Home » 70+ Beautiful Romantic Love quotes in Kannada – ಲವ್ ಕ್ವೋಟ್ಸ

70+ Beautiful Romantic Love quotes in Kannada – ಲವ್ ಕ್ವೋಟ್ಸ

by Praveen Mattimani
love-quotes-in-kannada

ಪ್ರೇಮ (Love Quotes in Kannada) ಎಂಬುದು ಭೂಮಿಯ ಸವಾಲುಗಳ ನಡುವೆ ಸುಂದರವಾದ ಒಂದು ಭಾವನೆ. ಈ ಪ್ರೀತಿ ಮಾನವರಲ್ಲಿ ತುಂಬಾ ವಿಶಿಷ್ಟವಾದ ಅನುಭವಗಳನ್ನು ಮೂಡಿಸುತ್ತದೆ. ಪ್ರೇಮವು ಕೇವಲ ಹೃದಯವನ್ನು ಸ್ಪರ್ಶಿಸುವುದಷ್ಟೇ ಅಲ್ಲ, ನಮ್ಮ ಬದುಕನ್ನು ಮತ್ತಷ್ಟು ಆನಂದದಾಯಕ ಮತ್ತು ಅರ್ಥಪೂರ್ಣವಾಗಿಸುತ್ತದೆ.

ಜೀವನದ ಈ ಅಡಚಣೆಗಳಿಂದ ಕೊಂಚ ದೂರವಿದ್ದು, ಹೃದಯದ ಆಳದಲ್ಲಿ ಮೂಡುವ ಪ್ರೀತಿಯ ಭಾವನೆ ನಿಮ್ಮನ್ನು ಹೊಸ ಲೋಕಕ್ಕೆ ಕೊಂಡೊಯ್ಯುತ್ತದೆ. ರೋಮ್ಯಾಂಟಿಕ್ ಲವ್ ಕ್ವೋಟ್ಸ್. ನಿಮಗೆ ನಿಮ್ಮ ಪ್ರೀತಿಪಾತ್ರರಿಗೆ ಪ್ರೀತಿಯನ್ನು (Romantic Love quotes in Kannada) ಮನಸಾರೆ ತಲುಪಿಸುವ ನುಡಿಮುತ್ತುಗಳನ್ನು ನೀಡುತ್ತವೆ.

ಪ್ರೀತಿಯ ಸುಂದರ ಕ್ಷಣಗಳನ್ನು ಮತ್ತೆ ಮತ್ತೆ ಸ್ಮರಿಸಲು, ಪ್ರೀತಿಯ ಭಾವನೆಗಳನ್ನು ಅರ್ಥಪೂರ್ಣವಾಗಿ ವ್ಯಕ್ತಪಡಿಸಲು. ಈ ಕ್ವೋಟ್ಸ್ ಸಹಾಯಕವಾಗುತ್ತವೆ. ಒಬ್ಬರಿಗೊಬ್ಬರು ಅಂತರಾಳದಲ್ಲಿ ತಿಳಿದುಕೊಳ್ಳಲು, ಒಲವು ಹಾಗೂ ಆಪ್ತತೆಯನ್ನು ವೃದ್ಧಿಸಲು ರೋಮ್ಯಾಂಟಿಕ್ ಲವ್ ಕ್ವೋಟ್ಸ್ ಬಹಳ ಪ್ರಭಾವಶಾಲಿ ಎನಿಸುತ್ತವೆ.

ಇಲ್ಲಿ ನೀಡಿರುವ ಕನ್ನಡ ಪ್ರೀತಿಯ ಕ್ವೋಟ್ಸ್ ಪ್ರೀತಿಯ ಮಧುರ ಸಂಗತಿಗಳನ್ನು ಹಂಚಿಕೊಳ್ಳಲು ಸ್ಫೂರ್ತಿದಾಯಕವಾಗಿದ್ದು, ನಿಮ್ಮ ಪ್ರೀತಿಯ ಸಂಬಂಧವನ್ನು ಮತ್ತಷ್ಟು ಬಲಪಡಿಸಲಿದೆ.

ಪ್ರೀತಿಯ ಈ ಚೊಚ್ಚಲ ನುಡಿಮುತ್ತುಗಳು ನಿಮ್ಮ ಪ್ರೀತಿಯ ಅನುಭವಕ್ಕೆ ಹೊಸ ಮೈಲುಗಲ್ಲು ಸೇರಿಸಲಿವೆ. ಪ್ರೀತಿ ಹೃದಯದಲ್ಲಿ ಇರುವಾಗ, ಆ ಪ್ರೀತಿಯನ್ನು ನಿಖರವಾಗಿ ವ್ಯಕ್ತಪಡಿಸಲು ಈ ರೋಮ್ಯಾಂಟಿಕ್ ಲವ್ ಕ್ವೋಟ್ಸ್ (Beautiful Love quotes in Kannada) ನಿಮ್ಮಿಗೆ ಸಹಾಯ ಮಾಡುತ್ತವೆ.

Love quotes in Kannada

“ನನ್ನವಳು ಅಂದ ನನಗವಳು ಚಂದ ಬಾಳಬದುಕಿನಲಿ ನಾವಿಬ್ಬರೂ ಬಂಧ”. 

Love quotes in Kannada

“ಹೆಚ್ಚುತ್ತಿದೆ ದಿನೇ ದಿನೇ ಅವಳ ಮೇಲಿನ ಪ್ರೀತಿ.. ತಿಳಿಯುವುದೇ ಅವಳಿಗೆ ನನ್ನೀ ಪ್ರೀತಿಯ ರೀತಿ”..? 

Love quotes in Kannada

“ನಿನ್ನ ಮಾತೆ ನನ್ನ ಸಂತಸ… ನಿನ್ನ ಕಂಡೂಡನೆ ಹೇಳುತ್ತೆ ನನ್ನ ಮನ ಸಾವಕಾಶ”

Love quotes in Kannada

“ಕೊಟ್ಟೆ ನಾ ನಿನಗೆ ಎರವಲು ನನ್ನ ಕನಸ.. ಆವರಿಸಿಬಟ್ಟೆ ನೀ ನನ್ನ ಮನಸ..”

Love quotes in Kannada

“ಬಂದರೆ ನೀ ನನ್ನ ಬಳಿಗೆ ಮಳೆಯಾದಂತೆ ಮನಕೆ… ನಿನ್ನ ಹೆಸರ ಮೇಲೆ ನನ್ನೆಲ್ಲಾ ಕವನದ ಬಳಕೆ…” 

Love quotes in Kannada

“ಜೊತೆಗಿದ್ದರೆ ಅವಳು ನನ್ನ ಜೀವನಕ್ಕೆ ಹರುಷ.. ನಕ್ಕರೆ ಅವಳು ಹೆಚ್ಚಾಗುವುದು ನನ್ನ ನಗುವಿಗೆ ಒಂದು ವರುಷ..” 

Love quotes in Kannada

“ಕಳೆದು ಹೋಗಬೇಕು ನಾ ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುತಾ.. ನಿನ್ನಲ್ಲಿ ಬಂಧಿಯಾಗಿ ನನ್ನನ್ನು ನಾ ಮರೆಯುತಾ..” 

Love quotes in Kannada

“ನನ್ನ ಹೃದಯಕ್ಕೆ ಹಿಡಿಸಿದ ಮೊಗ ಅವಳದು… ನನ್ನ ಕಣ್ಣಿಗೆ ಕಾಣಿಸಿದ ಚಂದವಾದ ಮುಖ ಅವಳದು.. ಮೃದು ಸ್ವಭಾವದ ಅತಿ ಪ್ರೀತಿ ನನ್ನವಳದು…” 

Love quotes in Kannada

“ಇರು ನೀ ನನ್ನೀ ಹೃದಯಕ್ಕಾಗಿ.. ಇರುತ್ತೆ ನನ್ನೀ ಮಿಡಿತ ನಿನಗಾಗಿ.. ಇರುವೆ ನೀ ಪ್ರತಿ ಜನ್ಮದಲ್ಲೂ ನನ್ನ ಪ್ರೀತಿಯ ರಾಯಭಾರಿಯಾಗಿ..” 

Love quotes in Kannada

 
“ನನಗರಿವಿಲ್ಲದೆ ನಿನ್ನ ಹುಡುಕಿ ಬರುವೆ, ನಿನ್ನೆಗಲಮೇಲೆ ಒರಗಿ ಜಗವ ಮರೆವೆ, ತುಸು ಮಾತನಾಡದೆ ಮೌನಿಯಗುವೆ, ಹೇಳು ಇದಕೆಲ್ಲ ನಿನ್ನ ಪ್ರೀತಿಯೇ ಕಾರಣವೇ..” 

Kannada Romantic love quotes – ಲವ್ ಸಂದೇಶಗಳು

“ ಬೇಕು ನೀ ನನ್ನೀ ಜೀವಕೆ.. ನನ್ನ ಕನಸುಗಳಿಗೆ ಪ್ರೋತ್ಸಾಹಕಿಯಾಗಿ.. ನನ್ನ ಬಲಾಢ್ಯಕ್ಕೆ ಕಾರಣವಾಗಿ… ಬೇಕು ನೀ ನನ್ನೀ ಜೀವಕೆ… ಏಳೇಳು ಜನುಮಕೆ..” 

Kannada Romantic love quotes – ಲವ್ ಸಂದೇಶಗಳು

“ ಪ್ರೀತಿಯು ಬಂಡಾಯದ ಹಕ್ಕಿಯಾಗಿದ್ದು ಅದನ್ನು ಯಾರು ಪಳಗಿಸಲು ಸಾಧ್ಯವಿಲ್ಲ..”

Kannada Romantic love quotes – ಲವ್ ಸಂದೇಶಗಳು

“ ಸಿಗಲ್ಲ ಅಂತ ಗೊತ್ತಿದ್ರು ನಾವು ಅದನ್ನೇ ಇಷ್ಟ ಪಡ್ತೀವಿ ಯಾಕೆ ಗೊತ್ತಾ, ಸಿಗುವ ನೂರು ವಸ್ತುಗಳಿಗಿಂತ ಸಿಗದೇ ಇರು ಒಂದು ವಸ್ತು ಮಾತ್ರ ಮನಸ್ಸನ್ನು ಗೆದ್ದಿರುತ್ತೆ.” 

Kannada Romantic love quotes – ಲವ್ ಸಂದೇಶಗಳು

“ ನನ್ನ ಜೀವನದಲ್ಲಿ ಆ ದೇವರು ನನಗೆ ಕೊಟ್ಟ ದೊಡ್ಡ ವರ, ಅದು ನಿನ್ನ ಜೊತೆ ಪರಿಚಯ, ನನಗೆ ಕೊಟ್ಟ ಅದೃಷ್ಟ ನಿನ್ನ ಪ್ರೀತಿ..” 

Kannada Romantic love quotes – ಲವ್ ಸಂದೇಶಗಳು

“ ಅಹಂಕಾರದಿಂದ ಪ್ರೀತಿಸುವವ ತನ್ನ ಶ್ರೀಮಂತಿಕೆಯನ್ನು ಖರ್ಚು ಮಾಡುತ್ತಾನೆ, ಆದರೆ ಹೃದಯದಿಂದ ಪ್ರೀತಿಸುವವ ತನ್ನ ಸರ್ವಸ್ವವನ್ನು ಅರ್ಪಿಸುತ್ತಾನೆ…” 

Kannada Romantic love quotes – ಲವ್ ಸಂದೇಶಗಳು

“ ಪ್ರೀತಿ ಎಂದರೆ ಒಂದು ಹೆಣ್ಣಿನ ಮೇಲಿನ ಆಕರ್ಷಣೆ ಅಲ್ಲ, ಅವಳ ಸೌಂದರ್ಯ ನೋಡಿ ಉಕ್ಕಿ ಬರುವ ಭಾವನೆಗಳೂ ಅಲ್ಲ, ಅವಳ ಅಂತಸ್ತನ್ನು ನೋಡಿ ಅಳೆಯುವುದು ಅಲ್ಲ, ಅವಳ ಅಂಗಾಂಗಗಳನ್ನು ಪ್ರೀತಿಸುವುದು ಅಲ್ಲ..!!! ಎಂತಹ ಕ್ಷಣವೇ ಇರಲಿ ಸುಖವೇ ಇರಲಿ ನಂಬಿ ಬಂದವಳನ್ನು ಅವಳ ಸೌಂದರ್ಯ ಮಾಸಿದರೂ, ಹಣ ಕರಗಿದರೂ, ವಯಸ್ಸು ಏರಿದಾಗಳು ಕಣ್ಣ ರೆಪ್ಪೆಯಂತೆ ಕಾಪಾಡಿಕೊಂಡು ಹೋಗುವುದೇ ನಿಜವಾದ ಪ್ರೀತಿ.” 

Kannada Romantic love quotes – ಲವ್ ಸಂದೇಶಗಳು

“ ನಾವಿಬ್ಬರು ಖುಷಿಯಾಗಿರಲು ಒಳ್ಳೆಯ ಸಮಯವು ಏತಕೆ ಬೇಕು, ನಮ್ಮಿಬ್ಬರಲ್ಲೂ ಪ್ರೀತಿ ಜೀವಂತವಾಗಿದ್ದರೆ ಸಾಕು…” 

Kannada Romantic love quotes – ಲವ್ ಸಂದೇಶಗಳು

“ ಪ್ರೀತಿಗೆ ಪಾತ್ರನಾಗುವುದಕ್ಕಿಂತ ನಂಬಿಕೆಗೆ ಪಾತ್ರನಾಗು, ನಂಬಿಕೆ ಇದ್ದಲ್ಲಿ ಪ್ರೀತಿ ತಾನಾಗಿಯೇ ಬರುತ್ತದೆ..” 

Kannada Romantic love quotes – ಲವ್ ಸಂದೇಶಗಳು

“ ಬಂಗಾರ ಅಂತ ಎಲ್ಲರನ್ನು ಕರಿಯೋಕೆ ಆಗಲ್ಲ, ನಾವು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸೋರನ್ನ ಮಾತ್ರ ಆ ರೀತಿ ಕರಿಯಲು ಸಾಧ್ಯ…” 

Kannada Romantic love quotes – ಲವ್ ಸಂದೇಶಗಳು

“ ನನ್ನ ಪ್ರೀತಿಯನ್ನು ಎಂದಿಗೂ ಅನುಮಾನಿಸಬೇಡ ನನ್ನ ಪ್ರೀತಿಯು ಮೋಹದ ಮಾಯೆಯಲ್ಲ, ನಿನ್ನ ನಂಬಿಕೆಯ ಛಾಯೆ….” 

One side Love quotes words in Kannada

“ಈ ಜಗತ್ತಿನಲ್ಲಿ ಅತ್ಯಂತ ಸುಂದರವಾದ ಜಾಗ ಅಂದ್ರೆ “ಹೃದಯ “, ಯಾಕಂದ್ರೆ ಅದನ್ನು ಯಾರು ನೋಡಕಾಗಲ್ಲ ಮುಟ್ಟೋಕಾಗಲ್ಲ.. ಆದರೆ ಅಲ್ಲಿ ಇಷ್ಟ ಆದೋರನ್ನು ಯಾವತ್ತೂ ಮರೆಯೋಕಾಗಲ್ಲ..” 

One side Love quotes words in Kannada

“ನೀವು ಪ್ರೀತಿಸಿದವರ ಹೃದಯ ಕಲ್ಲು ಅಂತ ಗೊತ್ತಾದ ಮೇಲೆ ಯಾವತ್ತೂ ಅವರಿಂದ ದೂರ ಆಗ್ಬೇಡಿ, ಯಾಕಂದ್ರೆ ಕಲ್ಲಿನಲ್ಲಿ ಬರೆದ ಹೆಸರು ಯಾವತ್ತೂ ಅಳಿಸಲ್ಲ..” 

One side Love quotes words in Kannada

“ಭಾವನೆಗಳ ಬಚ್ಚಿಡಬೇಡ ಗೆಳತೀ ಬಾಯಿ ಬಿಚ್ಚಿ ಹೇಳಿಬಿಡು, ನಿನ್ನ ಅನಿಸಿಕೆಯ ಒಪ್ಪಿಗೆ ಇದ್ದರೆ ಶುರು ಮಾಡೋಣ ಪ್ರೀತಿ ಎಂಬ ಪ್ರಯಣ ನಂಬಿಕೆ ಎಂಬ ದೋಣಿಯಲ್ಲಿ ..” 

One side Love quotes words in Kannada

“ನೋಡಿದೆ ನಿನ್ನ ಕಣ್ಣ ನೋಟ, ಮನಸ್ಸಿಗೆ ತಿಂದಷ್ಟೇ ಖುಷಿಯಾಯ್ತು ಬಾಡೂಟ..” 

One side Love quotes words in Kannada

“ಪುಸ್ತಕದ ಪುಟಗಳ ನಡುವೆ ಬಚ್ಚಿಟ್ಟ ಹಾಳೆಯ ಒಲವೇ, ಓದಿನಲ್ಲಿ ನಿನ್ನನ್ನೇ ಮರೆತಿರುವೆ ಮೂಡಿರಲು ನಗುವೆಂಬ ಒಡವೆ, ಅದುವೇ ಪ್ರೇಮ ಸಂದೇಶವೇ ಅಲ್ಲವೇ …” 

One side Love quotes words in Kannada

“ನಕ್ಷತ್ರ ಎಷ್ಟೇ ದೂರ ಇದ್ರು ಅದರ ಬೆಳಕು ಕಾಣಿಸುತ್ತದೆ, ಹಾಗೆ ನೀನು ಎಷ್ಟೇ ದೂರ ಇದ್ರು ನಿನ್ನ ನೆನಪು ನನ್ನ ಸದಾ ಕಾಡುತ್ತಿರುತ್ತದೆ !” 

One side Love quotes words in Kannada

“ಪ್ರೀತಿ ಅನ್ನೋದು ಕಣ್ಣಲ್ಲಿ ಹುಟ್ಟಿ ಖಾಲಿಯಾಗೋ ಕಣ್ಣೀರಾಗಬಾರದು, ಮನಸಲ್ಲಿ ಹುಟ್ಟಿ ಮಣ್ಣಾದರು ಮರೆಯಲಾಗದ ನೆನಪಾಗಿರಬೇಕು.” 

One side Love quotes words in Kannada

“ಮರದಲ್ಲಿಯ ಹಣ್ಣು ಹೊಟ್ಟೆಯ ಹಸಿವು ನೀಗಿಸಿದರೆ, ಮನದಲ್ಲಿಯ ಹೆಣ್ಣು ಇನ್ನು ಪ್ರೀತಿಯ ಹಸಿವು ನೀಗಿಸುತ್ತಾಳೆ..”

One side Love quotes words in Kannada

“ಕಣ್ಣಂಚಿನ ಕುಡಿನೋಟಕ್ಕೆ ಕಳೆದಿಹುದು ಈ ಹೃದಯ, ನೋಡದಿರು ತಿರುಗಿ ಹಾಗೆ ನನ್ನ ಕಳೆದಿರುವ ಹೃದಯ ಮತ್ತೆ ಕಳೆಯನು ನಾನು”.

One side Love quotes words in Kannada

“ ನಿನ್ನ ಹಣೆಗೆ ಸಿಂಧೂರವಿಡುವ ಅವಕಾಶ ನನಗೆ ಕೊಡುವುದಾದರೆ, ಈ ನನ್ನ ಒಂಟಿತನದ ಬದುಕಿಗೆ ನಾನಿಡುವ ಪೂರ್ಣವಿರಾಮವೇ ನಿನ್ನ ಹಣೆಯ ಸಿಂಧೂರವಾಗಲು ಬಯಸುವೆ..” 

Romantic Love quotes in Kannada with images

 
“ಜೀವನ್ colorful ಅದರಲ್ಲಿ ಲವ್ವೆ powerfull…..” 

Romantic Love quotes in Kannada with images

“ಹೂವಿನಂತ ನಿನ್ನ ಕೆನ್ನೆಯ ಮೇಲೆ ಜೇನು ತಂದಿಟ್ಟ ಮಧುರ ಹನಿಯಂತೆ ತುಂಬಿ ತುಳುಕುತ್ತಿದೆ ನಾಚಿಕೆಯ ರಂಗು…” 

Romantic Love quotes in Kannada with images

“ಈ ಹೃದಯದ ಕನ್ನಡಿಯೊಳಿಗಿನ ಪ್ರತಿಬಿಂಬ ನಿನ್ನದಾದ ಮೇಲೆ ಪ್ರತಿ ಎದೆ ಬಡಿತವು ನಿನ್ನ ಹೆಸರೇ ಕೂಗಿದಂತೆ..” 

Romantic Love quotes in Kannada with images

“Lover ಅಂತ ಒಬ್ಬಳು ಇರೋದಕ್ಕೂ girlfriend’s ಅಂತ ಸಾವಿರ ಜನ ಇರೋದಕ್ಕೂ ತುಂಬಾನೇ ವ್ಯತ್ಯಾಸ ಇದೆ..” 

Romantic Love quotes in Kannada with images

“ಸೋಲುವುದಾದರೆ ಯಾರ ಪ್ರೀತಿಗೆ ಸೋಲಬೇಕು ಎಂಬುದನ್ನು ತಿಳಿ, ಗೆಲ್ಲುವುದಾದರೆ ಯಾರ ಪ್ರೀತಿಯನ್ನು ಗೆಲ್ಲಬೇಕು ಎಂಬುದನ್ನು ಕಲಿ..” 

Romantic Love quotes in Kannada with images

“ದುಡ್ಡಿಂದ ಹುಡುಗಿನ maintain ಮಾಡೋದಲ್ಲ ಪ್ರೀತಿ, ಪ್ರೀತಿಯಿಂದ ಹುಡುಗಿನ maintain ಮಾಡೋದೇ ನಿಜವಾದ ಪ್ರೀತಿ..” 

Romantic Love quotes in Kannada with images

“ಪ್ರೀತಿ ಅನ್ನುವುದು ಜೀವನದ ಪುಟ ಮಾತ್ರ, ಸಂಬಂಧಗಳು ಅನ್ನುವುದು ಪೂರ್ತಿ ಪುಸ್ತಕ, ದಯವಿಟ್ಟು ಒಂದು ಪುಟಕ್ಕೋಸ್ಕರ ಪೂರ್ತಿ ಪುಸ್ತಕವನ್ನು ಕಳೆದುಕೊಳ್ಳಬೇಡಿ..”

Romantic Love quotes in Kannada with images

“ನಿಜವಾದ ಪ್ರೀತಿ ಎಂದಿಗೂ ಸಾಯುವುದಿಲ್ಲ, ಅದು ಸಮಯ ಕಳೆದಂತೆ ಗಟ್ಟಿಯಾಗಿ ಬೆಳೆಯುತ್ತದೆ ವಿನಃ ಹೂವಿನಂತೆ ಬಾಡುವುದಿಲ್ಲ.” 

Romantic Love quotes in Kannada with images

“ಸಾಲವಾಗಿ ಒಂದು ಮುತ್ತು ಕೊಟ್ಟು ಬಿಡು, ಅಸಲು ಕೊಡೊವರೆಗೂ ಬಡ್ಡಿ ಮಾತ್ರ ಸದಾ ಕಟ್ತಾ ಇರ್ತೀನಿ..” 

Romantic Love quotes in Kannada with images

“ಸಿಹಿಗನಸೊಂದು ಶುರುವಾಗಿದೆ ನಿನ್ನ ಕಣ್ಣೋಟದಿಂದ, ಪ್ರೀತಿಯು ಹೆಚ್ಚಾಗಿದೆ ನನ್ನ ಹೃದಯದ ಮಿಡಿತದಿಂದ….” 

Best Love quotes in Kannada for her

“ಪ್ರೀತಿಸುವುದಾದರೆ ಜೀವನದುದ್ದಕ್ಕೂ ಮುನ್ನಡೆಸುವಂತರನ್ನು ಪ್ರೀತಿಸು ಆಗ ನಿನ್ನ ಪ್ರೀತಿಗೆ ಕೀರ್ತಿ ಸಿಗುವುದು”.

Best Love quotes in Kannada for her

“ಕಿರಿದಾದ ದಾರಿಯಲ್ಲಿ ಬೆಳಕ ತೋರುವ ಕಿರುದೀಪ ನೀನು, ನೀ ತೋರಿದ ದಾರಿಯಲ್ಲಿ ಮುನ್ನಡೆವ ನಿನ್ನ ನೆರಳೆ ನಾನು”.. 

Best Love quotes in Kannada for her

“ಪ್ರೀತಿ ಎಲ್ಲರಿಗೂ ಸಿಗಲ್ಲ, ಸಿಗೋಕು ಯೋಗ ಬೇಕು, ಸಿಕ್ಕಿದ ಮೇಲೆ ಉಳಿಸಿಕೊಳ್ಳೋಕೆ ಯೋಗ್ಯತೆ ಇರಬೇಕು..” 

Best Love quotes in Kannada for her

“ಪ್ರೀತಿ ಅಂದ್ರೆ ಒಮ್ಮೆ ಜಗಳ ಆಡಿ ದೂರ ಆಗೋದಲ್ಲ, ಪ್ರತಿ ದಿನ ಜಗಳ ಮಾಡುತ್ತ ಜೊತೆಗಿರುವುದು….”

Best Love quotes in Kannada for her

“ನಿನ್ನ ಪ್ರೀತಿಸಲು ಕಲಿತ ಈ ಹೃದಯ, ನಿನ್ನ ಮರೆಯುವ ಕನಸನ್ನು ಏಕೆ ಕಾಣಲಿಲ್ಲ, ಏಕೆಂದರೆ ನನಸಾಗದ ಕನಸಿಗೆ ಹಗಲಲ್ಲೂ ಕನಸು ಕಾಣುತ್ತಿರುವ ಪೆದ್ದ ನಾನು..” 

Best Love quotes in Kannada for her

“ಕನಸಿನ ಲೋಕದ ಸ್ವಪ್ನ ಸುಂದರಿ ಹೊಸದಾದ ಭಾವನೆ ಗೀಚಲು ಹೊರಟಿರುವೆ, ಪ್ರೀತಿಯ ಮುನ್ನುಡಿ ..ಮನಸನ್ನೇ ಮರೆಸುವ ಒಲವಿನ ಭಾವನೆ ಅರಿಯದೆ ಸೋತ ಈ ಪ್ರೀತಿಗೆ, ಕಾರಣ ನೀನೇ ..” 

Best Love quotes in Kannada for her

 “ಮನಸ್ಸೆಂಬ ಮಂದಿರದಲ್ಲಿ ನೀನೆ ನನ್ನ ಆಗಾಗ ಕಾಯುತ್ತಿರುವ ಭಕ್ತೆ ..” 

Best Love quotes in Kannada for her

 “ನೋಡುತ ಕುಳಿತಿರುವೆ ನಿನ್ನನ್ನೇ ಹೇಗೆ ತಿಳಿಸಲಿ ನನ್ನ ಮನಸಿನ ಭಾವನೆ ನಿನಗೆ ಹೇಳಲು ಬರೆದಿರುವ ಸಾಲು ಸಾಲುಗಳ ಕವಿತೆಗಳನ್ನೇ, ನೀನು ಎದುರು ಬಂದಾಗ ಮರೆತು ಹೋದೆ ನಾ ನನ್ನನ್ನೇ..” 

Best Love quotes in Kannada for her

“ಪ್ರೀತಿ ಎಂದರೆ ಭಾವನೆಗಳ ಸಂತೆ , ಇಲ್ಲಿ ಹೆಚ್ಚು ಕಮ್ಮಿ ಆದರೆ ನೀನಿದ್ದು ಕೂಡ ಸತ್ತಂತೆ…”

Best Love quotes in Kannada for her

“ಕಣ್ಣಿಂದ ನೋಡಿ ಇಷ್ಟಪಟ್ಟಿಲ್ಲ ನಿನ್ನ ಮನಸ್ಸಿನಿಂದ ನೋಡಿ ಇಷ್ಟಪಟ್ಟಿದ್ದು ಅದಕ್ಕೆ ಮರೆಯಲಾಗುತ್ತಿಲ್ಲ..” 

Love status quotes in Kannada for him

“ನಮ್ಮನ್ನ ಪ್ರೀತಿ ಮಾಡುವವರು ಬೈದ್ರು ಏನೂ ಆಗೊಲ್ಲ, ಕಷ್ಟ ಕೊಟ್ಟರು ಏನೂ ಅನ್ನಿಸಲ್ಲ ,ಆದರೆ ಮಾತಾಡದೆ ಮೌನವಾದಾಗ ಸತ್ತು ಹೋದಂತೆ ಆಗುತ್ತದೆ..” 

Love status quotes in Kannada for him

“ನನ್ನ ಹೃದಯದ ಮೊದಲ ಹಾಗೂ ಕೊನೆಯ ಆಸೆಯೇ ನಿನ್ನ ಪ್ರೀತಿ, ನಡೆದುಕೊಳ್ಳಬೇಡ ಹೃದಯಕ್ಕೆ ಅಘಾತವಾಗುವ ರೀತಿ…” 

Love status quotes in Kannada for him

“ಕುಳ್ಳಗಿರುವ ಹುಡುಗಿಯರಿಗೆ ತಾಳ್ಮೆ ಜಾಸ್ತಿ, ಎತ್ತರವಿರುವ ಹುಡುಗರಿಗೆ ಕೋಪ ಜಾಸ್ತಿ, ಅವರಿಬ್ಬರೂ ಜೋಡಿಯಾದರೆ ಪ್ರೀತಿ ತುಂಬಾನೇ ಜಾಸ್ತಿ..” 

Love status quotes in Kannada for him

“ಕಾಣದ ನಂಬಿಕೆ ಆಗುವೆ ನಾ ಆದರೆ ಮೋಸದ ದಾಳವಾಗದಿರು ನೀ..” 

Love status quotes in Kannada for him

“ಬಯಸಿದೆ ನಾ ನಿನ್ನನು ಬದಲಾಯಿಸಿದೆ ನೀ ನನ್ನನು ನೀ ಹೇಳಿದೆ ಮಾತೊಂದನು ನಾ ನಾದೆ ನಿನ್ನವನು..” 

Love status quotes in Kannada for him

“ಪದಗಳೆ ಸಾಲಾದು ಮನದಲ್ಲಿನ ಭಾವನೆಯ ತಿಳಿಸಲು..” 

Love status quotes in Kannada for him

“ಕಷ್ಟ ಸುಖವನ್ನು ನೋಡಿ ಸವಾರಿ ಮಾಡುವ ಪ್ರೀತಿಗಿಂತ, ನನ್ನ ನಿನ್ನ ನಂಬಿಕೆಗೆ ಅಭಾರಿಯಾಗಿರುವ ಪ್ರೀತಿಯೇ ನಮ್ಮ ಭಾವನೆಯ ರೂವಾರಿ..” 

Love status quotes in Kannada for him

“ಪ್ರೀತಿಯನ್ನು ದಾನ ಮಾಡಬೇಕೇ ಹೊರತು, ಬೇಡಬಾರದು..” 

Love status quotes in Kannada for him

“ಹೃದಯದಲ್ಲಿ ನೀ ಬರೆದ ಬರವಣಿಗೆ ಮಾಡುತ್ತಿದೆ ನಮ್ಮ ಪ್ರೀತಿಯ ಮೆರವಣಿಗೆ..” 

Love status quotes in Kannada for him

“ನಿನ್ನ ಮೇಲೆ ಪ್ರೀತಿ ಶುರುವಾದ ಕ್ಷಣದಿಂದ ನೋವೆಲ್ಲವು ಮಾಯವಾಯ್ತು ನನ್ನಿಂದ..” 

New love quotes in Kannada for girlfriend

 “ಹೃದಯದಲ್ಲಿ ಲಗ್ಗೆ ಇಟ್ಟವಳು ನೀನು.. ಕಣ್ಣೋಟದಿಂದಲೇ ಹೃದಯದಲ್ಲಿ ಲಗ್ಗೋರಿ ಆಡಿದವಳು ನೀನು..” 

New love quotes in Kannada for girlfriend

“ಮರೆತರು ಮರೆಯಲಾಗದು ನಿನ್ನ.. ನಿನ್ನ ನೆನಪಿನಲ್ಲಿಯೆ ನಡೆಸುವೆನು ಬಾಳ ಪಯಣ”.

New love quotes in Kannada for girlfriend

“ನೀ ಜೊತೆಗಿರಲು ಮನಕೆ.. ನಿದ್ದೆಗೂ ಇಲ್ಲ ಕನವರಿಕೆ, ಇರುವುದೊಂದೇ ಕೋರಿಕೆ..! ನಿನ್ನ ಜೊತೆಗಿರುವ ಬಯಕೆ”.

New love quotes in Kannada for girlfriend

“ನಕ್ಷತ್ರಗಳು ರಾತ್ರಿಯ ಕಾಲುದಾರಿಯಲಿ ಪಯಣಿಸುತ್ತಿವೆ, ನಾನು ನನ್ನವಳ ನೆನಪಿನಲ್ಲಿ ನಿದ್ರಿಸುವ ಹಾಗೆ” 

New love quotes in Kannada for girlfriend

 “ಗಾಳಿಯು ಹೂದೋಟದಲ್ಲಿ ತಂಪು ಸೂಸುತ್ತಿದೆ, ನನ್ನವಳು ನನ್ನ ನೆನಪಿನಲ್ಲಿ ಕಂಪು ಸೂಸುವ ಹಾಗೆ” 

New love quotes in Kannada for girlfriend

“ಆಕಾಶವು ಭೂಮಿಗೆ ಮಳೆ ಹರಿಸುತ್ತಿದೆ, ನಾನು ನನ್ನವಳಿಗೆ ಪ್ರೀತಿ ಹರಿಸಿದ ಹಾಗೆ..” 

New love quotes in Kannada for girlfriend

“ಹೂವುಗಳು ದೇವರ ಮೂರ್ತಿಗಳ ಮುಡಿಗೆರಿವೆ, ಕನಸಿನಲ್ಲಿ ನಾನು ನನ್ನವಳ ಮಡಿಲೇರಿದ ಹಾಗೆ..” 

New love quotes in Kannada for girlfriend

“ನವಿಲು ಗೋಳಿಡುತ್ತಿಹುದು ನನ್ನಲ್ಲಿ, ಅನುಮತಿಸು ಗರಿ ಬಿಚ್ಚಿ ಕುಣಿಯುವಾಸೆ, ಇವಳಂದ ನೋಡಿ ಎಂದು..” 

New love quotes in Kannada for girlfriend

“ಹಂಸವು ಕಣ್ಣಿರಿಡುತ್ತಿಹುದು ನನ್ನ ಬಳಿ ಬಂದು, ಕರುಣಿಸು ಎನಗೆ ಅವಳ ಜೊತೆ ನಡೆಯುವೆನೆಂದು..” 

New love quotes in Kannada for girlfriend

“ಬೋರ್ಗರೆಯುವ ಮಳೆಯು ಇಳೆಗೆ ತಂಪು, ಮಳೆಯಲ್ಲಿ ಅವಳ ಜೊತೆಗಿನ ನಡಿಗೆ ಈ ಇನಿಯನಿಗೆ ತಂಪು..”

ಪ್ರೀತಿ ಎಂಬುದು ನಮ್ಮ ಜೀವನದ ಅತ್ಯಂತ ಶ್ರೇಷ್ಠ ಮತ್ತು ದೈವಿಕ ಅನುಭವ. ಪ್ರೀತಿಯ ತೀವ್ರತೆಯನ್ನು ವ್ಯಕ್ತಪಡಿಸಲು, ಭಾವನೆಗಳನ್ನು ಹಂಚಿಕೊಳ್ಳಲು, ಮತ್ತು ಸಂಬಂಧವನ್ನು ಗಾಢಗೊಳಿಸಲು ಕ್ವೋಟ್ಸ್ ಅತ್ಯುತ್ತಮ ಸಾಧನವಾಗಿದೆ. ಪ್ರೀತಿಯ ಬಗ್ಗೆ ಸೊಗಸಾದ ಶಬ್ದಗಳಲ್ಲಿ ಹೇಳುವುದಕ್ಕೆ “ರೋಮ್ಯಾಂಟಿಕ್ ಲವ್ ಕ್ವೋಟ್ಸ್” ಹೃದಯಸ್ಪರ್ಶಿ ಮಾರ್ಗವಾಗಿದೆ.

ಕನ್ನಡದಲ್ಲಿ ಪ್ರೀತಿಯ ಕ್ವೋಟ್ಸ್ ಕೇವಲ ಭಾಷೆಯ ಸೌಂದರ್ಯವನ್ನು ಮಾತ್ರವಲ್ಲ, ಸಂಭ್ರಮವನ್ನು, ನಂಬಿಕೆಯನ್ನು, ಮತ್ತು ಪ್ರೀತಿಯ ಪಾವಿತ್ರ್ಯವನ್ನು ವ್ಯಕ್ತಪಡಿಸುತ್ತವೆ.

ಈ ಕ್ವೋಟ್ಸ್ ನಿಮ್ಮ ಪ್ರೀತಿಯ ಸಂಗಾತಿಗೆ, ನಿಮ್ಮ ಹೃದಯದ ಮಾತುಗಳನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತವೆ. ಪ್ರೀತಿಯ ಸಂದೇಶವನ್ನು ಸರಳ ಶಬ್ದಗಳಲ್ಲಿ ಇಟ್ಟರೂ. ಅದರ ತೀಕ್ಷ್ಣತೆಯು ಜೀವನದ ಅರ್ಥವನ್ನು ಹೆಚ್ಚಿಸುತ್ತದೆ. ಪ್ರೀತಿ ಎಂದರೆ ಕೇವಲ ಆಕರ್ಷಣೆ ಅಲ್ಲ, ಅದು ಎರಡು ಹೃದಯಗಳ ಹತ್ತಿರವಾದ ಬಾಂಧವ್ಯ. ಪ್ರೀತಿಯ ಕ್ವೋಟ್ಸ್ ಅವು ನಿಮ್ಮ ಸಂಬಂಧಕ್ಕೆ ಹೊಸ ಉಸಿರು ತುಂಬುವಂತೆ ಮಾಡುತ್ತವೆ.

ಕೆಲವು ಬಾರಿ ಶಬ್ದಗಳು ಮಾಡಬಹುದಾದ ಮಾಯಾಜಾಲವನ್ನು, ದೊಡ್ಡ ಕಾರ್ಯಗಳಿಂದ ಸಾಧಿಸಲಾಗುವುದಿಲ್ಲ. ಕನ್ನಡದ ರೋಮ್ಯಾಂಟಿಕ್ ಲವ್ ಕ್ವೋಟ್ಸ್ ಆ ಶಬ್ದಗಳನ್ನು ಜೀವಂತಗೊಳಿಸುವ ಶಕ್ತಿ ಹೊಂದಿವೆ. ನಿಮ್ಮ ಪ್ರೀತಿಯ ಸಂಬಂಧವನ್ನು ಗಾಢಗೊಳಿಸಲು, ಪ್ರೀತಿಯ ಶ್ರೇಷ್ಠತೆಯನ್ನು ಮೆಚ್ಚಿಕೊಳ್ಳಲು, ಮತ್ತು ಹೊಸ ಕನಸುಗಳನ್ನು ಕಟ್ಟಲು ಈ ಕ್ವೋಟ್ಸ್ ಪ್ರೇರಣೆ ನೀಡುತ್ತವೆ.

ಪ್ರೀತಿಯ ಪ್ರತೀ ಕ್ಷಣವನ್ನು ಸಿಹಿಯಾದ ಸ್ಮೃತಿಯಾಗಿ ಬದಲಾಯಿಸಲು, ಈ ಕ್ವೋಟ್ಸ್ ಅತ್ಯುತ್ತಮ ಆಯ್ಕೆಯಾಗುತ್ತವೆ.bನಮ್ಮ ಪ್ರೀತಿಯ ಪಯಣವನ್ನು ಸಾರ್ಥಕಗೊಳಿಸಲು, ಕನ್ನಡದ ಲವ್ ಕ್ವೋಟ್ಸ್‌ಗಳು ಅನನ್ಯ ಪಾತ್ರವಹಿಸುತ್ತವೆ. ಅವು ಕೇವಲ ಭಾವನೆಗಳನ್ನು ಮಾತ್ರವಲ್ಲ, ಮನಸ್ಸು ಮತ್ತು ಹೃದಯವನ್ನು ಹತ್ತಿರ ಮಾಡುತ್ತವೆ. ಪ್ರೀತಿಯ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಅಳಿಯದ ನೆನಪುಗಳನ್ನು ರಚಿಸಲು ಈ ಕ್ವೋಟ್ಸ್‌ಗಳ ಮಹತ್ವ ಅಪ್ರತಿಮ.

200+ Kannada Quotes | Life, Love, Jeevana, Motivational, Sad

250+ Kannada Love Quotes: : Romantic, Cute, Funny & Sad

50+ Inspiration Quotes in Kannada

Related Articles