Home » ಮಕ್ಕಳ ಜೀವನದ ಮಹತ್ವ ಮತ್ತು ಬೆಳವಣಿಗೆ – ಎಲ್ಲಾ ತಂದೆ ತಾಯಿ ಮತ್ತು ಪೋಷಕರಿಗೆ ಉಪಯುಕ್ತ ಮಾಹಿತಿ

ಮಕ್ಕಳ ಜೀವನದ ಮಹತ್ವ ಮತ್ತು ಬೆಳವಣಿಗೆ – ಎಲ್ಲಾ ತಂದೆ ತಾಯಿ ಮತ್ತು ಪೋಷಕರಿಗೆ ಉಪಯುಕ್ತ ಮಾಹಿತಿ

by Praveen Mattimani
what-is-the-role-of-parents in their childrens education in kannada

ಮಕ್ಕಳು ಎಂದರೆ ನಮ್ಮ ಜೀವನದ ಸಂತೋಷದ ಕಣಗಳು. ಅವರು ನಮ್ಮ ಭವಿಷ್ಯ, ನಮ್ಮ ಕನಸುಗಳ ಪ್ರತಿಬಿಂಬ. ಮಕ್ಕಳ ಬೆಳವಣಿಗೆ, ಶಿಕ್ಷಣ (Kids Education), ಆರೋಗ್ಯ, ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವುದು ಪೋಷಕರ ಪ್ರಮುಖ ಜವಾಬ್ದಾರಿ. ಈ ಬ್ಲಾಗ್‌ಪೋಸ್ಟ್‌ನಲ್ಲಿ, ಮಕ್ಕಳ ಸಂಪೂರ್ಣ ಆರೋಗ್ಯಕರ ಬೆಳವಣಿಗೆಯನ್ನು ಖಾತ್ರಿಪಡಿಸಲು, ಪ್ರಾರಂಭದ ವರ್ಷಗಳಿಂದಲೇ ಯಾವ ರೀತಿಯ ಕಾಳಜಿಯನ್ನು ವಹಿಸಬೇಕೆಂಬುದರ ಬಗ್ಗೆ ವಿವರಿಸುತ್ತೇವೆ.

ಸೇರ್ಪಡೆ ಮತ್ತು ಪ್ರಾಥಮಿಕ ಶಿಕ್ಷಣ (Kids Education), ಮಕ್ಕಳ ಮನೋವಿಕಾಸ, ಆಹಾರ ತತ್ವಗಳು, ಮತ್ತು ದಿನನಿತ್ಯದ ಆರೋಗ್ಯಕರ ಕ್ರಿಯೆಗಳು ಸೇರಿದಂತೆ ಎಲ್ಲದರ ಬಗ್ಗೆ ಕನ್ನಡದಲ್ಲಿ ಸರಳವಾಗಿ ತಿಳಿದುಕೊಳ್ಳಿ. ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುವುದು ಅವರ ಭವಿಷ್ಯವನ್ನು ಬೆಸೆಯುವಲ್ಲಿ ಮುಖ್ಯ.

ಮಕ್ಕಳನ್ನು ನವಿರಾಗಿ ಮತ್ತು ಸುರಕ್ಷಿತವಾಗಿ ಬೆಳೆಸಲು ಸೂಕ್ತ ಸಲಹೆಗಳು, ಆರೋಗ್ಯಕರ ಆಹಾರ ನಿಯಮಗಳು, ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುವ ತಂತ್ರಗಳು, ಮತ್ತು ದೈನಂದಿನ ಜೀವನದಲ್ಲಿ ಅವರಿಗೆ ಕೌಶಲ್ಯಗಳನ್ನು ಕಲಿಸುವ ಪಾಠಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ನಿಮ್ಮ ಮಕ್ಕಳು ಸ್ವಸ್ಥ, ಹರ್ಷಿತ ಮತ್ತು ಯಶಸ್ವಿಯಾಗಿ ಬೆಳೆಯಲು ಈ ಬ್ಲಾಗ್‌ನಲ್ಲಿ ನೀಡಲಾದ ಮಾಹಿತಿಗಳು ಅನುಸರಿಸಬಹುದು.

ಮಕ್ಕಳಲ್ಲಿ ಜ್ವರ ಕಂಡುಬಂದಲ್ಲಿ ಹೀಗೆ ಮಾಡಿ:

  • ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ, ಆಗಾಗ ದ್ರವ ಪದಾರ್ಥಗಳ ಆಹಾರ ನೀಡುತ್ತಿರಿ.
  • ಉತ್ತಮ ಗುಣಮಟ್ಟದ ಆಹಾರ ನೀಡಿ.
  • ಬಿಸಿ ನೀರನ್ನು ಕುಡಿಯಲು ಆಗಾಗ ನೀಡುತ್ತಿರಿ.
  • ಬೆಚ್ಚಗಿನ ಬಟ್ಟೆಯನ್ನು ತೊಡಿಸಿ.
  • ಶೀತಜ್ವರ 2 ದಿನದಲ್ಲಿ ಕಮ್ಮಿ ಆಗದಿದ್ದರೆ ವೈದ್ಯರನ್ನು ಸಂಪರ್ಕಿಸಿ.
  • ಮಕ್ಕಳಿಗೆ ಮಾಸ್ಕ್, ಸ್ಯಾನಿಟೈಸರ್ ಬಳಕೆ ಬಗ್ಗೆ ತಿಳಿಸಿಕೊಡಿ.

ಮಗುವಿನ ತೂಕ ಹೆಚ್ಚಿಸಲು ಈ ಆಹಾರ ನೀಡಿ:

  • ಬಾಳೆಹಣ್ಣು ತಿನ್ನುವುದರಿಂದ ಮಕ್ಕಳ ತೂಕ ಹೆಚ್ಚಾಗುತ್ತದೆ.
  • ಖರ್ಜೂರ ತೂಕವನ್ನು ಹೆಚ್ಚಿಸುವುದರ ಜೊತೆಗೆ ಹೊಟ್ಟೆಯನ್ನು ಸ್ವಚ್ಛವಾಗಿಡುತ್ತದೆ.
  • ಅಶ್ವಗಂಧವು ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.
  • ರಾಗಿ ಗಂಜಿ ಕುಡಿಸುವುದರಿಂದ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಉತ್ತಮವಾಗಿದೆ.

ಮಕ್ಕಳ ಬುದ್ಧಿ ಶಕ್ತಿ ಹೆಚ್ಚಿಸಲು (Kids Education):

  • ಮಕ್ಕಳಿಗೆ ಪ್ರತಿದಿನ ಒಂದು ಮೊಟ್ಟೆ ನೀಡಿ. ಅದರಲ್ಲಿರುವ ಕೋಲೀನ್ ಮೆಮೊರಿಯನ್ನು ಹೆಚ್ಚಿಸುತ್ತದೆ.
  • ಸಾಲ್ಮನ್, ಮ್ಯಾಕೆರೆಲ್, ಟ್ಯೂನ್, ಸಾರ್ಡಿನ್ ಮತ್ತು ಟ್ರೇಟ್ ನಂತಹ ಮೀನುಗಳನ್ನು ವಾರಕ್ಕೊಮ್ಮೆಯಾದರೂ ಮಕ್ಕಳಿಗೆ ನೀಡಬೇಕು.
  • ಓಟ್‌ನಲ್ಲಿರುವ ಫೈಬರ್ ಜೊತೆಗೆ, ವಿಟಮಿನ್-ಇ ಮತ್ತು ಸತುವುಗಳಂತಹ ಪೋಷಕಾಂಶಗಳು ಮೆದುಳಿನ ಕಾರ್ಯವನ್ನು ಹೆಚ್ಚಿಸುತ್ತವೆ.
  • ಟೊಮೆಟೊ, ಆಲೂಗಡ್ಡೆ, ಕ್ಯಾರೆಟ್ ಹೆಚ್ಚು ನೀಡಬೇಕು.

ಮಕ್ಕಳ ಎದುರು ಈ ವರ್ತನೆ ತೋರಬೇಡಿ:

ಮಕ್ಕಳು ಶಾಲೆಯಲ್ಲಿ ವಿದ್ಯೆ, ಬುದ್ಧಿ ಕಲಿತರೂ ಕೂಡ ಮನೆಯಲ್ಲಿ ತಂದೆ-ತಾಯಿಯ ವರ್ತನೆಯನ್ನು ನೋಡಿಯೇ ಜೀವನ ಪಾಠ ಕಲಿಯುತ್ತಾರೆ. ಹಾಗಾಗಿಯೇ ಮಕ್ಕಳ ಎದುರು ಪೋಷಕರು ಪ್ರೀತಿಯಿಂದ, ಸಮಚಿತ್ತದಿಂದ ವರ್ತಿಸಿ. ಪತಿ-ಪತ್ನಿ ನಡುವೆ ಎಷ್ಟೇ ಮನಸ್ತಾಪಗಳಿದ್ದರೂ ಮಕ್ಕಳು ಎದುರಿರುವಾಗ ಚೆನ್ನಾಗಿಯೇ ಇರಿ. ಇದರ ಅರ್ಥ ಜಗಳ ಆಡಬೇಡಿ. ಏಕೆಂದರೆ ಅವರ ದೃಷ್ಟಿಯಲ್ಲಿ ನೀವು ಸಣ್ಣವರಾಗುತ್ತೀರಿ. ಅಲ್ಲದೆ ಮಕ್ಕಳು ಮಾನಸಿಕವಾಗಿ ಖಿನ್ನತೆಗೆ ಒಳಗಾಗುವ ಜೊತೆಗೆ ನಿಮ್ಮಂತೆಯೇ ಅಸಭ್ಯ ಪದಗಳನ್ನೂ ರೂಢಿಸಿಕೊಳ್ಳುತ್ತಾರೆ.

ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಮಾರ್ಗ:

  • ಮಕ್ಕಳಿಗೆ ಪ್ರೋಟೀನ್‌ಯುಕ್ತ ಆಹಾರ ನೀಡಿ.
  • ಆರೋಗ್ಯಕರ ಬಾಳೆಹಣ್ಣುಗಳು, ಮೊಟ್ಟೆ ಮತ್ತು ಹಾಲು ನೀಡಿ.
  • ಮನೆಯಲ್ಲಿ ತಯಾರಿಸಿದ ಆಹಾರವನ್ನೇ ತಿನ್ನಿಸುವುದು ಉತ್ತಮ.
  • ಮಕ್ಕಳಿಗೆ ಜಂಕ್ ಫುಡ್ ಮತ್ತು ಪ್ಯಾಕೆಟ್ ಫುಡ್ ಹೆಚ್ಚಾಗಿ ನೀಡಬೇಡಿ.
  • ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಿದ್ರೆ ಮುಖ್ಯವಾಗಿದೆ.
  • ಮಕ್ಕಳು ಕನಿಷ್ಠ 8 ಗಂಟೆ ನಿದ್ದೆ ಮಾಡುವಂತಹ ವಾತಾವರಣ ಕಲ್ಪಿಸಿ.

ನಿಮ್ಮಂತೆ ನಿಮ್ಮ ಮಕ್ಕಳು:

ನಿಮ್ಮ ಇಷ್ಟಗಳನ್ನು ನಿಮ್ಮ ಮಕ್ಕಳ ಮೇಲೆ ಬಲವಂತವಾಗಿ ಹೇರಬೇಡಿ. ಅವರ ಸಾಮರ್ಥ್ಯಕ್ಕೆ ಮೀರಿದ ಕೆಲಸಗಳನ್ನು ಮಾಡಲು ಒತ್ತಾಯಿಸದಿರಿ. ಸಣ್ಣಪುಟ್ಟ ಟೆಸ್ಟ್ ಕೊಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿರಿ. ಎಲ್ಲರೊಂದಿಗೂ ಬೆರೆಯುವುದನ್ನು ಕಲಿಸಿ, ತಮ್ಮಲ್ಲಿರುವುದನ್ನು ನಾಲ್ವರೊಂದಿಗೆ ಹಂಚಿಕೊಳ್ಳುವಂತೆ ಹೇಳಿ, ಪುಸ್ತಕ ಓದುವುದು, ತೋಟಗಾರಿಕೆ, ವ್ಯಾಯಾಮದಂತಹ ಹವ್ಯಾಸಗಳನ್ನು ನೀವು ಮೊದಲು ರೂಢಿಸಿಕೊಂಡರೆ, ಆಗ ಮಕ್ಕಳು ನಿಮ್ಮನ್ನು ಅನುಕರಿಸುತ್ತಾರೆ. ನೆನಪಿರಲಿ.. ಅವರಿಗೆ ನೀವೇ ಹೀರೋಗಳು.

ಹೀಗಿರಲಿ ಓದುವ ಕೋಣೆ:

ಓದುವ ಕೋಣೆಯಲ್ಲಿ ಉಷ್ಣತೆ ಹೆಚ್ಚಿದ್ದರೆ ಮಕ್ಕಳ ಕಲಿಕೆಯ ಮೇಲೆ ಪ್ರಭಾವ ಬೀರುತ್ತದೆ. ಅವರ ಏಕಾಗ್ರತೆ ಕಡಿಮೆಯಾಗುತ್ತದೆ ಎಂದು ಹಾರ್ವಡ್್ರ ವಿಜ್ಞಾನಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳ 13 ವರ್ಷಗಳ ಪರೀಕ್ಷಾ ಫಲಿತಾಂಶ ಅಧ್ಯಯನ ಮಾಡಲಾಗಿದ್ದು, ಈ ಅಂಶ ಬೆಳಕಿಗೆ ಬಂದಿದೆ. ಉಷ್ಣತೆ ಇದ್ದಾಗ ವಿಷಯದ ಮೇಲೆ ಮನಸ್ಸು ಕೇಂದ್ರೀಕರಿಸುವುದು ಕಷ್ಟವಾಗುತ್ತದೆ. ಹೆಚ್ಚು ಉಷ್ಣತೆ ಇದ್ದ ವರ್ಷಕ್ಕೆ ಹೋಲಿಸಿದರೆ ಹೆಚ್ಚು ಚಳಿ ಇದ್ದ ವರ್ಷಗಳಲ್ಲಿ ಮಕ್ಕಳ ಅಂಕ ಗಳಿಕೆ ಪ್ರಮಾಣ ಹೆಚ್ಚಿದೆ ಎನ್ನಲಾಗಿದೆ.

ಈ ಅಂಶಗಳನ್ನು ನೆನಪಿನಲ್ಲಿಡಿ:

  • ಮಕ್ಕಳೊಂದಿಗೆ ಅವರ ವಯಸ್ಸಿಗೆ ತಕ್ಕಹಾಗೆ ನಡೆದುಕೊಂಡು, ಜೀವನ ಪಾಠಗಳನ್ನು ಹೇಳಬೇಕು.
  • ಮಕ್ಕಳಿಗೆ ಅಗತ್ಯತೆ ಮತ್ತು ಆಸೆಗಳ ನಡುವಿನ ವ್ಯತ್ಯಾಸವನ್ನು ಅರ್ಥ ಮಾಡಿಸಿ,ಜೀವನ ಮೌಲ್ಯಗಳನ್ನು ಕಲಿಸಿ.
  • ಯಾವಾಗಲೂ ಮಕ್ಕಳ ಪರವಾಗಿಯೇ ಇರಬೇಡಿ. ಮಕ್ಕಳ ತಪ್ಪನ್ನು ಅವರಿಗೆ ಅರ್ಥಮಾಡಿಸಿ.
  • ಮಕ್ಕಳೊಂದಿಗೆ ಸ್ನೇಹಿತರಾಗಿ, ಮಕ್ಕಳನ್ನು ಆದಷ್ಟು ಕ್ರೀಯಾಶೀಲರನ್ನಾಗಿಸಿ.

ಮಕ್ಕಳ ಮಾನಸಿಕ ಆರೋಗ್ಯ ಸರಿ ಇರಲು ಹೀಗಿರಿ:

  • ಮಕ್ಕಳು ಯಾವುದೇ ವಿಚಾರದಲ್ಲಿ ಎಡವಿದರೂ ಬೈಯಬೇಡಿ.
  • ಮಕ್ಕಳ ಸಾಮರ್ಥ್ಯವನ್ನು ಇತರರಿಗೆ ಹೋಲಿಸಿ ಮಾತನಾಡಬೇಡಿ.
  • ಕಲಿಕೆ ವೇಳೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ.
  • ಮಕ್ಕಳ ಎದುರು ಸಾಂಸಾರಿಕ ತಾಪತ್ರಯಗಳನ್ನು ತೋರಿಸಬೇಡಿ.
  • ಮಕ್ಕಳು ಬಯಸಿದ್ದನ್ನು ಕೊಡಿಸಲು ಪ್ರಯತ್ನಿಸಿ.
  • ಭಯಪಡುವಾಗ ಜೊತೆ ಇರುವುದಾಗಿ ಆತ್ಮಸ್ಥೆರ್ಯ ತುಂಬಿ.
  • ಮುಕ್ತ ಮನಸ್ಸಿನಿಂದ ಮಾತನಾಡಲು, ಆಟವಾಡಲು, ಸಹಪಾಠಿಗಳೊಂದಿಗೆ ಸೇರಿ ಕಲಿಯಲು ಬಿಡಿ.

ಸ್ಮಾರ್ಟ್‌ಫೋನ್ ಅಧ್ಯಯನ ಮಕ್ಕಳಿಗೆ ಎಷ್ಟು ಸೇಫ್?

  • ಎಲೆಕ್ಟ್ರಾನಿಕ್ ಸಾಧನದಲ್ಲಿ ಓದುವುದರಿಂದ ಪದ ಗ್ರಹಿಕೆ ಕಡಿಮೆ.
  • ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿನ ಅಧ್ಯಯನದಿಂದ ತಲೆನೋವು ಮತ್ತು ಕಣ್ಣಿನ ಸಮಸ್ಯೆ.
  • ಪರದೆಯ ಮೇಲೆ ನಿರಂತರ ಓದುವಿಕೆ ಉಸಿರಾಟದ ವ್ಯವಸ್ಥೆ ಮತ್ತು ಮಿದುಳಿನ ಕ್ರಿಯೆಯ ಮೇಲೆ ಪರಿಣಾಮ.
  • ದೀರ್ಘವಾದ ಉಸಿರಾಟದಿಂದ ಸಾಮಾಜಿಕ ಸಂವಹನದ ಮೇಲೆ ನಕಾರಾತ್ಮಕ ಪರಿಣಾಮ. ಖ್ಯಾತ ಲೇಖಕ ಮೊಟೊಯಾಸು ಹೊನ್ನಾ ಇಂತಹ ಅಘಾತಕಾರಿ ವಿಷಯವನ್ನು ತಮ್ಮ ಅಧ್ಯಯನ ವರದಿಯಲ್ಲಿ ಪ್ರಕಟಿಸಿದ್ದಾರೆ.

ಮಕ್ಕಳಲ್ಲಿ ಬೆಳೆಸಿ ಓದುವ ಹವ್ಯಾಸ:

  • ಮಕ್ಕಳಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿ.
  • ಕತೆ ಓದಿ ಹೇಳುವ ಅಭ್ಯಾಸ ಇರಿಸಿಕೊಳ್ಳಿ. ಶಬ್ದಗಳ ಮೇಲೆ ಬೆರಳಿಟ್ಟು ಓದಿದರೆ ಮಕ್ಕಳಿಗೂ ಶಬ್ದ, ಉಚ್ಚಾರಗಳ ಪರಿಚಯವಾಗುತ್ತದೆ.
  • ಟಿವಿ, ಫೋನ್‌ಗಳ ಬಳಕೆಗೆ ಮಿತಿ ಹಾಕಿ. ಆಗ ಮನರಂಜನೆಗೆ ಮಕ್ಕಳು ಪುಸ್ತಕ ಅವಲಂಬಿಸುತ್ತಾರೆ. ಗ್ರಂಥಾಲಯಕ್ಕೆ ಕರೆದುಕೊಂಡು ಹೋಗಿ. ಮಗುವಿನ ವಯಸ್ಸು ಮತ್ತು ಓದಿನ ಅನುಗುಣಕ್ಕೆ ಸರಿಯಾಗಿ ಪುಸ್ತಕಗಳ ಆಯ್ಕೆ ಮಾಡಿ. ಬಲವಂತ ಮಾಡದೇ ಅವರು ಪುಸ್ತಕ ಓದಿ ಖುಷಿಪಡುವ ಅಭ್ಯಾಸ ಬೆಳೆಸಿ.

ಮನೆಯೆಂಬ ಶಾಲೆಯಲ್ಲಿ ಮಕ್ಕಳ ಲವಲವಿಕೆ ರಜೆಯ ಮಜಾದಲ್ಲಿರುವ ಮಕ್ಕಳನ್ನು ಲವಲವಿಕೆಯಿಂದ ಇರಿಸಿಕೊಳ್ಳಲು ಟಿಪ್ಸ್:

  • ಸಮಯ ಸಿಕ್ಕಾಗ ಮಕ್ಕಳೊಂದಿಗೆ ಆಟವಾಡಿ, ಮಕ್ಕಳ ಮೆದುಳಿಗೆ ಕೆಲಸ ಕೊಡುವಂತಹ ಬಹಳಷ್ಟು ಆಟಿಕೆಗಳಿದ್ದು, ಅವುಗಳನ್ನು ತಂದುಕೊಡಿ.
  • ಮಕ್ಕಳ ಸಾಮರ್ಥ್ಯ, ಆತ್ಮವಿಶ್ವಾಸ ಬೆಳೆಸುವ ಕೆಲಸ ಮಾಡಿ.
  • ಸಣ್ಣಪುಟ್ಟ ಕೆಲಸಗಳಲ್ಲಿ ಮಕ್ಕಳು ತೋರಿಸುವ ಜಾಣ್ನೆಯನ್ನು ಮನದುಂಬಿ ಪ್ರೋತ್ಸಾಹಿಸಿ.
  • ವರ್ಣರಂಜಿತ ಪುಸ್ತಕಗಳನ್ನು ಮಕ್ಕಳಿಗೆ ಕೊಡಿ. ಓದುವ ಹವ್ಯಾಸ ಬೆಳೆಸಿ.
  • ಪ್ರತಿನಿತ್ಯ ವ್ಯಾಯಾಮ ಮಾಡಿಸಿ.

ನಿಮ್ಮ ಮಕ್ಕಳಿಗೆ ಫೋನ್ ಲಾಕ್ ಮಾಡುವ ಮೊದ್ಲು:

ಮಕ್ಕಳು ಮೊಬೈಲ್‌ಗೆ ಅಡಿಕ್ಟ್ ಆದರೆ, ಅದು ಅವರ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ವೇಳೆ ಪೋಷಕರು ಕೆಲ ಕ್ರಮ ಕೈಗೊಳ್ಳಬೇಕು. ಮಕ್ಕಳಿಗೆ ದೈಹಿಕ ಚಟುವಟಿಕೆಗಳನ್ನು ನೀಡಬೇಕಾಗುತ್ತದೆ. ಉದಾಹರಣೆಗೆ ಮಾರುಕಟ್ಟೆಯಿಂದ ಸಾಮಗ್ರಿ ತರಲು ಹೇಳುವುದು. ಜಿಮ್‌ಗೆ ಕರೆದುಕೊಂಡು ಹೋಗುವುದು. ಹೊರಾಂಗಣ ಆಟಗಳತ್ತ ಗಮನಹರಿಸುವುದು. ಪಾರ್ಕ್‌ಗಳಿಗೆ ಹೋಗುವಂತೆ ಹೇಳುವುದು, ಇತ್ಯಾದಿ.. ಫೋನ್ ಅನ್ನು ಲಾಕ್ ಮಾಡುವ ಬದಲಿಗೆ ಫೋನ್ ಬಳಕೆ ಅಪಾಯಗಳನ್ನು ಪ್ರೀತಿಯಿಂದ ವಿವರಿಸಿದರೆ ಸಾಕು.

ಮಗುವಿಗೆ ಮೂಗು ಕಟ್ಟಿಕೊಂಡರೆ ಹೀಗೆ ಮಾಡಿ:

ಕಟ್ಟಿದ ಮೂಗಿನ ಸಮಸ್ಯೆ ಎಲ್ಲರಲ್ಲೂ ಸಾಮಾನ್ಯ. ಹವಾಮಾನದಲ್ಲಿ ಬದಲಾವಣೆ ಸೇರಿದಂತೆ ನಾನಾ ಕಾರಣಗಳಿಂದ ಮಕ್ಕಳಿಗೂ ಮೂಗು ಕಟ್ಟಿಕೊಳ್ಳುತ್ತದೆ. ಸಾಸಿವೆ ಎಣ್ಣೆಯ ಮಸಾಜ್ ಇದಕ್ಕೆ ಉತ್ತಮ ಮನೆಮದ್ದು. ಲವಂಗ, ಕತ್ತರಿಸಿದ ಬೆಳ್ಳುಳ್ಳಿ ಮತ್ತು ಮೆಂತ್ಯೆ ಜೊತೆಗೆ ಸಾಸಿವೆ ಎಣ್ಣೆಯನ್ನು ಕಾಯಿಸಿ, ತಣ್ಣಗಾದ ನಂತರ ಮಗುವಿನ ಮೂಗಿನ ಮೇಲೆ, ಹಣೆ, ಕೆನ್ನೆ, ಎದೆ, ಪಾದ, ಅಂಗೈಗೆ ಹಚ್ಚಬೇಕು. ಎದೆ ಹಾಲುಣಿಸುವುದರಿಂದಲೂ ಶೀತ ಮತ್ತು ಕೆಮ್ಮನ್ನು ಎದುರಿಸಲು ಸಹಾಯ ಮಾಡುತ್ತದೆ.

ಸಾಮಾನ್ಯ ಜ್ಞಾನ ಕನ್ನಡದಲ್ಲಿ: ಅಗತ್ಯವಾದ ಮಾಹಿತಿಗಳ ಸಂಪತ್ತು

ಕಾಗೆ ಬಗ್ಗೆ ಯಾರಿಗೂ ತಿಳಿಯದ ಸ್ವಾರಸ್ಯಕರ ವಿಷಯಗಳು ಇಲ್ಲಿವೆ!

Related Articles