VIRAT KOHLI ಅವರಿಂದ ಕಲಿಯಬಹುದಾದ ಪಾಠಗಳು:
ನಾವೆಷ್ಟೆ ಸಿದ್ಧರಾಗಿದ್ದರೂ, ಕೆಲವೊಂದು ದಿನಗಳು ನಮ್ಮ ಪರವಾಗಿರುವುದಿಲ್ಲ, ಆದರೂ ಪರವಾಗಿಲ್ಲ(Kathegalu). ಅದರಿಂದ ಕಲಿಯಿರಿ. ನೀವು ತೆಗೆದುಕೊಳ್ಳುವ ದೃಢ ನಿರ್ಧಾರಗಳ ಮೇಲೆ ನಿಮಗೆ ನಂಬಿಕೆ ಇರಲಿ. ನಾಯಕನಾಗುವ ಪ್ರಜ್ಞೆಯನ್ನು ಬೆಳೆಸಿಕೊಳ್ಳಿ. ಆಡಿಕೊಳ್ಳುವವರಿಗೆ ನಾವು ನೀಡುವ ಸರಿಯಾದ ಉತ್ತರ ನಮ್ಮ ಯಶಸ್ಸು.
“ಆತ್ಮ ನಂಬಿಕೆ ಮತ್ತು ಕಠಿಣ ಪರಿಶ್ರಮ ಯಾವಾಗಲೂ ನಿಮಗೆ ಯಶಸ್ಸನ್ನು ಗಳಿಸುತ್ತದೆ.” – ವಿರಾಟ್ ಕೊಹ್ಲಿ
CHANAKYA ಹೇಳಿಕೊಟ್ಟ Business ಪಾಠಗಳು:
ಇತರರ ತಪ್ಪುಗಳಿಂದ ಕಲಿಯಿರಿ, ಆ ತಪ್ಪುಗಳನ್ನು ನೀವೇ ಮಾಡಿದರೆ ನೀವು ಹೆಚ್ಚು ಕಾಲ ಬದುಕಲು ಸಾಧ್ಯವಿಲ್ಲ. ಯಾವುದೇ ಕೆಲಸ ಶುರು ಮಾಡುವುದಕ್ಕಿಂತ ಮುಂಚೆ ನಿಮ್ಮನ್ನು ನೀವೇ ಈ 03 ಪ್ರಶ್ನೆಗಳನ್ನು ಕೇಳಿಕೊಳ್ಳಿ.
ನಾನೇಕೆ ಈ ಕೆಲಸ ಮಾಡುತ್ತಿದ್ದೇನೆ? ಈ ಕೆಲಸದ ಫಲಿತಾಂಶ ಏನಾಗಬಹುದು? ನಾನು ಈ ಕೆಲಸದಲ್ಲಿ ಯಶಸ್ವಿಯಾಗುತ್ತೇನೆಯೆ?
ನೀವು ಕೆಲಸದ ಬಗ್ಗೆ ಆಳವಾಗಿ ಯೋಚಿಸಿದಾಗ ಮತ್ತು ನೀವು ಕೇಳಿಕೊಂಡ ಪ್ರಶ್ನೆಗಳಿಗೆ ತೃಪ್ತಿದಾಯಕ ಉತ್ತರಗಳನ್ನು ಕಂಡುಕೊಂಡಾಗ ಮಾತ್ರ ಮುಂದುವರಿಯಿರಿ.
ನೀವು ಏನನ್ನಾದರೂ ಮಾಡಲು ಪ್ರಾರಂಭಿಸಿದ ನಂತರ, ವೈಫಲ್ಯಕ್ಕೆ ಹೆದರಬೇಡಿ ಮತ್ತು ಆ ಕೆಲಸವನ್ನು ಬಿಟ್ಟುಬಿಡಬೇಡಿ. ಪ್ರಾಮಾಣಿಕವಾಗಿ ಕೆಲಸ ಮಾಡುವ ಜನರು ಹೆಚ್ಚು ಸಂತೋಷವಾಗಿರುತ್ತಾರೆ.
ಹೂವಿನ ಸುಗಂಧವು ಗಾಳಿ ಬೀಸುವ ದಿಕ್ಕಿನಲ್ಲಿ ಮಾತ್ರ ಹರಡುತ್ತದೆ, ಆದರೆ ನಾಯಕನ ಒಳ್ಳೆಯತನವು ಎಲ್ಲಾ ದಿಕ್ಕುಗಳಲ್ಲಿಯೂ ಹರಡುತ್ತದೆ.
ನಿಮ್ಮ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ, ಒಂದು ದಿನ ಅವೇ ನಿಮಗೆ ಮುಳುವಾಗಿಬಿಡುತ್ತವೆ. ಭಯವು ಸಮೀಪಿಸಿದ ತಕ್ಷಣ, ಅದನ್ನು ಆಕ್ರಮಣ ಮಾಡಿ ಮತ್ತು ನಾಶಮಾಡಿ.
“ಆದ್ದರಿಂದ ನೀವು ಏನು ಅಂದುಕೊಂಡಿದ್ದೀರೋ ಅದನ್ನು ಅರ್ಧದಲ್ಲಿ ಕೈ ಬಿಡಬೇಡಿ..” – ಚಾಣಕ್ಯ
ನಿಮ್ಮನ್ನು Inspire ಮಾಡಬಹುದಾದ ಒಂದು ಸುಂದರವಾದ ಸಂದೇಶ (Short Kannada Stories):
ಮರಗಳು ತಮ್ಮ ಹಣ್ಣನ್ನು ತಿನ್ನುವುದಿಲ್ಲ. ನದಿಗಳು ತಮ್ಮ ನೀರನ್ನು ಕುಡಿಯುವುದಿಲ್ಲ. ಸೂರ್ಯನು ತನಗೋಸ್ಕರ ಹೊಳೆಯುವುದಿಲ್ಲ. ಹೂವುಗಳು ತಮಗೋಸ್ಕರ ಸುಗಂಧವನ್ನು ಬೀರುವುದಿಲ್ಲ.
ಇದರಿಂದ ನಾವೇನು ಕಲಿಯಬಹುದು? ಇತರರಿಗಾಗಿ ಬದುಕುವುದು ಪ್ರಕೃತಿಯ ನಿಯಮ. ನಾವು ಒಬ್ಬರಿಗೊಬ್ಬರು ಸಹಾಯ ಮಾಡಲು ಹುಟ್ಟಿದ್ದೇವೆ. ಯಾವುದೇ ಕಷ್ಟದ ಪರಿಸ್ಥಿತಿಯಲ್ಲಿ ನಾವು ಯಾವಾಗಲೂ ಸಹಾಯ ಮಾಡಬೇಕು.
ನೀವು ಸಂತೋಷವಾಗಿರುವಾಗ ಜೀವನವು ಉತ್ತಮವಾಗಿರುತ್ತದೆ ಆದರೆ ನಿಮ್ಮ ಸಹಾಯದಿಂದ ಇತರರು ಸಂತೋಷವಾಗಿರುವಾಗ ಹೆಚ್ಚು ಉತ್ತಮವಾಗಿರುತ್ತದೆ.
“ಬದುಕೆಂದರೆ ಹೋರಾಟವೇ, ಗೆಲುವೇ ಗುರಿ. ಸೋಲನ್ನೇ ಮರೆತು ಮುನ್ನುಗತ್ತಿರಿ”
ನಿಮ್ಮ ನಂಬಿಕೆಯನ್ನು ಬದಲಾಯಿಸಿ:
ಒಬ್ಬ ಯಾತ್ರಿಕ ಶಿಬಿರದ ಪಕ್ಕದಲ್ಲಿ ಹಾದು ಹೋಗುತ್ತಿದ್ದ. ಅಲ್ಲೊಂದು ಆನೆಯನ್ನು ಕಟ್ಟಿ ಹಾಕಿರುವುದನ್ನು ಕಂಡು ಆಶ್ಚರ್ಯಚಕಿತನಾದ. ಏಕೆಂದರೆ ಆನೆಯನ್ನು ಕಟ್ಟಿರುವುದು ಪಂಜರದಲ್ಲಲ್ಲ.
ಸರಪಳಿಯಿಂದಲ್ಲ, ಒಂದು ಚಿಕ್ಕ ಹಗ್ಗದಿಂದ. ಆಗ ಅವನು ಹತ್ತಿರದಲ್ಲಿದ್ದ ಮಾವುತನನ್ನು ನೋಡಿ ಕೇಳಿದನು, ಅಷ್ಟು ಚಿಕ್ಕ ಹಗ್ಗದಿಂದ ಕಟ್ಟಿ ಹಾಕಿದರು ಆ ಆನೆ ಏಕೆ ಅಲ್ಲಿಯೇ ನಿಂತಿದೆ?
ತಪ್ಪಿಸಿಕೊಳ್ಳಲು ಏಕೆ ಪ್ರಯತ್ನಿಸುತ್ತಿಲ್ಲ ಎಂದು ಕೇಳಿದನು. ಮಾವುತ ಉತ್ತರಿಸಿದ, ಆನೆಗಳು ಚಿಕ್ಕವರಾಗಿದ್ದಾಗ ಅವುಗಳನ್ನು ಕಟ್ಟಲು ಚಿಕ್ಕ ಗಾತ್ರದ ಹಗ್ಗಗಳನ್ನು ಬಳಸುತ್ತೇವೆ ಮತ್ತು ಅವು ಚಿಕ್ಕದಾಗಿದ್ದಾಗ ಅವುಗಳನ್ನು ಹಿಡಿದಿಟ್ಟುಕೊಳ್ಳಲು ಸಾಕು.
ಅವು ಬೆಳೆದು ದೊಡ್ಡದಾದಂತೆಲ್ಲ ನಾವು ಈ ಹಗ್ಗದಿಂದ ಬಿಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಂಬುತ್ತವೆ. ಹಾಗಾಗಿ ಆನೆಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ’ ಎಂದು ಹೇಳಿದ.
ನಾವು ನಮ್ಮ ಮೇಲೆ, ನಮ್ಮ ಸಾಮರ್ಥ್ಯದ ಮೇಲೆ ಅತೀ ನಂಬಿಕೆಯನ್ನಿಟ್ಟಾಗ, ಹಗ್ಗದಂತಹ ಶಕ್ತಿಗಳು ಶಕ್ತಿಹೀನವಾಗುತ್ತವೆ. ಆ ಹಗ್ಗ ಎಷ್ಟು ಗಟ್ಟಿಯಾಗಿದೆ ಎನ್ನುವುದಕ್ಕಿಂತ, ನಮ್ಮಲ್ಲಿರುವ ನಂಬಿಕೆ ಎಷ್ಟು ಗಟ್ಟಿಯಾಗಿದೆ ಎಂಬುದು ಹೆಚ್ಚು ಮುಖ್ಯ.
“ಕಲಿಯುಗದಲ್ಲಿ ಸತ್ಯ ಹುಡುಕಬೇಡಿ, ಸಹನವನ್ನೇ ಆಯುಧವಾಗಿಟ್ಟುಕೊಳ್ಳಿ”
ಮಾನವೀಯತೆ ಅಂದ್ರೆ ಇದೇನಾ? (Kannada Small Story):
ಸಿಟಿ ಬಸ್ನಿಂದ ಇಳಿದು ಜೇಬಿನೊಳಗೆ ಕೈ ಹಾಕಿದೆ. ಅರೆ, ಜೇಬು ಹರಿದಿತ್ತು. ಪಿಕ್ ಪಾಕೆಟ್ ಆಗಿ ಇದ್ದ ಹಣವೆಲ್ಲ ಹೋಗಿತ್ತು. ಜೇಬಿನಲ್ಲಿ ಇದ್ದ ಹಣವಾದರೂ ಎಷ್ಟು? ಕೇವಲ 90 ರೂಪಾಯಿ ಮತ್ತು ಒಂದು ಪೋಸ್ಟ್ ಕಾರ್ಡು.
ಆ ಕಾರ್ಡು ಅಮ್ಮನಿಗೆ ಬರ್ದಿದ್ದು, “ನನ್ನ ಕೆಲಸ ಹೋಗಿದೆ, ಹಣ ಕಳಿಸಲು ಆಗುತ್ತಿಲ್ಲ” ಎಂದು ಬರೆದು ಹಾಗೆ ಇಟ್ಟುಕೊಂಡಿದ್ದೆ. ಎರಡು ದಿನಗಳಿಂದ ಪೋಸ್ಟ್ ಮಾಡಲು ಮನಸ್ಸಾಗಿರಲಿಲ್ಲ. ಹಣ ಕಳಿಸದಿದ್ದರೆ ಅಮ್ಮನ ಜೀವನ ಹೇಗೆ ನಡೆದೀತು? ಈಗ ಇದ್ದ 90 ರೂಪಾಯಿಯೂ ಹೋಯ್ತು.
ಇವತ್ತು ಹೇಗೋ ದಿನ ನೂಕಬಹುದಿತ್ತು. ಕದ್ದವರಿಗೆ 90 ರೂ ದೊಡ್ಡ ಮೊತ್ತವೇನಲ್ಲ. ಆದರೂ ಕೆಲವೇ ದಿನಗಳಲ್ಲಿ ತಾಯಿಯಿಂದ ಪತ್ರ ಬಂತು. ‘ಹಣ ಯಾಕೆ ಕಳಿಸಿಲ್ಲ’ ಎಂದು ಕೇಳಿ ಬರೆದಿರಬೇಕು ಎಂದುಕೊಳ್ಳುತ್ತಲೇ ಪತ್ರ ಬಿಡಿಸಿದೆ.
ಅರೆ!! ಆಶ್ಚರ್ಯ!!! ಅಮ್ಮ ಬರೆದಿದ್ದರು ”ಮಗೂ ನೀನು ಕಳಿಸಿದ ಸಾವಿರ ರೂಪಾಯಿ ಹಣ ಬಂದು ತಲುಪಿದೆ. ನೀನೆಷ್ಟು ಒಳ್ಳೆಯವನು. ಹಣ ಕಳಿಸುವುದನ್ನ ಮರೆಯೋದಿಲ್ಲ.
ನಿನಗೆ ನನ್ನ ಆಶಿರ್ವಾದಗಳು”. ಇದೇನಿದು? ಆ ಹಣವನ್ನು ನನ್ನ ತಾಯಿಗೆ ಯಾರು ಕಳಿಸಿರಬಹುದು? ಎಷ್ಟು ಯೋಚಿಸಿದರೂ ನನಗೆ ಗೊತ್ತೇ ಆಗಲಿಲ್ಲ. ಮರುದಿನ ನನ್ನ ವಿಳಾಸಕ್ಕೆ ಇನ್ನೊಂದು ಪತ್ರ ಬಂತು.
ಅದರಲ್ಲಿ ಹೀಗೆ ಬರೆದಿತ್ತು. “ಕ್ಷಮಿಸು ಸಹೋದರ, ನಿನ್ನ 90 ರೂಪಾಯಿಗೆ ನನ್ನ 910 ರೂಪಾಯಿ ಸೇರಿಸಿ ನಿನ್ನ ತಾಯಿಗೆ ೧೦೦೦ ರೂಪಾಯಿ ಮನಿ ಆರ್ಡರ್ ಮಾಡಿದ್ದೇನೆ.
ಚಿಂತಿಸಬೇಡ. ತಾಯಿ ಎಲ್ಲರಿಗೂ ಒಂದೇ ಅಲ್ಲವೇನು? ಆಕೆ ಏಕೆ ಉಪವಾಸ ಇರಬೇಕು? ಬೇಗ ಒಂದು ಕೆಲಸ ಹುಡುಕಿಕೋ. ಆ ಕ್ಷಣಕ್ಕೆ ಮನಸಲ್ಲಿ ಉಳಿದ ಪ್ರಶ್ನೆಯೊಂದೆ. ”ಮನುಷ್ಯತ್ವ ಅಂದ್ರೆ ಇದೇನಾ…?
“ಯಾರನ್ನೂ ನಂಬಬೇಡಿ, ಸ್ವತಃ ಶಕ್ತಿಯಾಗಿ ಬದುಕಿ”
ಹದ್ದುಗಳಿಂದ ಕಲಿಯಬೇಕಾದ ಜೀವನದ ಪಾಠಗಳು (Small Story Kannada):
ಹದ್ದುಗಳು ನಿಖರವಾದ ದೃಷ್ಟಿಯನ್ನು ಹೊಂದಿವೆ : ಅಡೆತಡೆಗಳು ಏನೇ ಇರಲಿ, ನೀವಿಟ್ಟ ಗುರಿ ಮುಗಿಯೋವರೆಗು ಬೇರೆ ಕಡೆ ಗಮನ ಹರಿಸಬೇಡಿ.
ಹದ್ದುಗಳು ಏಕಾಂಗಿಯಾಗಿ ತಮ್ಮದೇ ಆದ ರೀತಿಯಲ್ಲಿ ಹಾರುತ್ತವೆ : ಏಕಾಂಗಿಯಾಗಿದ್ದರೂ ಪರವಾಗಿಲ್ಲ, ಕೆಟ್ಟ ಮನಸ್ಥಿತಿ ಇರುವ ಜನರಿಂದ ಆದಷ್ಟು ದೂರವಿರಿ.
ಹದ್ದು ಸತ್ತ ಪ್ರಾಣಿಗಳನ್ನು ತಿನ್ನುವುದಿಲ್ಲ : ನಿಮ್ಮ ಹಿಂದಿನ ಯಶಸ್ಸನ್ನು ಅವಲಂಬಿಸಬೇಡಿ, ಹೊಸ ಅವಕಾಶಗಳನ್ನು ಹುಡುಕುತ್ತಾ ಇರಿ.
ಹದ್ದುಗಳು ಚಂಡಮಾರುತವನ್ನು ಪ್ರೀತಿಸುತ್ತವೆ : ನಿಮ್ಮ ಜೀವನದಲ್ಲಿ ಬರುವ ಸವಾಲುಗಳ ಬಗ್ಗೆ ಉತ್ಸುಕರಾಗಿರಿ. ಸವಾಲುಗಳು ಅವಕಾಶವನ್ನು ತರುತ್ತವೆ.
ಹೆಣ್ಣು ಹದ್ದು ಗಂಡು ಹದ್ದನ್ನ ಭೇಟಿಯಾದಾಗ ಅವಳು ಅವನ ನಂಬಿಕೆಯನ್ನು ಪರೀಕ್ಷಿಸುತ್ತಾಳೆ : ಜೀವನದಲ್ಲಿ ಬರುವ ವ್ಯಕ್ತಿ ಯಾರೇ ಇರಲಿ, ಇಬ್ಬರಲ್ಲೂ ನಂಬಿಕೆ ಅಗತ್ಯ.
ವಯಸ್ಸಾಗಿ ಹಾರಲು ಕಷ್ಟವಾದಾಗ ಹದ್ದು ತನಗೆ ಹೊಸ ಗರಿಗಳು ಬರಲಿ ಎಂದು ತನ್ನನ್ನೇ ತಾನು ನೋಯಿಸಿಕೊಳ್ಳುತ್ತದೆ : No Pain, No Gain ಎನ್ನುವ ಹಾಗೆ, ನಮ್ಮ ಜೀವನಕ್ಕೆ ಯಾವುದೇ ಉಪಯೋಗ ತಂದುಕೊಡದ ವಿಷಯಗಳನ್ನು ನಾವು ಬಿಡಬೇಕಾಗಿದೆ.
“ಜೀವನ ಪ್ರೀತಿ ಮೇಲೆ ನಿಲ್ಲಬೇಕೇ ಹೊರತು ಅನಿವಾರ್ಯ,ಅವಶ್ಯಕತೆ ಮತ್ತು ನಿರೀಕ್ಷೆಗಳ ಮೇಲಲ್ಲ.”
ಶಾಲೆಯಲ್ಲಿಯೂ ಹೇಳಿ ಕೊಡದ ಬಿಲ್ ಗೇಟ್ಸ್ ಅವರ 06 ನಿಯಮಗಳು (Kannada Neeti Kathegalu):
ಜೀವನವು ಅಂಡ್ಕೊಂಡಂಗಿರಲ್ಲ, ಅದನ್ನ ಬಳಸಿಕೊಳ್ಳಿ : ಜೀವನದಲ್ಲಿ ನಾವು ಅಂದುಕೊಂಡಿದ್ದೆಲ್ಲ ನಡಿಯುತ್ತದೆ ಎಂದು ನಿರೀಕ್ಷಿಸುವುದನ್ನು ನಿಲ್ಲಿಸಿ. ಸಮಾಜವು ನಿಮ್ಮ ಸ್ವಾಭಿಮಾನದ ಬಗ್ಗೆ ಕಾಳಜಿ ವಹಿಸುವುದಿಲ್ಲ : ಇವತ್ತೇ ಏನನ್ನಾದರೂ ಮಾಡಲು ಪ್ರಾರಂಭಿಸಿ.
ಓದುವುದು ಮುಗಿದ ನಂತರ ನೀವು 06 ಸಂಖ್ಯೆಗಳ ಸ್ಯಾಲರಿ ಪಡೆಯಲು ಸಾಧ್ಯವಿಲ್ಲ : ನೀವು ಶ್ರೀಮಂತರಾಗಬೇಕು ಅಂದ್ರೆ ನಿಮಗೋಸ್ಕರ ನೀವು ಕಷ್ಟಪಟ್ಟು ದುಡಿಯಬೇಕು. ಆಡಿಕೊಳ್ಳುವವರಿಗೆ ಕಿವಿ ಕೊಡಬೇಡಿ : ನಿಮ್ಮ ದಾರಿಗೆ ಅಡ್ಡ ಬರುವ ಕಲ್ಲುಗಳನ್ನು ಮೆಟ್ಟಿಲುಗಳು ಎಂದು ಭಾವಿಸಿ.
ನೀವು ತಪ್ಪು ಮಾಡಿದರೆ ಅದು ನಿಮ್ಮ ತಂದೆ ತಾಯಿಗಳ ತಪ್ಪಲ್ಲ : ನಿಮ್ಮ ತಪ್ಪನ್ನು ಬೇರೆಯವರ ಮೇಲೆ ಹಾಕುವುದು ಬಿಡಿ, ನಿಮ್ಮ ತಪ್ಪುಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಿ. ಜೀವನವನ್ನು ಸೆಮಿಸ್ಟರ್ಗಳಾಗಿ ವಿಂಗಡಿಸಿಲ್ಲ : ಜೀವನ ಪ್ರಾರಂಭವಾದ ನಂತರ ಅದು ಮುಂದುವರೆಯುತ್ತದೆ. ಆದ್ದರಿಂದ ನಿಮ್ಮ ಸಮಯವನ್ನು ಉಪಯುಕ್ತವನ್ನಾಗಿ ಮಾಡಿ.
“ನಿಮ್ಮ ಶಿಕ್ಷಕರು ಕಠಿಣ ಎಂದು ನೀವು ಭಾವಿಸಿದರೆ, ನೀವು ಬಾಸ್ ಪಡೆಯುವವರೆಗೆ ಕಾಯಿರಿ.”
ಹೆಣ್ಮಕ್ಳೆ ಗ್ರೇಟ್. ಹೇಗೆ ಗೊತ್ತ ? (Makkala Kathegalu):
ನಾನು ಜನಿಸಿದಾಗ ನನ್ನನ್ನ ಎತ್ತಿಕೊಳ್ಳಲು ಒಬ್ಬ ಮಹಿಳೆ ಇದ್ದಳು – ಅವಳೆ ನನ್ನ ತಾಯಿ. ನಾನು ಬೆಳೆದು ದೊಡ್ಡವನಾದ ಮೇಲೆ ನನ್ನ ಜೊತೆ ಆಟವಾಡಲು ಒಬ್ಬ ಮಹಿಳೆ ಇದ್ದಳು – ಅವಳೆ ನನ್ನ ಅಕ್ಕ. ನಾನು ಶಾಲೆಗೆ ಹೋದಾಗ ನನಗೆ ಕಲಿಸಲೆಂದೆ ಒಬ್ಬ ಮಹಿಳೆ ಇದ್ದಳು – ಅವಳೆ ಟೀಚರ್.
ಅಗತ್ಯ ಹೋಲಿಕೆ, ಕಷ್ಟಗಳಿಗೆ ಹೆಗಲು ನೀಡಲು ಒಬ್ಬ ಮಹಿಳೆ ಇದ್ದಳು – ಅವಳೆ ನನ್ನ ಹೆಂಡತಿ. ಸತ್ತ ಮೇಲೆ ನನ್ನ ದೇಹವನ್ನು ತನ್ನ ಒಡಲೊಳಗೆ ಇಟ್ಟುಕೊಳ್ಳಲು ಒಬ್ಬ ಮಹಿಳೆ ಇದ್ದಳು – ಅವಳೆ ಭೂಮಿ ತಾಯಿ. ನೀವು ಕೂಡ ಹೆಣ್ಣು ಮಗಳಾಗಿದ್ದರೆ ನಿಮ್ಮಷ್ಟಕ್ಕೆ ನೀವೇ ಆದ್ರೂ ಹೆಮ್ಮೆ ಪಡಿ..
“ಒಬ್ಬರನ್ನೊಬ್ಬರು ನಂಬುವ ಮಹಿಳೆಯರು ಸಾಮ್ರಾಜ್ಯಗಳನ್ನು ಮತ್ತು ಯುದ್ಧಗಳನ್ನು ಗೆಲ್ಲುವ ಸೈನ್ಯವನ್ನು ರಚಿಸುತ್ತಾರೆ” – ನಿಕಿತಾ ಗಿಲ್
Lord ಗಣೇಶನಿಂದ ಕಲಿಯಬೇಕಾದ ಪಾಠಗಳು (Kathegalu):
ದೊಡ್ಡ ತಲೆ : ವಿಭಿನ್ನವಾಗಿ ಯೋಚಿಸಿ. ಚಿಕ್ಕ ಕಣ್ಣುಗಳು : ಯಶಸ್ಸು ಕಾಣಲು ಏಕಾಗ್ರತೆ ಮುಖ್ಯ ಮುರಿದ ದಂತ : ಇತರರ ಒಳಿತಿಗಾಗಿ ನಿಮ್ಮನ್ನು ನೀವೆ ಹಾನಿ ಮಾಡಿಕೊಳ್ಳಬೇಕಾಗುತ್ತದೆ. ದೊಡ್ಡ ಕಿವಿಗಳು : ಇತರರ ಮಾತನ್ನು ಗಮನವಿಟ್ಟು ಆಲಿಸಿ.
ಚಿಕ್ಕ ಬಾಯಿ : “ಯಾರೊಂದಿಗೆ ಏನು ಮಾತಾಡಬೇಕು ಎಂಬುದರ ಬಗ್ಗೆ ಎಚ್ಚರವಿರಲಿ. ಲಡ್ಡು : ಕಷ್ಟ ಪಟ್ರೆ ಸಿಹಿ ಸಿಕ್ಕೆ ಸಿಗುತ್ತದೆ. ಇಲಿ : ನೀವು ನೋಡಲು ಹೇಗೆ ಇದ್ದರೂ, ಜೀವನದ ಪ್ರತಿಯೊಂದು ತಲುಪುವ ಸಾಮರ್ಥ್ಯ ನಿಮ್ಮಲ್ಲಿರುತ್ತದೆ.
“ಪ್ರತಿ ಸವಾಲುಗಳೊಂದಿಗೆ, ಒಂದು ಅವಕಾಶ ಕಾಯುತ್ತಿದೆ.”
ಸಣ್ಣದಲ್ಲದ 5 ಕಥೆಗಳು (Kathegalu Kannada):
ಒಂದು ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಪರಾರಿಯಾಗುತ್ತಿದ್ದ ಆ ಮೂರು ಹುಡುಗರಿಗೆ ಪೋಲಿಸರ ಗುಂಡೇಟು ಬಿತ್ತು. ಆಸ್ಪತ್ರೆಗೆ ದಾಖಲಾಗಿ ನರಳುತ್ತಿದ್ದಾಗ ಅಲ್ಲಿ ಒಂದು ‘ಹೆಣ್ಣು’ (ನರ್ಸ್) ಅವರನ್ನ ಆರೈಕೆ ಮಾಡುತ್ತಿದ್ದಳು.
ನಾನು ಇಷ್ಟ ಪಟ್ಟ ಹುಡುಗಿ ನನ್ನನ್ನು ಪ್ರೀತಿಸುತ್ತಿಲ್ಲ. ನನ್ನ ಸಾವಿಗೆ ನಾನೇ ಕಾರಣವೆಂದು ಪತ್ರ ಬರೆದು ಸತ್ತ. ಇನ್ನು ನಿಷ್ಕಲ್ಮಶ ಪ್ರೀತಿ ನೀಡಿದ್ದ ಹೆತ್ತವರು ತಾವು ತಮ್ಮ ಮಗನನ್ನು ಹುಟ್ಟಿಸಿ ಬೆಳೆಸಿದ್ದಕ್ಕೆ ನಮಗೆ ಸಿಕ್ಕ ಪ್ರತಿಫಲವಾದರೂ ಏನು ಎಂದು ಹುಡುಕಾಡುತ್ತಿದ್ದರು.
ಸಮಾಜದ ಮೇಲು ಕೀಳು, ಭೇದ ಭಾವ ಮತ್ತು ಜಾತ್ಯಾತೀತ, ಸಾಮಾಜಿಕ ಸಮಾನತೆಗಾಗಿ ಹೋರಾಡುತ್ತಿದ್ದ ವ್ಯಕ್ತಿಯೊಬ್ಬನು ನಿಧನವಾದಾಗ ಅವನದೇ ಜಾತಿ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ನಾನು ಅನಾಥರನ್ನು, ವೃದ್ಧರನ್ನು, ಬಡವರನ್ನು ಸಾಕುತ್ತಿದ್ದೇನೆ. ಅವರನ್ನು ಸಾಕಲು ನನಗೆ ನಿಮ್ಮ ಕೈಲಾದಷ್ಟು ಧನ ಸಹಾಯ ಮಾಡಿ ಎಂದು ಒಂದು ಸುದ್ದಿ ಪತ್ರಿಕೆಯಲ್ಲಿ ಪ್ರಕಟಣೆಯಿತ್ತು. ಅದರ ಪಕ್ಕದಲ್ಲೇ ದೇವಸ್ಥಾನದ ಹುಂಡಿಗೆ ಈ ವರ್ಷ ಕೋಟ್ಯಂತರ ರೂಪಾಯಿ ಜಮಾವಣೆಯಾದ ಇನ್ನೊಂದು ಸುದ್ದಿ ಬಿತ್ತರವಾಗಿತ್ತು.
ಅಮ್ಮನಿಲ್ಲದ ಮನೆ ತೀರಾ ಬಣಗುಟ್ಟಿತ್ತು. ಹೊಟ್ಟೆ ಬೇರೆ ಪೂರಾ ಹಸಿದಿತ್ತು. ಹಿಂದೊಮ್ಮೆ ಎಂದೋ ನೆಟ್ಟಿದ್ದ ಗಿಡ ಮರವಾಗಿ ಬೆಳೆದು ಹಣ್ಣು ಬಿಟ್ಟಿದ್ದು ನೆನಪಾಯಿತು.