಪಾಡುತ್ತದೆ, ಜ್ಞಾಪಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿ ಸಹ ಹೆಚ್ಚಿಸುತ್ತದೆ.”

ಮನೆ ಮದ್ದು

“ಮದುವೆ ಅಥವಾ ನಿಶ್ಚಿತಾರ್ಥದ ಸಮಯದಲ್ಲಿ ಉಂಗುರವನ್ನು ಎಡಗೈ ಉಂಗುರದ ಬೆರಳಿಗೆ ಮಾತ್ರವೇ ಹಾಕುತ್ತಾರೆ. ಏಕೆಂದರೆ ಎಲ್ಲಾ ಬೆರಳುಗಳಲ್ಲಿ ಈ ಬೆರಳಿನ ರಕ್ತನಾಳಗಳು ಹೃದಯಕ್ಕೆ ಸಂಪರ್ಕ ಹೊಂದಿರುತ್ತವೆ.”

ಮನೆ ಮದ್ದು

“ಮಲಗುವ ಎರಡು ಗಂಟೆ ಮೊದಲು ಬಿಸಿ ನೀರಿನ ಸ್ನಾನ ಮಾಡುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ..”

ಮನೆ ಮದ್ದು

“ಒಂದು ತುಳಸಿ ಗಿಡ 20 ಗಂಟೆಗಳ ಕಾಲ ಆಮ್ಲಜನಕವನ್ನು ಮತ್ತು ದಿನಕ್ಕೆ ನಾಲ್ಕು ಗಂಟೆಗಳ ಕಾಲ ಓಜೋನ್ ರಕ್ಷಣೆ ನೀಡುತ್ತದೆ.

ಅಷ್ಟೇ ಅಲ್ಲ ಪರಿಸರದಿಂದ ಕಾರ್ಬನ್ ಮೊನಾಕ್ಸೆಡ್, ಕಾರ್ಬನ್ ಡೈ ಆಕ್ಸೆಡ್ ಮತ್ತು ಸಲ್ಪರ್ ಡೈ ಆಕ್ಸೆಡ್ ನಂತಹ ಹಾನಿಕಾರಕ ಅನಿಲಗಳನ್ನು ಹೀರಿಕೊಳ್ಳುತ್ತದೆ..”

ದೈಹಿಕ ಶಕ್ತಿಯನ್ನು ಹೆಚ್ಚಿಸುವ ಮನೆ ಮದ್ದುಗಳು:

Home Remedies ಮನೆ ಮದ್ದು

“ಕೇವಲ 100 ಗ್ರಾಂ ಸೋಯಾ ಚಂಕ್ಸ್ ನಲ್ಲಿ 50 ಗ್ರಾಂ ನಷ್ಟು ಪ್ರೊಟೀನ್ ಇರುವ ಕಾರಣ ಇದು ಪ್ರೊಟೀನ್ ನ ಉತ್ತಮ ಮೂಲವಾಗಿದೆ ಹಾಗೂ ಅತಿಹೆಚ್ಚು ಪ್ರೊಟೀನ್ ಉಳ್ಳ ಆಹಾರ ಸಹ ಹೌದು..”

Home Remedies ಮನೆ ಮದ್ದು

“ನಮ್ಮ ಕೈ ನ 50% ನಷ್ಟು ಶಕ್ತಿಯು ಕಿರುಬೆರಳಿನಲ್ಲಿ ಇರುತ್ತದೆ. ಅಕಸ್ಮಾತ್ ಕಿರುಬೆರಳನ್ನು ಕಳೆದುಕೊಂಡರೆ 50% ನಷ್ಟು ಶಕ್ತಿಯನ್ನು ನಿಮ್ಮ ಕೈ ಕಳೆದುಕೊಳ್ಳುತ್ತದೆ..”

Home Remedies ಮನೆ ಮದ್ದು

“ಕಾಡು ಹುಣಸೆ ಹಣ್ಣು ತಿನ್ನುವುದರಿಂದ ಸಕ್ಕರೆ ಕಾಯಿಲೆ ಬರುವುದಿಲ್ಲ ಮತ್ತು ಸಕ್ಕರೆ ಖಾಯಿಲೆ ಇದ್ದವರಿಗೆ ನಿಯಂತ್ರಣಕ್ಕೆ ಬರುತ್ತದೆ..”

Home Remedies ಮನೆ ಮದ್ದು

“ಸೀಬೆ ಹಣ್ಣಿನಿಂದ ಶೀತ, ನೆಗಡಿ ಉಂಟಾಗುವುದಿಲ್ಲ, ಇದರ ಬದಲಿಗೆ ಶೀತ-ನೆಗಡಿಯನ್ನು ಉಂಟು ಮಾಡುವ ಬ್ಯಾಕ್ಟಿರಿಯಾಗಳನ್ನು ನಾಶಗೊಳಿಸುತ್ತದೆ.”

Home Remedies ಮನೆ ಮದ್ದು

“ತಲೆಹೊಟ್ಟು (dandruff) ಸಮಸ್ಯೆ ನಿವಾರಿಸಲು ಮೆಹೆಂದಿಗೆ ಮೊಸರು ಹಾಗೂ ಸ್ವಲ್ಪ ನಿಂಬೆ ರಸ ಬೆರಸಿ ಹಚ್ಚುವುದರಿಂದ ತಲೆಹೊಟ್ಟಿನ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.”

Home Remedies ಮನೆ ಮದ್ದು

“ನೀರಿನಲ್ಲಿ ಕೈ ಇಟ್ಟಾಗ ಬೆರಳುಗಳ ಮೇಲೆ ಗೆರೆಗಳು ಮೂಡುತ್ತದೆ. ಏಕೆಂದರೆ ಇದು ನಮ್ಮ ಮೆದುಳಿನ ಪ್ರಕ್ರಿಯೆ ನೀರಿನಲ್ಲಿ ಕೈ ಜಾರದೆ ಹಿಡಿತ ಸಾಧಿಸಲು ನಮ್ಮ ನರಮಂಡಲ ಈ ಗೆರೆಗಳನ್ನು ಸೃಷ್ಟಿಸುತ್ತದೆ…”

Home Remedies ಮನೆ ಮದ್ದು

“ಕುಂಬಳಕಾಯಿ ಬೀಜಗಳಲ್ಲಿ ಹೆಚ್ಚಿನ ಪ್ರೊಟೀನ್,ಕಬ್ಬಿಣ, ಸತು, ತಾಮ್ರ, ಪೊಟ್ಯಾಶಿಯಂ, ಸೆಲೆನಿಯಂ ಮತ್ತು ಮೆಗ್ನಿಶಿಯಂ ಇದೆ. ಇದರ ನಿಯಮಿತ ಸೇವನೆ ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ..”

Home Remedies ಮನೆ ಮದ್ದು

“ಅಲೋವೆರಾದ ತಿರುಳನ್ನು ಹಣೆಗೆ ಹಚ್ಚಿ ಸ್ವಲ್ಪ ವಿಶ್ರಾಂತಿ ಪಡೆದರೆ ತಲೆನೋವು ಕಡಿಮೆಯಾಗುತ್ತದೆ.”

Home Remedies ಮನೆ ಮದ್ದು

“ಪ್ರತಿಯೊಬ್ಬ ವ್ಯಕ್ತಿಯ ಕಣ್ಣಿನ ಈ ಭಾಗದಲ್ಲಿ ಒಂದು ಪುಟ್ಟ ರಂಧ್ರವಿರುತ್ತದೆ. ಈ ರಂಧ್ರವು ಕಣ್ಣಿನಿಂದ ಮೂಗಿಗೆ ಜೋಡಣೆ ಆಗಿರುತ್ತದೆ.

ನಿಮ್ಮ ಕಣ್ಣಲ್ಲಿ ನೀರು ಬಂದಾಗ ಈ ರಂಧ್ರದ ಮೂಲಕ ನೀರು ಮೂಗಿಗೆ ತಲುಪುತ್ತದೆ. ಇದೇ ಕಾರಣದಿಂದ ಪ್ರತಿ ಬಾರಿ ನೀವು ಅತ್ತಾಗ ನಿಮ್ಮ ಮೂಗಿನಲ್ಲು ಕೂಡ ನೀರು ಬರುವುದು…”

Home Remedies ಮನೆ ಮದ್ದು

“ಮೊಟ್ಟೆ (Egg) ಇಡಲು ಫ್ರಿಜ್ಜಲ್ಲಿ ಪ್ರತ್ಯೇಕ ಜಾಗ ಇದೆ. ಆದರೆ, ಗೊತ್ತಿರಲಿ, ಮೊಟ್ಟೆಯನ್ನು ಫ್ರಿಜ್ಜಲ್ಲಿಟ್ಟು ತಿನ್ನಬಾರದು, ಅದು ಯಾವತ್ತಿಗೂ ರೂಂ ಟೆಂಪರೇಚರ್ ನಲ್ಲಿರಬೇಕು. ಫ್ರಿಜ್ರನಲ್ಲಿರುವ ಮೊಟ್ಟೆಯಲ್ಲಿ ಪೌಷ್ಟಿಕಾಂಶ ಉಳಿಯುವುದಿಲ್ಲ.”

Home Remedies ಮನೆ ಮದ್ದು

“ನೀವು ನಿಮ್ಮ ಕೈ ಅಥವಾ ಕಾಲು ಬೆರಳುಗಳನ್ನು ಮುರಿದಾಗ ದೇಹದ ಒಳಗಡೆ ಇರುವ ‘DISSOLVED GAS’ ಸ್ಫೋಟಗೊಳ್ಳುತ್ತದೆ. ಅದಕ್ಕಾಗಿಯೇ ನಿಮಗೆ ಮುರಿದುಕೊಂಡ ಜಾಗದಿಂದ ಶಬ್ದ ಕೇಳಿ ಬರುವುದು..”

Home Remedies ಮನೆ ಮದ್ದು

“ಪ್ರತಿದಿನ ಮೊಸರು ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆಗಳು ಕಾಣಿಸುವುದಿಲ್ಲ ಮತ್ತು ಗ್ಯಾಸ್ ಅಸಿಡಿಟಿ, ಮಲಬದ್ಧತೆ, ಹೊಟ್ಟೆಯಲ್ಲಿ ಬಿಸಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ…”

Home Remedies ಮನೆ ಮದ್ದು

“ನಾವು ಸೀನುವ ಸ್ಪೀಡ್ ಎಷ್ಟು ಗೊತ್ತಾ ಗಂಟೆಗೆ 107 ಕಿಲೋಮೀಟರ್ ವೇಗದಲ್ಲಿ ನಾವು ಸೀನುತ್ತೇವೆ..”

Home Remedies ಮನೆ ಮದ್ದು

“ಹಲಸಿನ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಮಲಬದ್ಧತೆ, ಮಧುಮೇಹ, ಹೊಟ್ಟೆಹುಣ್ಣು, ಚರ್ಮದ ಸಮಸ್ಯೆ ಹಾಗೂ ಕ್ಯಾನ್ಸರ್ ನಿವಾರಣೆ ಮಾಡುವಲ್ಲಿ ಸಹಾಯ ಮಾಡುತ್ತದೆ..”

Home Remedies ಮನೆ ಮದ್ದು

“ಮಳೆಗಾಲದಲ್ಲಿ ಖರ್ಜೂರ, ಡ್ರೈ ಫೂಟ್ಸ್ ಮತ್ತು ಇತರ ಒಣ ಹಣ್ಣುಗಳನ್ನು ಸೇವಿಸುವುದರಿಂದ ಶೀತದಿಂದ ಮುಕ್ತಿ ಸಿಗುತ್ತದೆ. ಜೊತೆಗೆ, ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ….”

Home Remedies A to Z:

Home Remedies ಮನೆ ಮದ್ದು

“ಮನುಷ್ಯನ ಹೃದಯದಲ್ಲಿರುವ ರಕ್ತವನ್ನು ಸಂಪೂರ್ಣವಾಗಿ ಹೊರತೆಗೆದಾಗ ಹೃದಯವು ಈ ರೀತಿ ಕಾಣುತ್ತದೆ ನೋಡಿ..”

Home Remedies ಮನೆ ಮದ್ದು

“ಪ್ರತಿದಿನ ಊಟಕ್ಕೆ 30 ನಿಮಿಷದ ಮುಂಚೆ 1-2 ಗ್ಲಾಸ್ ನೀರು ಕುಡಿಯುವುದರಿಂದ  ನೀವು ನಿಮ್ಮ ದೇಹದ ತೂಕ ಕಡಿಮೆಮಾಡಿಕೊಳ್ಳಬಹುದಾಗಿದೆ..”

Home Remedies ಮನೆ ಮದ್ದು

“ಬಾಯಿಯ ದುರ್ವಾಸನೆಯನ್ನು ಶಾಶ್ವತವಾಗಿ ತೊಲಗಿಸಲು ಸೌತೆಕಾಯಿಯ ತುಂಡನ್ನು ನಿಮ್ಮ ಬಾಯಿಯ ಮೇಲ್ಬಾಗದಲ್ಲಿ 90 ಸೆಕೆಂಡುಗಳ ಕಾಲ ಇಟ್ಟುಕೊಳ್ಳಿ ಅದರಲ್ಲಿರುವ ಫೈಟೊಕೆಮಿಕಲ್ ಬಾಯಿಯ ದುರ್ವಾಸನೆ ಉಂಟುಮಾಡುವ ಬ್ಯಾಕ್ಟಿರಿಯಾವನ್ನು ಕೊಲ್ಲುತ್ತದೆ..”

Home Remedies ಮನೆ ಮದ್ದು

“ಈ ಚಿತ್ರದಲ್ಲಿ ತೋರಿಸಿದ ಹಾಗೇ ಕೈ ಹಾಗೂ ಕಾಲಿನ ಹೆಬ್ಬೆರಳ ಈ ಭಾಗದಲ್ಲಿ 10-15 ನಿಮಿಷಗಳ ಕಾಲ ಒತ್ತಡ ಹಾಕಿ ಮಸಾಜ್ ಮಾಡುವುದರಿಂದ ನೀವು ಎತ್ತರ ಬೆಳೆಯಲು ಸಹಾಯ ಮಾಡುತ್ತದೆ..”

Home Remedies ಮನೆ ಮದ್ದು

“ಮಾತು ಮಾತಿಗೂ ಕೋಪಗೊಂಡು ಬಯ್ಯುವರು ಹೆಚ್ಚು ಬುದ್ದಿವಂತ ಹಾಗೂ ಪ್ರಾಮಾಣಿಕರಾಗಿರುತ್ತಾರೆ..”

Home Remedies ಮನೆ ಮದ್ದು

“ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 4-5 ಗೋಡಂಬಿ ಸೇವಿಸುವುದರಿಂದ ನಿಮ್ಮ ಜ್ಞಾಪಕ ಶಕ್ತಿ ತಕ್ಷಣ ಹೆಚ್ಚುತ್ತದೆ..”

Home Remedies ಮನೆ ಮದ್ದು

“ಪೂಜೆ ವೇಳೆ ಗಂಟೆ ಬಾರಿಸಿದಾಗ ಹೊರಬರುವ ಶಬ್ದವು ಓಂ ಶಬ್ದಕ್ಕೆ ಹೋಲುತ್ತದೆ. ಇದರಿಂದ ಸುತ್ತಲಿನ ನಕಾರಾತ್ಮಕ ಶಕ್ತಿಗಳು ತೊಲಗುತ್ತದೆ ಎಂಬ ನಂಬಿಕೆ ಇದೆ.

ಇನ್ನು ದೇವಾಲಯ ಪ್ರವೇಶಿಸುವ ಮುನ್ನ ಗಂಟೆ ಬಾರಿಸಿದಾಗ ಗಂಟೆಯ ಸದ್ದು ಪರಿಸರದಲ್ಲಿನ ಸೂಕ್ಷ್ಮ  ಜೀವಿಗಳನ್ನು ನಾಶಪಡಿಸುತ್ತದೆ…”

Home Remedies ಮನೆ ಮದ್ದು

“ಪ್ರತಿದಿನ 15-20 ನಿಮಿಷಗಳ ಕಾಲ ಪ್ರಾಣ ಮುದ್ರ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ.

ಜೀರ್ಣಕ್ರಿಯೆ ಸುಧಾರಿಸಿ ಹೊಟ್ಟೆ ಉರಿ ಕಡಿಮೆ ಮಾಡುತ್ತದೆ, ರಕ್ತ ಪರಿಚಲನೆ ಹೆಚ್ಚಿಸುತ್ತದೆ, ನಿಮ್ಮ ಕೋಪ ಹಾಗೂ ಒತ್ತಡ ಕಡಿಮೆ ಮಾಡುತ್ತದೆ…”

Home Remedies ಮನೆ ಮದ್ದು

“ನೀವು ಮಲಗುವಾಗ ಈರುಳ್ಳಿಯನ್ನು ತುಂಡುಗಳಾಗಿ ಕತ್ತರಿಸಿ ಅದನ್ನು ಹಾಸಿಗೆಯ ಬಳಿ ಇರಿಸುವುದರಿಂದ ರಿಂದ ಶೀತ ಮತ್ತು ಕೆಮ್ಮಿನ ಸಮಸ್ಯೆ ನಿವಾರಣೆಯಾಗುತ್ತದೆ…”

Home Remedies ಮನೆ ಮದ್ದು

“ಸಂಗೀತ, ಹಾಡು ಕೇಳುವಾಗ ನಿಮ್ಮ ರೋಮಗಳು ಎದ್ದು ನಿಂತರೆ (Goosebumps), ನೀವು ವಿಶೇಷ ಮಾನಸಿಕ ಸ್ಥಿತಿ ಹೊಂದಿದ್ದೀರ ಹಾಗು ನೀವು ಬಹಳ ಭಾವನಾತ್ಮಕ ಎಂಬರ್ಥ,,,”

Home Remedies ಮನೆ ಮದ್ದು

“ಪ್ರತಿದಿನ ಸೈಕಲ್ ತುಳಿಯುವುದು, ಈಜುವುದು ಹಾಗೂ ವ್ಯಾಯಾಮ ಮಾಡುವುದರಿಂದ ನಿಮ್ಮ ಎತ್ತರವನ್ನು ಹೆಚ್ಚಿಸಲು ಸಹಾಯ ವಾಗುತ್ತದೆ ಹಾಗು ನಿಮ್ಮ ಸ್ನಾಯುಗಳ ಬಲ ಸಹ ಹೆಚ್ಚುತ್ತದೆ…”

Home Remedies ಮನೆ ಮದ್ದು

“ಹುಣಸೆ ಹಣ್ಣಿನ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ರಕ್ತವನ್ನು ಶುದ್ದೀಕರಿಸುತ್ತದೆ, ತೂಕ ಕಡಿಮೆಯಾಗುತ್ತದೆ, ಮೊಡವೆ ಮತ್ತು ಮೊಡವೆ ಕಲೆಗಳನ್ನು ಕಡಿಮೆ ಮಾಡುತ್ತದೆ, ಆರೋಗ್ಯಕರ ಹಾಗೂ ಹೊಳೆಯುವ ಚರ್ಮವನ್ನು ಕಾಪಾಡಿ ಕೊಳ್ಳಲು ಸಹ ಸಹಾಯ ಮಾಡುತ್ತದೆ..”

Home Remedies ಮನೆ ಮದ್ದು

“ನಿಂತುಕೊಂಡು ನೀರು ಕುಡಿಯುವುದರಿಂದ ನಿಮ್ಮ ಕೀಲುಗಳಲ್ಲಿನ ರಾಸಾಯನಿಕದ ಸಮತೋಲನಕ್ಕೆ ತೊಂದರೆ ನೀಡಬಹುದು ಮತ್ತು ಇದರಿಂದಾಗಿ ಕೀಲು ನೋವು ಹಾಗು ಬೆನ್ನುನೋವಿನ ಸಮಸ್ಯೆ ಸಹ ಉಂಟಾಗಬಹುದು ಆದ್ದರಿಂದ ಯಾವಾಗಲೂ ಸಹ ಕುಳಿತುಕೊಂಡು ನೀರು ಕುಡಿಯಿರಿ..”

Home Remedies ಮನೆ ಮದ್ದು

“ಬುದ್ದಿವಂತ ಜನರು ಸಾಮಾನ್ಯ ಜನರಿಗಿಂತ ಕಡಿಮೆ ಸ್ನೇಹಿತರನ್ನು ಹೊಂದಿರುತ್ತಾರೆ ಏಕೆಂದರೆ ವ್ಯಕ್ತಿ ಚುರುಕಾದಷ್ಟು ಅವನ ಆಯ್ಕೆ ಉತ್ತಮವಾಗಿರುತ್ತದೆ..”

Home Remedies ಮನೆ ಮದ್ದು

“ಪ್ರತಿದಿನ ತಾಜಾ ಅಲೋವೆರಾ ಜೆಲ್ ಮುಖಕ್ಕೆ  ಹಚ್ಚುವುದರಿಂದ ಮೊಡವೆಗಳು, ಹಳೆ ಗಾಯದ ಗುರುತುಗಳು ಕಡಿಮೆಯಾಗುತ್ತದೆ, ನಿಮ್ಮ ತ್ವಚೆ ಹೊಳೆಯುತ್ತದೆ ಹಾಗೂ ಚರ್ಮದ ಅರೋಗ್ಯ ಕಾಪಾಡುತ್ತದೆ…”

Home Remedies for Anything:

ಮನೆ ಮದ್ದುಗಳು

“ಉತ್ತಮ ನಿದ್ರೆಗಾಗಿ ನಿಮ್ಮ ಆಹಾರ ಕ್ರಮದಲ್ಲಿ ಈ ಆಹಾರಗಳನ್ನು ಸೇರಿಸಿ, ಕಿವಿ ಹಣ್ಣು, ಬಾದಾಮಿ, ಬಾಳೆಹಣ್ಣು, ಓಟ್ಸ್, ಜೇನುತುಪ್ಪ, ಹಾಗೂ ಟರ್ಕಿ ಚಿಕನ್..”

ಮನೆ ಮದ್ದುಗಳು

“ಬಾಲಾಯಾಂ ಯೋಗ ಎಂದರೆ ಉಗುರುಗಳನ್ನು ಒಟ್ಟಿಗೆ ಉಜ್ಜುವ ವ್ಯಾಯಾಮ, ಇದು ದಿನಕ್ಕೆ ಕನಿಷ್ಠ 10 ನಿಮಿಷಗಳ ಕಾಲ ಮಾಡುವುದರಿಂದ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ, ರಕ್ತ ಪರಿಚಲನೆ ಹೆಚ್ಚಿಸುತ್ತದೆ ಮತ್ತು ಬಿಳಿ ಕೂದಲನ್ನು ಕಡಿಮೆ ಮಾಡುತ್ತದೆ..”

ಮನೆ ಮದ್ದುಗಳು

“ಹಲಸಿನ ಹಣ್ಣನ್ನು ತಿಂದು ಅದರ ಬೀಜವನ್ನು ಎಸೆಯದೇ ಬೀಜವನ್ನು ಬೇಯಿಸಿ ತಿನ್ನುವುದರಿಂದ  ಆಗುವ ಲಾಭಗಳು – ಉತ್ತಮ ಜೀರ್ಣಕ್ರಿಯೆ, ಕಣ್ಣಿನ ಸಮಸ್ಯೆ ನಿವಾರಿಸುವುದು, ಕೂದಲು ಉದ್ದವಾಗಿ ಬೆಳೆಯುತ್ತದೆ, ಚರ್ಮದ ಸುಕ್ಕು ಕಡಿಮೆಯಾಗುತ್ತದೆ…”

ಮನೆ ಮದ್ದುಗಳು

“ಉಪ್ಪು ನೀರಿನಿಂದ ಮುಖ ತೊಳೆಯುವುದರಿಂದ * ಬ್ಲಾಕ್ ಹೆಡ್ಸ್ & ವೈಟ್ ಹೆಡ್, ಮೊಡವೆಗಳು ಕಡಿಮೆಯಾಗುತ್ತದೆ ಮುಖದಿಂದ ಧೂಳು ಹಾಗೂ ಎಣ್ಣೆ ಅಂಶ ತೆಗೆದುಹಾಕಿ, ಸ್ಕಿನ್ pores ಶುದ್ದೀಕರಿಸಿ, ಮುಖ ಹೊಳೆಯುವಂತೆ ಮಾಡುತ್ತದೆ,,,”

ಮನೆ ಮದ್ದುಗಳು

“ಬಿಸಿಲಿನಿಂದಾಗಿ ಚರ್ಮವು ಕಲೆಗಳಾಗಿದ್ದರೆ, ಅದನ್ನು  ತೆಗೆದುಹಾಕಲು ಚಹಾ ಚೀಲವನ್ನು ತಣ್ಣನೆಯ ನೀರಿನಲ್ಲಿ ಅದ್ದಿ. ನಿಧಾನವಾಗಿ ಕೈಗಳಿಂದ ಅದನ್ನು ಒತ್ತಿ ಸ್ವಲ್ಪ ಸಮಯದವರೆಗೆ ಮುಖದ ಮೇಲೆ ಇರಿಸಿ. ಬಿಸಿಲ ಬೇಗೆಯ ಸಮಸ್ಯೆ ದೂರವಾಗುತ್ತದೆ.”

ಮನೆ ಮದ್ದುಗಳು

“ತಲೆನೋವಿನಿಂದ ಪರಿಹಾರ ಪಡೆಯಲು, ಬಟ್ಟೆಯ ಸಹಾಯದಿಂದ ಕೆಲವು ಸಮಯದವರೆಗೆ ಕೆಲವು ವೀಳ್ಯದ ಎಲೆಗಳನ್ನು ಕಿವಿಯ ಸುತ್ತಲೂ ಕಟ್ಟಬೇಕು. ಇದು ತಲೆನೋವಿನಲ್ಲಿ ಪರಿಹಾರ ನೀಡುತ್ತದೆ…”

ಮನೆ ಮದ್ದುಗಳು

“ತಲೆಹೊಟ್ಟು (Dandruff) ಬಾರದಂತೆ ಮಾಡಲು ದಿನನಿತ್ಯ ತಲೆ ಕೂದಲನ್ನು ಬಾಚಬೇಕು. ಕೂದಲಿನ ಬೇರುಗಳಿಗೆ ಸರಿಯಾದ ಎಣ್ಣೆ ಅಂಶ ದೊರೆತರೆ ತಲೆಹೊಟ್ಟು ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ..”

ಮನೆ ಮದ್ದುಗಳು

“ಬಾಳೆಹಣ್ಣು ತಿನ್ನುವುದಕ್ಕೆ ಉತ್ತಮ ಸಮಯ – ಮಧ್ಯಾಹ್ನ ಬಾಳೆಹಣ್ಣು ತಿನ್ನಬಾರದ ಸಮಯ – ರಾತ್ರಿ….”

ಮನೆ ಮದ್ದುಗಳು

“ಪ್ರತಿದಿನ 20 ನಿಮಿಷಗಳ ಕಾಲ “ಅಗ್ನಿ ಮುದ್ರಾ” ಮಾಡುವುದರಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ ದೇಹದ ತೂಕ ನಿಯಂತ್ರಿಸಿ, ಶೀತ – ನೆಗಡಿ ನಿವಾರಿಸಿ ದೇಹವನ್ನು ಬೆಚ್ಚಗಿರಿಸುತ್ತದೆ…”

ಮನೆ ಮದ್ದುಗಳು

“ಕಲ್ಲು ಸಕ್ಕರೆ ತಿನ್ನುವುದರಿಂದ ಜ್ಞಾಪಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ,ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ, ರಕ್ತಹೀನತೆ, ಮಸುಕಾದ ಚರ್ಮ, ತಲೆತಿರುಗುವಿಕೆ, ಆಯಾಸ ಮತ್ತು ದೌರ್ಬಲ್ಯಕ್ಕೂ ಸಹ ಉಪಯುಕ್ತವಾಗಿದೆ…”

ಮನೆ ಮದ್ದುಗಳು

“ಪಾಲಕ್ ಸೊಪ್ಪು (spinach) ಸೇವಿಸುವುದರಿಂದ * ಕ್ಯಾನ್ಸರ್, ಹೃದ್ರೋಗ,ಅನಿಮಿಯಾ ರೋಗವನ್ನು ತಡೆಗಟ್ಟುತ್ತದೆ, ಮೂಳೆಗಳು ಬಳಗೊಳ್ಳುತ್ತದೆ, ತೂಕ ಕಡಿಮೆ ಮಾಡುತ್ತದೆ, ಕಣ್ಣಿನ ದೃಷ್ಟಿ ಉತ್ತಮವಾಗುತ್ತದೆ ಹಾಗೂ ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ…”

ಮನೆ ಮದ್ದುಗಳು

“ಪ್ರತಿದಿನ ಅಂಜೂರ ಹಣ್ಣುಗಳನ್ನು ಸೇವಿಸುವುದರಿಂದ ಕೂದಲಿನ ಸಮಸ್ಯೆ, ಚರ್ಮದ ಸಮಸ್ಯೆ, ಅಜೀರ್ಣ ಹಾಗೂ ಮೂಳೆ ಸಂಬಂಧಿತ ಅನೇಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು…”

ಮನೆ ಮದ್ದುಗಳು

“ಹಾಲು ಕುಡಿಯುವುದಕ್ಕೆ ಉತ್ತಮ ಸಮಯ – ರಾತ್ರಿ ಹಾಲು ಕುಡಿಯಬಾರದ ಸಮಯ ಬೆಳಿಗ್ಗೆ,,,”

ಮನೆ ಮದ್ದುಗಳು

“ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಪ್ರತಿದಿನ ಒಂದು ಲೋಟ ಎಳನೀರು ಅಥವ ಮಜ್ಜಿಗೆ ಇತ್ಯಾದಿ ನೀರಿನ ಅಂಶಗಳನ್ನು ಕುಡಿಯುವುದು ಉತ್ತಮ…”

ಮನೆ ಮದ್ದುಗಳು

“ಮೊಟ್ಟೆಯಲ್ಲಿ ಪ್ರೊಟೀನ್ ಹಾಗೂ ಬಯೋಟಿನ್ ಅಂಶವಿರುವುದರಿಂದ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ದೇಹದಲ್ಲಿ ಪ್ರೊಟೀನ್ ಅಂಶ ಕಡಿಮೆಯಾದರೆ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತದೆ…”

20 Home Remedies:

Home Remedies ಮನೆ ಮದ್ದು

“ದೇಹದ ಬಲವನ್ನು ಹೆಚ್ಚಿಸಲು, ಮೊಳಕೆಯೊಡೆದ ಕಾಳುಗಳ ಜೊತೆ ನಿಂಬೆ, ಶುಂಠಿ ತುಂಡುಗಳು, ಸ್ವಲ್ಪ ಉಪ್ಪು ಮತ್ತು ಮೆಣಸು ಸೇರಿಸಿ ಮತ್ತು ಬೆಳಿಗ್ಗೆ ಉಪಾಹಾರದಲ್ಲಿ ಸೇವಿಸಿ, ನೀವು ಇಡೀ ದಿನ ಶಕ್ತಿಯನ್ನು ಪಡೆಯುತ್ತೀರಿ”

Home Remedies ಮನೆ ಮದ್ದು

“ಪ್ರತಿದಿನ 20 ನಿಮಿಷಗಳ ಕಾಲ “ಜ್ಞಾನ ಮುದ್ರೆ” ಮಾಡುವುದರಿಂದ ನೆನಪಿನ ಶಕ್ತಿ ಹಾಗೂ ಏಕಾಗ್ರತಾ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು”

Home Remedies ಮನೆ ಮದ್ದು

“ಪ್ರತಿದಿನ ದಾಳಿಂಬೆ ಹಣ್ಣಿನ ಜ್ಯೂಸ್ ಅನ್ನು ಕುಡಿಯುವುದರಿಂದ ಹೃದಯ ಸಂಬಂಧಿ ಕಾಯಿಲೆಯಿಂದ ದೂರ ಉಳಿಯಬಹುದು, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ”

Home Remedies ಮನೆ ಮದ್ದು

“ರಾತ್ರಿ ಮಲಗುವ ಮುನ್ನ 5-10 ಬಾದಾಮಿಗಳು 1 ಚಮಚ ಸೋಂಪು ಕಾಳುಗಳನ್ನು ಕಲ್ಲು ಸಕ್ಕರೆಯೊಂದಿಗೆ ಕೆಲ ದಿನಗಳ ಕಾಲ ಸೇವಿಸುವುದರಿಂದ ಕಣ್ಣಿನ ದೃಷ್ಟಿ ಉತ್ತಮವಾಗುತ್ತದೆ”

Home Remedies ಮನೆ ಮದ್ದು

“ಗಾಯದ ಮೇಲೆ ಸಕ್ಕರೆ ಹಾಕುವುದರಿಂದ ನೋವು ಕಡಿಮೆಯಾಗುತ್ತದೆ ಮತ್ತು ಗಾಯ ಗುಣಪಡಿಸುವ ಪ್ರಕ್ರಿಯೆ ವೇಗಗೊಳ್ಳುತ್ತದೆ”

Home Remedies ಮನೆ ಮದ್ದು

“ಪ್ರತಿದಿನ ಬೆಳಿಗ್ಗೆ ಬೆಚ್ಚಗಿನ ನೀರಿಗೆ ನಿಂಬೆಹಣ್ಣಿನ ರಸವನ್ನು ಬೆರಸಿ ಕುಡಿಯುವುದರಿಂದ ಹೊಟ್ಟೆ ಕರಗಿಸಲು, ತ್ವಚೆಯ (skin) ಮೇಲಿನ ಕಲೆಗಳನ್ನು ಹೋಗಲಾಡಿಸುತ್ತದೆ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ”

Home Remedies ಮನೆ ಮದ್ದು

“ಪ್ರತಿದಿನ 60 ಸೆಕೆಂಡ್ ಗಳ ಕಾಲ (3 sets ಗಳಂತೆ) ಪ್ಲಾಂಕ್ ವ್ಯಾಯಾಮ ಮಾಡುವುದರಿಂದ ದೇಹದ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ, ಬೆನ್ನು ನೋವು ನಿವಾರಣೆಯಾಗುತ್ತದೆ ದೇಹದ flexibility ಹಾಗೂ corestrength ಹೆಚ್ಚಿಸುತ್ತದೆ”

Home Remedies ಮನೆ ಮದ್ದು

“ನಿಮಗೆ ವಿಪರೀತ ಕಿವಿ ನೋವು ಇದ್ದಲ್ಲಿ ಶುಂಠಿಯ ರಸ ತೆಗೆದು ಅದನ್ನು ಕಿವಿಯ ಹೊರಭಾಗದಲ್ಲಿ ಹಚ್ಚಿ ಕೆಲ ನಿಮಿಷಗಳ ಕಾಲ ಮಸ್ಸಾಜ್ ಮಾಡಿ ಕಿವಿ ನೋವು ತಕ್ಷಣ ನಿವಾರಣೆಯಗುತ್ತಾದೆ”

Home Remedies ಮನೆ ಮದ್ದು

“ಕೇವಲ 3 ಕ್ಯಾರೆಟ್ ನಿಮಗೆ 3 ಮೈಲಿ ನಡೆಯಲು ಶಕ್ತಿಯನ್ನು ನೀಡುತ್ತದೆ. ಅವುಗಳನ್ನು ಮೊದಲು ಬೆಳೆದದ್ದು ಆಹಾರಕ್ಕಾಗಿ ಅಲ್ಲ ಔಷದಿಗಾಗಿ”

Home Remedies ಮನೆ ಮದ್ದು

“ಗೋ ಮೂತ್ರಕ್ಕೆ ಮಹತ್ವದ ಸ್ಥಾನವಿದೆ. ಗೋಮೂತ್ರದಲ್ಲಿ 108 ಕ್ಕೂ ಹೆಚ್ಚು ರೋಗಗಳು ಗುಣಪಡಿಸುವ ಶಕ್ತಿಯಿದೆ. ಖಾಲಿ ಹೊಟ್ಟೆ ಯಲ್ಲಿ ಪ್ರತಿದಿನ ಗೋಮೂತ್ರ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ”

Home Remedies ಮನೆ ಮದ್ದು

“ಮಲಗುವ ಮುನ್ನ ಸೌತೆಕಾಯಿಯನ್ನು ತಿನ್ನುವುದು ಬೆಳಿಗ್ಗೆ ಎಚ್ಚರಗೊಂಡಾಗ ಹೊಸ ಉಲ್ಲಾಸ ಮತ್ತು ಚೈತನ್ಯ ಮೂಡುತ್ತದೆ ಮತ್ತು ತಲೆನೋವು ನಿವಾರಣೆ ಮಾಡುತ್ತದೆ”

Home Remedies ಮನೆ ಮದ್ದು

“ನೀವು ಮಲಗುವ ಮುನ್ನ ಹೊಕ್ಕಳಿಗೆ 1 ಚಮಚ ಬಾದಾಮಿ ಎಣ್ಣೆ ಹಾಕಿ ಮಸ್ಸಾಜ್ ಮಾಡುವುದರಿಂದ ಚರ್ಮದ ಹೊಳೆಯುವಂತೆ ಆಗುತ್ತದೆ, ಡಾರ್ಕ್ ಸರ್ಕಲ್ಸ್ ಕಡಿಮೆಯಾಗುತ್ತದೆ, ಕಣ್ಣಿನ ದೃಷ್ಟಿ ಸುಧಾರಿಸುತ್ತದೆ ಹಾಗೂ ಒಣ ಮತ್ತು ಬಿರುಕು ಬಿಟ್ಟ ತುಟಿಗಳ ಆರೈಕೆ ಮಾಡುತ್ತದೆ”

Home Remedies ಮನೆ ಮದ್ದು

“ಕಣ್ಣಿನ ಮೇಲೆ ಹಾಗು ಸುತ್ತ ಇರುವ ಕಪ್ಪು ಕಲೆ ಗಳನ್ನು ಹೋಗಲಾಡಿಸಲು ಹತ್ತಿಯನ್ನು ಆಲೂಗಡ್ಡೆ ರಸ ಹಾಗು ಅಲೊವೆರ ಜೆಲ್ ಮಿಶ್ರಣದಲ್ಲಿ ಅದ್ದಿ ಕಣ್ಣಿನ ಮೇಲೆ-ಸುತ್ತ ಮಸಾಜ್ ಮಾಡಿ 15 ನಿಮಿಷಗಳ ನಂತರ ಮುಖ ತೊಳೆಯಿರಿ”

Home Remedies ಮನೆ ಮದ್ದು

“ಪ್ರತಿದಿನ 5 ಬಾದಾಮಿ ಸೇವಿಸುವುದರಿಂದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ”

Home Remedies ಮನೆ ಮದ್ದು

“ನೀವು ನಿದ್ದೆಗೆ ಜಾರದಂತೆ ಎಚ್ಚರವಾಗಿರಲು ಕಾಫಿಗಿಂತ ಸೇಬುಗಳು ಹೆಚ್ಚು ಪರಿಣಾಮಕಾರಿ ಆಗಿ ಕಂಡು ಬಂದಿದೆ”

Top 10 Home Remedies:

Home Remedies ಮನೆ ಮದ್ದು

“ನಿಂಬೆಹಣ್ಣಿನ ಜ್ಯೂಸ್ ಸೇವಿಸುವುದರಿಂದ ಕಿಡ್ನಿಯಲ್ಲಿ ಇರುವ ಕಲ್ಲುಗಳನ್ನು ಕರಗಿಸಬಹುದು, ನಿಂಬೆಹಣ್ಣು ಸಿಟ್ರಸ್ ಜಾತಿಗೆ ಸೇರಿದ ಹಣ್ಣಾಗಿದ್ದು, ಇದು ಆಮೀಯ ಪ್ರಭಾವವನ್ನು ಹೊಂದಿದೆ. ಹಾಗಾಗಿ, ಕಿಡ್ನಿಗಳಲ್ಲಿ ಉಂಟಾಗುವ ಕಲ್ಲುಗಳನ್ನು ಕರಗಿಸುವ ಶಕ್ತಿ ಹೊಂದಿದೆ”

Home Remedies ಮನೆ ಮದ್ದು

“ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ.. ತೆಂಗಿನ ಎಣ್ಣೆಯೊಂದಿಗೆ ನೆಲ್ಲಿಕಾಯಿ ಪುಡಿಯನ್ನು ಸೇರಿಸಿ. ಈ ಮಿಶ್ರಣವನ್ನು ಬಾಣಲೆಗೆ ಹಾಕಿ ಎಣ್ಣೆ ಕುದಿಯಲು ಪ್ರಾರಂಭವಾಗುವವರೆಗೂ ಬಿಸಿ ಮಾಡಿ ಈ ಮಿಶ್ರಣವನ್ನು ಸ್ವಲ್ಪ ತಣ್ಣಗಾದ ಮೇಲೆ 30-40 ನಿಮಿಷಗಳ ಕಾಲ ಕೂದಲಿಗೆ ಹಚ್ಚಿ. ನಂತರ ತಣ್ಣೀರಿನಿಂದ ತೊಳೆಯಿರಿ”

Home Remedies ಮನೆ ಮದ್ದು

“ನಿಮ್ಮ ಮುಖವನ್ನು ಸೋಪಿನ ಬದಲು ಕಡಲೆ ಹಿಟ್ಟಿನಿಂದ ತೊಳೆಯಿರಿ ಇದು ಮುಖದ ಮೇಲಿನ ಕಪ್ಪು ಕಲೆಗಳನ್ನು ತೆಗೆದುಹಾಕುತ್ತದೆ, ಡೆಡ್ ಸ್ಕಿನ್ ತೆಗೆದುಹಾಕುತ್ತದೆ ಮತ್ತು ಮುಖದ ಕಾಂತಿ ಹೆಚ್ಚಿಸುತ್ತದೆ”

Home Remedies ಮನೆ ಮದ್ದು

“ಪುದೀನ ನೀರು ಬಾಯಿ ದುರ್ವಾಸನೆ ದೂರಮಾಡುತ್ತದೆ, ಮೊಡವೆಗಳು ಕಡಿಮೆ ಮಾಡುತ್ತದೆ, ದೇಹ ಶುದ್ಧ ಮಾಡುತ್ತದೆ”

Home Remedies ಮನೆ ಮದ್ದು

“ಪ್ರತಿದಿನ ಖರ್ಜುರದೊಂದಿಗೆ ಹಾಲನ್ನು ಸೇವಿಸುವುದರಿಂದ ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ, ಮೆದುಳಿನ ಅರೋಗ್ಯ ಕಾಪಾಡುತ್ತದೆ, ಮೂಳೆಗಳು ಬಲಗೊಳ್ಳುತ್ತದೆ, ಹಾಗೂ ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶ ಹೆಚ್ಚಿಸುತ್ತದೆ”

Home Remedies ಮನೆ ಮದ್ದು

“ಮುಖದ ಕಾಂತಿ ಹೆಚ್ಚಿಸಲು ಮುಖಕ್ಕೆ ಅರಿಶಿನದ ಪೇಸ್ಟ್ ಹಚ್ಚಿ”

Home Remedies ಮನೆ ಮದ್ದು

“ತೂಕ ಹೆಚ್ಚಿಸಲು ಪ್ರತಿದಿನ ಹುರಿಗಡಲೆ ಮತ್ತು ಖರ್ಜೂರ ಸೇವಿಸಿ”

Home Remedies ಮನೆ ಮದ್ದು

“ತುಪ್ಪದಲ್ಲಿರುವ ವಿಟಮಿನ್ ಎ, ಡಿ ಮತ್ತು ಇ ಪೋಷಕಾಂಶಗಳು ನಮ್ಮ ಶರೀರವನ್ನು ಆರೋಗ್ಯವಾಗಿಡುತ್ತದೆ ಜೊತೆಗೆ ಜ್ಞಾಪಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ”

Home Remedies ಮನೆ ಮದ್ದು

“ಲೆಮನ್ ವಾಟರ್ ಸ್ಟ್ರೀಮ್ ತೆಗೆದುಕೊಳ್ಳುವುದರಿಂದ ಮೊಡವೆಗಳು, ಗುಳ್ಳೆಗಳು ಕಡಿಮೆ ಆಗುತ್ತದೆ ಹಾಗು ಕಾಂತಿಯುತ ಮುಖ ದೊರೆಯುತ್ತದೆ”

Home Remedies ಮನೆ ಮದ್ದು

“ಪ್ರತಿದಿನ ನೆಲ್ಲಿಕಾಯಿ ಎಣ್ಣೆ ಅಥವಾ ತೆಂಗಿನಕಾಯಿ ಎಣ್ಣೆಯನ್ನು ಗಡ್ಡಕ್ಕೆ ಹಚ್ಚಿ 10-15 ನಿಮಿಷಗಳ ಕಾಲ ಮಸಾಜ್ ಮಾಡುವುದರಿಂದ ಗಡ್ಡ ಚೆನ್ನಾಗಿ ಬೆಳೆಯುತ್ತದೆ ಹಾಗೂ ಗಡ್ಡಕ್ಕೆ ಹೊಸ ಲುಕ್ ಬರುತ್ತದೆ”

Home Remedies ಮನೆ ಮದ್ದು

“ಯಾವಾಗಲೂ ಬಿಸಿ ನೀರು ಕುಡಿಯುವ ಜನರಲ್ಲಿ ರಕ್ತಪರಿಚಲನೆಯು (blood circulation) ಉತ್ತಮವಾಗಿರುತ್ತದೆ ಆದ್ದರಿಂದ ಹೃದಯದ ರೋಗಗಳಿಂದ ದೂರ ಉಳಿಯಬಹುದು ಜೀರ್ಣಕ್ರಿಯೆ ಸಹ ಕೂಡ ಸುಧಾರಿಸುತ್ತದೆ”

Home Remedies ಮನೆ ಮದ್ದು

“ಕಣ್ಣಿನ ಮೇಲೆ ಮತ್ತು ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ತೆಗೆದುಹಾಕಲು ಈ ಪ್ರಬಲವಾದ ಮನೆಮದ್ದನ್ನು ಪ್ರಯತ್ನಿಸಿ. ಆಲೂಗಡ್ಡೆ ರಸ, ಸೌತೆಕಾಯಿ ರಸ ಹಾಗು ನಿಂಬೆ ರಸ ಮೂರನ್ನು ಬೆರಸಿ ಫ್ರಿಡ್ಜ್ ನಲ್ಲಿ ಇಟ್ಟು ಐಸ್ ಕ್ಯೂಬ್ ತಯಾರಿಸಿ, ಅದನ್ನು ಕಣ್ಣಿನ ಮೇಲೆ ಸುತ್ತ ಪ್ರತಿದಿನ ಉಜ್ಜಿ”

Home Remedies ಮನೆ ಮದ್ದು

“ಬೀಟ್ರೋಟ್ ಬೇಯಿಸಿದ ನೀರನ್ನು ತಲೆಗೆ ಹಚ್ಚುವುದರಿಂದ ತಲೆಹೊಟ್ಟು ಮತ್ತು ಕೂದಲು ಉದುರುವುದು ಕಡಿಮೆಯಾಗುತ್ತದೆ”

Home Remedies ಮನೆ ಮದ್ದು

“ಸೋಂಪು ನೀರು – ಮುಟ್ಟಿನ ತೊಂದರೆ ನಿವಾರಿಸುತ್ತದೆ, ತೂಕ ಕಡಿಮೆ ಮಾಡುತ್ತದೆ. ಹಾಗೂ ಜೀರ್ಣಕ್ರಿಯೆ ಸುಧಾರಿಸುತ್ತದೆ”

Home Remedies ಮನೆ ಮದ್ದು

“ಕಣ್ಣಿನ ದೃಷ್ಟಿ ಹೆಚ್ಚಿಸಲು ಪ್ರತಿದಿನ ಕಿವಿ ಹಣ್ಣಿನ ಜೂಸ್ ಕುಡಿಯಿರಿ”

ಸಾಮಾನ್ಯ ಆರೋಗ್ಯ ಸಮಸ್ಯೆಗಳ ಮನೆ ಮದ್ದುಗಳು (Home Remedies):

Home Remedies ಮನೆ ಮದ್ದು

“ಬಾದಾಮಿ ಮತ್ತು ಮೊಟ್ಟೆ ಸೇವನೆಯಿಂದ ದೇಹಕ್ಕೆ ಶಕ್ತಿ ದೊರೆಯುವಂತೆ. ಅದೇ ರೀತಿ ಶೇಂಗಾ ತಿನ್ನುವುದರಿಂದ ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ”

Home Remedies ಮನೆ ಮದ್ದು

“ನಿಮ್ಮ ಆಹಾರ ಕ್ರಮದಲ್ಲಿ ಶುಂಠಿ ಸೇರಿಸುವುದರಿಂದ ಕೀಲು ನೋವು, ಸ್ನಾಯು ನೋವು ಬರುವುದಿಲ್ಲ”

Home Remedies ಮನೆ ಮದ್ದು

“ನೇರಳೆ ಹಣ್ಣಿನ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಮೊಸರಿನೊಂದಿಗೆ ಬೆರೆಸಿ ತಿನ್ನುವುದರಿಂದ ಕ್ಯಾನ್ಸರ್ ಮತ್ತು ಮೂತ್ರಪಿಂಡದ ಕಲ್ಲುಗಳೊಂದಿಗೆ ಹೋರಾಡಲು ಸಹಾಯ ಮಾಡುತ್ತದೆ”

Home Remedies ಮನೆ ಮದ್ದು

“ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ದೇಹದಿಂದ ಹಾನಿಕಾರಕ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ”

Home Remedies ಮನೆ ಮದ್ದು

“ಎಳನೀರನ್ನು ಕುಡಿಯುವುದರಿಂದ ಮೊಡವೆಗಳು ಕಡಿಮೆಯಾಗುತ್ತದೆ, ಮೂಳೆಗಳು ಬಲಗೊಳ್ಳುತ್ತದೆ, ಕೆಟ್ಟ ಕೊಲೆಸ್ಟ್ರಾಲ್ ತೆಗೆದುಹಾಕಿ, ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ”

Home Remedies ಮನೆ ಮದ್ದು

“ನಿಂಬೆ ನೀರು – ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಜೀರ್ಣಕ್ರಿಯೆ ಸುಧಾರಿಸುತ್ತದೆ, ಮೊಡವೆಗಳ ಕಲೆ ಹೋಗಲಾಡಿಸುತ್ತದೆ”

Home Remedies ಮನೆ ಮದ್ದು

“ಖರ್ಜೂರವನ್ನು ಹಾಲಿನೊಂದಿಗೆ ಸೇವಿಸುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ, ಮೂಳೆಗಳು ದೃಢ ಗೊಳ್ಳುತ್ತವೆ, ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಹೃದಯ ಸಂಬಂಧಿ ತೊಂದರೆಗಳಿಂದ ರಕ್ಷಣೆ ಒದಗಿಸಿ ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ”

Home Remedies ಮನೆ ಮದ್ದು

“ಬಾಳೆಹಣ್ಣು 4 ಮತ್ತು ಚಾಕೊಲೇಟ್ ತಿನ್ನುವುದರಿಂದ ದೇಹಕ್ಕೆ ವಿಶ್ರಾಂತಿ ಪಡೆಯಲು ಮತ್ತು ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ”

Home Remedies ಮನೆ ಮದ್ದು

“ಪೈನಾಪಲ್ ಹಣ್ಣಿಗೆ ಕರಿಮೆಣಸಿನ ಪುಡಿಯನ್ನು ಹಾಕಿ ಸೇವಿಸಿದರೆ ಕೆಮ್ಮು ಮತ್ತು ಕಫದ ಸಮಸ್ಯೆಯನ್ನು ನಿವಾರಿಸುತ್ತದೆ”

Home Remedies ಮನೆ ಮದ್ದು

“ಪ್ರತಿದಿನ ನೆಲ್ಲಿಕಾಯಿ (Gooseberry) ಸೇವಿಸುವುದರಿಂದ ಕಣ್ಣಿನ ದೃಷ್ಟಿ ಉತ್ತಮವಾಗುತ್ತದೆ”

Home Remedies ಮನೆ ಮದ್ದು

“ಪಪ್ಪಾಯಿ ಹಣ್ಣನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪಪ್ಪಾಯದಲ್ಲಿ ಇರುವ ವಿಟಮಿನ್ ಸಿ ಜೀವಸತ್ವ ಹೃದಯಾಘಾತದ ಅಪಾಯವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ”

Home Remedies ಮನೆ ಮದ್ದು

“ಜೇನುತುಪ್ಪ ನೀರು – ಮೊಡವೆಗಳು, ಗಂಟಲು ಕೆರತ ಕಡಿಮೆಯಾಗುತ್ತದೆ, ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ”

Home Remedies ಮನೆ ಮದ್ದು

“ಶುಂಠಿ ನೀರು – ಮುಟ್ಟಿನ ನೋವು, ತಲೆನೋವು, ಶೀತ ಹಾಗೂ ಅಜೀರ್ಣತೆ ಕಡಿಮೆಮಾಡುತ್ತದೆ”

Home Remedies ಮನೆ ಮದ್ದು

“ನಿಮ್ಮ ಆಹಾರಕ್ರಮದಲ್ಲಿ ಮೀನಿನ ಎಣ್ಣೆ ಸೇರಿಸುವುದು ನಿಮ್ಮ ಕಣ್ಣಿನ ದೃಷ್ಟಿಯನ್ನು ಉತ್ತಮವಾಗಿಸುತ್ತದೆ, ತೂಕ ನಿಯಂತ್ರಣ ಮಾಡುತ್ತದೆ ಹಾಗೂ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ದೂರ ಉಳಿಯಬಹುದು”

Home Remedies ಮನೆ ಮದ್ದು

“ಹಸಿ ಈರುಳ್ಳಿಯನ್ನು ಅಗಿಯುವುದರಿಂದ ವಸಡಿನ ಸೋಂಕು ಮತ್ತು ಬಾಯಿ ಹುಣ್ಣುಗಳಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ”

ಮನೆ ಮದ್ದು: ಪ್ರಕೃತಿಯಿಂದಲೇ ಆರೋಗ್ಯಕ್ಕೆ ಪರಿಹಾರ

Home Remedies ಮನೆ ಮದ್ದು

“ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಒಂದು ಗ್ಲಾಸ್ ಹಾಲಿಗೆ ಸ್ವಲ್ಪ ಜೇನುತುಪ್ಪ ಬೆರೆಸಿ ಸೇವಿಸಿ. ಪ್ರತಿದಿನ ಟೀ ಕುಡಿಯುವ ಮೊದಲು ಎರಡು ಬಾಳೆಹಣ್ಣುಗಳನ್ನು ಸೇವಿಸಿ, ಬೇಯಿಸಿದ ಗೆಣಸು, ಕುದಿಸಿದ ಮೊಟ್ಟೆಯನ್ನು ಊಟದಲ್ಲಿ ಸೇವಿಸಿ, ಡ್ರೈ ಪ್ರಟ್ಸ್ ಹೆಚ್ಚಾಗಿ ಸೇವಿಸಿ”

Home Remedies ಮನೆ ಮದ್ದು

“ರಾತ್ರಿ ಮಲಗುವ ಮುನ್ನ ಬೆಳ್ಳುಳ್ಳಿ ರಸ ತೆಗೆದು ಅದನ್ನು ಮೊಡವೆ ಅಥವ ಗುಳ್ಳೆ ಆದ ಜಾಗಕ್ಕೆ ಹಚ್ಚಿ ಬೆಳಿಗ್ಗೆ ಎದ್ದು ತಣ್ಣೀರಿನಿಂದ ತೊಳೆಯುವುದರಿಂದ ಗುಳ್ಳೆ ಹಾಗೂ ಮೊಡವೆಗಳು ನಿವಾರಣೆಯಗುತ್ತದೆ”

Home Remedies ಮನೆ ಮದ್ದು

“ರುದ್ರಾಕ್ಷಿ ಹಣ್ಣನ್ನು ತಿನ್ನುವುದರಿಂದ ಹೊಟ್ಟೆ ನೋವು, ಲಿವರ್ ಮತ್ತು ಹೃದಯದ ಸಮಸ್ಯೆಗಳು ನಿವಾರಣೆ ಆಗುತ್ತದೆ ಹಾಗೂ ಚರ್ಮದ ಆರೋಗ್ಯವನ್ನು ಸಹ ಕಾಪಾಡುತ್ತದೆ”

Home Remedies ಮನೆ ಮದ್ದು

“ಸೀಬೆ ಹಣ್ಣಿನಿಂದ ಶೀತ, ನೆಗಡಿ ಉಂಟಾಗುವುದಿಲ್ಲ, ಇದರ ಬದಲಿಗೆ ಶೀತ, ನೆಗಡಿಯನ್ನು ಉಂಟುಮಾಡುವ ಬ್ಯಾಕ್ಟಿರಿಯಗಳನ್ನು ನಾಶಗೊಳಿಸುತ್ತದೆ”

Home Remedies ಮನೆ ಮದ್ದು

“ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ ಕೊಬ್ಬರಿ ಎಣ್ಣೆಗೆ ಕರಿಬೇವಿನ ಎಲೆಗಳನ್ನು ಹಾಕಿ ಕುದಿಸಿ ಅದನ್ನು ತಲೆಗೆ ಹಚ್ಚಿ 15 – 20 ನಿಮಿಷಗಳ ಮಸಾಜ್ ಮಾಡಿ ನಂತರ ತೊಳೆಯಿರಿ”

Top 5 Home Remedies:

ಮನೆಮದ್ದುಗಳು, ಮನೆ ಮದ್ದು

“ನಿಮಗೆ ವಿಪರೀತ ತಲೆನೋವು ಇದ್ದಲ್ಲಿ ನಿಮ್ಮ ಕಾಲುಗಳನ್ನು 15-20 ನಿಮಿಷಗಳ ಕಾಲ ಬಿಸಿನೀರಿನಲ್ಲಿ ಇಡಿ ಹೀಗೆ ಮಾಡುವುದರಿಂದ ನಿಮ್ಮ ತಲೆನೋವು ತಕ್ಷಣ ದೂರವಾಗುತ್ತದೆ ಹಾಗು ಮೆದುಳಿಗೆ ವಿಶ್ರಾಂತಿ ಸಿಗುತ್ತದೆ”

ಮನೆಮದ್ದುಗಳು, ಮನೆ ಮದ್ದು

“ರಾಗಿಮುದ್ದೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೂಕ ನಿಯಂತ್ರಣ, ಮಧುಮೇಹ ಮತ್ತು ದೇಹವನ್ನು ತಂಪಾಗಿಸಲು ರಾಗಿ ಮುದ್ದೆ ಅತ್ಯುತ್ತಮ ಆಹಾರ”

ಮನೆಮದ್ದುಗಳು, ಮನೆ ಮದ್ದು

“ನಿಮ್ಮ ನರಮಂಡಲವನ್ನು ಶಾಂತಗೊಳಿಸಿ ಕಿಡ್ನಿ, ಲಿವರ್ ಮತ್ತು ಸಂಧಿವಾತ ಸಮಸ್ಯೆ ನಿವಾರಿಸುವಲ್ಲಿ cherry ಹಣ್ಣು ಸಹಾಯ ಮಾಡುತ್ತದೆ”

ಮನೆಮದ್ದುಗಳು, ಮನೆ ಮದ್ದು

“ಮೊಸರನ್ನದಲ್ಲಿ (Curd rice) Trytophan ಎಂಬ ಅಮೈನೋ ಆಸಿಡ್ ಇರುತ್ತದೆ. ದೇಹದ ಯಾವುದೇ ಭಾಗ ಇದನ್ನ ಉತ್ಪತ್ತಿ ಮಾಡಲ್ಲ. ಇದು ದೇಹಕ್ಕೆ ಸೇರಿದಾಗ ನಮ್ಮ ಮೆದುಳಿಗೆ ವಿಶ್ರಾಂತಿ, ಖುಷಿಯಾದ ಮತ್ತು ಸಂತೃಪ್ತಿ ಭಾವ ಮೂಡುತ್ತದೆ ಕಾರಣ ಮೊಸರಿನ ಈ Trytophan ಮೆದುಳಲ್ಲಿ ಸೆರೋಟೋನಿನ್ ಎಂಬ ಅಂಶ ಬಿಡುಗಡೆಯಾಗುತ್ತದೆ”

ಮನೆಮದ್ದುಗಳು, ಮನೆ ಮದ್ದು

“ಬೇಯಿಸಿದ ಕಡಲೇಕಾಯಿ ತಿನ್ನುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು, ಮೂಳೆಗಳು ಬಲಗೊಳ್ಳುತ್ತವೆ, ನಿಶ್ಯಕ್ತಿ ಮತ್ತು ರಕ್ತಹೀನತೆ ಕಡಿಮೆಯಾಗುತ್ತದೆ,ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ, ರಕ್ತದಲ್ಲಿನ ಸಕ್ಕರೆ ಯನ್ನು ನಿಯಂತ್ರಿಸುತ್ತದೆ, ಕೊಲೆಸ್ಟರಾಲ್ ಮತ್ತು ಪೈಲ್ಸ್ ಸಮಸ್ಯೆಯಿಂದ ದೂರವಿಡುತ್ತದೆ”

ಮನೆಮದ್ದುಗಳು, ಮನೆ ಮದ್ದು

“ಕಿತ್ತಳೆ ಸಿಪ್ಪೆಯನ್ನು ಇಡೀ ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮರುದಿನ ಕೂದಲು ಮತ್ತು ನೆತ್ತಿಗೆ ಹಚ್ಚಿಕೊಂಡರೆ ತಲೆ ಹೊಟ್ಟು, ಕೂದಲು ಉದುರುವಿಕೆ ಕಡಿಮೆ ಆಗುತ್ತದೆ ಹಾಗೂ ಕೂದಲಿನ ಹೊಳಪು ಹೆಚ್ಚುತ್ತದೆ”

ಮನೆಮದ್ದುಗಳು, ಮನೆ ಮದ್ದು

“ಬೆಂಡೆಕಾಯಿ ಹೆಚ್ಚಿನ ಪೈಬರ್ ಮತ್ತು ಒಮೆಗಾ -3 ಮತ್ತು ಒಮೆಗಾ -6 ಆಸಿಡ್ಕಟ್ಟವನ್ನು ಹೊಂದಿದ್ದು ನಿಮ್ಮ ಜ್ಞಾಪಕ ಶಕ್ತಿ ಹೆಚ್ಚಿಸಲು ಮತ್ತು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ”

ಮನೆಮದ್ದುಗಳು, ಮನೆ ಮದ್ದು

“ನಿಮಗೆ ಮೂಗು ಕಟ್ಟಿದ್ದರೆ ನಿಮ್ಮ ಬಾಯಿಯ ಮೇಲ್ಬಾಗದಲ್ಲಿ ಐಸ್ ಕ್ಯೂಬ್ ಅನ್ನು 30 ಸೆಕೆಂಡುಗಳ ಕಾಲ ಒತ್ತಿ ಹಿಡಿದುಕೊಳ್ಳಿ ಇದು ನಿಮಗೆ ಕಟ್ಟಿದ ಮುಗಿನಿಂದ ತಕ್ಷಣದ ಪರಿಹಾರವನ್ನು ನೀಡುತ್ತದೆ”

ಮನೆಮದ್ದುಗಳು, ಮನೆ ಮದ್ದು

“ಅನಾನಸ್ (Pineapple) ತಿನ್ನುವ ವೇಳೆ ಅಕಸ್ಮಾತ್ ಅದನ್ನು ಅಗಿಯದೇ ಬಾಯಲ್ಲಿ ಸುಮ್ಮನೆ 2 ನಿಮಿಷ ಗಳ ಕಾಲ ಇಟ್ಟುಕೊಂಡರೆ ಅದು ನಿಮ್ಮ ನಾಲಿಗೆ ಹಾಗು ಬಾಯಲ್ಲಿರುವ ಮಾಂಸವನ್ನು ತಿನ್ನಲು ಶುರು ಮಾಡುತ್ತದೆ. ಇದಕ್ಕೆ ಕಾರಣ ಅದರಲ್ಲಿರುವ “ಬೊಮೆಲೈನ್ ಕಿಣ್ವಗಳು”

ಮನೆಮದ್ದುಗಳು, ಮನೆ ಮದ್ದು

“ರಾಗಿ ಅಂಬಲಿ ಸೇವನೆಯಿಂದ ರಕ್ತದೊತ್ತಡ ಕಡಿಮೆ ಆಗುತ್ತದೆ, ದೇಹದ ತೂಕವನ್ನು ಇಳಿಸುತ್ತದೆ ಮಧುಮೇಹ ನಿಯಂತ್ರಣದಲ್ಲಿಡುತ್ತದೆ, ಮೂಳೆಗಳು ಬಲಗೊಳ್ಳುತ್ತದೆ ಮತ್ತು ಹೃದಯದ ಆರೋಗ್ಯ ಕಾಪಾಡುತ್ತದೆ”

Home Remedies in Kannada:

ಮನೆಮದ್ದುಗಳು, ಮನೆ ಮದ್ದು

“ನೀವು ಪ್ರತಿದಿನ ಬೆಳಿಗ್ಗೆ 1 ಬೌಲ್ ಸಬುದಾನ ಖೀರ್ ಅನ್ನು ಉಪಹಾರದಲ್ಲಿ ಸೇವಿಸಿದರೆ, ಅದು ತೂಕವನ್ನು ವೇಗವಾಗಿ ಹೆಚ್ಚಿಸುತ್ತದೆ. ತೂಕವನ್ನು ಹೆಚ್ಚಿಸಲು ಇದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ”

ಮನೆಮದ್ದುಗಳು, ಮನೆ ಮದ್ದು

“ರಾತ್ರಿ ಮಲಗುವ ಮುನ್ನ ಎರಡೇ ಎರಡು ಪಿಸ್ತಾ ತಿನ್ನುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ. ಪಿಸ್ತಾ ಬೀಜದಲ್ಲಿ ಹೆಚ್ಚು ಮೆಲಟೋನಿನ್ ಅಂಶ ಇರುವ ಕಾರಣ ಉತ್ತಮ ನಿದ್ದೆ ಪ್ರಾಪ್ತಿಯಾಗುತ್ತದೆ”

ಮನೆಮದ್ದುಗಳು, ಮನೆ ಮದ್ದು

“ಮೊಳಕೆ ಕಟ್ಟಿದ ಹೆಸರುಕಾಳನ್ನು ತಿನ್ನುವುದರಿಂದ ರಕ್ತಸಂಚಾರ ಸುಗಮಗೊಳ್ಳುತ್ತದೆ, ಮೂಳೆಗಳು ಬಲಗೊಳ್ಳುತ್ತವೆ ಹಾಗೂ ಹಾರ್ಮೋನ್ ಗಳ ಸಮಸ್ಯೆಯನ್ನು ದೂರಮಾಡುತ್ತದೆ”

ಮನೆಮದ್ದುಗಳು, ಮನೆ ಮದ್ದು

“ಒಣಗಿದ ಅಂಜೂರ ಹಣ್ಣುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಿರಿ ಜೊತೆಗೆ ಅಂಜೂರ ನೆನೆಸಿಟ್ಟ ನೀರನ್ನು ಕುಡಿಯಿರಿ ಅಂಜೂರ ಉಸಿರಾಟದ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ಕಫವನ್ನು ಕರಗಿಸುತ್ತದೆ”

ಮನೆಮದ್ದುಗಳು, ಮನೆ ಮದ್ದು

“ದಿನಾಲು ಮೊಸರು ಸೇವಿಸುವುದರಿಂದ ಜೀರ್ಣ ಸಮಸ್ಯೆಗಳು ಕಾಣಿಸುವುದಿಲ್ಲ. ಅಷ್ಟೇ ಅಲ್ಲ ಗ್ಯಾಸ್, ಅಸಿಡಿಟಿ, ಮಲಬದ್ಧತೆ, ಹೊಟ್ಟೆಯಲ್ಲಿ ಬಿಸಿ ಕಡಿಮೆಯಾಗುತ್ತವೆ. ಹಾಗೆಯೇ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ”

ಮನೆಮದ್ದುಗಳು, ಮನೆ ಮದ್ದು

“ಬಾಳೆಹಣ್ಣಿನ ಸಿಪ್ಪೆಯ ಬಿಳಿ ಭಾಗವನ್ನು ನಿಮ್ಮ ಮುಖದ ಮೇಲೆ ನಿಧಾನವಾಗಿ ಉಜ್ಜಿ ಮಸಾಜ್ ಮಾಡಿಕೊಳ್ಳಿ ಹೀಗೆ ಮಾಡುವುದರಿಂದ ಮೊಡವೆ (acne/pimples) ದೂರವಾಗುತ್ತದೆ ಹಾಗು | ಕಾಂತಿಯುತ ಚರ್ಮ ದೊರೆಯುತ್ತದೆ”

ಮನೆಮದ್ದುಗಳು, ಮನೆ ಮದ್ದು

“ನಿಮ್ಮ ಕೈಗಳನ್ನು ಐಸ್ ನೀರಿನಲ್ಲಿ ಕೆಲ ನಿಮಿಷಗಳ ಕಾಲ ಇಡುವುದರಿಂದ ನಿಮ್ಮ ತಲೆನೋವು ತಕ್ಷಣ ನಿವಾರಣೆಯಾಗುತ್ತದೆ”

ಮನೆಮದ್ದುಗಳು (Home Remedies) ನಮ್ಮ ಜೀವನದ ಆಂತರಿಕ ಭಾಗವಾಗಿದ್ದು, ಪಾರಂಪರಿಕ ವೈದ್ಯಕೀಯ ಜ್ಞಾನದಿಂದ ಉದ್ಭವಿಸಿವೆ. ಈ ಮದ್ದುಗಳು (Home Remedies) ಕೇವಲ ದೈಹಿಕ ಸಮಸ್ಯೆಗಳಿಗೆ ಪರಿಹಾರವಲ್ಲ, ಆರೈಕೆಯ, ವಿಶ್ವಾಸದ, ಮತ್ತು ಪಾರಂಪರಿಕ ವೈದ್ಯಕೀಯ ಮೌಲ್ಯಗಳ ಪ್ರತೀಕವಾಗಿದೆ. ಮನೆಯಲ್ಲಿಯೇ ಲಭ್ಯವಿರುವ ಸಾಮಗ್ರಿಗಳನ್ನು ಬಳಸಿಕೊಂಡ